WhatsApp Image 2025 10 07 at 11.35.05 AM

BIGNEWS : ರಾಜ್ಯದ ಎಲ್ಲಾ ಪ್ರಾಥಮಿಕ-ಪ್ರೌಢಶಾಲೆಗಳ ‘ದಸರಾ ರಜಾ’ ಅವಧಿ ವಿಸ್ತರಿಸಿ : ‘ಸರ್ಕಾರಿ ನೌಕರರ ಸಂಘ’…

WhatsApp Group Telegram Group

ಬೆಂಗಳೂರು : ರಾಜ್ಯದಲ್ಲಿ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಅವಧಿಯನ್ನು ಅಕ್ಟೋಬರ್ 12ರ ವರೆಗೆ ವಿಸ್ತರಿಸಲಾಗಿದ್ದು, ಇದರ ಬೆನ್ನಲ್ಲೆ ದಸರಾ ರಜಾ ಅವಧಿ ವಿಸ್ತರಣೆ ಮಾಡುವಂತೆ ಇದೀಗ ಶಿಕ್ಷಕರು ಸರ್ಕಾರಕ್ಕೆ ಮನವಿಯನ್ನಾ ಮಾಡಿಕೊಂಡಿದ್ದಾರೆ. ಸಮೀಕ್ಷೆಗಳನ್ನಾ ವಿಸ್ತರಣೆ ಮಾಡಿದ ಸರ್ಕಾರಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಎಲ್ಲಾ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ ಈ ರೀತಿ ಇದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಕಳೆದ ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 7ರ ತನಕ ದಸರಾ ರಜೆ ಇತ್ತು. ಶಿಕ್ಷಕರು ಸೆಪ್ಟೆಂಬರ್ 22 ರಿಂದ ಜಾತಿಗಣತಿ ಮಾಡುತ್ತಿದ್ದಾರೆ ಬೆಂಗಳೂರಿನಲ್ಲಿ ಸರ್ವೇ ಇನ್ನೂ ಗೊಂದಲದಲ್ಲಿ ನಡೆಯುತ್ತಿದೆ. ಹೀಗಾಗಿ ಶಿಕ್ಷಕರು ದೈಹಿಕ ಹಾಗೂ ಬೌದ್ಧಿಕವಾಗಿ ಒತ್ತಡದಲ್ಲಿ ಇದ್ದಾರೆ. ಅವರಿಗೆ ದೈಹಿಕ ಹಾಗು ಮಾನಸಿಕ ವಿರಾಮದ ಅವಶ್ಯಕತೆ ಇದೆ ಹಾಗಾಗಿ ಅಕ್ಟೋಬರ್ 17ರವರೆಗೆ ದಸರಾ ರಜಾ ಅವಧಿ ವಿಸ್ತರಣೆ ಮಾಡುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಮಾಡಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ದಿನಾಂಕ: 20-09-2025 ರಿಂದ 07-10-2025ರವರೆಗೆ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ದಸರಾ ರಜೆ ಘೋಷಣೆಯಾಗಿರುತ್ತದೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ-2025ರ ಗಣತಿ ಕಾರ್ಯದಲ್ಲಿ ರಾಜ್ಯದಾದ್ಯಂತ ಸರ್ಕಾರಿ ಶಾಲೆಗಳ ಶಿಕ್ಷಕರುಗಳಿಗೆ ದಿನಾಂಕ:22-09-2025 ರಿಂದ 07-10-2025ರ ವರೆಗೆ ಕರ್ತವ್ಯ ನಿರ್ವಹಿಸಲು ನಿಯೋಜಿಸಲಾಗಿರುತ್ತದೆ. ಗಣತಿ ಕಾರ್ಯದಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ ಗಣತಿ ಕಾರ್ಯ ಪೂರ್ಣಗೊಂಡಿರುವುದಿಲ್ಲ ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಗಣತಿ ಕಾರ್ಯ ದಿನಾಂಕ: 05-10-2025 ರಿಂದ ಪ್ರಾರಂಭವಾಗಿರುತ್ತದೆ.

ದಿನಾಂಕ: 08-10-2025ರೊಳಗೆ ಗಣತಿ ಕಾರ್ಯ ಪೂರ್ಣಗೊಳ್ಳದೇ ಇರುವುದರಿಂದ ಹಾಗೂ ಶಾಲಾ ರಜಾ ಅವಧಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರುಗಳು ದೈಹಿಕ ಹಾಗೂ ಭೌದ್ಧಿಕವಾಗಿ ಒತ್ತಡದಲ್ಲಿ ಗಣತಿ ಕಾರ್ಯದ ಕರ್ತವ್ಯ ನಿರ್ವಹಿಸಿರುವುದರಿಂದ ಅವರುಗಳ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕಾಗಿ ರಜೆಯ ಅವಶ್ಯಕತೆ ಇರುವುದರಿಂದ, ದಿನಾಂಕ: 17-10-2025ರ ವರೆಗೆ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ದಸರಾ ರಜೆ ಅವಧಿಯನ್ನು ವಿಸ್ತರಿಸುವಂತೆ ನಿರ್ದೇಶನ ನೀಡಲು ತಮ್ಮಲ್ಲಿ ಕೋರಿದೆ.

WhatsApp Image 2025 10 07 at 11.17.45 AM
WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Popular Categories