Picsart 25 10 29 22 26 43 481 scaled

ಸ್ವಚ್ಛ ಸರ್ವೇಕ್ಷಣ್ 2025: ಬೆಂಗಳೂರು ಐಟಿ ರಾಜಧಾನಿಯಿಂದ ಕಸದ ರಾಜಧಾನಿಯಾಗುತ್ತಿದೆಯಾ? 

Categories:
WhatsApp Group Telegram Group

ನಗರದ ಸೌಂದರ್ಯ, ಸಾರ್ವಜನಿಕ ಆರೋಗ್ಯ ಮತ್ತು ಪರಿಸರದ ಸಂರಕ್ಷಣೆಯ ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕನ ಮೇಲಿದೆ. ಆದರೆ ಬೆಂಗಳೂರು ಭಾರತದ ಐಟಿ ರಾಜಧಾನಿ ಎಂದು ಖ್ಯಾತಿ ಪಡೆದ ಈ ಮೆಟ್ರೋ ನಗರ ಕಳೆದ ಕೆಲ ವರ್ಷಗಳಿಂದ ಕಸದ ರಾಜಧಾನಿ ಎಂಬ ಹಣೆ ಪಟ್ಟಿಯನ್ನೂ ಕಟ್ಟಿಕೊಂಡಿದೆ. ರಸ್ತೆ ಬದಿಗಳಲ್ಲಿ, ಪಾದಚಾರಿ ಮಾರ್ಗಗಳಲ್ಲಿ ಹಾಗೂ ಖಾಲಿ ಜಾಗಗಳಲ್ಲಿ ತ್ಯಾಜ್ಯ ಸುರಿಯುವ ನಾಗರಿಕರ ನಿರ್ಲಕ್ಷ್ಯ ಮನೋಭಾವವು ನಗರ ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಹಲವು ಜಾಗೃತಿ ಅಭಿಯಾನಗಳು, ದಂಡ ಕ್ರಮಗಳು, ಮನೆ ಮನೆ ಕಸ ಸಂಗ್ರಹ ವ್ಯವಸ್ಥೆಯಂತಹ ಪ್ರಯತ್ನಗಳಾದರೂ ಸಮಸ್ಯೆ ಬಗೆಹರಿಯದ ಹಿನ್ನೆಲೆ, ಇದೀಗ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ನಿಯಮಿತ (BSWML) ಹೊಸ ಮತ್ತು ಕಠಿಣ ಕ್ರಮಕ್ಕೆ ಕೈ ಹಾಕಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಕ್ರಮದ ಅಡಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ತ್ಯಾಜ್ಯವನ್ನು ಅವರ ಮನೆ ಬಾಗಿಲಿಗೇ ವಾಪಸ್ ಕಳುಹಿಸುವ ಮೂಲಕ ನಿಜವಾದ ರಿಟರ್ನ್ ಗಿಫ್ಟ್ ನೀಡುವ ಉದ್ದೇಶದಿಂದ ನಾಗರಿಕರಿಗೆ ಪಾಠ ಕಲಿಸಲು ನಿರ್ಧರಿಸಲಾಗಿದೆ.

ಕಡೆಯ ಅಸ್ತ್ರ ಪ್ರಯೋಗಕ್ಕೆ ಮುಂದಾದ ಬಿಎಸ್‌ಡಬ್ಲ್ಯೂಎಂಎಲ್:

ಪದೇ ಪದೇ ಕಸ ಎಸೆದವರ ವಿರುದ್ಧ ಈಗಾಗಲೇ ದಂಡ ವಿಧಿಸುವುದು, ಜಾಗೃತಿ ಕಾರ್ಯಕ್ರಮಗಳು ಮತ್ತು ಮನೆ ಮನೆ ಸಮೀಕ್ಷೆಗಳಂತಹ ಕ್ರಮಗಳು ಕೈಗೊಳ್ಳಲಾಗಿತ್ತು.ಅದರ ಪರಿಣಾಮ ಕಡಿಮೆಯೇ ಇರುವುದರಿಂದ, ಈಗ ಕಡೆಯ ಅಸ್ತ್ರ ಪ್ರಯೋಗಿಸಲು ಬಿಎಸ್‌ಡಬ್ಲ್ಯೂಎಂಎಲ್ ಸಿದ್ಧವಾಗಿದೆ.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕರೀಗೌಡ ಅವರು ಹೇಳಿರುವ ಪ್ರಕಾರ, ಹಲವು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೂ ಅನೇಕರು ರಸ್ತೆಗಳಲ್ಲಿ ಕಸ ಸುರಿಯುತ್ತಿದ್ದಾರೆ. ಆದ್ದರಿಂದ ಇದೀಗ ಕಠಿಣ ಕ್ರಮಕ್ಕೆ ನಾವು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

ವಾರ್ಡ್ ಮಾರ್ಷಲ್‌ಗಳಿಗೆ ವಿಡಿಯೋ ಸಾಕ್ಷ್ಯದ ಜವಾಬ್ದಾರಿ:

ನಗರದ ಎಲ್ಲ 198 ವಾರ್ಡ್ಗಳಲ್ಲಿ ನಿಯೋಜಿಸಲಾದ ವಾರ್ಡ್ ಮಾರ್ಷಲ್‌ಗಳು ಇದೀಗ ಪ್ರಮುಖ ಪಾತ್ರವಹಿಸಲಿದ್ದಾರೆ. ಅವರು ಕಸ ಎಸೆಯುವವರನ್ನು ಗುರುತಿಸಿ, ಅದರ ವಿಡಿಯೋ ದಾಖಲಿಸುವ ಜವಾಬ್ದಾರಿಯನ್ನು ಅವರಿಗೆ ಕೊಡಲಾಗಿದೆ.
ಅಪರಾಧಿ ಪತ್ತೆಯಾಗುತ್ತಿದ್ದಂತೆ, ಅವನು ಎಸೆದ ತ್ಯಾಜ್ಯವನ್ನು ನೇರವಾಗಿ ಮನೆಗೆ ಮರಳಿ ತಲುಪಿಸಲಾಗುತ್ತದೆ. ಇದು ನೈತಿಕ ಮತ್ತು ಮಾನಸಿಕ ಎಚ್ಚರಿಕೆಯ ಭಾಗವಾಗಲಿದೆ. ಈ ಕ್ರಮವನ್ನು ಮನೆ ಮನೆ ಕಸ ಸಂಗ್ರಹ ವ್ಯವಸ್ಥೆ ಸಜ್ಜಾಗಿರುವ ಪ್ರದೇಶಗಳಲ್ಲಿ ಮಾತ್ರ ಜಾರಿಗೆ ತರುತ್ತಿದ್ದಾರೆ ಎಂದು ಬಿಎಸ್‌ಡಬ್ಲ್ಯೂಎಂಎಲ್ ಸ್ಪಷ್ಟಪಡಿಸಿದೆ.

ವ್ಯವಸ್ಥೆಯಲ್ಲಿಯೂ ದೋಷಗಳಿವೆ ಎಚ್ಚರಿಕೆ:

ನಾಗರಿಕ ತಜ್ಞರು ಈ ಕ್ರಮವನ್ನು ಮೆಚ್ಚಿದರೂ, ಕಸದ ಸಮಸ್ಯೆಗೆ ಕಾರಣವಾಗಿರುವ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನೂ ಹೇಳಿದ್ದಾರೆ. ಹಲವಾರು ಕ್ಷೇತ್ರಗಳಲ್ಲಿ ಆಟೋ ಟಿಪ್ಪರ್‌ಗಳ ಕೊರತೆ, ಕಸ ಸಂಗ್ರಹದ ವೇಳಾಪಟ್ಟಿಯ ಅಸಮರ್ಪಕತೆ, ಹಾಗೂ ಕಷ್ಟಕರ ಮಾರ್ಗಗಳಲ್ಲಿ ವಾಹನಗಳು ಹೋಗುವುದಕ್ಕೆ ಆಗುವುದಿಲ್ಲ ಈ ಎಲ್ಲವೂ ಕೂಡ ಪ್ರಮುಖ ಸಮಸ್ಯೆಗಳಾಗಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ ಕೇವಲ ಶಿಕ್ಷಾ ಕ್ರಮಕ್ಕಿಂತ, ಮೂಲ ವ್ಯವಸ್ಥೆಯ ಸುಧಾರಣೆಯೂ ಅಗತ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಅಪರಾಧಿಗಳನ್ನು ಪತ್ತೆಹಚ್ಚುವಲ್ಲಿ ಸವಾಲು:

ಅಧಿಕಾರಿಗಳು ಹೇಳುವಂತೆ, ರಾತ್ರಿ ವೇಳೆಯಲ್ಲಿ ಅಥವಾ ವಾಹನಗಳನ್ನು ಚಲಿಸಿಕೊಂಡು ಬಂದು ಕಸ ಎಸೆಯುವವರನ್ನು ಪತ್ತೆ ಹಚ್ಚುವುದು ಅತ್ಯಂತ ಕಷ್ಟ. ಪ್ರಸ್ತುತ ಪ್ರತಿ ವಾರ್ಡ್‌ನಲ್ಲಿ ಪ್ರತಿಬಾರಿ ತಪ್ಪು ಮಾಡುವ ಕನಿಷ್ಠ ಒಬ್ಬ ನಿರಂತರ ತಪ್ಪಿತಸ್ಥರನ್ನು ಗುರುತಿಸಲಾಗಿದೆ. ಆದರೂ ಇದು ನಗರದ ವಿಸ್ತಾರವಾದ ಸಮಸ್ಯೆಯ ಕೇವಲ ಒಂದು ಭಾಗ ಮಾತ್ರ ಎಂದು ಬಿಎಸ್‌ಡಬ್ಲ್ಯೂಎಂಎಲ್ ಹೇಳಿದೆ.

ಸ್ವಚ್ಛ ಸರ್ವೇಕ್ಷಣ್ 2025 ವರದಿ ಪ್ರಕಟ:

ಭಾರತದ ಹಸಿರು ಟೆಕ್ ಹಬ್ ಎಂದು ಹೆಸರಾಗಿದ್ದ ಬೆಂಗಳೂರು, ಈಗ ಸ್ವಚ್ಛತಾ ಶ್ರೇಯಾಂಕಗಳಲ್ಲಿ ಹಿನ್ನಡೆ ಕಂಡಿದೆ. ಇತ್ತೀಚಿನ ಸ್ವಚ್ಛ ಸರ್ವೇಕ್ಷಣ್ 2025 ವರದಿಯ ಪ್ರಕಾರ, ಒಂದು ಮಿಲಿಯನ್‌ಗಿಂತ ಹೆಚ್ಚು ಜನಸಂಖ್ಯೆಯ ನಗರಗಳ ಪೈಕಿ ಬೆಂಗಳೂರು ದೇಶದ ಐದನೇ ಕೊಳಕು ನಗರ ಎಂದು ದಾಖಲಾಗಿದೆ.
ಇನ್ನು,ಇಂದೋರ್, ಸೂರತ್ ಮತ್ತು ನವಿ ಮುಂಬೈ ನಗರಗಳು ಸೂಪರ್ ಸ್ವಚ್ಛ ಲೀಗ್‌ ಪಟ್ಟಿಗೆ ಸೇರಿವೆ. ಅಹಮದಾಬಾದ್, ಭೋಪಾಲ್ ಮತ್ತು ಲಕ್ಷ್ಮೀ ನಗರಗಳು ಹೊಸ ಸ್ವಚ್ಛ ನಗರಗಳು ಎಂದು ಗುರುತಿಸಲ್ಪಟ್ಟಿವೆ.

ಸರ್ಕಾರದ ಯೋಜನೆಗಳು ಯಾವರೀತಿ ಇವೆ:

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಸುರಂಗ ರಸ್ತೆಗಳು, ಟ್ರೈಓವರ್‌ಗಳು ಹಾಗೂ ಮೂಲಸೌಕರ್ಯ ಯೋಜನೆಗಳಿಗೆ ಆದ್ಯತೆ ನೀಡುತ್ತಿರುವಾಗಲೂ, ಸ್ವಚ್ಛತೆಯ ಹಿನ್ನಡೆ ನಗರ ಆಡಳಿತದ ದಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟಿಹಾಕಿವೆ. ನಗರ ವ್ಯವಹಾರಗಳ ಸಚಿವಾಲಯವು ಈ ವರ್ಷ ಹೊಸ ಮೌಲ್ಯಮಾಪನ ಚೌಕಟ್ಟನ್ನು ಪರಿಚಯಿಸಿದ್ದು, ಇದು ಕಸ ನಿರ್ವಹಣೆಯಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಒಟ್ಟಾರೆಯಾಗಿ, ಬೆಂಗಳೂರು ನಗರದಲ್ಲಿ ಕಸದ ಸಮಸ್ಯೆ ಕೇವಲ ನಗರನ್ನು ಚೆನ್ನಾಗಿ ಕಾಣಿಸಬೇಕು ಅನ್ನುವ ವಿಷಯವಲ್ಲ, ಇದು ಸಾರ್ವಜನಿಕ ಆರೋಗ್ಯ, ಪರಿಸರ ಮತ್ತು ನಾಗರಿಕ ಹೊಣೆಗಾರಿಕೆಯ ಪರೀಕ್ಷೆಯಾಗಿದೆ. ರಿಟರ್ನ್ ಗಿಫ್ಟ್ ಯೋಜನೆ ನಾಗರಿಕರಿಗೆ ಕಸವನ್ನು ಕೇವಲ ತ್ಯಾಜ್ಯವಾಗಿ ನೋಡುವ ಬದಲು, ಹೊಣೆಗಾರಿಕೆಯ ಭಾಗವಾಗಿ ಪರಿಗಣಿಸಲು ಪ್ರೇರೇಪಿಸಬಹುದು. ಆದರೆ, ಇದರ ಯಶಸ್ಸು ಆಡಳಿತದ ದೃಢತೆ ಮತ್ತು ನಾಗರೀಕರ ಜಾಗೃತಿಯ ಮೇಲೆಯೇ ಅವಲಂಬಿತವಾಗಿದೆ.

WhatsApp Image 2025 09 05 at 11.51.16 AM 12

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories