ರಾಜ್ಯ ಸರ್ಕಾರವು ಪ್ರಸ್ತುತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು (Social and Educational Survey) ನಡೆಸುತ್ತಿದ್ದು, ಇದನ್ನು ಸಾಮಾನ್ಯವಾಗಿ ಜಾತಿ ಗಣತಿ ಎಂದೇ ಕರೆಯಲಾಗುತ್ತಿದೆ. ಜಾತಿ ಗಣತಿ ನಡೆಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲದ ಕಾರಣ, ರಾಜ್ಯ ಸರ್ಕಾರವು ಸಮೀಕ್ಷೆಯ ಹೆಸರಿನಲ್ಲಿ ಇದನ್ನು ನಡೆಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಆರ್.ಅಶೋಕ್ ಅವರ ಅಚ್ಚರಿಯ ಹೇಳಿಕೆ
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಈ ಗಣತಿ ಕುರಿತು ಗಂಭೀರ ಹೇಳಿಕೆ ನೀಡಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದಾಗಿ ಆರ್ಥಿಕ ಸಂಕಷ್ಟ: ಗ್ಯಾರಂಟಿ ಯೋಜನೆಗಳ ಟೀಕೆ ಮಾಡಿದ ಆರ್.ಅಶೋಕ್ ಅವರು, “ಗ್ಯಾರಂಟಿಗಳಿಂದಾಗಿ ಸರ್ಕಾರದ ಬಳಿ ಹಣ ಇಲ್ಲ. ಎರಡೂವರೆ ವರ್ಷಕ್ಕೇ ಸರ್ಕಾರ ನಡೆಸಲು ಸಾಧ್ಯವಾಗದ ಸ್ಥಿತಿ ಬಂದಿದೆ. ಎಲ್ಲ ನಿಗಮಗಳಿಗೂ ಸುಮಾರು 1600 ಕೋಟಿ ರೂಪಾಯಿ ಕಡಿತ ಮಾಡಿದ್ದಾರೆ” ಎಂದಿದ್ದಾರೆ.
ಪ್ರವಾಹ ಪರಿಹಾರಕ್ಕೆ ಹಣವಿಲ್ಲ, ಗಣತಿಗೆ 400 ಕೋಟಿ: “ಪ್ರವಾಹ ಪರಿಸ್ಥಿತಿ ಬಂದಿದೆ, ಆದರೆ ಜನರಿಗೆ ಕೊಡಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಇವರಿಗೆ ಪ್ರವಾಹಕ್ಕೆ ಪರಿಹಾರ ಕೊಡಲು ದುಡ್ಡಿಲ್ಲ, ಆದರೆ ಜಾತಿ ಗಣತಿ ನಡೆಸಲು ಮಾತ್ರ 400 ಕೋಟಿ ರೂಪಾಯಿ ಹಣ ಇದೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.
“ಗ್ಯಾರಂಟಿ ಕಡಿತಗೊಳಿಸಲು ಸರ್ಕಾರದಿಂದ ಕುತಂತ್ರ”
ಜಾತಿ ಗಣತಿಯ ಹಿಂದಿರುವ ಸರ್ಕಾರದ ಉದ್ದೇಶದ ಬಗ್ಗೆ ಆರ್.ಅಶೋಕ್ ಅವರು ಗಂಭೀರ ಆರೋಪ ಮಾಡಿದ್ದಾರೆ:
ಸೌಲಭ್ಯ ಕಡಿತದ ಹುನ್ನಾರ: “ರಾಜ್ಯ ಸರ್ಕಾರ ಜಾತಿ ಗಣತಿ ನಡೆಸುತ್ತಿರುವುದರ ಹಿಂದೆ ಕುತಂತ್ರ ಇದೆ. ಗ್ಯಾರಂಟಿ ಹೆಸರಲ್ಲಿ ಕೊಡುತ್ತಿರುವ ₹2,000 (ಗೃಹಲಕ್ಷ್ಮಿ), ರೇಷನ್ ಕಾರ್ಡ್ ಮತ್ತು ಸರ್ಕಾರದಿಂದ ಸಿಗುವ ಸಾಲಗಳು/ಬೆಳೆ ಪರಿಹಾರಗಳನ್ನೆಲ್ಲ ಕಡಿತ ಮಾಡಲು ಈ ಗಣತಿಯನ್ನು ಸರ್ಕಾರ ನಡೆಸುತ್ತಿದೆ. ಇದು ಸಿಎಂ ಸಿದ್ದರಾಮಯ್ಯ ಅವರ ಕುತಂತ್ರ” ಎಂದಿದ್ದಾರೆ.
ಮಾಹಿತಿ ನೀಡಿದರೆ ಕಷ್ಟ: ಸಮೀಕ್ಷೆಗೆ ಮನೆಗೆ ಬರುವವರಿಗೆ ನಿಮ್ಮ ಬಗ್ಗೆ ಮಾಹಿತಿಯನ್ನು ನೀಡಿದ್ದೇ ಆದರೆ, ನಿಮ್ಮ ರೇಷನ್ ಕಾರ್ಡ್, ಸಿಗುವ ಲೋನ್, ಬೆಳೆ ಪರಿಹಾರ, ಮತ್ತು ₹2,000 ಗಳೆಲ್ಲವನ್ನೂ ಕಡಿತಗೊಳಿಸುತ್ತಾರೆ.
ಹಣ ಹೊಂದಾಣಿಕೆಗಾಗಿ ಸಮೀಕ್ಷೆ: ಗ್ಯಾರಂಟಿ ಯೋಜನೆಗಳಿಗೆ ಹಣ ಸಾಕಾಗುತ್ತಿಲ್ಲ. ಅದನ್ನು ಸರಿದೂಗಿಸಲು ಈ ಸಮೀಕ್ಷೆ ನಡೆಸಲಾಗುತ್ತಿದೆ. “ಯಾರ ಬಳಿ ಸೌಕರ್ಯ ಇರುತ್ತದೆಯೋ, ಅವರಿಗೆ ಸೌಲಭ್ಯಗಳನ್ನು ಕಡಿತ ಮಾಡುವ ಹುನ್ನಾರ ಸರ್ಕಾರದ್ದು” ಎಂದು ಅಶೋಕ್ ಅವರು ತಿಳಿಸಿದ್ದಾರೆ.
ಕೊಟ್ಟ ಮಾಹಿತಿ ಅಫಿಡಿವಿಟ್ ಇದ್ದಂತೆ: “ನೀವು ನೀಡುವ ಮಾಹಿತಿಯು ಸರ್ಕಾರಕ್ಕೆ ನೀವು ಕೊಟ್ಟ ಅಫಿಡಿವಿಟ್ (ಪ್ರಮಾಣಪತ್ರ) ಇದ್ದಂತೆ. ಸೌಲಭ್ಯ ಯಾಕೆ ಕೊಡ್ತಿಲ್ಲ ಎಂದು ಪ್ರಶ್ನೆ ಮಾಡಿದರೆ, ನೀವೇ ಕೊಟ್ಟ ಮಾಹಿತಿಯನ್ನು ನಿಮಗೆ ತೋರಿಸ್ತಾರೆ” ಎಂದು ಅವರು ಎಚ್ಚರಿಸಿದ್ದಾರೆ.
ಆರ್.ಅಶೋಕ್ ಅವರ ಕಿವಿಮಾತು
ಆರ್.ಅಶೋಕ್ ಅವರು ಜನರಿಗೆ ಈ ಕುರಿತು ಎಚ್ಚರಿಕೆಯ ಮಾತು ಹೇಳಿದ್ದಾರೆ:
ಆಭರಣಗಳ ಮಾಹಿತಿ ನೀಡಬೇಡಿ: “ಸಮೀಕ್ಷೆಗೆ ಬಂದಾಗ ಜನರು ನೋಡಿಕೊಂಡು ಮಾಹಿತಿ ಕೊಡಿ. ‘ನನ್ನತ್ರ ಚೈನು ಇದೆ, ಉಂಗುರ ಇದೆ, ಓಲೆ ಇದೆ’ ಎಂದು ಮಾಹಿತಿ ಕೊಟ್ಟರೆ, ಖಂಡಿತ ರೇಷನ್ ಕಾರ್ಡ್, ₹2,000 ಎಲ್ಲವನ್ನೂ ತೆಗೆದುಹಾಕ್ತಾರೆ.”
ಮಾಹಿತಿ ನೀಡುವ/ಬಿಡುವ ಸ್ವಾತಂತ್ರ್ಯ: “ಸಮೀಕ್ಷೆಗೆ ಬಂದಾಗ ಮಾಹಿತಿ ಕೊಡಬೇಕು ಅನ್ನಿಸಿದರೆ ಕೊಡಿ, ಬಿಟ್ಟರೆ ಬಿಡಿ ಎಂದು ಹೈಕೋರ್ಟ್ ಈಗಾಗಲೇ ಹೇಳಿದೆ. ನಿಮಗೆ ಯಾವುದೇ ಪ್ರಶ್ನೆಗೆ ಉತ್ತರ ಕೊಡಬಾರದು ಅನ್ನಿಸಿದರೆ, ಕೊಡಬೇಡಿ. ನಾನೂ ಹಾಗೇ ಮಾಡುತ್ತೇನೆ, ನೀವೂ ಹಾಗೇ ಮಾಡಿ” ಎಂದು ಅವರು ಸಲಹೆ ನೀಡಿದ್ದಾರೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Kavitha holds a Master’s degree in Computer Applications (MCA) and has a deep interest in technology. Leveraging her academic background, she writes articles on science and technology, simplifying complex technical topics for general readers. Her work focuses on making cutting-edge advancements in tech accessible and engaging.


WhatsApp Group




