Picsart 25 10 17 22 46 35 890 scaled

ದೀಪಾವಳಿ ಬಂಪರ್ ಆಫರ್: BSNL ಕೇವಲ ₹1ಕ್ಕೆ ಒಂದು ತಿಂಗಳ 4G ಸೇವೆ ಘೋಷಣೆ

Categories:
WhatsApp Group Telegram Group

ಭಾರತದಲ್ಲಿ ದೀಪಾವಳಿ ಹಬ್ಬವೆಂದರೆ ಕೇವಲ ಬೆಳಕಿನ ಹಬ್ಬವಲ್ಲ, ಅದು ಹೊಸ ಆರಂಭ, ಸಂತೋಷ, ಕುಟುಂಬದ ಸಂಭ್ರಮ ಮತ್ತು ಹೊಸ ಅವಕಾಶಗಳ ಪ್ರತೀಕ. ಈ ಹಬ್ಬದ ಸಮಯದಲ್ಲಿ ವಿವಿಧ ಕಂಪನಿಗಳು ತಮ್ಮ ಗ್ರಾಹಕರಿಗೆ ವಿಶೇಷ ರಿಯಾಯಿತಿಗಳು ಹಾಗೂ ಉಡುಗೊರೆಗಳನ್ನು ನೀಡುತ್ತವೆ. ಈ ಬಾರಿ ಸರ್ಕಾರದ ಟೆಲಿಕಾಂ ಸಂಸ್ಥೆಯಾದ ಭಾರತ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗಾಗಿ ನಿಜವಾಗಿಯೂ ಅಚ್ಚರಿ ಮೂಡಿಸುವ ಹೊಸ ಯೋಜನೆಯನ್ನು ಘೋಷಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ದೇಶದಲ್ಲಿ 4G ಸೇವೆಯನ್ನು ವಿಸ್ತರಿಸಲು ಸಜ್ಜಾಗಿರುವ BSNL, ತನ್ನ ನೆಟ್ವರ್ಕ್ ಗುಣಮಟ್ಟವನ್ನು ಜನರಿಗೆ ನೇರವಾಗಿ ಅನುಭವಿಸಲು ಅವಕಾಶ ನೀಡುವ ಉದ್ದೇಶದಿಂದ ಕೇವಲ ₹1 ಕ್ಕೆ ಒಂದು ತಿಂಗಳ ಪೂರ್ಣ 4G ಸೇವಾ ಪ್ಯಾಕ್ ಬಿಡುಗಡೆ ಮಾಡಿದೆ. ಈ ವಿಶೇಷ ಯೋಜನೆ ದೀಪಾವಳಿ ಸಂಭ್ರಮದ ಭಾಗವಾಗಿದ್ದು, ಹಬ್ಬದ ಋತುವಿನಲ್ಲಿ ಹೊಸ ಗ್ರಾಹಕರನ್ನು ಸೆಳೆಯಲು ಪ್ರಮುಖ ಹೆಜ್ಜೆಯಾಗಲಿದೆ.

ಆಫರ್ ಅವಧಿ ಎಷ್ಟು?:

ಈ ಆಕರ್ಷಕ ಕೊಡುಗೆ ಅಕ್ಟೋಬರ್ 15ರಿಂದ ನವೆಂಬರ್ 15, 2025 ರವರೆಗೆ ಮಾನ್ಯವಾಗಿರುತ್ತದೆ. ಈ ಅವಧಿಯಲ್ಲಿ BSNL ಗೆ ಸೇರುವ ಹೊಸ ಚಂದಾದಾರರು ಕೇವಲ ₹1 ನಾಮಮಾತ್ರ ಶುಲ್ಕ ಪಾವತಿಸಿ, ಪೂರ್ಣ ತಿಂಗಳ 4G ಸೌಲಭ್ಯವನ್ನು ಯಾವುದೇ ಹೆಚ್ಚುವರಿ ಖರ್ಚು ಇಲ್ಲದೆ ಪಡೆಯಬಹುದು.

ಈ ಯೋಜನೆಯ ಮುಖ್ಯ ಉದ್ದೇಶವೇನು?:

ದೇಶೀಯವಾಗಿ ಅಭಿವೃದ್ಧಿಪಡಿಸಿದ BSNL ನ 4G ನೆಟ್‌ವರ್ಕ್ ಗುಣಮಟ್ಟವನ್ನು ಜನರಿಗೆ ತಲುಪಿಸುವುದು.
ಹಬ್ಬದ ವೇಳೆಯಲ್ಲಿ ಗ್ರಾಹಕರನ್ನು ಆಕರ್ಷಿಸಿ ಮಾರುಕಟ್ಟೆ ಪಾಲನ್ನು ಹೆಚ್ಚಿಸುವುದು.
ಖಾಸಗಿ ಕಂಪನಿಗಳಾದ Jio ಮತ್ತು Airtel ಗಳಿಗೆ ಸ್ಪರ್ಧಾತ್ಮಕವಾಗಿ ಪ್ರತಿಸ್ಪಂದಿಸುವುದು.

ಒಂದು ರೂಪಾಯಿ ಯೋಜನೆಯ ಸಂಪೂರ್ಣ ಪ್ರಯೋಜನಗಳು  ಹೀಗುವೆ:

BSNL ನ ಈ ₹1 ದೀಪಾವಳಿ ಪ್ಯಾಕ್ ಹೊಸ ಚಂದಾದಾರರಿಗೆ ಸಂಪೂರ್ಣ ಮೊಬೈಲ್ ಅನುಭವವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಪ್ಯಾಕೇಜ್‌ನಲ್ಲಿ ದೊರೆಯುವ ಸೌಲಭ್ಯಗಳು ಇಂತಿವೆ,
ದಿನಕ್ಕೆ 2GB ಹೈ-ಸ್ಪೀಡ್ 4G ಡೇಟಾ.
ಭಾರತದೊಳಗೆ ಅನಿಯಮಿತ ಧ್ವನಿ ಕರೆಗಳು.
ಪ್ರತಿ ದಿನ 100 ಉಚಿತ SMS.
ಉಚಿತ ಸಿಮ್ ಕಾರ್ಡ್ ವಿತರಣೆ.
ಈ ಪ್ರಯೋಜನಗಳು 30 ದಿನಗಳ ಕಾಲ ಯಾವುದೇ ಹೆಚ್ಚುವರಿ ಚಾರ್ಜ್ ಇಲ್ಲದೆ ಲಭ್ಯವಿರುತ್ತವೆ. ಇದು ಹೊಸ ಬಳಕೆದಾರರಿಗೆ BSNL ನೆಟ್‌ವರ್ಕ್‌ನ ಸ್ಥಿರತೆ, ವೇಗ ಮತ್ತು ಸೇವಾ ಗುಣಮಟ್ಟವನ್ನು ನೇರವಾಗಿ ಅನುಭವಿಸಲು ವಿಶಿಷ್ಟ ಅವಕಾಶವನ್ನು ನೀಡುತ್ತದೆ.

ಈ ಆಫರ್ ಪಡೆಯುವ ವಿಧಾನ ಹೀಗಿದೆ:

ಹೊಸ ಗ್ರಾಹಕರು ಈ ಆಫರ್ ಪಡೆಯಲು ಎರಡು ಮಾರ್ಗಗಳಲ್ಲಿ ಅನುಸರಿಸಬಹುದು,
ಹತ್ತಿರದ BSNL ಕಚೇರಿ ಅಥವಾ ಅಂಗಡಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳುವುದು.
BSNL ಅಧಿಕೃತ ವೆಬ್‌ಸೈಟ್ ಅಥವಾ ಆಪ್ ಮೂಲಕ ಆನ್‌ಲೈನ್ ನೋಂದಣಿ ಮಾಡುವುದು ಅಥವಾ ಈ 1800-180-1503 ನಂಬರಿಗೆ ಸಂಪರ್ಕಿಸಬಹುದು.
ನೋಂದಣಿ ಪ್ರಕ್ರಿಯೆಯು ಸರಳವಾಗಿದ್ದು, ಪ್ರಾಥಮಿಕ ದೃಢೀಕರಣದ ನಂತರ ತಕ್ಷಣ ಸೇವೆ ಸಕ್ರಿಯಗೊಳ್ಳುತ್ತದೆ.

ಆಗಸ್ಟ್ ಆಫರ್ ಯಶಸ್ಸು :

BSNL ಈ ಹೊಸ ಯೋಜನೆಗೆ ದೊಡ್ಡ ವಿಶ್ವಾಸ ಇಟ್ಟಿರುವುದಕ್ಕೆ ಕಾರಣವಿದೆ. 2025ರ ಆಗಸ್ಟ್‌ನಲ್ಲಿ ಕಂಪನಿಯು ಇದೇ ರೀತಿಯ ವಿಶೇಷ ಪ್ರಚಾರ ಯೋಜನೆಯನ್ನು ಪರಿಚಯಿಸಿತ್ತು. ಅದರಿಂದ ಸಿಕ್ಕ ಪ್ರತಿಕ್ರಿಯೆ ಅಚ್ಚರಿ ಮೂಡಿಸಿತ್ತು, ಕೇವಲ ಒಂದು ತಿಂಗಳೊಳಗೆ 1.38 ಲಕ್ಷಕ್ಕೂ ಹೆಚ್ಚು ಹೊಸ ಗ್ರಾಹಕರು BSNL ಗೆ ಸೇರಿದ್ದರು.
ಈ ಯಶಸ್ಸಿನಿಂದ ಪ್ರೇರಿತರಾಗಿ, BSNL ಈಗ ದೀಪಾವಳಿಯ ಹಬ್ಬವನ್ನು ಸದುಪಯೋಗಪಡಿಸಿಕೊಂಡು ದೇಶದಾದ್ಯಂತ ತನ್ನ 4G ನೆಟ್‌ವರ್ಕ್ ವಿಸ್ತರಣೆಯನ್ನು ವೇಗಗೊಳಿಸುವತ್ತ ಮುಂದಾಗಿದೆ. ಕಂಪನಿಯು ಆಗಸ್ಟ್‌ನಲ್ಲಿ ಹೊಸ ಗ್ರಾಹಕರ ಸಂಖ್ಯೆ ಆಧಾರದ ಮೇಲೆ ಏರ್‌ಟೆಲ್‌ನ ನಂತರ ದೇಶದ ಎರಡನೇ ಅತಿದೊಡ್ಡ ಮೊಬೈಲ್ ಸೇವಾ ಪೂರೈಕೆದಾರ ಸ್ಥಾನವನ್ನು ಗಳಿಸಿತ್ತು.

ಇನ್ನು, ಈ ಯೋಜನೆಯ ಮತ್ತೊಂದು ವಿಶೇಷ ಅಂಶವೆಂದರೆ, BSNL ನ 4G ನೆಟ್‌ವರ್ಕ್ ಸಂಪೂರ್ಣವಾಗಿ ಭಾರತೀಯ ತಂತ್ರಜ್ಞಾನವನ್ನು ಆಧರಿಸಿದೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋರ್ ನೆಟ್‌ವರ್ಕ್ ಹಾಗೂ ಉಪಕರಣಗಳನ್ನು ಬಳಸಿ ನಿರ್ಮಿಸಲಾದ ಈ ಸೇವೆ ಆತ್ಮನಿರ್ಭರ್ ಭಾರತ್ ಉದ್ದೇಶದತ್ತ ಮಹತ್ವದ ಹೆಜ್ಜೆಯಾಗಿದೆ.

ಒಟ್ಟಾರೆಯಾಗಿ, ದೀಪಾವಳಿ ಹಬ್ಬದ ಸಂಭ್ರಮದಲ್ಲಿ BSNL ನೀಡಿರುವ ಈ ₹1 ಯೋಜನೆ ಗ್ರಾಹಕರಿಗೆ ಅತ್ಯಂತ ಲಾಭದಾಯಕ ಅವಕಾಶ. ಯಾವುದೇ ಬಾಧ್ಯತೆ ಇಲ್ಲದೆ, ಕೇವಲ ಒಂದು ರೂಪಾಯಿಯಲ್ಲಿ ಸಂಪೂರ್ಣ 4G ಅನುಭವ ಪಡೆಯುವುದು ಇಂದಿನ ಟೆಲಿಕಾಂ ಕ್ಷೇತ್ರದಲ್ಲಿ ವಿರಳ. ಈ ಯೋಜನೆಯ ಮೂಲಕ BSNL ತನ್ನ ನೆಟ್‌ವರ್ಕ್ ಸಾಮರ್ಥ್ಯವನ್ನು ಜನರಿಗೆ ತೋರಿಸುವುದಷ್ಟೇ ಅಲ್ಲ, ಖಾಸಗಿ ಕಂಪನಿಗಳಾದ ಜಿಯೋ ಮತ್ತು ಏರ್‌ಟೆಲ್‌ಗೆ ನೇರ ಸವಾಲು ನೀಡುವ ಪ್ರಯತ್ನದಲ್ಲಿದೆ.

WhatsApp Image 2025 09 05 at 10.22.29 AM 5

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories