judgement

ಶಿಸ್ತಿನ ನಿರ್ವಹಣೆಗೆ ಶಿಕ್ಷಕರು ಮಕ್ಕಳನ್ನು ದಂಡಿಸಿದರೆ ಅದು ಅಪರಾಧವಲ್ಲ – ಹೈಕೋರ್ಟ್‌ನ ಮಹತ್ವದ ತೀರ್ಪು!

WhatsApp Group Telegram Group

ಶಾಲೆಯಲ್ಲಿ ಶಿಸ್ತು ಮೀರಿದ ವಿದ್ಯಾರ್ಥಿಯ ಕಾಲಿಗೆ ಬೆತ್ತದಿಂದ ಹೊಡೆದಿದ್ದ ಶಿಕ್ಷಕರೊಬ್ಬರನ್ನು ಆರೋಪದಿಂದ ಮುಕ್ತಗೊಳಿಸಿ ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಕ್ಕಳನ್ನು ಶಿಸ್ತುಬದ್ಧಗೊಳಿಸುವ ಉದ್ದೇಶದಿಂದ ಶಿಕ್ಷಕರು ದಂಡಿಸುವುದು ಸರಿಯಾಗಿದೆ ಎಂದು ಹೈಕೋರ್ಟ್ ಈ ಮೂಲಕ ಸ್ಪಷ್ಟಪಡಿಸಿದೆ.

ತನ್ನ ವಿದ್ಯಾರ್ಥಿಗಳಿಗೆ ಹೊಡೆದಿದ್ದ ಶಾಲಾ ಶಿಕ್ಷಕರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ಇತ್ತೀಚಿನ ತೀರ್ಪಿನಲ್ಲಿ ಕೇರಳ ಹೈಕೋರ್ಟ್ ರದ್ದುಗೊಳಿಸಿದೆ. ನ್ಯಾಯಮೂರ್ತಿ ಸಿ. ಪ್ರತೀಪ್ ಕುಮಾರ್ ಅವರು ಈ ಸಂದರ್ಭದಲ್ಲಿ ವಿವಿಧ ಹಿಂದಿನ ನ್ಯಾಯಾಂಗ ತೀರ್ಪುಗಳನ್ನು ಉಲ್ಲೇಖಿಸಿದ್ದು, ಶಿಕ್ಷಕರು ಮಗುವಿಗೆ ನೀಡಬಹುದಾದ ದೈಹಿಕ ಶಿಕ್ಷೆಯ ಪ್ರಮಾಣದ ಕುರಿತು ಚರ್ಚಿಸಿದ್ದಾರೆ.

ಮಕ್ಕಳು ಜವಾಬ್ದಾರಿಯುತ ಪ್ರಜೆಗಳಾಗಲು ಕೆಲವು ಸಂದರ್ಭಗಳಲ್ಲಿ ದಂಡನೆ ಅಗತ್ಯವಿರುತ್ತದೆ, ಹಾಗಾಗಿ ಶಿಕ್ಷಕರ ಈ ಕ್ರಮ ಸರಿಯಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. 2019 ರಲ್ಲಿ ಪಾಲಕ್ಕಾಡ್ ಶಾಲೆಯೊಂದರಲ್ಲಿ 5ನೇ ತರಗತಿಯ ವಿದ್ಯಾರ್ಥಿಯ ಕಾಲಿಗೆ ಬೆತ್ತದಿಂದ ಹೊಡೆದಿದ್ದ ಶಿಕ್ಷಕರ ಕ್ರಮವನ್ನು ಪ್ರಶ್ನಿಸಿ ಪೋಷಕರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು.

ಪೋಷಕರು ತಮ್ಮ ಮಕ್ಕಳ ಜವಾಬ್ದಾರಿಯನ್ನು ಶಿಕ್ಷಕರಿಗೆ ವಹಿಸುತ್ತಾರೆ. ಮಕ್ಕಳನ್ನು ಶಿಸ್ತುಬದ್ಧಗೊಳಿಸಲು ಶಿಕ್ಷೆ ನೀಡುವ ಅಧಿಕಾರ ಶಿಕ್ಷಕರಿಗೆ ಇರುತ್ತದೆ. ಈ ನಿರ್ದಿಷ್ಟ ಪ್ರಕರಣದಲ್ಲಿ ಶಿಕ್ಷಕರು ಶಿಸ್ತು ಕಲಿಸುವ ಉದ್ದೇಶದಿಂದ ಶಿಕ್ಷೆ ನೀಡಿದ್ದಾರೆ ಹೊರತು ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿಲ್ಲ ಎಂದು ನ್ಯಾಯಾಲಯ ಹೇಳಿದೆ.

This image has an empty alt attribute; its file name is WhatsApp-Image-2025-09-05-at-11.51.16-AM-12-1024x330.jpeg

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories