Picsart 25 11 03 22 52 37 525 scaled

ನಮಗೆ ಸೌಂದರ್ಯವಷ್ಟೇ ಅಲ್ಲ, ಆರೋಗ್ಯವೂ ಮುಖ್ಯ: ಚರ್ಮ ಡಿಟಾಕ್ಸ್ ಮತ್ತು ದೈನಂದಿನ ಕೇರ್ ನ ಸಂಪೂರ್ಣ ಮಾಹಿತಿ 

WhatsApp Group Telegram Group

ನಮ್ಮ ದೇಹದ ಅತಿ ದೊಡ್ಡ ಅಂಗ ಚರ್ಮ. ಆದರೆ ಇಂದಿನ ಕಾಲದಲ್ಲಿ ಚರ್ಮವನ್ನು ನೈಸರ್ಗಿಕ ಅಂಗವಾಗಿ ನೋಡುವುದಕ್ಕಿಂತಲೂ, ಅದನ್ನು ಸೌಂದರ್ಯದ ಮಾಪಕವಾಗಿ ಹೆಚ್ಚು ಅಳೆಯಲಾಗುತ್ತಿದೆ. ಚೆನ್ನಾಗಿ ಕಾಣಬೇಕು ಎಂಬ ಒತ್ತಡ, ನಮ್ಮ ಚರ್ಮದ ಬಗ್ಗೆ ತೆಗೆದುಕೊಳ್ಳುವ ನಿರ್ಧಾರಗಳನ್ನೂ ಪ್ರಭಾವಿತ ಮಾಡುತ್ತಿದೆ. ಹಾಗಿದ್ದರೆ ಚರ್ಮದ ಆರೋಗ್ಯ, ಡಿಟಾಕ್ಸ್ ಹಾಗೂ ದೈನಂದಿನ ಆರೈಕೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚರ್ಮದ ಆರೈಕೆ ಯಾಕೆ ಮುಖ್ಯ?:

ಒಳ್ಳೆಯ ಚರ್ಮ ಸ್ವಯಂ ವಿಶ್ವಾಸ ಹೆಚ್ಚಿಸುತ್ತದೆ.
ಆರೋಗ್ಯಕರ ಚರ್ಮವು ಅಲರ್ಜಿ, ಇನ್ಫೆಕ್ಷನ್ ಮತ್ತು ಮೊಡವೆಗಳನ್ನೂ ತಡೆಯುತ್ತದೆ.
ಚರ್ಮ ಸರಿಯಾಗಿ ಮೇಂಟೈನ್ ಮಾಡಿದರೆ ಅನೇಕ ಚರ್ಮರೋಗಗಳು  ಬರುವುದಿಲ್ಲ.

ಡಿಟಾಕ್ಸ್ ಸ್ಕಿನ್ ಎಂದರೆ ಏನು?:

ಚರ್ಮ ನೇರವಾಗಿ ನಮ್ಮ ಅರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುವುದಿಲ್ಲ. ಆದರೆ ಅದು ದೇಹದಿಂದ ಕೆಲವು ಅನಗತ್ಯ ಪದಾರ್ಥಗಳನ್ನು ಸ್ವೆಟ್‌ (sweat) ಮೂಲಕ ಹೊರಹಾಕುತ್ತದೆ. ತುಂಬಾ ಗಟ್ಟಿಯಾದ ಕ್ರೀಮ್‌ಗಳು, ಅತಿಯಾದ ಮೇಕಪ್, ಚರ್ಮ ಮುಚ್ಚಿಹಾಕುವ ಪ್ರೊಡಕ್ಟ್ಸ್ ಇವೆಲ್ಲ ಚರ್ಮದ ನೈಸರ್ಗಿಕ ಹೊರಹಾಕುವಿಕೆಯನ್ನ ತಡೆದು ಅಲರ್ಜಿಗಳು, ಮೊಡವೆ ತರುವ ಸಾಧ್ಯತೆ ಇದೆ.

ಸರಳವಾದ ಚರ್ಮದ ದೈನಂದಿನ ರೂಟೀನ್ ಹೀಗಿದೆ :

ಚರ್ಮ ಡ್ರೈ ಆಗುವಂತವರು ಉದ್ಯೋಗ/ವಾತಾವರಣದಲ್ಲಿ ಇದ್ದರೆ ಪ್ರತಿದಿನ ಮಾಯಿಶ್ಚರೈಜರ್ ಬಳಸಿ.
ದಿನಕ್ಕೆ 1–2 ಬಾರಿ ಫೇಸ್ ವಾಶ್ ಮಾಡಿದರೆ ಸಾಕು.
ನಿಮ್ಮ ಚರ್ಮದ ಪ್ರಕಾರ ಆಯ್ಕೆ ಮಾಡಿಕೊಳ್ಳಬೇಕು.
ಪಿಂಪಲ್ಸ್ ಇರುವವರು ಮೆಡಿಕೇಟೆಡ್ ಫೇಸ್ ವಾಶ್ ಬಳಸಬೇಕು.
ಸೂರ್ಯನ ಬೆಳಕು, ಅಲರ್ಜಿ, ಸನ್‌ಬರ್ನ್, ಪಿಗ್ಮೆಂಟೇಶನ್ ಇಂದ ಕಾಪಾಡಿಕೊಳ್ಳಲು ಸನ್‌ಸ್ಕ್ರೀನ್ ಹೊರಗೆ ಹೋದಾಗ ಅತ್ಯಗತ್ಯವಾಗಿ ಬೇಕಾಗುತ್ತದೆ .
ತುಂಬಾ ಬಿಸಿ ನೀರು ಚರ್ಮವನ್ನು ಡ್ರೈ ಮಾಡುತ್ತದೆ. ಆದ್ದರಿಂದ, ಬೆಚ್ಚಗಿನ ನೀರನಲ್ಲಿ ಸ್ನಾನ ಮಾಡಬೇಕು.
ಮುಖಕ್ಕೆ ಸೋಪ್ ಬಳಸುವುದು ತಪ್ಪು ಆದ್ದರಿಂದ ಕಡಿಮೆ ಸೋಪ್ ಬಳಸಿದರೆ ದೇಹವನ್ನು ಚೆನ್ನಾಗಿ ಇಟ್ಟುಕೊಳ್ಳಬಹದು.

ಸಾಮಾನ್ಯವಾಗಿ ನಾವೆಲ್ಲರೂ ಮನೆಯಲ್ಲಿ ಸ್ಕಿನ್ ಕೇರ್ ಮಾಡಿಕೊಳ್ಳುತ್ತೇವೆ, ಹಾಗಿದ್ದರೆ ಏನು ಮಾಡಬೇಕು, ಏನು ಮಾಡಬಾದು?

ಟೊಮಾಟೋ, ಅರಿಶಿನ, ನಿಂಬೆ, ಇವುಗಳಲ್ಲಿ pure form ಸಿಗೋದಿಲ್ಲ. ಆದ್ದರಿಂದ ಅಲರ್ಜಿ, ರಿಯಾಕ್ಷನ್‌ಗಳು ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ,  ಆದ್ದರಿಂದ ನೀವು ನೈಸರ್ಗಿಕ ಎಂದು SAFE ಅಂತ ಅಂದಿಕೊಂಡು ಇವುಗಳನ್ನು ಮುಖಕ್ಕೆ ಬಳಸಿದರೆ ಸೈಡ್ ಎಫೆಕ್ಟ್ ಗಳು ಆಗುವ ಸಾಧ್ಯತೆಗಳು ಇರುತ್ತವೆ.

ಮುಖಕ್ಕೆ ಹಚ್ಚುವ ಬದಲು ತಿನ್ನುವುದು ಒಳ್ಳೆಯದು:

ಮುಖಕ್ಕೆ ಹಚ್ಚೋದು ಹಾನಿಕರ, ಟೊಮಾಟೊ ಮುಖಕ್ಕೆ ಹಚ್ಚುವುದಕ್ಕಿಂತ ತಿಂದರೆ ಲಾಭ ಸಿಗುತ್ತದೆ. 
ಕಾಫಿ ಪೌಡರ್ ಸ್ಕ್ರಬ್ ಮಾಡುವುದು ತಪ್ಪು, ಚರ್ಮಕ್ಕೆ ಅಬ್ರೇಶನ್ ಆಗಬಹುದು. ಆದ್ದರಿಂದ ಎಲ್ಲರಿಗೂ ಸೂಟ್ ಆಗೋದಿಲ್ಲ.
ಐಸ್ ಕ್ಯೂಬ್ ರಬ್ ಮಾಡುವುದರಿಂದ ಸ್ಕಿನ್ ತಾತ್ಕಾಲಿಕವಾಗಿ ಟೈಟ್ ಆಗುತ್ತದೆ. ದೀರ್ಘಕಾಲಕ್ಕೆ ಡ್ರೈನೆಸ್ ಮತ್ತು ಸೆನ್ಸಿಟಿವಿಟಿ ಹೆಚ್ಚಿಸುತ್ತದೆ.

ಇನ್ನು, ಟೀನೇಜ್ ಮಕ್ಕಳಿಗೆ ಪಿಂಪಲ್ ಇದೆ, ಕಪ್ಪಾಗಿದೆ ಎಂದು ಹೇಳುತ್ತಿರುತ್ತಾರೆ.  ಇದೇ ಕಾರಣದಿಂದ ಮದುವೆಗೆ ಹೋಗದೇ ಇರುವುದು, ಜನರ ಮುಂದೆ ಹೋಗದೇ ಇರುವುದು ಇಂತಹ ಪ್ರಕರಣಗಳು ಸಾಮಾನ್ಯವಾಗಿವೆ. ಆದ್ದರಿಂದ ಅಸಮರ್ಪಕ ಸಲಹೆಗಳು, ಇಂಟರ್ನೆಟ್‌ನಲ್ಲಿ ಇರುವ ತಪ್ಪು ಮಾಹಿತಿ, ಮತ್ತು ಜನರ ಅತಿಯಾದಕಮೆಂಟಿಂಗ್ ಗಮನ ಹರಿಸಬಹುದು. ಗೂಗಲ್  ಇನ್‌ಸ್ಟಾಗ್ರಾಮ್‌ ಸಲಹೆಗಳನ್ನು ಬ್ಲೈಂಡ್ ಆಗಿ ಫಾಲೋ ಮಾಡಬೇಡಿ. ಆದಸ್ಟೂ ಚರ್ಮದ ಸಮಸ್ಯೆ ಇದ್ದರೆ ಡರ್ಮಟಾಲಜಿಸ್ಟ್‌ನ್ನು ನೇರವಾಗಿ ಭೇಟಿಯಾಗುವುದು ಉತ್ತಮ. ಸಾಧಾರಣ, ಸಿಂಪಲ್ ರೂಟೀನ್‌ ಅನ್ನು ಫಾಲೋ ಮಾಡಿ.

ಒಟ್ಟಾರೆಯಾಗಿ, ಚರ್ಮ ನಮ್ಮ ದೇಹದ ಒಂದು ಭಾಗ ಮಾತ್ರ. ಅದರ ಬಗ್ಗೆ ಅತಿಯಾಗಿ ಯೋಚಿಸಬಾರದು, ಹಾಗೂ ತಪ್ಪು ತಪ್ಪು ಸಲಹೆಗಳನ್ನು ಅನುಸರಿಸಬಾರದು. ಆದಷ್ಟು ಸರಳ, ವೈಜ್ಞಾನಿಕ ಹಾಗೂ ನೈಸರ್ಗಿಕ ಆರೈಕೆಯನ್ನು ಮಾಡಿ.

WhatsApp Image 2025 09 05 at 10.22.29 AM 3

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories