WhatsApp Image 2025 11 05 at 6.02.59 PM 1

ರಾಜ್ಯದ ವಿದ್ಯಾರ್ಥಿಗಳೇ ಗಮನಕ್ಕೆ : `SSLC ಪರೀಕ್ಷೆ-1′ ನೋಂದಣಿ ಅವಧಿ ಈ ದಿನದವರೆಗೆ ವಿಸ್ತರಣೆ

Categories:
WhatsApp Group Telegram Group

ಬೆಂಗಳೂರು: SSLC ಪರೀಕ್ಷೆ-1 ಗಾಗಿ ನೋಂದಣಿ ಅವಧಿಯನ್ನು ವಿಸ್ತರಿಸಲಾಗಿದೆ. ಮಾರ್ಚ್ 2026 ರಲ್ಲಿ ನಡೆಯಲಿರುವ SSLC ಪರೀಕ್ಷೆ-1ಗೆ, ಈಗ ನ.15 ರವರೆಗೆ ನೋಂದಣಿ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಘೋಷಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಮೂಲತಃ, ಈ ನೋಂದಣಿ ಪ್ರಕ್ರಿಯೆ ಅಕ್ಟೋಬರ್ 31 ರೊಳಗಾಗಿ ಪೂರ್ಣಗೊಳ್ಳಬೇಕಿತ್ತು. ಆದರೆ, ಅಕ್ಟೋಬರ್ 18 ರ ವರೆಗೆ ಶಾಲೆಗಳು ದಸರಾ ರಜೆಯಲ್ಲಿದ್ದ ಕಾರಣ, ಅನೇಕ ಶಾಲೆಗಳು ಮತ್ತು ಪೋಷಕರು ನೋಂದಣಿ ಅವಧಿಯನ್ನು ವಿಸ್ತರಿಸುವಂತೆ ಮಂಡಳಿಯನ್ನು ಕೋರಿದ್ದರು. ಈ ಕೋರಿಕೆಯನ್ನು ಪರಿಗಣಿಸಿ, ಎಲ್ಲಾ ವಿದ್ಯಾರ್ಥಿಗಳಿಗೆ ಸೌಕರ್ಯವಾಗುವಂತೆ ನೋಂದಣಿ ಅವಧಿಯನ್ನು ಹೆಚ್ಚಿಸಲು ಮಂಡಳಿ ನಿರ್ಧರಿಸಿದೆ.

ಯಾರು ನೋಂದಣಿ ಮಾಡಿಸಿಕೊಳ್ಳಬಹುದು?

ರಾಜ್ಯದ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳ ವಿದ್ಯಾರ್ಥಿಗಳು ಮತ್ತು ಆನ್‌ಲೈನ್ ಮೂಲಕ ನೇರವಾಗಿ ನೋಂದಣಿ ಮಾಡುವ ಖಾಸಗಿ ಅಭ್ಯರ್ಥಿಗಳು, ಜೊತೆಗೆ ಎಲ್ಲಾ ಪುನರಾವರ್ತಿತ ಅಭ್ಯರ್ಥಿಗಳು ಈ ವಿಸ್ತೃತ ಅವಧಿಯಲ್ಲಿ ತಮ್ಮ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನಮೂದಿಸಬಹುದು.

ಮಂಡಳಿಯು ರಾಜ್ಯದ ಜಿಲ್ಲಾ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈ ನಿರ್ಣಯವನ್ನು ಎಲ್ಲಾ ಶಾಲಾ ಮುಖ್ಯೋಪಾಧ್ಯಾಯರಿಗೆ ತಲುಪಿಸುವಂತೆ ಮತ್ತು ಪ್ರತಿಯೊಬ್ಬ ಅರ್ಹ ವಿದ್ಯಾರ್ಥಿಯು ಈ ಸವಲತ್ತಿನ ಸದುಪಯೋಗ ಪಡೆದುಕೊಳ್ಳುವಂತೆ ಖಚಿತಪಡಿಸುವಂತೆ ಸೂಚಿಸಿದೆ.

WhatsApp Image 2025 11 05 at 6.04.18 PM
WhatsApp Image 2025 11 05 at 6.04.18 PM 1
WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು

WhatsApp Group Join Now
Telegram Group Join Now

Popular Categories