Picsart 25 10 28 22 46 09 207 scaled

ಶೂನ್ಯ ಕಮಿಷನ್ ಮಾದರಿಯಲ್ಲಿ ಹೊಸ ಟ್ಯಾಕ್ಸಿ ಆರಂಭ.!ಓಲಾ, ಊಬರ್‌ ಕಮಿಷನ್ ಹಾವಳಿಗೆ ಕಡಿವಾಣ!

Categories:
WhatsApp Group Telegram Group

ಭಾರತೀಯ ಸಾರಿಗೆ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಆಗುವ ಸಾಧ್ಯತೆಗಳು ಇವೆ. ಕಳೆದ ಕೆಲ ವರ್ಷಗಳಿಂದ ಓಲಾ(Ola), ಊಬರ್(Uber) ಸೇರಿದಂತೆ ಖಾಸಗಿ ಕ್ಯಾಬ್ ಸೇವೆಗಳು ನಗರ ಸಾರಿಗೆಯ ಪ್ರಮುಖ ಭಾಗವಾಗಿವೆ. ಆದರೆ, ಈ ಸೇವೆಗಳ ಹಿಂದೆ ಅಡಗಿರುವ ಕಮಿಷನ್ ಹಾವಳಿ ಚಾಲಕರಿಗೂ, ಪ್ರಯಾಣಿಕರಿಗೂ ತಲೆನೋವಾಗಿತ್ತು. ಹೆಚ್ಚು ದರ, ಪೀಕ್ ಅವರ್‌ನಲ್ಲಿ ಹೆಚ್ಚುವರಿ ಶುಲ್ಕ, ಚಾಲಕರಿಗೆ ಕಡಿಮೆ ಆದಾಯ ಇವೆಲ್ಲವೂ ಅಸಮಾಧಾನಕ್ಕೆ ಕಾರಣವಾಗಿದ್ದವು. ಇದೇ ಸಮಸ್ಯೆಗೆ ಅಂತ್ಯ ಹಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಭಾರತ್ ಟ್ಯಾಕ್ಸಿ (Bharat Taxi) ಎಂಬ ಹೊಸ ರಾಷ್ಟ್ರೀಯ ಟ್ಯಾಕ್ಸಿ ಸೇವೆಯನ್ನು ಪ್ರಾರಂಭಿಸುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕೇಂದ್ರ ಸರ್ಕಾರದಿಂದ(Central government) ದೊಡ್ಡ ಹೆಜ್ಜೆ:

ಕೇಂದ್ರದ ಸಹಕಾರ ಸಚಿವಾಲಯದ ಮಾರ್ಗದರ್ಶನದಲ್ಲಿ ಈ ಯೋಜನೆ ರೂಪುಗೊಂಡಿದ್ದು, ಇದು ದೇಶದಾದ್ಯಂತ ಸಹಕಾರಿ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸಲಿರುವ ಟ್ಯಾಕ್ಸಿ ವ್ಯವಸ್ಥೆಯಾಗಲಿದೆ. ಇದರ ಪ್ರಮುಖ ಗುರಿ ಎಂದರೆ, ಖಾಸಗಿ ಕ್ಯಾಬ್ ಸೇವೆಗಳ ಕಮಿಷನ್ ಹಾವಳಿಗೆ ಕಡಿವಾಣ ಹಾಕುವುದು.
ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಮತ್ತು ವಿಶ್ವಾಸಾರ್ಹವಾಗಿ ಪ್ರಯಾಣ ಸೌಲಭ್ಯ ಒದಗಿಸುವುದು.
ಚಾಲಕರಿಗೆ ಪೂರ್ಣ ಲಾಭ ತಲುಪುವ ರೀತಿಯ ಸಹಕಾರಿ ವ್ಯವಸ್ಥೆ ರೂಪಿಸುವುದು

ಭಾರತ್ ಟ್ಯಾಕ್ಸಿ ಯಾವಾಗ ಆರಂಭ?:

ಈ ಸೇವೆ ನವೆಂಬರ್ ತಿಂಗಳಿನಿಂದಲೇ ಚಾಲನೆ ಪಡೆಯಲಿದ್ದು, ಆರಂಭದಲ್ಲಿ ಮುಂಬೈ, ಪುಣೆ, ಭೋಪಾಲ್ ಹಾಗೂ ಲಖನೌ ನಗರಗಳಲ್ಲಿ ಪ್ರಯೋಗಾತ್ಮಕವಾಗಿ ಪ್ರಾರಂಭವಾಗಲಿದೆ. ಬಳಿಕ ಡಿಸೆಂಬರ್ ವೇಳೆಗೆ ಈ ಸೇವೆ ಇತರ ಪ್ರಮುಖ ನಗರಗಳಿಗೂ ವಿಸ್ತರಿಸಲಾಗುವುದು. ಪ್ರಾರಂಭಿಕ ಹಂತದಲ್ಲಿ 650 ಭಾರತ್ ಟ್ಯಾಕ್ಸಿಗಳು ರಸ್ತೆಗಿಳಿಯಲಿವೆ, ಮತ್ತು ಸುಮಾರು 5000 ಚಾಲಕರು ಈ ಯೋಜನೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ.

ಚಾಲಕರಿಗೂ, ಪ್ರಯಾಣಿಕರಿಗೂ ಲಾಭ:

ಭಾರತ್ ಟ್ಯಾಕ್ಸಿಯು ಖಾಸಗಿ ಕಂಪನಿಗಳಿಗಿಂತ ವಿಭಿನ್ನವಾಗಿದೆ. ಓಲಾ, ಊಬರ್ ಮುಂತಾದ ಕಂಪನಿಗಳು ಪ್ರತಿ ಪ್ರಯಾಣದ ಮೇಲೆ ಚಾಲಕರಿಂದ 25 ಶೇಕಡಾ ಕಮಿಷನ್ ವಸೂಲು ಮಾಡುತ್ತವೆ. ಇದರ ಪರಿಣಾಮವಾಗಿ ಚಾಲಕರು ಹೆಚ್ಚು ದರ ವಸೂಲು ಮಾಡಲು ಮುಂದಾಗುತ್ತಾರೆ.
ಆದರೆ ಭಾರತ್ ಟ್ಯಾಕ್ಸಿ ಸರ್ಕಾರದ ಸಹಕಾರಿ ಯೋಜನೆ ಆಗಿರುವುದರಿಂದ, ಇಲ್ಲಿಯ ಕಮಿಷನ್ ಶೇಕಡಾ ಶೂನ್ಯವಾಗಿರುತ್ತದೆ (Zero Commission)!.
ಚಾಲಕರು ಸಂಪೂರ್ಣ ಆದಾಯವನ್ನು ತಮ್ಮದಾಗಿಸಿಕೊಳ್ಳಬಹುದು. ಜೊತೆಗೆ, ಸರ್ಕಾರದ ವತಿಯಿಂದ ಬೋನಸ್, ಡಿವಿಡೆಂಟ್‌ಗಳು, ಮತ್ತು ವಿಮೆ ಸೌಲಭ್ಯಗಳನ್ನೂ ಸಹ ನೀಡಲಾಗುತ್ತವೆ.

ಸೇವೆಯ ರೂಪುರೇಷೆ ಹೇಗಿರುತ್ತದೆ?:

ಭಾರತ್ ಟ್ಯಾಕ್ಸಿ ಸೇವೆಗೆ ಅಗತ್ಯವಾದ ತಂತ್ರಾಂಶ, ಮೊಬೈಲ್ ಆಪ್(Mobile App) ಹಾಗೂ ಸಾಫ್ಟ್‌ವೇರ್ ವ್ಯವಸ್ಥೆಯನ್ನು ರಾಷ್ಟ್ರೀಯ ಇ-ಗವರ್ನೆನ್ಸ್ ಡಿವಿಷನ್ (NeGD) ಅಭಿವೃದ್ಧಿಪಡಿಸಿದೆ.
ಸೇವೆಯ ನಿರ್ವಹಣೆ ಸಹಕಾರ್ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ಎಂಬ ಸಹಕಾರಿ ಸಂಸ್ಥೆಯ ಮೂಲಕ ನಡೆಯಲಿದೆ.
ಈ ಮಂಡಳಿಯಲ್ಲಿ ಚಾಲಕರ ಪ್ರತಿನಿಧಿಗಳು ಹಾಗೂ ಸಹಕಾರಿ ನಾಯಕರು ಇದ್ದು, ಅಮುಲ್‌ನ ವ್ಯವಸ್ಥಾಪಕ ನಿರ್ದೇಶಕ ಜಯೆನ್ ಮೆಹ್ರಾ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಉಪಾಧ್ಯಕ್ಷರಾಗಿ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದ ರೋಹಿತ್ ಗುಪ್ತಾ ಕಾರ್ಯನಿರ್ವಹಿಸಲಿದ್ದಾರೆ.
ಈ ಯೋಜನೆಗೆ IFFCO, Amul, NABARD, NCDC ಸೇರಿದಂತೆ ಎಂಟು ಪ್ರಮುಖ ಸಹಕಾರಿ ಸಂಸ್ಥೆಗಳು ಬೆಂಬಲ ನೀಡಿವೆ.

ಮಹಿಳಾ ಚಾಲಕಿಯರಿಗೆ ಅವಕಾಶ:

ಭಾರತ್ ಟ್ಯಾಕ್ಸಿ ಯೋಜನೆಯು ಲಿಂಗಸಮಾನತೆಯತ್ತ ಕೂಡ ಒಂದು ಹೆಜ್ಜೆ ಇಟ್ಟಿದೆ. ಪುರುಷರ ಜೊತೆಗೆ ಮಹಿಳಾ ಚಾಲಕಿಯರೂ ಸೇವೆ ನೀಡಲಿದ್ದು, ಇದು ಮಹಿಳಾ ಸಬಲೀಕರಣದತ್ತ ಮತ್ತೊಂದು ಪ್ರಮುಖ ಹೆಜ್ಜೆಯಾಗಲಿದೆ.

ಇನ್ನು, ಕೇಂದ್ರದ ಈ ಹೊಸ ಪ್ರಯತ್ನವನ್ನು ದೇಶದಾದ್ಯಂತ ಚಾಲಕ ಸಂಘಟನೆಗಳು ಉತ್ಸಾಹದಿಂದ ಸ್ವಾಗತಿಸಿವೆ.
ಬೃಹತ್ ಬೆಂಗಳೂರು ಟ್ಯಾಕ್ಸಿ ಡ್ರೈವರ್ ಯೂನಿಯನ್ ಹೇಳುವಂತೆ, ಕೇಂದ್ರ ಸರ್ಕಾರದ ಈ ಯೋಜನೆ ಬಹುದಿನಗಳ ಬೇಡಿಕೆಯಾಗಿದೆ. ಚಾಲಕರಿಗೂ ಲಾಭ, ಪ್ರಯಾಣಿಕರಿಗೂ ಕಡಿಮೆ ದರ ಎಲ್ಲರಿಗೂ ಇದು ಹಿತಕರ ಎಂದು ತಿಳಿಸಿದ್ದಾರೆ 

ಒಟ್ಟಾರೆಯಾಗಿ, ಭಾರತ್ ಟ್ಯಾಕ್ಸಿ ಯೋಜನೆ ಭಾರತದಲ್ಲಿ ಸಾರಿಗೆ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ. ಕಮಿಷನ್‌ರಹಿತ ಸೇವೆ, ಸರ್ಕಾರದ ನಂಬಿಕೆ, ಸಹಕಾರಿ ವ್ಯವಸ್ಥೆ ಮತ್ತು ಸಮಾನ ಅವಕಾಶಗಳ ಮೂಲಕ ಇದು ಓಲಾ, ಊಬರ್ ಮುಂತಾದ ಖಾಸಗಿ ಸಂಸ್ಥೆಗಳಿಗೆ ಗಟ್ಟಿ ಸ್ಪರ್ಧೆಯನ್ನು ನೀಡಲಿದೆ.

This image has an empty alt attribute; its file name is WhatsApp-Image-2025-09-05-at-11.51.16-AM-12-1024x330.jpeg

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories