Picsart 25 11 04 23 31 30 143 scaled

ಕೈಯಿಂದ ಊಟ ಮಾಡುವುದರಿಂದ ಸಿಗುವ ಅದ್ಭುತ ಆರೋಗ್ಯ ಲಾಭಗಳ ಸಂಪೂರ್ಣ ಮಾಹಿತಿ

Categories:
WhatsApp Group Telegram Group

ಇಂದಿನ ವೇಗದ ಜಗತ್ತಿನಲ್ಲಿ ಆಹಾರ ಸೇವನೆಯ ಶೈಲಿಯೇ ಬದಲಾಗಿದೆ. ಕಚೇರಿಯ ಕ್ಯಾಫೆಟೀರಿಯಾಗಲಿ, ರೆಸ್ಟೋರೆಂಟ್‌ಗಳಾಗಲಿ, ಮನೆಯಲ್ಲಿಯೂ ಸಹ ಚಮಚ ಅಥವಾ ಫೋರ್ಕ್ ಬಳಕೆ ಹೆಚ್ಚಾಗಿದೆ. ಯುವ ಪೀಳಿಗೆಗೆ ಕೈಯಿಂದ ಊಟ ಮಾಡುವುದು ಹಳೆಯ ಕಾಲದ ಪದ್ಧತಿ ಎಂಬ ಭಾವನೆ ಮೂಡಿದೆ. ಆದರೆ ಐತಿಹಾಸಿಕವಾಗಿ ನೋಡಿದರೆ, ಭಾರತೀಯ ಮನೆಗಳಲ್ಲಿ ಕೈಯಿಂದ ಆಹಾರ ಸೇವಿಸುವುದು ಕೇವಲ ಸಂಸ್ಕೃತಿಯ ಭಾಗವಲ್ಲ ಅದು ದೈಹಿಕ, ಮಾನಸಿಕ ಮತ್ತು ಜೀರ್ಣಾಂಗ ಆರೋಗ್ಯವನ್ನು ಸಮತೋಲನದಲ್ಲಿ ಇಡುವ ಸಹಜ ವಿಧಾನ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಆಹಾರ ಸೇವನೆ ಒಂದು ಯಾಂತ್ರಿಕ ಕ್ರಿಯೆಯಲ್ಲ, ಅದು ದೇಹ ಮನಸ್ಸು ಇಂದ್ರಿಯಗಳನ್ನು ಒಟ್ಟುಗೂಡಿಸುವ ಪ್ರಕ್ರಿಯೆ. ಕೈಯಿಂದ ಊಟ ಮಾಡುವುದರ ಮೂಲಕ ಈ ಪ್ರಕ್ರಿಯೆಯನ್ನು ಅತ್ಯಂತ ನೈಸರ್ಗಿಕವಾಗಿ ಸಾಧಿಸಬಹುದು.  ಇದರಲ್ಲಿ ನಮ್ಮ ಪೂರ್ವಜರು ಕಂಡುಕೊಂಡಿದ್ದ ಅದ್ಭುತ ಆರೋಗ್ಯ ವಿಜ್ಞಾನ ಕೂಡ ಅಡಗಿದೆ. ಇತ್ತೀಚಿನ ದಿನಗಳಲ್ಲಿ ಪೋಷಣ ತಜ್ಞರು ಮತ್ತು ಹಲವಾರು ಆರೋಗ್ಯ ತಜ್ಞರೂ ಕೂಡ ಕೈಯಿಂದ ಊಟ ಮಾಡುವ ವಿಧಾನಕ್ಕೆ ಮತ್ತೆ ಮೌಲ್ಯನೀಡುತ್ತಿದ್ದಾರೆ. ಹಾಗಾದರೆ, ಕೈಯಿಂದ ಊಟ ಮಾಡುವುದರಿಂದ ನಿಜವಾಗಿ ಏನೆಲ್ಲಾ ಲಾಭಗಳು ಸಿಗಲಿವೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಕೈಯಿಂದ ಆಹಾರ ಸೇವನೆ ಮಾಡುವುದರಿಂದ ಸಿಗುವ ಪ್ರಮುಖ ಪ್ರಯೋಜನಗಳು ಹೀಗಿವೆ:

ಜೀರ್ಣಕ್ರಿಯೆ ಸುಧಾರಣೆ,
ಕೈಯಿಂದ ಆಹಾರ ತಿನ್ನುವಾಗ ನಮ್ಮ ಬೆರಳುಗಳ ತುದಿಯಲ್ಲಿ ಇರುವ ಸಂವೇದನಾ ನರಗಳು ಸಕ್ರಿಯಗೊಳ್ಳುತ್ತವೆ. ಈ ಸಂವೇದನೆ, ಮೆದುಳಿಗೆ ಸಂದೇಶ ಕಳುಹಿಸುತ್ತದೆ. ಜಠರದಲ್ಲಿ ಜೀರ್ಣರಸ ಉತ್ಪಾದನೆ ಆರಂಭಿಸುತ್ತದೆ. ಆಹಾರ ಬಾಯಿಗೆ ತಲುಪುವಷ್ಟರಲ್ಲಿ ದೇಹ ಜೀರ್ಣಕ್ಕೆ ಸಿದ್ಧವಾಗುತ್ತದೆ. ಚಮಚದಿಂದ ತಿನ್ನುವಾಗ ಈ ನೈಸರ್ಗಿಕ ಪ್ರೇರಣೆ ಸಂಭವಿಸುವುದಿಲ್ಲ.

ಉತ್ತಮ ಬ್ಯಾಕ್ಟೀರಿಯಾದ ವರ್ಧನೆ,
ಸ್ವಚ್ಛವಾದ ಕೈಗಳಲ್ಲಿ ನಮ್ಮ ದೇಹಕ್ಕೆ ಪ್ರಯೋಜನಕಾರಿಯಾದ ಅನೇಕ ಬ್ಯಾಕ್ಟೀರಿಯಾಗಳು ಇರುತ್ತವೆ. ಕೈಯಿಂದ ತಿನ್ನುವಾಗ, ಈ ಗುಡ್ ಮೈಕ್ರೋಬ್ಸ್ ಜೀರ್ಣಾಂಗಕ್ಕೆ ಸೇರುತ್ತವೆ. ಅವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಮೈಂಡ್‌ಫುಲ್ ಈಟಿಂಗ್:

ಕೈಯಿಂದ ತಿನ್ನುವಾಗ ನಾವು ಆಹಾರದೊಂದಿಗೆ ನೇರ ಸಂಪರ್ಕ ಹೊಂದುತ್ತೇವೆ. ಇದರಿಂದ ಆಹಾರದ ಉಷ್ಣತೆ ಅರಿಯಲು,  ತಿನ್ನುತ್ತಿರುವ ಪ್ರಮಾಣ ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಧಾನವಾಗಿ ತಿನ್ನುವ ಅಭ್ಯಾಸ ಬೆಳೆದು, ಅತಿಯಾದ ಆಹಾರ ಸೇವನೆ ಸ್ವಯಂ ನಿಯಂತ್ರಣವಾಗುತ್ತದೆ.

ರಕ್ತದಲ್ಲಿನ ಸಕ್ಕರೆ ನಿಯಂತ್ರಣ:

ನಿಧಾನವಾಗಿ ತಿನ್ನುವುದು ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ಕ್ರಮೇಣ ಹೆಚ್ಚಿಸುತ್ತದೆ. ಇದು, ಮಧುಮೇಹಿಗಳಿಗೆ ವಿಶೇಷವಾಗಿ ಪ್ರಯೋಜನಕಾರಿ. ಊಟಕ್ಕೆ ನಂತರದ ಸಡನ್ ಶುಗರ್ ಸ್ಪೈಕ್ ಅನ್ನು ಕಡಿಮೆ ಮಾಡುತ್ತದೆ.

ಆಯುರ್ವೇದದ ದೃಷ್ಟಿಕೋನ:

ಆಯುರ್ವೇದದ ಪ್ರಕಾರ ನಮ್ಮ ಬೆರಳುಗಳು ಪಂಚಭೂತಗಳ ಪ್ರತಿನಿಧಿ,
ಹೆಬ್ಬೆರಳು – ಅಗ್ನಿ
ತೋರುಬೆರಳು – ವಾಯು
ಮಧ್ಯಮ ಬೆರಳು – ಆಕಾಶ
ಉಂಗುರ ಬೆರಳು – ಭೂಮಿ
ಚಿಕ್ಕ ಬೆರಳು – ಜಲ
ಇವು ಆಹಾರದೊಂದಿಗೆ ಸಂಪರ್ಕದಲ್ಲಿದ್ದಾಗ ದೇಹದಲ್ಲಿ ಸಮತೋಲನ ಮತ್ತು ಶಕ್ತಿ ವೃದ್ಧಿಯಾಗುತ್ತದೆ. 

ಚಮಚ ಬಳಕೆಯ ಹೆಚ್ಚಳಕ್ಕೆ ಕಾರಣವೇನು?:

ಇಂದಿನ ಯುವಜನರು ಹಾಗೂ ನಗರ ಜೀವನದಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ, ಹೋಟೆಲ್ ಮತ್ತು ಕಚೇರಿ ಆಹಾರ ಸಂಸ್ಕೃತಿ, ಸಾಮಾಜಿಕ ಒತ್ತಡ, ವೇಗದ ಲೈಫ್‌ಸ್ಟೈಲ್ ಈ ಎಲ್ಲಾ ಕಾರಣಗಳಿಂದ ಚಮಚ ಫೋರ್ಕ್ ಬಳಕೆ ಹೆಚ್ಚಾಗಿದೆ. ಕೈಯಿಂದ ಊಟ ಮಾಡುವುದನ್ನು ಹಳೆಯ ಕಾಲದ ಪದ್ಧತಿ ಎಂದೇ ಅಂದುಕೊಳ್ಳುತ್ತಿರುವುದು ತಪ್ಪು. ಇದು ವೈಜ್ಞಾನಿಕವಾಗಿ ಕೂಡಾ ಲಾಭಕಾರಿ ಎಂಬುದು ಪರಿಣಿತರ ಅಭಿಪ್ರಾಯ.

ಕೈಯಿಂದ ತಿನ್ನುವವರು ಪಾಲಿಸಬೇಕಾದ ಆರೋಗ್ಯಕರ ನಿಯಮಗಳು ಹೀಗಿವೆ:

ಊಟಕ್ಕೂ ಮೊದಲು ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆಯಿರಿ.
ಉಗುರುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ.
ದಿನಕ್ಕೆ ಕನಿಷ್ಠ ಒಂದು ಊಟವನ್ನು ಕೈಯಿಂದ ತಿನ್ನುವ ಅಭ್ಯಾಸ ಮಾಡಿಕೊಳ್ಳಿ.
ಶಾಂತವಾದ, ಒತ್ತಡರಹಿತ ವಾತಾವರಣದಲ್ಲಿ ನಿಧಾನವಾಗಿ ಊಟ ಮಾಡಿ.

ಒಟ್ಟಾರೆಯಾಗಿ, ಕೈಯಿಂದ ಊಟ ಮಾಡುವ ಪದ್ಧತಿ ನಮ್ಮ ಸಂಸ್ಕೃತಿಯ ಅಳಿಸಲಾಗದ ಭಾಗ. ಇದು ಕೇವಲ ಸಂಪ್ರದಾಯವಲ್ಲ ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ, ಮನಸ್ಸಿನ ಏಕಾಗ್ರತೆ ಮತ್ತು ದೇಹದ ಸಮತೋಲನವನ್ನು ಹೆಚ್ಚಿಸುವ ಆರೋಗ್ಯಕರ ಅಭ್ಯಾಸ.

WhatsApp Image 2025 09 05 at 11.51.16 AM 12

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories