ration card eligibility

ಹೊಸ ರೇಷನ್ ಕಾರ್ಡ್, ಇನ್ಮುಂದೆ ಇವರು ಬಿಪಿಎಲ್ -ಅಂತ್ಯೋದಯ ರೇಷನ್ ಕಾರ್ಡ್ ಪಡೆಯಲು ಅನರ್ಹ.!

Categories:
WhatsApp Group Telegram Group

ಪಡಿತರ ವಿತರಣಾ ವ್ಯವಸ್ಥೆಯ ನಿಯಮಗಳ ಪ್ರಕಾರ, ಕರ್ನಾಟಕದಲ್ಲಿ ಇನ್ನು ಮುಂದೆ ಕೆಳಕಂಡ ಮಾನದಂಡಗಳನ್ನು ಪೂರೈಸುವ ವ್ಯಕ್ತಿಗಳು ಅಥವಾ ಕುಟುಂಬಗಳು ಬಿ.ಪಿ.ಎಲ್ (BPL) ಅಥವಾ ಅಂತ್ಯೋದಯ ಅನ್ನ ಯೋಜನೆ (Antyodaya) ಪಡಿತರ ಚೀಟಿಗಳನ್ನು (Ration Cards) ಹೊಂದಲು ಅರ್ಹರಾಗಿರುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸ್ಪಷ್ಟಪಡಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಬಿಪಿಎಲ್/ಅಂತ್ಯೋದಯ ಕಾರ್ಡ್‌ಗೆ ಅನರ್ಹರಾಗುವ ಮಾನದಂಡಗಳು

ಭೂಮಿಯ ಒಡೆತನ:

ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರು ಒಟ್ಟಾಗಿ ಹೊಂದಿರುವ ಕೃಷಿ ಭೂಮಿಯ ಪ್ರಮಾಣ 7 ಎಕರೆಗಿಂತ ಹೆಚ್ಚಿದ್ದರೆ, ಆ ಕುಟುಂಬವು ಬಿ.ಪಿ.ಎಲ್./ಅಂತ್ಯೋದಯ ಪಡಿತರ ಚೀಟಿ ಹೊಂದಲು ಅರ್ಹವಾಗಿರುವುದಿಲ್ಲ.

ವಾಹನ ಒಡೆತನ:

ಪಡಿತರ ಚೀಟಿಯ ಯಾವುದೇ ಸದಸ್ಯರು 4 ಚಕ್ರದ ವಾಹನವನ್ನು (ಕಾರ್, ಜೀಪ್, ಇತ್ಯಾದಿ) ಹೊಂದಿದ್ದರೆ, ಅಂತಹ ವ್ಯಕ್ತಿ ಅಥವಾ ಅವರ ಅವಲಂಬಿತ ಕುಟುಂಬ ಸದಸ್ಯರು (ತಂದೆ/ ತಾಯಿ/ ಪತ್ನಿ/ ಅವಿವಾಹಿತ ಮಕ್ಕಳು) ಅನರ್ಹರಾಗುತ್ತಾರೆ.

ತೆರಿಗೆ ಪಾವತಿಸುವವರು:

ಜಿಎಸ್‌ಟಿ (GST) ಅಥವಾ ಆದಾಯ ತೆರಿಗೆ (Income Tax) ಪಾವತಿಸುತ್ತಿರುವ ಯಾವುದೇ ವ್ಯಕ್ತಿ ಅಥವಾ ಅವರ ಅವಲಂಬಿತ ಕುಟುಂಬ ಸದಸ್ಯರು (ತಂದೆ/ ತಾಯಿ/ ಪತ್ನಿ/ ಅವಿವಾಹಿತ ಮಕ್ಕಳು) ಬಿ.ಪಿ.ಎಲ್./ಅಂತ್ಯೋದಯ ಕಾರ್ಡ್ ಪಡೆಯಲು ಅರ್ಹರಲ್ಲ.

ಸರ್ಕಾರಿ/ಸಹಕಾರಿ ಸಂಸ್ಥೆಗಳ ಉದ್ಯೋಗಸ್ಥರು:

ಸರ್ಕಾರಿ ನೌಕರಿಯಲ್ಲಿರುವ ಯಾವುದೇ ವ್ಯಕ್ತಿ ಅಥವಾ ಅವರ ಅವಲಂಬಿತರು ಅನರ್ಹರು.

ಸಹಕಾರಿ ಸಂಘಗಳಲ್ಲಿ ಖಾಯಂ ಸಿಬ್ಬಂಧಿಯಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿ ಅಥವಾ ಅವರ ಅವಲಂಬಿತ ಕುಟುಂಬ ಸದಸ್ಯರು ಅನರ್ಹರು.

ಸರ್ಕಾರಿ ಸ್ವಾಮ್ಯದ ಉದ್ಯಮಗಳು/ಮಂಡಳಿಗಳು/ನಿಗಮಗಳು ಅಥವಾ ಸ್ವಾಯತ್ತ ಸಂಸ್ಥೆ/ಮಂಡಳಿಯ ಖಾಯಂ ನೌಕರರು ಅಥವಾ ಅವರ ಅವಲಂಬಿತ ಕುಟುಂಬ ಸದಸ್ಯರು ಅನರ್ಹರಾಗುತ್ತಾರೆ.

ಅನುದಾನಿತ (Aided) ಶಾಲಾ ಕಾಲೇಜುಗಳ ನೌಕರರು ಅಥವಾ ಅವರ ಅವಲಂಬಿತ ಕುಟುಂಬ ಸದಸ್ಯರು ಅನರ್ಹರು.

ವೃತ್ತಿಪರರು ಮತ್ತು ಡೀಲರ್‌ಗಳು:

ವೃತ್ತಿಪರ ನೌಕರರು (ವೈದ್ಯರು, ಇಂಜಿನಿಯರ್‌ಗಳು, ವಕೀಲರು ಇತ್ಯಾದಿ) ಅಥವಾ ಅವರ ಅವಲಂಬಿತ ಕುಟುಂಬ ಸದಸ್ಯರು ಅನರ್ಹರು.

ನೋಂದಾಯಿತ ಗುತ್ತಿಗೆದಾರರು, ಎಪಿಎಂಸಿ ಟ್ರೇಡರ್‌ಗಳು, ಕಮಿಷನ್ ಏಜೆಂಟರು, ಬೀಜ ಮತ್ತು ಗೊಬ್ಬರ ಡೀಲರ್‌ಗಳು ಇತ್ಯಾದಿ, ಅಥವಾ ಅವರ ಅವಲಂಬಿತ ಕುಟುಂಬ ಸದಸ್ಯರು ಬಿ.ಪಿ.ಎಲ್./ಅಂತ್ಯೋದಯ ಪಡಿತರ ಚೀಟಿ ಹೊಂದಲು ಅರ್ಹರಾಗಿರುವುದಿಲ್ಲ.

    ಗಮನಿಸಿ: ಎಲ್ಲಾ ಸಂದರ್ಭಗಳಲ್ಲಿ, ಅವಲಂಬಿತ ಕುಟುಂಬ ಸದಸ್ಯರು ಎಂದರೆ ತಂದೆ, ತಾಯಿ, ಪತ್ನಿ, ಮತ್ತು ಅವಿವಾಹಿತ ಮಕ್ಕಳು ಎಂದು ಪರಿಗಣಿಸಲಾಗುತ್ತದೆ. ಅನರ್ಹ ವ್ಯಕ್ತಿಗಳು ತಕ್ಷಣವೇ ತಮ್ಮ ಬಿಪಿಎಲ್/ಅಂತ್ಯೋದಯ ಕಾರ್ಡ್‌ಗಳನ್ನು ಆಹಾರ ಇಲಾಖೆಗೆ ಹಿಂತಿರುಗಿಸಬೇಕು.

    WhatsApp Image 2025 09 05 at 11.51.16 AM 12

    ಈ ಮಾಹಿತಿಗಳನ್ನು ಓದಿ

    ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

     

    WhatsApp Group Join Now
    Telegram Group Join Now

    Popular Categories