Picsart 25 10 22 21 28 41 305 scaled

ಜಿರಳೆಗಳಿಂದ ಮನೆಯಲ್ಲಿನ ಶಾಂತಿ ಬೇಕೆ? ಇಲ್ಲಿವೆ ನೈಸರ್ಗಿಕ ಮನೆಮದ್ದುಗಳು, ಇಲ್ಲಿದೆ ಸುಲಭ ಪರಿಹಾರ!

Categories:
WhatsApp Group Telegram Group

ಮನೆ ಎಷ್ಟೇ ಸ್ವಚ್ಛವಾಗಿಟ್ಟರೂ, ಅಡುಗೆಮನೆಯ ಮೂಲೆಯಲ್ಲಿ ಓಡಾಡುವ ಜಿರಳೆಗಳು (Cockroaches) ನಮ್ಮ ನಿತ್ಯದ ತೊಂದರೆ. ಇವು ಕೇವಲ ಕಿರಿಕಿರಿಯನ್ನು ಮಾತ್ರ ಕೊಡದೆ, ಆಹಾರ ಮತ್ತು ಆರೋಗ್ಯಕ್ಕೂ ಹಾನಿ ಮಾಡುತ್ತವೆ. ಮಾರುಕಟ್ಟೆಯಲ್ಲಿನ ಕೆಮಿಕಲ್‌ಯುಕ್ತ ಸ್ಪ್ರೇಗಳು ತಾತ್ಕಾಲಿಕ ಪರಿಹಾರ ಕೊಡಬಹುದು, ಆದರೆ ಅವು ಆರೋಗ್ಯಕ್ಕೆ ಹಾನಿಕಾರಕ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಹೀಗಾಗಿ ಇಂದಿನಿಂದಲೇ ಈ ನೈಸರ್ಗಿಕ ಮನೆಮದ್ದುಗಳನ್ನು ಪ್ರಯೋಗಿಸಿ — ಸುರಕ್ಷಿತ, ಕಡಿಮೆ ವೆಚ್ಚದ ಮತ್ತು ಶಾಶ್ವತ ಪರಿಹಾರ ಪಡೆಯಿರಿ!

ಅಡುಗೆ ಸೋಡಾ ಮತ್ತು ಸಕ್ಕರೆ:

ಅಡುಗೆ ಸೋಡಾ (Baking soda) ಮತ್ತು ಸಕ್ಕರೆಯನ್ನು ಸಮ ಪ್ರಮಾಣದಲ್ಲಿ ಬೆರೆಸಿ, ಜಿರಳೆಗಳು ಓಡಾಡುವ ಸ್ಥಳಗಳಲ್ಲಿ ಚಿಮ್ಮಿ ಇಡಿ.
ಸಕ್ಕರೆಯ ವಾಸನೆಗೆ ಆಕರ್ಷಿತವಾಗುವ ಜಿರಳೆಗಳು ಈ ಮಿಶ್ರಣವನ್ನು ತಿಂದು ಸಾಯುತ್ತವೆ.
ಬೋರಿಕ್ ಆಮ್ಲ ಮತ್ತು ಸಕ್ಕರೆಯ ಮಿಶ್ರಣವೂ ಇದೇ ರೀತಿಯಲ್ಲಿ ಪರಿಣಾಮಕಾರಿ.

ಬೇವಿನ ಎಲೆ ಅಥವಾ ಎಣ್ಣೆ:
ಬೇವಿನ ಎಲೆಗಳಲ್ಲಿ(Neem leaves) ಕೀಟನಾಶಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ.
ಎಲೆಗಳನ್ನು ಅಡುಗೆಮನೆ, ಬಾತ್ರೂಮ್ ಮತ್ತು ಕೊಠಡಿ ಮೂಲೆಯಲ್ಲಿ ಇಡಿ ಅಥವಾ ಬೇವಿನ ಎಣ್ಣೆಯನ್ನು ನೀರಿನೊಂದಿಗೆ ಬೆರೆಸಿ ಸಿಂಪಡಿಸಿ.
ಈ ವಾಸನೆಗೆ ಜಿರಳೆಗಳು ತಾಳಲಾರವು, ಮನೆ ಬಿಟ್ಟು ಓಡಿಹೋಗುತ್ತವೆ.

ನೀಲಗಿರಿ ಎಣ್ಣೆ:
ನೀಲಗಿರಿ ಎಣ್ಣೆಯ(Eucalyptus oil) ತೀವ್ರ ವಾಸನೆ ಜಿರಳೆಗಳಿಗೆ ಅಸಹ್ಯ. ಸ್ವಲ್ಪ ಎಣ್ಣೆಯನ್ನು ನೀರಿನೊಂದಿಗೆ ಬೆರೆಸಿ ಸ್ಪ್ರೇ ಬಾಟಲಿಯಲ್ಲಿ ಹಾಕಿ, ಜಿರಳೆಗಳು ಓಡಾಡುವ ಪ್ರದೇಶಗಳಲ್ಲಿ ಸಿಂಪಡಿಸಿ. ಇದರಿಂದ ಜಿರಳೆಗಳು ಮಾತ್ರವಲ್ಲದೆ ಇತರ ಕೀಟಗಳೂ ದೂರವಾಗುತ್ತವೆ.

ಪುದೀನಾ ಎಣ್ಣೆ :

ಪುದೀನಾ ಎಣ್ಣೆಯ(Peppermint oil) ತೀವ್ರ ವಾಸನೆಗೆ ಜಿರಳೆಗಳು ಸಹಿಸಲಾರವು. ನೀರಿನೊಂದಿಗೆ ಮಿಶ್ರಣ ಮಾಡಿ ಸ್ಪ್ರೇ ಮಾಡಿ ಅಥವಾ ಹತ್ತಿ ತುಂಡಿನಲ್ಲಿ ಹಚ್ಚಿ ಮೂಲೆಯಲ್ಲಿ ಇಡಿ. ಇದು ಕಾಕ್ರೋಚ್‌ಗಳನ್ನು ಓಡಿಸುವುದರ ಜೊತೆಗೆ ಮನೆಯಲ್ಲಿ ತಾಜಾ ವಾಸನೆ ನೀಡುತ್ತದೆ.

ನಿಂಬೆ ಅಥವಾ ಕಿತ್ತಳೆ ಸಿಪ್ಪೆ:
ಸಿಟ್ರಸ್‌ ಹಣ್ಣುಗಳ ಸಿಪ್ಪೆಗಳಲ್ಲಿ ಇರುವ ಎಣ್ಣೆಯ ವಾಸನೆ ಜಿರಳೆಗಳಿಗೆ ಅಸಹ್ಯ. ನಿಂಬೆ ಅಥವಾ ಕಿತ್ತಳೆ ಸಿಪ್ಪೆಗಳನ್ನು ಅಡುಗೆಮನೆಯಲ್ಲಿ ಇಡಿ ಅಥವಾ ಅದರ ನೀರನ್ನು ಸಿಂಪಡಿಸಿ. ಇದರಿಂದ ಜಿರಳೆಗಳು ಮನೆ ಸುತ್ತಲೂ ಬಾರದಂತೆ ತಡೆಗಟ್ಟಬಹುದು.

ಪಲಾವ್ ಎಲೆ (Bay Leaf):

ಪಲಾವ್ ಎಲೆಯ ವಾಸನೆಗೆ ಜಿರಳೆಗಳು ತಾಳಲಾರವು. ಎಲೆಗಳನ್ನು ಪುಡಿ ಮಾಡಿ ಅಥವಾ ಬಿಸಿ ನೀರಿನಲ್ಲಿ ಕುದಿಸಿ, ಆ ನೀರನ್ನು ಸಿಂಪಡಿಸಿ.
ನಿತ್ಯ ಈ ವಿಧಾನ ಅನುಸರಿಸಿದರೆ ಜಿರಳೆಗಳ ಕಾಟ ಶಾಶ್ವತವಾಗಿ ಕಡಿಮೆಯಾಗುತ್ತದೆ.

ಹೆಚ್ಚುವರಿ ಸಲಹೆಗಳು:

ಅಡುಗೆಮನೆಯಲ್ಲಿ ಆಹಾರದ ತುಂಡುಗಳು ಅಥವಾ ನೀರು ಬಿದ್ದಿರುವುದನ್ನು ತಕ್ಷಣ ಸ್ವಚ್ಛಗೊಳಿಸಿ.

ಹಳೆಯ ಪತ್ರಿಕೆ, ಕಾರ್ಡ್ಬೋರ್ಡ್ ಅಥವಾ ಪ್ಲಾಸ್ಟಿಕ್ ಕವರ್‌ಗಳಲ್ಲಿ ಜಿರಳೆಗಳು ಮೊಟ್ಟೆ ಇಡುವ ಸಾಧ್ಯತೆ ಇದೆ — ಇವುಗಳನ್ನು ದೂರ ಮಾಡಿ.

ಪ್ರತೀ ವಾರ ನೈಸರ್ಗಿಕ ಸ್ಪ್ರೇ ಅಥವಾ ಎಣ್ಣೆ ಮದ್ದುಗಳನ್ನು ಪುನಃ ಬಳಸಿ.

ಒಟ್ಟಾರೆ ಹೇಳುವುದಾದರೆ, ಜಿರಳೆಗಳನ್ನು ಓಡಿಸಲು ಕೆಮಿಕಲ್ ಸ್ಪ್ರೇಗಳ ಅವಶ್ಯಕತೆ ಇಲ್ಲ. ನಿಮ್ಮ ಅಡುಗೆಮನೆ ಮತ್ತು ಮನೆಯ ಸ್ವಚ್ಛತೆಗೆ ಈ ಸರಳ ಮನೆಮದ್ದುಗಳು ಸಾಕು! ನೈಸರ್ಗಿಕ ವಿಧಾನಗಳು ಆರೋಗ್ಯಕರವೂ ಆಗಿ, ಪರಿಸರ ಸ್ನೇಹಿಯೂ ಆಗಿವೆ. ಒಮ್ಮೆ ಪ್ರಯೋಗಿಸಿ ನೋಡಿ – ನಿಮ್ಮ ಮನೆಗೆ ಮತ್ತೆ ಜಿರಳೆಗಳು ಬರುವ ಪ್ರಶ್ನೆಯೇ ಇಲ್ಲ!

WhatsApp Image 2025 09 05 at 11.51.16 AM 12

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories