toolkit

ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸಿಹಿ ಸುದ್ದಿ: ವಿವಿಧ ವೃತ್ತಿಪರ ಕಿಟ್‌ಗಳ ವಿತರಣೆಗೆ ಅರ್ಜಿ ಆಹ್ವಾನ

WhatsApp Group Telegram Group

ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಧಾರವಾಡ ಜಿಲ್ಲೆಯಲ್ಲಿ ಅರ್ಹ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ವಿವಿಧ ಸುರಕ್ಷತಾ ಕಿಟ್‌ಗಳನ್ನು ವಿತರಿಸಲು ಅರ್ಜಿಗಳನ್ನು ಕರೆಯಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ವಿತರಿಸಲಿರುವ ಕಿಟ್‌ಗಳ ವಿವರ (ಅಂದಾಜು ಸಂಖ್ಯೆಗಳು):

  • ಸುರಕ್ಷತಾ ಗೌಂಡಿ ಕಿಟ್: 3264
  • ಸುರಕ್ಷತಾ ಎಲೆಕ್ಟ್ರಿಷಿಯನ್ ಕಿಟ್: 812
  • ಸುರಕ್ಷತಾ ವೆಲ್ಡರ್ ಕಿಟ್: 200
  • ಸುರಕ್ಷತಾ ಕಾಪೇರ್ಂಟರ್ ಕಿಟ್: 634
  • ಸುರಕ್ಷತಾ ಪೇಂಟರ್ ಕಿಟ್: 802
  • ಸುರಕ್ಷತಾ ಪ್ಲಂಬರ್ ಕಿಟ್: 260

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 15.

ಅರ್ಹ ನೋಂದಾಯಿತ ಕಟ್ಟಡ ಕಾರ್ಮಿಕರು ತಮ್ಮ ಅಗತ್ಯ ದಾಖಲೆಗಳೊಂದಿಗೆ ಆಯಾ ತಾಲೂಕುಗಳಲ್ಲಿರುವ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬೇಕು.

ಪ್ರಮುಖ ಸೂಚನೆ:

  • ಫಲಾನುಭವಿಗಳೇ ಖುದ್ದಾಗಿ ಕಾರ್ಮಿಕ ಇಲಾಖೆಯ ಕಚೇರಿಗಳಿಗೆ ಸಂಪರ್ಕಿಸಿ ಅರ್ಜಿ ಸಲ್ಲಿಸಬೇಕು.
  • ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮೂಲಕ ಅರ್ಜಿ ಸಲ್ಲಿಸುವುದನ್ನು ಅಥವಾ ಮಧ್ಯವರ್ತಿಗಳಿಗೆ ಅರ್ಜಿಯನ್ನು ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
  • ಯಾವುದೇ ವ್ಯಕ್ತಿ ಅಥವಾ ಸಂಘಟನೆಯು ಒಟ್ಟಾಗಿ ಫಲಾನುಭವಿಗಳ ಅರ್ಜಿಗಳನ್ನು ಸಲ್ಲಿಸಿದರೆ ಅವುಗಳನ್ನು ಸ್ವೀಕರಿಸಲಾಗುವುದಿಲ್ಲ.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು:

  1. ನವೀಕರಣಗೊಂಡ ಗುರುತಿನ ಚೀಟಿ (ಐಡಿ ಕಾರ್ಡ್).
  2. ಆಧಾರ್ ಕಾರ್ಡ್.
  3. ಈ ಹಿಂದೆ ಕಿಟ್‌ಗಳನ್ನು ಪಡೆಯದಿರುವ ಬಗ್ಗೆ ಸ್ವಯಂ ಘೋಷಣಾ ಪತ್ರ.
  4. ಮೊಬೈಲ್ ಸಂಖ್ಯೆ.

ಅರ್ಜಿ ಸಲ್ಲಿಸಬೇಕಾದ ಕಚೇರಿಗಳು (ನವೆಂಬರ್ 15ರ ಒಳಗೆ):

ಧಾರವಾಡ ಜಿಲ್ಲೆಯ ಕೆಳಕಂಡ ಕಚೇರಿಗಳಲ್ಲಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು:

  1. ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿ, ಅಣ್ಣಿಗೇರಿ (ಬಸ್ ನಿಲ್ದಾಣ ಹತ್ತಿರ).
  2. ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿ, ನವಲಗುಂದ (ಗವಿಮಠದ ಹತ್ತಿರ).
  3. ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿ, ಕಲಘಟಗಿ (ಅನ್ವೇಕರ ಪ್ಲಾಟ್, ಜ್ಯೋತಿ ನಗರ).
  4. ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿ, ಕುಂದಗೋಳ (ಸರ್ಕಾರಿ ಇಲಾಖೆಗಳ ಸಂಕೀರ್ಣ ಕಟ್ಟಡ).
  5. ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿ, ಅಳ್ನಾವರ (ಇಂದಿರಾ ನಗರ, 1 ನೇ ಕ್ರಾಸ್).
  6. ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿ, ಧಾರವಾಡ (ಉಳವಿ ಚನ್ನಬಸವೇಶ್ವರ ದೇವಸ್ಥಾನದ ಹತ್ತಿರ).
  7. ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿ ಹಾಗೂ ಕಾರ್ಮಿಕ ಅಧಿಕಾರಿಗಳ ಮತ್ತು ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ, ಹುಬ್ಬಳ್ಳಿ (ಕಾರ್ಮಿಕ ಭವನ, ಚೈತನ್ಯ ನಗರ, ಪ್ರಿಯದರ್ಶಿನಿ ಕಾಲೋನಿ).

ನವೆಂಬರ್ 15 ರ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಸ್ವೀಕರಿಸಿದ ಅರ್ಜಿಗಳನ್ನು ನಿಯಮಗಳ ಮತ್ತು ಜೇಷ್ಠತೆಯ ಆಧಾರದ ಮೇಲೆ ಆಯ್ಕೆ ಮಾಡಿ ಕಿಟ್‌ಗಳನ್ನು ಹಂಚಿಕೆ ಮಾಡಲಾಗುವುದು.

ಹೆಚ್ಚಿನ ವಿವರಗಳಿಗಾಗಿ ಕಾರ್ಮಿಕ ನಿರೀಕ್ಷಕರು, ಹಿರಿಯ ಕಾರ್ಮಿಕ ನಿರೀಕ್ಷಕರು ಮತ್ತು ಕಾರ್ಮಿಕ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಹುಬ್ಬಳ್ಳಿಯ ಸಹಾಯಕ ಕಾರ್ಮಿಕ ಆಯುಕ್ತರಾದ ಸಚಿನ್ ಹಳೆಮನಿ ಅವರು ತಿಳಿಸಿದ್ದಾರೆ.

WhatsApp Image 2025 09 05 at 11.51.16 AM 12

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories