Picsart 25 10 15 22 23 50 058 scaled

ಸುರಕ್ಷಿತ ಹೂಡಿಕೆ ಬೇಕಾ? 2025ರಲ್ಲಿ ಹೆಚ್ಚು ಜನಪ್ರಿಯವಾಗಿರುವ ಪೋಸ್ಟ್ ಆಫೀಸ್‌ನ Top 5 ಯೋಜನೆಗಳು!

Categories:
WhatsApp Group Telegram Group

ಭಾರತದಲ್ಲಿ ಹೂಡಿಕೆ ಮಾಡಲು ಅನೇಕ ಮಾರ್ಗಗಳು ಲಭ್ಯವಿವೆ,  ಬ್ಯಾಂಕ್ ಠೇವಣಿಗಳು, ಷೇರು ಮಾರುಕಟ್ಟೆ, ಮ್ಯೂಚುಯಲ್ ಫಂಡ್‌ಗಳು, ರಿಯಲ್ ಎಸ್ಟೇಟ್ ಮುಂತಾದವು. ಆದರೆ ಇವುಗಳ ಪೈಕಿ ಎಲ್ಲರೂ ಆರಿಸಬಹುದಾದ, ಸುರಕ್ಷಿತ ಹಾಗೂ ಸರ್ಕಾರದಿಂದ ಖಚಿತತೆ ನೀಡಲಾದ ಹೂಡಿಕೆ ಆಯ್ಕೆ ಎಂದರೆ ಪೋಸ್ಟ್ ಆಫೀಸ್ ಯೋಜನೆಗಳು (Post Office Schemes). ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ದೀರ್ಘಾವಧಿ ಅಥವಾ ಮಧ್ಯಾವಧಿ ಉಳಿತಾಯಕ್ಕಾಗಿ ವಿಶ್ವಾಸಾರ್ಹ ಮಾರ್ಗವನ್ನು ಹುಡುಕುತ್ತಿರುವವರಿಗೆ ಅಂಚೆ ಕಚೇರಿಯ ಯೋಜನೆಗಳು ಅತ್ಯುತ್ತಮ. ಇವುಗಳು ಸರ್ಕಾರದ ಅಡಿಯಲ್ಲಿ ಇರುವಂತಹ ಹೂಡಿಕೆ ಯೋಜನೆಗಳಾಗಿರುವುದರಿಂದ ಹೂಡಿಕೆದಾರರ ಹಣಕ್ಕೆ ಯಾವುದೇ ಅಪಾಯವಿಲ್ಲ ಎಂಬುದು ಪ್ರಮುಖ ಲಕ್ಷಣ. ಅಲ್ಲದೆ, ಹೆಚ್ಚಿನ ಯೋಜನೆಗಳು ಆಕರ್ಷಕ ಬಡ್ಡಿದರಗಳನ್ನು ನೀಡುವುದರ ಜೊತೆಗೆ ತೆರಿಗೆ ವಿನಾಯಿತಿಯ ಪ್ರಯೋಜನವನ್ನೂ ಒದಗಿಸುತ್ತವೆ. ಹಾಗಿದ್ದರೆ, 2025ರ ವೇಳೆಗೆ ಹೂಡಿಕೆದಾರರ ಮಧ್ಯೆ ಹೆಚ್ಚು ಜನಪ್ರಿಯತೆಗಳಿಸಿರುವ ಪೋಸ್ಟ್ ಆಫೀಸ್‌ನ(post office) ಪ್ರಮುಖ 5 ಹೂಡಿಕೆ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು, ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಸುರಕ್ಷಿತ ಹೂಡಿಕೆ ಮಾಡುವುದು ಅತ್ಯಂತ ಮುಖ್ಯವಾದ ಸಂಗತಿ. ಮಾರುಕಟ್ಟೆಯ ಅಸ್ಥಿರತೆಯಿಂದ ತಪ್ಪಿಸಿಕೊಂಡು ನಿಗದಿತ ಲಾಭ ಪಡೆಯಲು ಬಯಸುವವರು ಪೋಸ್ಟ್ ಆಫೀಸ್ ಯೋಜನೆಗಳತ್ತ ಮುಖ ಮಾಡುತ್ತಿದ್ದಾರೆ. ಇಂತಹ ಹೂಡಿಕೆಗಳ ಮೂಲಕ ಮಧ್ಯಮ ವರ್ಗದಿಂದ ಆರಂಭಿಸಿ ದೀರ್ಘಾವಧಿ ಉಳಿತಾಯದ ಯೋಜನೆಗಳನ್ನು ಬಯಸುವವರಿಗೆ ಎಲ್ಲರಿಗೂ ಸೂಕ್ತ ಆಯ್ಕೆಗಳು ಲಭ್ಯವಿವೆ.

ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Account – SSA):

ಸುಕನ್ಯಾ ಸಮೃದ್ಧಿ ಯೋಜನೆ ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಅತ್ಯುತ್ತಮ ಯೋಜನೆ ಎಂದು ಪರಿಗಣಿಸಲಾಗುತ್ತದೆ.
ಉದ್ದೇಶ: ಹೆಣ್ಣುಮಕ್ಕಳ ಶಿಕ್ಷಣ, ಮದುವೆ ಹಾಗೂ ಭವಿಷ್ಯಕ್ಕಾಗಿ ಪೋಷಕರು ಹೂಡಿಕೆ ಮಾಡುವ ಅವಕಾಶ.
ಬಡ್ಡಿದರ: ವಾರ್ಷಿಕ 8.2% (2025ರ ಪ್ರಕಾರ).
ಹೂಡಿಕೆ ಮಿತಿ: ಕನಿಷ್ಠ ₹250 ಮತ್ತು ಗರಿಷ್ಠ ₹1.5 ಲಕ್ಷ ವಾರ್ಷಿಕ.
ಪ್ರಯೋಜನ: ತೆರಿಗೆ ವಿನಾಯಿತಿ ಹಾಗೆ ಭವಿಷ್ಯಕ್ಕಾಗಿ ಭದ್ರ ಉಳಿತಾಯ.
ಪೋಷಕರು ತಮ್ಮ ಹೆಣ್ಣುಮಗಳ ಹೆಸರಿನಲ್ಲಿ ಖಾತೆ ತೆರೆದು ನಿಯಮಿತವಾಗಿ ಹೂಡಿಕೆ ಮಾಡಿದರೆ, ದೀರ್ಘಾವಧಿಯಲ್ಲಿ ಆ ಮೊತ್ತವು ಬಡ್ಡಿಯೊಂದಿಗೆ ದೊಡ್ಡ ಮೊತ್ತವಾಗುತ್ತದೆ.

ಆರ್‌ಡಿ ಯೋಜನೆ (Recurring Deposit – RD):

ಮಧ್ಯಮ ವರ್ಗದ ಹೂಡಿಕೆದಾರರಿಗೆ ಸೂಕ್ತ ಆಯ್ಕೆ.
ತಿಂಗಳಿಗೆ ಕೇವಲ ₹100 ರಿಂದ ಖಾತೆ ತೆರೆಯಬಹುದು.
ವಾರ್ಷಿಕ ಬಡ್ಡಿದರ 6.7%.
ಒಬ್ಬರಿಗಾಗಲಿ ಅಥವಾ ಇಬ್ಬರಿಗಾಗಲಿ ಖಾತೆ ತೆರೆಯುವ ಅವಕಾಶ.
ಈ ಯೋಜನೆ ತಿಂಗಳಿಗೆ ಸಣ್ಣ ಮೊತ್ತವನ್ನು ಉಳಿಸಿ, ವರ್ಷಗಳ ಕಾಲ ಉತ್ತಮ ಲಾಭ ಪಡೆಯಲು ಸಹಾಯ ಮಾಡುತ್ತದೆ.

ಸಾರ್ವಜನಿಕ ಭವಿಷ್ಯ ನಿಧಿ (Public Provident Fund – PPF):

ದೀರ್ಘಾವಧಿಯ ಉಳಿತಾಯ ಹಾಗೆ ತೆರಿಗೆ ವಿನಾಯಿತಿ.
ಪಿಎಫ್ ಖಾತೆ ಇಲ್ಲದ ಸಾರ್ವಜನಿಕರಿಗಾಗಿ ವಿಶೇಷ ಯೋಜನೆ.
ವಾರ್ಷಿಕ ಬಡ್ಡಿದರ 7.1%.
ಹೂಡಿಕೆ ಮಿತಿ: ಕನಿಷ್ಠ ₹500, ಗರಿಷ್ಠ ₹1.5 ಲಕ್ಷ.
ಅವಧಿ: 15 ವರ್ಷಗಳು.
ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಅದು ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಗೂ ಅರ್ಹವಾಗುತ್ತದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (National Savings Certificate – NSC):

ಭದ್ರ ಹೂಡಿಕೆ ಮತ್ತು ತೆರಿಗೆ ಉಳಿತಾಯ.
ಸರ್ಕಾರದಿಂದ ನೇರವಾಗಿ ನೀಡಲಾಗುವ ಯೋಜನೆ.
ಪ್ರಮಾಣಪತ್ರವನ್ನು ಅಂಚೆ ಕಚೇರಿಯಲ್ಲಿ ಪಡೆಯಬಹುದು.
NSC ಯಲ್ಲಿ ಗಳಿಸಿದ ಬಡ್ಡಿಯನ್ನು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಕಡಿತಗೊಳಿಸುವಲ್ಲಿ ಪಾತ್ರವಹಿಸುತ್ತದೆ.
ಲಾಕ್‌ಇನ್ ಅವಧಿ: 5 ವರ್ಷಗಳು.
ಉದ್ಯೋಗಿಗಳು ಹಾಗೂ ಉದ್ಯಮಿಗಳು ತೆರಿಗೆ ಉಳಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಆರಿಸುತ್ತಾರೆ.

ಕಿಸಾನ್ ವಿಕಾಸ್ ಪತ್ರ (Kisan Vikas Patra – KVP):

ಹಣವನ್ನು ಡಬಲ್ ಮಾಡುವ ಸುರಕ್ಷಿತ ಯೋಜನೆ!.
ಆರಂಭ: ಏಪ್ರಿಲ್ 1, 1988 (ಸಾರ್ವಜನಿಕ ಹಿತದೃಷ್ಟಿಯಿಂದ).
ಬಡ್ಡಿದರ: ವಾರ್ಷಿಕ 7.5%.
ಹೂಡಿಕೆಯ ಮೊತ್ತ 9 ವರ್ಷ 7 ತಿಂಗಳಲ್ಲಿ ಡಬಲ್ ಆಗುತ್ತದೆ.
ಯಾವುದೇ ಗರಿಷ್ಠ ಮಿತಿಯಿಲ್ಲ.
2 ವರ್ಷ 6 ತಿಂಗಳ ನಂತರ ಮೊತ್ತವನ್ನು ಹಿಂಪಡೆಯುವ ಅವಕಾಶವಿದೆ.
ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ಮೂಲಕ ಖಾತೆ ತೆರೆಯಬಹುದು. ದೀರ್ಘಾವಧಿಯಲ್ಲಿ ಸ್ಥಿರ ಲಾಭ ಬಯಸುವ ಹೂಡಿಕೆದಾರರಿಗೆ ಇದು ಅತ್ಯುತ್ತಮ ಆಯ್ಕೆ.

ಒಟ್ಟಾರೆಯಾಗಿ, ಷೇರು ಮಾರುಕಟ್ಟೆಯ ಅಸ್ಥಿರತೆ ಅಥವಾ ಮ್ಯೂಚುಯಲ್ ಫಂಡ್‌ಗಳ ಅಪಾಯವನ್ನು ಬಯಸದವರು ಪೋಸ್ಟ್ ಆಫೀಸ್ ಯೋಜನೆಗಳ ಮೂಲಕ ಸುರಕ್ಷಿತ ಹಾಗೂ ಖಚಿತ ಲಾಭದ ಹೂಡಿಕೆಯನ್ನು ಮಾಡಬಹುದು. ಇವುಗಳಲ್ಲಿ ಕೆಲವು ಯೋಜನೆಗಳು ತೆರಿಗೆ ವಿನಾಯಿತಿಯನ್ನೂ ನೀಡುತ್ತವೆ, ಕೆಲವು ದೀರ್ಘಾವಧಿಯಲ್ಲಿ ಹಣವನ್ನು ಡಬಲ್ ಮಾಡುವ ಸಾಮರ್ಥ್ಯವನ್ನೂ ಹೊಂದಿವೆ.

WhatsApp Image 2025 09 05 at 10.22.29 AM 22
ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories