Picsart 25 11 06 00 37 29 914 scaled

ಭೂಮಿ ಖರೀದಿಸುವ ಮೊದಲು ಕಡ್ಡಾಯವಾಗಿ ಪರಿಶೀಲಿಸಬೇಕಾದ 6 ಮಹತ್ವದ ದಾಖಲೆಗಳು

Categories:
WhatsApp Group Telegram Group

ಭೂಮಿ ಎಂದರೆ ಕೇವಲ ಒಂದು ಆಸ್ತಿ ಅಲ್ಲ, ಅದು ಭವಿಷ್ಯದ ಹೂಡಿಕೆ, ಭದ್ರತೆ ಮತ್ತು ಕುಟುಂಬದ ಆರ್ಥಿಕ ಸುರಕ್ಷತೆಯ ಆಧಾರ. ಆದರೆ ಇಂದಿನ ನಗರೀಕರಣ, ವೇಗವಾದ ರಿಯಲ್ ಎಸ್ಟೇಟ್ ವಹಿವಾಟು ಮತ್ತು ಹೆಚ್ಚುತ್ತಿರುವ ಭೂಮಿ ವಿವಾದಗಳ ನಡುವಲ್ಲಿ, ಕಾನೂನು ದಾಖಲೆಗಳನ್ನು ಚೆಕ್‌ಮಾಡದೆ ಭೂಮಿಯನ್ನು ಖರೀದಿಸುವುದು ಅತ್ಯಂತ ಅಪಾಯಕಾರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇಂದಿನ ದಿನಗಳಲ್ಲಿ ಅನೇಕರು ಜಾಹೀರಾತುಗಳು, ಬ್ರೋಕರ್‌ಗಳ ಭರವಸೆ, ಕಡಿಮೆ ಬೆಲೆ ಅಥವಾ ತಕ್ಷಣ ಪ್ಲಾಟ್ ಬುಕ್ ಮಾಡಿ ಎಂಬ ಆಕರ್ಷಕ ಆಫರ್‌ಗಳಿಗೆ ಮೋಸಹೋಗಿ, ದಾಖಲೆಗಳನ್ನು ಪರಿಶೀಲಿಸದೇ ಭೂಮಿಯನ್ನು ಖರೀದಿಸುತ್ತಿದ್ದಾರೆ. ಇದರ ಫಲಿತಾಂಶವಾಗಿ ಸಾವಿರಾರು ಜನರು ಕೋರ್ಟ್ ಕೇಸ್‌ಗಳು, ನಕಲಿ ದಾಖಲೆ, ಡಬಲ್ ಸೇಲ್ ಮತ್ತು ಬ್ಯಾಂಕ್‌ ಸಾಲಗಳ ಸಮಸ್ಯೆಯಲ್ಲಿ ಸಿಲುಕುತ್ತಿದ್ದಾರೆ. ಆದ್ದರಿಂದ, ನೀವು ಭೂಮಿ ಖರೀದಿಸುವ ಮೊದಲು ಕಡ್ಡಾಯವಾಗಿ ಪರಿಶೀಲಿಸಬೇಕಾದ 6 ಪ್ರಮುಖ ದಾಖಲೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. 

ಟೈಟಲ್ ಡೀಡ್ (ಹಕ್ಕುಪತ್ರ) ಪರಿಶೀಲನೆ, ಭೂಮಿಯ ನಿಜವಾದ ಮಾಲೀಕ ಯಾರು?:

ಭೂಮಿ ಖರೀದಿಸುವಲ್ಲಿ ಮೊದಲ ಮತ್ತು ಅತ್ಯಂತ ಮುಖ್ಯ ದಾಖಲೆ ಹಕ್ಕುಪತ್ರ (Title Deed).
ಭೂಮಿ ಖರೀದಿಸುವ ಮೊದಲು ಕೆಳಗಡೆ ನೀಡಿರುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಿ.
ಭೂಮಿಯ ನಿಜವಾದ ಮಾಲೀಕ ಯಾರು?
ಭೂಮಿ ಅವರಿಗೆ ಹೇಗೆ ಬಂದಿತು (ಆನುವಂಶಿಕವಾಗಿ, ಗಿಫ್ಟ್, ಖರೀದಿ)?
ಆಸ್ತಿ ಮೇಲೆ ಯಾರಾದರೂ ಹಕ್ಕುಹೊಂದಿದವರು ಇದ್ದಾರೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಿ.
ಹಕ್ಕುಪತ್ರದಲ್ಲಿ ಯಾವುದೇ ಅನುಮಾನ ಕಂಡರೆ ಆ ಭೂಮಿಗೆ ಕೈ ಹಾಕಬೇಡಿ.

ಸಾಲ ಕ್ಲಿಯರೆನ್ಸ್ (Encumbrance / Bank Clearance):

ಅನೇಕರಿಗೆ ಈ ಅಪಾಯದ ಬಗ್ಗೆ ಗೊತ್ತಿಲ್ಲ. ಬಹಳ ಬಾರಿ ಭೂಮಿಯ ಮೇಲೆ ಬ್ಯಾಂಕ್‌ ಸಾಲ, ಹೌಸಿಂಗ್ ಲೋನ್, ಹೈಪೋತೆಕ್, ಬಾಕಿ ಮೊತ್ತ ಇರುತ್ತದೆ. ಸಾಲ ಇನ್ನೂ ಕ್ಲಿಯರ್ ಆಗಿರದಿದ್ದರೆ, ನೀವು ಭೂಮಿ ಖರೀದಿಸಿದರೂ ಬ್ಯಾಂಕ್ ಆ ಜಾಗವನ್ನು ಕಬಳಿಸಬಹುದು. ಆದ್ದರಿಂದ ಮಾರಾಟಗಾರರಿಂದ Loan Clearance Certificate ಪಡೆಯುವುದು ಕಡ್ಡಾಯ.

ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ (NOC) :

NOC ಮೂಲಕ ನಿಮಗೆ ತಿಳಿಯುವುದು, ಭೂಮಿಗೆ ಸಂಬಂಧಿಸಿದಂತೆ ಯಾರಿಗಾದರೂ ಆಕ್ಷೇಪಣೆ ಇದೆಯೇ? ಎಂಬುದನ್ನು ಮೊದಲಿಗೆ ತಿಳಿದುಕೊಳ್ಳಿ. ಕುಟುಂಬ ಸದಸ್ಯರೊಬ್ಬರೂ ನಮ್ಮ ಹಕ್ಕು ಎಂದು ಮುಂದೆ ದಾವೆ ಹಾಕುವ ಸಾಧ್ಯತೆಗಳು ಏನಾದ್ರು ಇದೆಯೇ ಎಂದು ತಿಳಿದುಕೊಳ್ಳಿ. ಇನ್ನು ನೀವು ತೆಗೆದುಕೊಳುತ್ತಿರುವ ಭೂಮಿ ಯಾವುದಾದರು ಕಾನೂನು ಸಮಸ್ಯೆಯಲ್ಲಿ ಸಿಲುಕಿರುವುದೇ ಎಂದು ಗಮನಿಸಿ. NOC ಇಲ್ಲದೇ ಯಾವತ್ತೂ ಭೂಮಿ ಖರೀದಿಸಬೇಡಿ.

ಮಾರಾಟ ಪತ್ರ (Sale Deed):

ಭೂಮಿಯನ್ನು ನಿಮ್ಮ ಹೆಸರಿಗೆ ವರ್ಗಾವಣೆ ಮಾಡುವ ಮೂಲ ದಾಖಲೆ ಪರಿಶೀಲಿಸಿ.
ಇದು ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು. ಸೇಲ್ ಡೀಡ್‌ನಲ್ಲಿ ಜಾಗದ ಗಾತ್ರ, ಮೌಲ್ಯ, ಗಡಿ ವಿವರ, ಮಾರಾಟಗಾರ–ಖರೀದಿದಾರರ ವಿವರ, ಪಾವತಿಸಿದ ಮೊತ್ತ ಎಲ್ಲವೂ ಸ್ಪಷ್ಟವಾಗಿರಬೇಕು.

ಎಲ್ಲಾ ದಾಖಲೆಗಳ ಫೋಟೋಕಾಪಿ:

ಭೂಮಿ ನೋಂದಣಿಗೆ ನಿಮಗೆ ಅನಿವಾರ್ಯವಾಗಿ ಬೇಕಾಗುವ ಫೋಟೋಕಾಪಿಗಳೆಂದರೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆ ವಿವರ, ಆದಾಯ ಪ್ರಮಾಣ ಪತ್ರ, ಹಳೆಯ ಹಕ್ಕುಪತ್ರ/ಪಾಟಾ ಇವೆಲ್ಲವು ಗುರುತಿನ ಹಾಗೂ ವಹಿವಾಟಿನ ಪಾರದರ್ಶಕತೆಯನ್ನು ತೋರಿಸುವ ಪ್ರಮುಖ ದಾಖಲೆಗಳು.

ಜಮಾಬಂದಿ ರಸೀದಿ (Record of Rights / RTC / Jamabandi):

ಗ್ರಾಮ ಪಂಚಾಯತ್ ಅಥವಾ ಮ್ಯುನಿಸಿಪಾಲಿಟಿ ನಿರ್ವಹಿಸುವ ಈ ದಾಖಲೆ ಮೂಲಕ ತಿಳಿಯುವುದು ಭೂಮಿಯ ಕಾನೂನುಸ್ಥಿತಿ, ಆಸ್ತಿಯ ಹಿಂದಿನ ದಾಖಲೆ, ಭೂಮಿ ಕೃಷಿ/ಕಟ್ಟಡ/ಕಾನ್ವರ್ಟ್ ಆಗಿದೆಯೇ? ಭೂಮಿಗೆ ಸಂಬಂಧಿಸಿದ ಬಾಕಿ ತೆರಿಗೆಗಳ ಸ್ಥಿತಿ. ಈ ದಾಖಲೆಯಿಲ್ಲದೆ ಭೂಮಿಯ ನಿಜವಾದ ಹಕ್ಕು ಯಾರದ್ದು ಎಂಬುದು ಸ್ಪಷ್ಟವಾಗುವುದಿಲ್ಲ.

ನಗದು ಸಂಖ್ಯೆ ರಸೀದಿ (Registration Fee & Stamp Duty Receipt):

ಭೂಮಿ ನೋಂದಣಿ ಮಾಡಿದ ನಂತರ ಸಿಗುವ ಅತಿ ಮುಖ್ಯ ರಸೀದಿ ಎಂದರೆ ನಗದು ಸಂಖ್ಯೆ ರಸೀದಿ ನೀವು ಸರ್ಕಾರಕ್ಕೆ ಪಾವತಿಸಿದ ಮೊತ್ತಕ್ಕೆ ಪುರಾವೆ, ಆಸ್ತಿ ನಿಜವಾಗಿ ರಿಜಿಸ್ಟರ್ ಆದ್ದಕ್ಕೆ ದೃಢೀಕರಣ, ಭೂಮಿಗೆ ತೆರಿಗೆ ಬಾಕಿ ಉಳಿದಿಲ್ಲ ಎಂಬ ಖಾತರಿ ಈ ರಸೀದಿ ಇಲ್ಲದಿದ್ದರೆ ನೋಂದಣಿ ಕಾನೂನಾತ್ಮಕವಾಗಿ ಪೂರ್ಣವಾಗಿರುವುದಿಲ್ಲ.

ಒಟ್ಟಾರೆಯಾಗಿ, ಕೇವಲ ಜಾಗದ ಬೆಲೆ ಕಡಿಮೆ ಎಂದು ಅಥವಾ ಬ್ರೋಕರ್ ಭರವಸೆ ನೀಡಿದರೆ ಮಾತ್ರ ನಂಬಿ ಜಾಗ ಖರೀದಿಸಬೇಡಿ. ಈ 6 ದಾಖಲೆಗಳನ್ನು 100% ಪರಿಶೀಲಿಸಿದರೆ ಭೂಮಿ ವಿವಾದ ತಪ್ಪುತ್ತದೆ, ಹಣ ನಷ್ಟ ತಪ್ಪುತ್ತದೆ, ಭವಿಷ್ಯದ ಕೋರ್ಟ್ ಕೇಸ್‌ಗಳು ತಪ್ಪುತ್ತವೆ ಆಸ್ತಿ ಸಂಪೂರ್ಣವಾಗಿ ನಿಮ್ಮದಾಗುತ್ತದೆ.

WhatsApp Image 2025 09 05 at 11.51.16 AM 1

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories