ಅಡಿಕೆ ಮಾರುಕಟ್ಟೆ ದರ: ಕರ್ನಾಟಕದಲ್ಲಿ ಅಕ್ಟೋಬರ್ ಎರಡನೇ ವಾರದಿಂದೀಚೆಗೆ ಅಡಿಕೆ ಧಾರಣೆಯಲ್ಲಿ ಗಣನೀಯ ಏರಿಕೆ ಕಂಡುಬಂದಿತ್ತು. ದಾವಣಗೆರೆ ಜಿಲ್ಲೆಯು ಅಡಿಕೆ ಬೆಳೆಯ ಪ್ರಮುಖ ಕೇಂದ್ರವಾಗಿದ್ದು, ಚನ್ನಗಿರಿ, ಹೊನ್ನಾಳಿ ಸೇರಿದಂತೆ ಹಲವು ತಾಲೂಕುಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಹಾಗಾದರೆ, ಇಂದಿನ (ಅಕ್ಟೋಬರ್ 21) ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಎಷ್ಟಿದೆ ಎಂಬ ವಿವರ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ದಾವಣಗೆರೆ ಮಾರುಕಟ್ಟೆ ದರ (ಅಕ್ಟೋಬರ್ 21):
ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ರಾಶಿ ಅಡಿಕೆಯು ಇಂದು (ಅಕ್ಟೋಬರ್ 21) ಪ್ರತಿ ಕ್ವಿಂಟಾಲ್‌ಗೆ ಗರಿಷ್ಠ 68,129 ರೂ., ಕನಿಷ್ಠ 60,979 ರೂ. ಮತ್ತು ಸರಾಸರಿ 65,422 ರೂ.ಗೆ ಮಾರಾಟವಾಗಿದೆ.
ಕಳೆದ ಕೆಲವು ತಿಂಗಳುಗಳ ಹಿಂದೆ 55,000 ರೂ.ಗಿಂತ ಕೆಳಗಿಳಿದಿದ್ದ ಅಡಿಕೆ ದರವು ನಂತರ ಏರಿಕೆ ಕಂಡಿತ್ತು. ಇತ್ತೀಚೆಗೆ ಭರ್ಜರಿ ಏರಿಕೆ ಕಂಡಿದ್ದ ದರವು ಇದೀಗ ತುಸು ಇಳಿಕೆ ಕಂಡಿದೆ. ಆದರೂ, ಮುಂದಿನ ದಿನಗಳಲ್ಲಿ ದರ ಮತ್ತೊಮ್ಮೆ ಏರಿಕೆಯಾಗುವ ನಿರೀಕ್ಷೆಯಲ್ಲಿ ಬೆಳೆಗಾರರು ಇದ್ದಾರೆ.
ಬೆಲೆ ಏರಿಳಿತದ ಹಿನ್ನೆಲೆ:
ಈ ಹಿಂದೆ, 2025ರ ಜನವರಿ ಅಂತ್ಯದ ವೇಳೆಗೆ ಚನ್ನಗಿರಿ, ಹೊನ್ನಾಳಿ ಭಾಗದಲ್ಲಿ ಕ್ವಿಂಟಾಲ್ ಅಡಿಕೆ ದರ 52,000 ರೂ. ಒಳಗೆ ಇತ್ತು. ಅದು ಫೆಬ್ರವರಿಯಲ್ಲಿ 53,000 ರೂ. ಗಡಿಯನ್ನು ದಾಟಿತ್ತು. ಅಲ್ಲಿಂದ ಸತತವಾಗಿ ಏರುತ್ತಾ ಬಂದು, ಏಪ್ರಿಲ್ ಅಂತ್ಯದಲ್ಲಿ 60,000 ರೂ. ಗಡಿಯನ್ನು ದಾಟಿತ್ತು. ದೀಪಾವಳಿ ಸಮಯದ ಸನಿಹದಲ್ಲಿ ಇದೀಗ 68,000 ರೂ. ದಾಟಿರುವುದು ಗಮನಾರ್ಹ. ಕೆಲವೇ ದಿನಗಳಲ್ಲಿ 70,000 ರೂ. ಮುಟ್ಟುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವರ್ಷದ (2024ರ) ಮೇ ತಿಂಗಳಲ್ಲಿ ಗರಿಷ್ಠ 55,000 ರೂ. ತಲುಪಿದ್ದ ದರ, 2023ರ ಜುಲೈ ತಿಂಗಳಲ್ಲಿ 57,000 ರೂ. ಗರಿಷ್ಠ ದರ ಮುಟ್ಟಿತ್ತು.
ಪ್ರಸ್ತುತ ಸ್ಥಿತಿಗತಿ:
ಮೇ ತಿಂಗಳ ಆರಂಭದಿಂದ ಜೂನ್ ಮಧ್ಯದವರೆಗೂ ದರ ಇಳಿಕೆಯ ಹಾದಿಯಲ್ಲಿ ಸಾಗಿ ಮತ್ತೆ ಏರಿಕೆ ಕಂಡಿತ್ತು. ಜೂನ್ ಮಧ್ಯದಿಂದ ಜುಲೈ ಮೊದಲ ವಾರದವರೆಗೆ ಇಳಿಕೆ ಕಂಡಿದ್ದ ಧಾರಣೆಯಲ್ಲಿ ಆಗಸ್ಟ್‌ನಲ್ಲಿ ತುಸು ಸುಧಾರಣೆ ಕಂಡುಬಂದಿತ್ತು. ಆದರೆ ಕೊನೆಯಲ್ಲಿ ಮತ್ತೆ ಇಳಿಕೆಯಾಗಿ, ಸೆಪ್ಟೆಂಬರ್ ಅಂತ್ಯದಲ್ಲಿ ಏರಿಕೆ ಕಾಣಲು ಆರಂಭಿಸಿತ್ತು. ಅಕ್ಟೋಬರ್ ಎರಡನೇ ವಾರದಿಂದ ಸತತವಾಗಿ ಏರಿಕೆ ಹಾದಿಯಲ್ಲಿದ್ದ ದರವು, ಇದೀಗ ಮೂರನೇ ವಾರದಲ್ಲಿ ಸ್ವಲ್ಪ ಇಳಿಕೆ ಕಂಡಿದೆ.
2025ರ ಜೂನ್‌ನಲ್ಲಿ ಮುಂಗಾರು ಪ್ರವೇಶಿಸಿ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ಅಡಿಕೆ ಫಸಲು ಚೆನ್ನಾಗಿ ಬಂದಿದೆ. ಆದಾಗ್ಯೂ, ಕೆಲವು ಪ್ರದೇಶಗಳಲ್ಲಿ ಅಧಿಕ ಮಳೆಯಿಂದಾಗಿ ಶೀತದಿಂದಾಗಿ ಇಳುವರಿ ಕಡಿಮೆಯಾಗಿದೆ ಎಂಬ ವರದಿಗಳಿವೆ. ಏನೇ ಇರಲಿ, ಧಾರಣೆಯು ಏರುಗತಿಯಲ್ಲಿ ಮುಂದುವರಿಯುವ ಭರವಸೆ ಅಡಿಕೆ ಬೆಳೆಗಾರರಲ್ಲಿದೆ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಲಿಂಗರಾಜ ರಾಮಪುರ (Lingaraj Ramapur) ಅವರು NeedsOfPublic.in ನ ಸಂಸ್ಥಾಪಕರು ಮತ್ತು ಪ್ರಧಾನ ಸಂಪಾದಕರಾಗಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಐಟಿ (BCA, MCA) ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ (M.A) ಪದವಿ ಪಡೆದಿರುವ ಇವರು ತಾಂತ್ರಿಕ ಮತ್ತು ಮಾಧ್ಯಮ ರಂಗದ ಅಪರೂಪದ ಸಂಗಮವಾಗಿದ್ದಾರೆ. ಡಿಜಿಟಲ್ ಪತ್ರಿಕೋದ್ಯಮಕ್ಕೆ ಕಾಲಿಡುವ ಮುನ್ನ ಬೆಂಗಳೂರಿನ ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿಗಳಾದ Infosys ಮತ್ತು Concentrix ನಲ್ಲಿ ತಾಂತ್ರಿಕ ಹುದ್ದೆಗಳಲ್ಲಿ ಕೆಲಸ ಮಾಡಿದ ಜಾಗತಿಕ ಅನುಭವ ಇವರಿಗಿದೆ. 2017 ರಿಂದ ಮಾಧ್ಯಮ ರಂಗದಲ್ಲಿದ್ದು, ಕಳೆದ 9 ವರ್ಷಗಳಿಂದ ಡೇಟಾ-ಆಧಾರಿತ ವರದಿಗಾರಿಕೆ, ನಿಖರವಾದ ಫ್ಯಾಕ್ಟ್-ಚೆಕಿಂಗ್ ಮತ್ತು ಸಾರ್ವಜನಿಕರಿಗೆ ವಿಶ್ವಾಸಾರ್ಹ ಮಾಹಿತಿಯನ್ನು ತಲುಪಿಸುವ ಸಂಪಾದಕೀಯ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.


WhatsApp Group




Leave a Reply