Picsart 25 10 25 22 59 10 451 scaled

ಗಲ್ಲು ಶಿಕ್ಷೆ ಬದಲಿಗೆ ಚುಚ್ಚುಮದ್ದು ಮೂಲಕ ಮರಣದಂಡನೆ? ಸುಪ್ರೀಂ ಕೋರ್ಟ್‌ನಲ್ಲಿ ತೀವ್ರತೆ ಪಡೆದುಕೊಂಡ ಚರ್ಚೆ 

Categories:
WhatsApp Group Telegram Group

ಭಾರತದಲ್ಲಿ ಮರಣದಂಡನೆ ಎಂದರೆ ಸಾಮಾನ್ಯವಾಗಿ ಗಲ್ಲು ಶಿಕ್ಷೆ ಎಂಬ ಪದವೇ ಮನಸ್ಸಿಗೆ ಬರುತ್ತದೆ. ಅಪರಾಧಿಯ ಕೃತ್ಯ ಎಷ್ಟೇ ಭೀಕರವಾಗಿದ್ದರೂ, ಅಂತಿಮ ಕ್ಷಣದಲ್ಲಿ ಮಾನವೀಯತೆ ಉಳಿಯಬೇಕು ಎಂಬ ಚರ್ಚೆ ಈಗ ನ್ಯಾಯಾಂಗದ ಮಟ್ಟದಲ್ಲೂ ಸದ್ದು ಮಾಡುತ್ತಿದೆ. ಕೊಲೆ, ಅತ್ಯಾಚಾರ, ಭಯೋತ್ಪಾದನೆ, ಸಾಮೂಹಿಕ ದೌರ್ಜನ್ಯ ಮುಂತಾದ ಅಪರಾಧಗಳಿಗೆ ಮರಣದಂಡನೆ ವಿಧಿಸುವುದು ಭಾರತೀಯ ಕಾನೂನಿನ ಅಂಗವಾಗಿದೆ. ಆದರೆ ಈ ದಂಡನೆಯ ವಿಧಾನವು ಸರಿಯಾಗಿ ಇದೆಯೇ? ಎಂಬ ಪ್ರಶ್ನೆ ಕೇಳಿಬರುತ್ತಿದ್ದು, ಈಗ ಸುಪ್ರೀಂ ಕೋರ್ಟ್‌ನವರೆಗೂ(Supreme Court) ಈ ಪ್ರಶ್ನೆ  ತಲುಪಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಸಾಮಾನ್ಯವಾಗಿ ಗಲ್ಲು ಶಿಕ್ಷೆ ಎಂದರೆ ವ್ಯಕ್ತಿಯನ್ನು ಹಗ್ಗದ ಮೂಲಕ ನೇಣು ಹಾಕಿ ಪ್ರಾಣ ತೆಗೆಯುವುದು. ಈ ವಿಧಾನ ಬ್ರಿಟಿಷರ ಕಾಲದಿಂದಲೂ ಭಾರತದಲ್ಲಿ ಪ್ರಚಲಿತದಲ್ಲಿದೆ. ಆದರೆ ಈಗಾಗಲೇ ಅನೇಕ ರಾಷ್ಟ್ರಗಳು ಈ ಕ್ರೂರ ಪದ್ಧತಿಯನ್ನು ನಿಷೇಧಿಸಿ, ಕಡಿಮೆ ನೋವುಂಟುಮಾಡುವ ಮಾರ್ಗಗಳನ್ನು ಅಳವಡಿಸಿಕೊಂಡಿವೆ. ಇದೇ ಹಿನ್ನೆಲೆಯಲ್ಲಿ, ಭಾರತದಲ್ಲಿಯೂ ಗಲ್ಲು ಶಿಕ್ಷೆ ಬದಲಾಗಿ ವಿಷದ ಚುಚ್ಚುಮದ್ದು ಮೂಲಕ ಮರಣದಂಡನೆ ನೀಡಬೇಕು ಎಂಬ ಮನವಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಯಿತು.

ಮರಣದಂಡನೆ ವಿಧಿಸುವ ಪ್ರಮುಖ ಅಪರಾಧಗಳು ಯಾವುವು?:

ಭಾರತೀಯ ಕಾನೂನಿನ ಪ್ರಕಾರ ಕೆಳಗಿನ ಅಪರಾಧಗಳಿಗೆ ಮರಣದಂಡನೆ ವಿಧಿಸಬಹುದಾಗಿದೆ,
ಕೊಲೆ ಹಾಗೂ ಡಕಾಯಿತಿ ವೇಳೆ ಕೊಲೆ.
ಭಯೋತ್ಪಾದನಾ ಕೃತ್ಯಗಳು.
ಅತ್ಯಾಚಾರ ಹಾಗೂ ಸಾಮೂಹಿಕ ಅತ್ಯಾಚಾರ.
12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರ.
ಅಪಹರಣ ಹಾಗೂ ಕೊಲೆ.
ಸೇನೆಯ ವಿರುದ್ಧ ದ್ರೋಹ ಅಥವಾ ದಂಗೆ.
ಮಾದಕ ವಸ್ತು ಕಳ್ಳಸಾಗಣೆ.
ನಿರಪರಾಧಿಗೆ ಮರಣದಂಡನೆ ವಿಧಿಸುವಂತೆ ಸುಳ್ಳು ಸಾಕ್ಷಿ ನೀಡುವುದು.

ಸುಪ್ರೀಂ ಕೋರ್ಟ್‌ ಅಂಗಳದಲ್ಲಿ ಅರ್ಜಿ ಕುರಿತು ಚರ್ಚೆ:

ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರಲ್ಲಿ, ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಹೀಗೆ ವಿನಂತಿಸಿದ್ದಾರೆ,
ಗಲ್ಲು ಶಿಕ್ಷೆ ಅತ್ಯಂತ ಯಾತನೆಯ ವಿಧಾನವಾಗಿದೆ. ವಿಷದ ಚುಚ್ಚುಮದ್ದು ಅಥವಾ ಬಂದೂಕಿನಿಂದ ಗುಂಡು ಹಾರಿಸುವುದು, ವಿದ್ಯುತ್ ಕುರ್ಚಿ ಅಥವಾ ವಿಷ ಅನಿಲದ ಮೂಲಕ ಕೊಲ್ಲುವುದು ಇವು ಕಡಿಮೆ ನೋವಿನ ವಿಧಾನಗಳಾಗಿದ್ದು, ಅಪರಾಧಿಗಳಿಗೆ ಈ ರೀತಿಯ ಆಯ್ಕೆಯನ್ನು ನೀಡಬಹುದಲ್ಲವೇ? ಎಂದು ಪ್ರಶ್ನೆಸಿದ್ದಾರೆ.

ಸುಪ್ರೀಂ ಕೋರ್ಟ್ ಈ ವಿಚಾರಣೆ ವೇಳೆ ಗಲ್ಲು ಶಿಕ್ಷೆಯಿಂದ ಆಗುವ ನೋವನ್ನು ಗಮನಿಸಿದರೂ, ಕೇಂದ್ರ ಸರ್ಕಾರ ಬದಲಾವಣೆಗೆ ಸಿದ್ಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಕೋರ್ಟ್ ಅಭಿಪ್ರಾಯಪಟ್ಟಂತೆ, ಗಲ್ಲು ಶಿಕ್ಷೆಯಲ್ಲಿ ಎಲ್ಲರಿಗೂ ಒಂದೇ ರೀತಿಯ ಹಗ್ಗ ಉಪಯೋಗಿಸಲಾಗುತ್ತದೆ, ಆದರೆ ಪ್ರತಿಯೊಬ್ಬರ ದೇಹದ ತೂಕ ಮತ್ತು ಶಾರೀರಿಕ ಸ್ಥಿತಿ ವಿಭಿನ್ನವಾಗಿರುವುದರಿಂದ ಪ್ರಾಣ ಹೋಗುವ ಅವಧಿಯಲ್ಲೂ ವ್ಯತ್ಯಾಸ ಉಂಟಾಗುತ್ತದೆ. ಕೆಲವೊಮ್ಮೆ 30 ರಿಂದ 40 ನಿಮಿಷಗಳವರೆಗೂ ಕೈದಿ ಯಾತನೆ ಅನುಭವಿಸುತ್ತಾನೆ ಎಂದು ತಿಳಿಸಿದೆ.

ವಿಷದ ಚುಚ್ಚುಮದ್ದು ಮೂಲಕ ಮರಣದಂಡನೆ ವಿಧಾನ:

ವಿಷದ ಚುಚ್ಚುಮದ್ದಿನ ಪ್ರಕ್ರಿಯೆಯಲ್ಲಿ ಅಪರಾಧಿಗೆ ಮೂರು ಹಂತಗಳಲ್ಲಿ ಮದ್ದು ನೀಡಲಾಗುತ್ತದೆ,
ಅರಿವಳಿಕೆ ಮದ್ದು (Anesthetic) : ಅಪರಾಧಿ ನಿದ್ರೆಯ ಸ್ಥಿತಿಗೆ ಹೋಗುತ್ತಾನೆ.
ಪ್ಯಾಂಕುುರೋನಿಯಮ್ ಬೋಮೈಡ್ (Paralytic Drug) :  ದೇಹದ ನರಗಳು ಹಾಗೂ ಸ್ನಾಯುಗಳು ಚಲನೆ ನಿಲ್ಲಿಸುತ್ತವೆ.
ಪೊಟ್ಯಾಸಿಯಮ್ ಕ್ಲೋರೈಡ್ : ಹೃದಯದ ಬಡಿತವನ್ನು ನಿಲ್ಲಿಸುತ್ತದೆ.
ಈ ವಿಧಾನದಲ್ಲಿ 10–15 ನಿಮಿಷಗಳಲ್ಲಿ ಅಪರಾಧಿಯು ನೋವಿಲ್ಲದೆ ಸಾವನ್ನಪ್ಪುತ್ತಾನೆ ಎಂದು ಹೇಳಲಾಗುತ್ತದೆ. ಅನೇಕ ದೇಶಗಳಲ್ಲಿ (ಅಮೆರಿಕಾ, ಚೀನಾ, ಥಾಯ್ಲೆಂಡ್‌ ಮುಂತಾದವುಗಳಲ್ಲಿ) ಈ ವಿಧಾನ ಬಳಕೆಯಲ್ಲಿದೆ.

ಗಲ್ಲು ಶಿಕ್ಷೆಯ ಪ್ರಕ್ರಿಯೆ ಹೇಗೆ ನಡೆಯುತ್ತದೆ?:

ಗಲ್ಲಿಗೆ ಏರಿಸುವ ಮೊದಲು ಅಧಿಕಾರಿಗಳು ಪರೀಕ್ಷೆ ನಡೆಸುತ್ತಾರೆ. ಅಪರಾಧಿಯ ತೂಕದಷ್ಟೇ ಮರಳು ತುಂಬಿದ ಚೀಲವನ್ನು ನೇಣಿಗೆ ಹಾಕಿ ಹಗ್ಗದ ಬಲವನ್ನು ಪರೀಕ್ಷಿಸಲಾಗುತ್ತದೆ. ನಂತರ ಅಪರಾಧಿಯ ಎತ್ತರ, ತೂಕಕ್ಕೆ ತಕ್ಕಂತೆ ಹಗ್ಗದ ಉದ್ದವನ್ನು ನಿಗದಿಪಡಿಸಲಾಗುತ್ತದೆ. ಆದರೆ ಹಗ್ಗದಲ್ಲಿ ನೇಣು ಹಾಕಿದ ಬಳಿಕ, ಉಸಿರು ತಟ್ಟನೆ ಹೋಗುವುದಿಲ್ಲ, ಸುಮಾರು 30 ರಿಂದ 40 ನಿಮಿಷಗಳವರೆಗೂ ದೇಹದಲ್ಲಿ ಜೀವ ಇರುತ್ತದೆ ಎಂಬುದು ವೈದ್ಯಕೀಯವಾಗಿ ದೃಢಪಟ್ಟಿದೆ.

ಭಾರತದಲ್ಲಿ ಮರಣದಂಡನೆ ಅಂಕಿಅಂಶಗಳ ಬಗ್ಗೆ ನೋಡುವುದಾದರೆ:

ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ 2023ರವರೆಗೆ ಒಟ್ಟು 561 ಮಂದಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಬ್ರಿಟಿಷರ ಕಾಲದಲ್ಲಿ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ನೀಡುತ್ತಿದ್ದರೆ, ಈಗ ಈ ಶಿಕ್ಷೆ ಕಠಿಣ ಕಾನೂನು ಪ್ರಕ್ರಿಯೆಯ ನಂತರ ಮಾತ್ರ ವಿಧಿಸಲಾಗುತ್ತದೆ.

ವಿಶ್ವದಾದ್ಯಂತ ಮರಣದಂಡನೆ ಪದ್ಧತಿಗಳು ಹೀಗಿವೆ:

ಬಂದೂಕಿನಿಂದ ಗುಂಡು ಹಾರಿಸಿ: ರಷ್ಯಾ, ಇಂಡೋನೇಷ್ಯಾ, ಯುಎಇ, ಬಾಂಗ್ಲಾದೇಶ, ಕೊರಿಯಾ.
ತಲೆ ಕತ್ತರಿಸುವ ಶಿಕ್ಷೆ: ಸೌದಿ ಅರೇಬಿಯಾ, ಇರಾನ್, ಯೆಮೆನ್.
ವಿಷದ ಚುಚ್ಚುಮದ್ದು: ಅಮೆರಿಕಾ, ಚೀನಾ, ತೈವಾನ್, ಥಾಯ್ಲೆಂಡ್.
ವಿಷ ಅನಿಲ ಅಥವಾ ವಿದ್ಯುತ್ ಕುರ್ಚಿ: ಅಮೆರಿಕಾ, ವಿಯೆಟ್ನಾಂ.
ಕಲ್ಲು ಹೊಡೆದು ಕೊಲ್ಲುವುದು: ಇರಾನ್, ಪಾಕಿಸ್ಥಾನ, ಸೌದಿ, ನೈಜೀರಿಯಾ.
1977ರಲ್ಲಿ ಕೇವಲ 16 ರಾಷ್ಟ್ರಗಳು ಮಾತ್ರ ಮರಣದಂಡನೆಯನ್ನು ರದ್ದುಪಡಿಸಿದ್ದವು. ಆದರೆ ಈಗ 95 ರಾಷ್ಟ್ರಗಳು ಸಂಪೂರ್ಣ ನಿಷೇಧ ಮಾಡಿವೆ, ಇನ್ನೂ 9 ರಾಷ್ಟ್ರಗಳು ವಿಶೇಷ ಸಂದರ್ಭಗಳಲ್ಲಿ ಮಾತ್ರ ಮರಣದಂಡನೆ ವಿಧಿಸುತ್ತಿವೆ. ಭಾರತ ಸೇರಿದಂತೆ ಸುಮಾರು 58 ರಾಷ್ಟ್ರಗಳಲ್ಲಿ ಮರಣದಂಡನೆ ಇನ್ನೂ ಕಾನೂನಿನ ಭಾಗವಾಗಿದೆ.

ಒಟ್ಟಾರೆಯಾಗಿ, ಮರಣದಂಡನೆ ವಿಧಿಸುವುದು ಕಾನೂನುಸಮ್ಮತವಾದರೂ, ಅದನ್ನು ಹೇಗೆ ವಿಧಿಸಲಾಗುತ್ತದೆ ಎಂಬುದು ಮಾನವೀಯ ಅಂಶಕ್ಕೆ ಸಂಬಂಧಿಸಿದೆ. ಗಲ್ಲು ಶಿಕ್ಷೆ ಎಂಬ ಪುರಾತನ ಪದ್ಧತಿ ಮಾನಸಿಕ ಹಾಗೂ ದೈಹಿಕ ಹಿಂಸೆ ಉಂಟುಮಾಡುತ್ತದೆ ಎಂಬ ಅಭಿಪ್ರಾಯ ಈಗ ಕೇಳಿ ಬರುತ್ತಿದೆ. ಸುಪ್ರೀಂ ಕೋರ್ಟ್‌ನ ಅಭಿಪ್ರಾಯದಂತೆ, ಅಪರಾಧಿಗಳಿಗೆ ನ್ಯಾಯ ನೀಡುವಂತೆಯೇ, ಮರಣದಂಡನೆಯು ಮಾನವೀಯವಾಗಿರಬೇಕು ಎಂಬ ವಿಚಾರಣೆಯು ಭಾರತದ ನ್ಯಾಯ ವ್ಯವಸ್ಥೆಗೆ ಹೊಸ ಚಿಂತನೆಯ ದಾರಿ ತೆರೆದಿದೆ.

WhatsApp Image 2025 09 05 at 11.51.16 AM 12

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories