Picsart 25 10 17 22 36 42 140 scaled

ಚಿನ್ನ–ಬೆಳ್ಳಿ ಮಾರುಕಟ್ಟೆಯಲ್ಲಿ ಭಾರೀ ಬದಲಾವಣೆ: ಮುಂದಿನ ದಿನಗಳಲ್ಲಿ ಶೇಕಡಾ 35–50ರಷ್ಟು ಬೆಲೆ ಇಳಿಕೆ ಸಾಧ್ಯತೆ!

Categories:
WhatsApp Group Telegram Group

ಭಾರತೀಯ ಸಂಸ್ಕೃತಿಯಲ್ಲಿ ಚಿನ್ನ ಮತ್ತು ಬೆಳ್ಳಿಗೆ ಅತೀ ಮಹತ್ವದ ಸ್ಥಾನವಿದೆ. ಹೂಡಿಕೆ, ಆಭರಣ ಅಥವಾ ಧಾರ್ಮಿಕ ಕಾರಣ ಯಾವದಾದರೂ ಇರಲಿ, ಈ ಬೆಲೆಬಾಳುವ ಲೋಹಗಳು ಜನರ ಬದುಕಿನ ಭಾಗವಾಗಿವೆ. ಹಬ್ಬದ ಕಾಲ ಆರಂಭವಾದಾಗ, ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಖರೀದಿಗೆ ಅಪಾರ ಬೇಡಿಕೆ ಉಂಟಾಗುತ್ತದೆ. ಕಳೆದ ಕೆಲವು ತಿಂಗಳಿನಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ದಾಖಲೆ ಮಟ್ಟವನ್ನು ಮುಟ್ಟಿದ್ದರಿಂದ ಸಾಮಾನ್ಯ ಜನರಿಗೆ ಖರೀದಿಯೇ ಅಸಾಧ್ಯವಾಗಿತ್ತು. ಆದಾಗ್ಯೂ, ಇದೀಗ ಮಾರುಕಟ್ಟೆಯಲ್ಲಿ ಹೊಸ ತಿರುವು ಕಾಣಿಸಿಕೊಂಡಿದ್ದು, ಮುಂದಿನ ಕೆಲವು ದಿನಗಳಲ್ಲಿ ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ತಜ್ಞರ ಎಚ್ಚರಿಸುತ್ತಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬೆಲೆ ಏರಿಕೆಯ ನಂತರ ಇಳಿಕೆ ಸಾಧ್ಯತೆ:

ಪೇಸ್ 360 ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಮುಖ್ಯ ಜಾಗತಿಕ ತಂತ್ರಜ್ಞಾನಿ ಅಮಿತ್ ಗೋಯಲ್(Amit Goyal) ಅವರ ಪ್ರಕಾರ, ಚಿನ್ನದ ಪ್ರಸ್ತುತ ಬೆಲೆ ಏರಿಕೆಯು ಶಾಶ್ವತವಾಗಿರುವುದಿಲ್ಲ. ಅವರು ನೀಡಿದ ಶಾಕಿಂಗ್ ಹೇಳಿಕೆಯ ಪ್ರಕಾರ, ಚಿನ್ನದ ಬೆಲೆ ಶೇಕಡಾ 30 ರಿಂದ 35 ರಷ್ಟು ಇಳಿಯುವ ಸಾಧ್ಯತೆ ಇದೆ. ಅಂದರೆ, ಪ್ರತಿ 10 ಗ್ರಾಂ ಚಿನ್ನದ ಬೆಲೆ ಸುಮಾರು ₹77,701 ರವರೆಗೆ ಇಳಿಯಬಹುದು ಎಂದು ಅವರು ಅಂದಾಜಿಸಿದ್ದಾರೆ.
ಇದರ ಜೊತೆಗೆ, ಬೆಳ್ಳಿಯ ಬೆಲೆಯೂ ಶೇಕಡಾ 50ರಷ್ಟು ಕುಸಿಯಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಹೂಡಿಕೆದಾರರು ಮತ್ತು ಖರೀದಿದಾರರು ಈ ಇಳಿಕೆಯನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

ಚಿನ್ನದ ಬೆಲೆಯಲ್ಲಿ ಶೇಕಡಾ 30–35ರಷ್ಟು ಇಳಿಕೆ ಸಾಧ್ಯತೆ:

ಗೋಯಲ್ ಅವರ ಅಂದಾಜಿನ ಪ್ರಕಾರ, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಶೇಕಡಾ 30 ರಿಂದ 35ರಷ್ಟು ಇಳಿಕೆಯಾಗಬಹುದು. ಪ್ರತಿ 10 ಗ್ರಾಂ ಚಿನ್ನದ ದರವು ಸುಮಾರು ₹77,701 ಮಟ್ಟಕ್ಕೆ ಕುಸಿಯುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ. ಅದೇ ರೀತಿ, ಬೆಳ್ಳಿಯ ಬೆಲೆ ಶೇಕಡಾ 50ರಷ್ಟು ಇಳಿಕೆಯಾಗಬಹುದು ಮತ್ತು ಸುಮಾರು ₹77,450 ಮಟ್ಟ ತಲುಪಬಹುದು ಎನ್ನಲಾಗಿದೆ. ಹೂಡಿಕೆದಾರರು ಮತ್ತು ಖರೀದಿದಾರರು ಈ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಂತ ಮುಖ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.

2025ರಲ್ಲಿ ನಿರಂತರ ಏರಿಕೆ :

2025ರ ಆರಂಭದಿಂದಲೇ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ನಿರಂತರ ಏರಿಕೆ ಕಂಡುಬಂದಿತ್ತು. ಮಧ್ಯಮ ವರ್ಗದ ಜನರು ಚಿನ್ನ ಖರೀದಿಸುವುದೇ ಕಷ್ಟವಾಗುವ ಮಟ್ಟಿಗೆ ಬೆಲೆ ಏರಿಕೆಯಾಗಿತ್ತು. ಆದರೆ ತಜ್ಞರ ಪ್ರಕಾರ, ಈ ಏರಿಕೆ ಈಗ ತನ್ನ ಕೊನೆಯ ಹಂತವನ್ನು ತಲುಪಿದೆ. ಮುಂದಿನ ಕೆಲವು ದಿನಗಳು ಅಥವಾ ವಾರಗಳಲ್ಲಿ ಈ ಬೆಲೆಗಳಲ್ಲಿ ಗಣನೀಯ ಇಳಿಕೆ ಸಂಭವಿಸಬಹುದು ಎಂದು ಹೇಳಲಾಗುತ್ತಿದೆ.

ಇದೇ ರೀತಿಯ ಸಂದರ್ಭ 2007, 2008 ಮತ್ತು 2011 ರಲ್ಲಿಯೂ ಕಾಣಿಸಿಕೊಂಡಿತ್ತು. ಆಗಲೂ ಚಿನ್ನದ ಬೆಲೆಯಲ್ಲಿ ತೀವ್ರ ಏರಿಕೆಯನ್ನು ಅನುಭವಿಸಿದ ಬಳಿಕ ಶೇಕಡಾ 45ರಷ್ಟು ಇಳಿಕೆಯಾಗಿದೆ. ಅದೇ ಮಾದರಿಯ ಪರಿಸ್ಥಿತಿ ಮತ್ತೆ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.

ಬೆಳ್ಳಿಯ ಬೆಲೆ ಏರಿಕೆ?:

ಕಳೆದ ಹತ್ತು ತಿಂಗಳಲ್ಲಿ ಬೆಳ್ಳಿ ಬೆಲೆ ಡಬಲ್ ಆಗಿರುವುದು ಗಮನಾರ್ಹ. ಚಿನ್ನಕ್ಕಿಂತ ಬೆಳ್ಳಿಯು ಶೇಕಡಾ 37ರಷ್ಟು ಹೆಚ್ಚು ಲಾಭವನ್ನು ಹೂಡಿಕೆದಾರರಿಗೆ ನೀಡಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ಬೆಳ್ಳಿಯ ಬೆಲೆಯ ಏರಿಕೆಗೆ ಮೂರು ಪ್ರಮುಖ ಅಂಶಗಳು ಕಾರಣವಾಗಿದೆ,
ಹಬ್ಬದ ಕಾಲದಲ್ಲಿ ಹೆಚ್ಚಿದ ಖರೀದಿ ಬೇಡಿಕೆ.
ಕೈಗಾರಿಕಾ ಕ್ಷೇತ್ರದಲ್ಲಿ ಬೆಳ್ಳಿಯ ಹೆಚ್ಚಿದ ಬಳಕೆ.
ಪೂರೈಕೆಯ ಕೊರತೆ.
ಭಾರತದಲ್ಲಿ ದೀಪಾವಳಿ ಮತ್ತು ಧನತ್ರಯೋದಶಿಯಂತಹ ಶುಭ ಸಂದರ್ಭಗಳಲ್ಲಿ ಬೆಳ್ಳಿ ಖರೀದಿ ಹೆಚ್ಚಾಗುತ್ತದೆ ಎನ್ನುವ ನಿರೀಕ್ಷೆಯಿದೆ. ಜೊತೆಗೆ ಸೌರ ವಿದ್ಯುತ್ ಘಟಕಗಳು, ಎಐ (AI) ತಂತ್ರಜ್ಞಾನ ಕ್ಷೇತ್ರ ಹಾಗೂ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಬೆಳ್ಳಿಯ ಬಳಕೆ ವೇಗವಾಗಿ ಹೆಚ್ಚುತ್ತಿರುವುದರಿಂದ ಜಾಗತಿಕ ಬೇಡಿಕೆ ಇನ್ನಷ್ಟು ವೃದ್ಧಿಯಾಗಿದೆ.

ಒಟ್ಟಾರೆಯಾಗಿ, ಸದ್ಯ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಹೂಡಿಕೆದಾರರು ಎಚ್ಚರಿಕೆಯಿಂದ ಇರುವುದು ಅಗತ್ಯ. ಮಾರುಕಟ್ಟೆ ತಜ್ಞರ ಅಭಿಪ್ರಾಯದಂತೆ, ಬೆಲೆ ನಿಗದಿ ವ್ಯವಸ್ಥೆಯ ಬದಲಾವಣೆ ಮತ್ತು ಜಾಗತಿಕ ಆರ್ಥಿಕತೆ ಈ ಬೃಹತ್ ಬದಲಾವಣೆಗೆ ಪ್ರಮುಖ ಕಾರಣಗಳಾಗಲಿವೆ. ಹೀಗಾಗಿ, ಹೂಡಿಕೆದಾರರು ಮುಂದಿನ ಕೆಲವು ದಿನಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಖರೀದಿಯ ಕುರಿತಾಗಿ ಸೂಕ್ತ ತೀರ್ಮಾನ ಕೈಗೊಳ್ಳಲು ಮಾರುಕಟ್ಟೆಯ ಬೆಳವಣಿಗೆಗಳನ್ನು ಗಮನಿಸುವುದು ಅಗತ್ಯವಾಗಿದೆ.

WhatsApp Image 2025 09 05 at 11.51.16 AM

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories