Picsart 25 11 06 00 32 38 298 scaled

ಯುವಕರಲ್ಲೇ ಮೂಳೆ ದುರ್ಬಲತೆ ಹೆಚ್ಚುತ್ತಿದೆ! ಕ್ಯಾಲ್ಸಿಯಂ ಕಿಲ್ಲರ್ ಆಹಾರಗಳ ಸಂಪೂರ್ಣ ಮಾಹಿತಿ

Categories:
WhatsApp Group Telegram Group

ಇಂದಿನ ವೇಗದ ಬದುಕಿನಲ್ಲಿ ನಾವು ತಿನ್ನುತ್ತಿರುವ ಆಹಾರವೇ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಕೆಲಸದ ಬ್ಯುಸಿ ಲೈಫ್, ಫಾಸ್ಟ್ ಫುಡ್ ಸಂಸ್ಕೃತಿ, ಸಂಸ್ಕರಿಸಿದ ಆಹಾರಗಳ ಬಳಕೆ ಮತ್ತು ಕೆಟ್ಟದಾದ ಜೀವನಶೈಲಿಯ ಪರಿಣಾಮವಾಗಿ, ಇತ್ತೀಚಿನ ದಿನಗಳಲ್ಲಿ ಕ್ಯಾಲ್ಸಿಯಂ ಕೊರತೆ ಮತ್ತು ಮೂಳೆ ದುರ್ಬಲತೆ (Bone Weakness) ಯುವಕರಲ್ಲೇ ಹೆಚ್ಚುತ್ತಿವೆ. 
ಕ್ಯಾಲ್ಸಿಯಂ ನಮ್ಮ ಮೂಳೆಗಳ ಬಲ, ದವಡೆಗಳ ಆರೋಗ್ಯ, ಸ್ನಾಯುಗಳ ಕಾರ್ಯ ಮತ್ತು ನರಗಳ ವ್ಯವಸ್ಥೆಗೆ ಅತ್ಯಗತ್ಯ. ವಿಶೇಷವಾಗಿ ಮೂವತ್ತು ವರ್ಷಗಳ ನಂತರ, ದೇಹದ ಕ್ಯಾಲ್ಸಿಯಂ ಮಟ್ಟ ಸ್ವಾಭಾವಿಕವಾಗಿ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಆಹಾರದಲ್ಲಿ ಮಾಡುವ ತಪ್ಪುಗಳು ಮೂಳೆಗಳನ್ನು ಇನ್ನೂ ವೇಗವಾಗಿ ದುರ್ಬಲಗೊಳಿಸುತ್ತವೆ. ಅದಕ್ಕಾಗಿಯೇ ನಾವು ಯಾವಾಗಲೂ ಕ್ಯಾಲ್ಸಿಯಂ ಹೆಚ್ಚಿರುವ ಆಹಾರವನ್ನು ತಿನ್ನಬೇಕು. ಹಾಗಿದ್ದರೆ ಯಾವ ಯಾವ ಆಹಾರಗಳು ದೇಹದ ಕ್ಯಾಲ್ಸಿಯಂ  ಹೀರಿಕೊಂಡು ಮೂಳೆಗಳನ್ನು ವೀಕ್ ಮಾಡುತ್ತವೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಹೆಚ್ಚಿನ ಉಪ್ಪಿನಾಂಶ ಇರುವ ಆಹಾರಗಳು:
ಉಪ್ಪಿನ ಪ್ರಮಾಣ ಹೆಚ್ಚಿದಂತೆ ದೇಹವು ಸೋಡಿಯಂ ಜೊತೆಗೆ ಕ್ಯಾಲ್ಸಿಯಂನನ್ನೂ ಮೂತ್ರದ ಮೂಲಕ ಹೊರಹಾಕುತ್ತದೆ. ಇದರಿಂದ, ಮೂಳೆ ಸಾಂದ್ರತೆ ನಿಧಾನವಾಗಿ ಕುಗ್ಗುತ್ತದೆ. ಆಸ್ಟಿಯೊಪೊರೋಸಿಸ್ ಅಪಾಯ ಹೆಚ್ಚುತ್ತದೆ. ವಿಶೇಷವಾಗಿ ಮಹಿಳೆಯರಿಗೆ ಇದರಿಂದ ಹಾನಿ ಹೆಚ್ಚು.

ಹೆಚ್ಚಿನ ಉಪ್ಪು ಇರುವ ಆಹಾರಗಳ ಪಟ್ಟಿ:

ಚಿಪ್ಸ್, ನೂಡಲ್ಸ್
ಪ್ಯಾಕ್ ಮಾಡಿದ ಸೂಪ್‌ಗಳು
ಫಾಸ್ಟ್‌ ಫುಡ್
ಉಪ್ಪಿನಕಾಯಿ
ಸಂಸ್ಕರಿಸಿದ ಆಹಾರಗಳು

ತಂಪು ಪಾನೀಯಗಳು / ಕಾರ್ಬೊನೇಟೆಡ್ ಡ್ರಿಂಕ್ಸ್:
ಇವುಗಳಲ್ಲಿ ಇರುವ ಫಾಸ್ಫೋರಿಕ್ ಆಸಿಡ್ ದೇಹದ ಕ್ಯಾಲ್ಸಿಯಂ ಸಮತೋಲನವನ್ನು ಅಸ್ಥಿರಗೊಳಿಸುತ್ತದೆ. ಇದರಿಂದ ಮೂಳೆಗಳು ದುರ್ಬಲವಾಗುತ್ತವೆ. ದೀರ್ಘ ಕಾಲ ತಂಪು ಪಾನೀಯಗಳನ್ನು ಕುಡಿಯುವುದರಿಂದ ಮೂಳೆ ಸಾಂದ್ರತೆ ಗಮನಾರ್ಹವಾಗಿ ಕುಗ್ಗುತ್ತದೆ.

ಟೀ–ಕಾಫಿ (ಹೆಚ್ಚಿನ ಕೆಫೀನ್):
ಕೆಫೀನ್ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ತಡೆದು, ಮೂತ್ರದ ಮೂಲಕ ಕ್ಯಾಲ್ಸಿಯಂ ನಷ್ಟ ಮಾಡುತ್ತದೆ. ಜಠರದಲ್ಲಿ ಕ್ಯಾಲ್ಸಿಯಂ ಶೋಷಣ ಕಡಿಮೆಯಾಗುತ್ತದೆ. ದಿನಕ್ಕೆ 1–2 ಕಪ್ ಗಿಂತ ಹೆಚ್ಚು ಟೀ-ಕಾಫಿ ಕುಡಿಯುವುದರಿಂದ ಮೂಳೆಗಳಿಗೆ ಹಾನಿಯಾಗುತ್ತದೆ.

ಹೆಚ್ಚಿನ ಸಕ್ಕರೆ ಇರುವ ಆಹಾರಗಳು:

ಸಕ್ಕರೆ ದೇಹದ ಸಮತೋಲನವನ್ನು ಹಾಳುಮಾಡುತ್ತದೆ.
ದೇಹ ಆಮ್ಲತೆಯನ್ನು ಕಡಿಮೆ ಮಾಡಲು ಮೂಳೆಗಳಿಂದ ಕ್ಯಾಲ್ಸಿಯಂ ತೆಗೆದುಕೊಳ್ಳುತ್ತದೆ. ಇದರಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ. ಮಕ್ಕಳು ಮತ್ತು ಯುವಕರಿಗೆ ಅಪಾಯ ಜಾಸ್ತಿ.

ಹಾನಿ ಮಾಡುವ ಸಿಹಿಗಳ ಪಟ್ಟಿ:

ಬಿಳಿ ಸಕ್ಕರೆ
ಪೇಸ್ಟ್ರಿ, ಕೇಕ್, ಡೋನಟ್‌ಗಳು
ಪ್ಯಾಕ್ ಮಾಡಿದ ಸಿಹಿ ತಿಂಡಿಗಳು
ಕೂಲ್‌ಡ್ರಿಂಕ್ಸ್

ಅತಿಯಾದ ಮದ್ಯಪಾನ:
ಮದ್ಯಪಾನ ಮೂಳೆ ರಚನೆಗೆ ಹೊಣೆಗಾರರಾದ osteoblasts ನ ಕ್ರಿಯೆಯನ್ನು ಕಡಿಮೆ ಮಾಡುತ್ತದೆ.
ಇದರ ಪರಿಣಾಮ,
ಮೂಳೆ ದ್ರವ್ಯರಾಶಿ ಕುಗ್ಗುತ್ತದೆ.
ಮೂಳೆ ಮುರಿತಗಳ ಅಪಾಯ ಹೆಚ್ಚುತ್ತದೆ.
ಯೌವನದಲ್ಲೇ ಮೂಳೆಗಳು ದುರ್ಬಲಗೊಳ್ಳುತ್ತವೆ.

ಸಂಸ್ಕರಿಸಿದ ಕಾರ್ಬೋಹೈಡ್ರೆಟ್‌ಗಳು (White carbs):
ಜಾಗತಿಕವಾಗಿ ಅಧ್ಯಯನಗಳು ಹೇಳುವಂತೆ ಬಿಳಿ ಹಿಟ್ಟು, ಬಿಳಿ ಬ್ರೆಡ್, ಬಿಳಿ ಅಕ್ಕಿ ಇವು ರಕ್ತದಲ್ಲಿನ ಕ್ಯಾಲ್ಸಿಯಂ ಬಳಕೆಯನ್ನು ಹೆಚ್ಚಿಸುತ್ತವೆ. ದೀರ್ಘಾವಧಿಯಲ್ಲಿ ಮೂಳೆಗಳ ಬಲವನ್ನು ಕುಗ್ಗಿಸುತ್ತವೆ.

ಮೂಳೆ ಬಲಪಡಿಸಲು ಏನು ತಿನ್ನಬೇಕು?:

ಹಾಲು, ಮೊಸರು, ಪನೀರ್, ನವಣೆ, ರಾಗಿ, ಜೋಳ ಬಾದಾಮಿ, ಎಳ್ಳು, ಸಾಸಿವೆ ಸೊಪ್ಪು, ಮೆಂತ್ಯೆ ಸೊಪ್ಪು, ಬೀನ್ಸ್, ಬ್ರೊಕೊಲಿ, ಬಾಳೆಹಣ್ಣು ಇವುಗಳ ಜೊತೆಯಲ್ಲಿ ವಿಟಮಿನ್ D ಗೆ ಬೆಳಗಿನ ಸೂರ್ಯನ ಬೆಳಕು ತೆಗೆದುಕೊಳ್ಳುವುದು ಉತ್ತಮ.

ಒಟ್ಟಾರೆಯಾಗಿ, ಮೂಳೆಗಳ ಆರೋಗ್ಯ ಒಂದು ದಿನದಲ್ಲಿ ಕೆಡದು. ಆದರೆ ತಪ್ಪಾದ ಆಹಾರ ಪದ್ಧತಿ, ಪ್ಯಾಕೇಜ್ಡ್ ಫುಡ್ ಮತ್ತು ಸಿಹಿ ಪಾನೀಯಗಳ ನಿರಂತರ ಬಳಕೆ ದೇಹದ ಕ್ಯಾಲ್ಸಿಯಂ ಅನ್ನು ನಿಧಾನಗತಿಯಲ್ಲಿ ( slowly) ಹಿರಿಕೊಂಡು  ಮುಂಬರುವ ವರ್ಷಗಳಲ್ಲಿ ದೊಡ್ಡ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಉಪ್ಪು, ಸಕ್ಕರೆ, ಕೆಫೀನ್, ಕೂಲ್‌ಡ್ರಿಂಕ್ಸ್, ಮದ್ಯಪಾನದ ಬಳಕೆಯನ್ನು ನಿಯಂತ್ರಿಸುವುದು ಮೂಳೆಗಳಿಗೆ ಉತ್ತಮ.

WhatsApp Image 2025 09 05 at 11.51.16 AM 12

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories