WhatsApp Image 2025 10 07 at 9.38.44 AM 1 1

Gold Rate: ಒಂದೇ ದಿನದಲ್ಲಿ ಗಗನಕ್ಕೇರಿದ ಚಿನ್ನ 2 ಲಕ್ಷದ ಗಡಿ ತಲುಪುವ ಸಾಧ್ಯತೆ.!

Categories:
WhatsApp Group Telegram Group

ಚಿನ್ನ ಖರೀದಿದಾರರಿಗೆ ಇದೊಂದು ಶಾಕಿಂಗ್‌ ಸುದ್ದಿಯೇ ಸರಿ. ದೀಪಾವಳಿ ಹಬ್ಬ ಹತ್ತಿರ ಬರುತ್ತಿದ್ದಂತೆಯೇ ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಾಖಲೆಯ ಏರಿಕೆಯನ್ನು ಕಾಣುತ್ತಿದೆ. ಈ ದಿಢೀರ್‌ ಬೆಲೆ ಏರಿಕೆಯು ಆಭರಣ ಪ್ರಿಯರಿಗೆ ದೊಡ್ಡ ಆಘಾತ ತಂದಿದೆ. ಹಬ್ಬದ ಸೀಸನ್‌ನಲ್ಲಿ ಬಂಗಾರದ ಬೆಲೆ ಗಗನಕ್ಕೇರುವುದು ಆತಂಕ ಮೂಡಿಸಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಅಕ್ಟೋಬರ್ 06 ರಂದು, 100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ₹13,700 ರೂಪಾಯಿಗಳ ಬೃಹತ್ ಏರಿಕೆ ದಾಖಲಾಗಿದೆ. ಈ ಏರಿಕೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್‌ನ ಮೌಲ್ಯದ ಬದಲಾವಣೆ ಕೂಡ ಒಂದು ಪ್ರಮುಖ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಇಳಿಕೆಯ ಹಾದಿಯಲ್ಲಿದ್ದ ಹಳದಿ ಲೋಹದ ಬೆಲೆ ಇದೀಗ ದಿಢೀರನೇ ಏರಿಕೆ ಕಂಡಿರುವುದು ಗಮನಾರ್ಹ.

ಪ್ರಸ್ತುತ ಚಿನ್ನದ ಬೆಲೆ ವಿವರ (ಅಕ್ಟೋಬರ್ 06 ರಂತೆ):

24 ಕ್ಯಾರೆಟ್ ಚಿನ್ನ:

10 ಗ್ರಾಂ ಬೆಲೆ: ₹1,370 ಏರಿಕೆಯಾಗಿ, ಒಟ್ಟು ₹1,20,770 ರೂಪಾಯಿಗೆ ತಲುಪಿದೆ.

100 ಗ್ರಾಂ ಬೆಲೆ: ₹13,700 ಏರಿಕೆಯಾಗಿ, ಒಟ್ಟು ₹12,07,700 ರೂಪಾಯಿಗೆ ವಹಿವಾಟು ನಡೆಸಿದೆ.

22 ಕ್ಯಾರೆಟ್ ಚಿನ್ನ:

10 ಗ್ರಾಂ ಬೆಲೆ: ₹1,10,700 ರೂಪಾಯಿಗೆ ತಲುಪಿದೆ.

100 ಗ್ರಾಂ ಬೆಲೆ: ₹11,07,000 ರೂಪಾಯಿಗೆ ತಲುಪಿದೆ.

18 ಕ್ಯಾರೆಟ್ ಚಿನ್ನ:

10 ಗ್ರಾಂ ಬೆಲೆ: ₹90,580 ರೂಪಾಯಿ ಇದೆ.

2 ಲಕ್ಷದ ಗಡಿ ಮುಟ್ಟುವ ಮುನ್ಸೂಚನೆ

ಇತ್ತೀಚೆಗೆ ಕೆಲವು ಮಾರುಕಟ್ಟೆ ವಿಶ್ಲೇಷಕರು ಬಂಗಾರದ ಬೆಲೆ ಭವಿಷ್ಯದಲ್ಲಿ ಎರಡು ಲಕ್ಷ ರೂಪಾಯಿಗಳ ಗಡಿಯನ್ನು ದಾಟಬಹುದು ಎಂದು ಅಂದಾಜಿಸಿದ್ದರು. ಈಗಿನ ಚಿನ್ನದ ದರ ಏರಿಕೆಯ ಟ್ರೆಂಡ್ ಗಮನಿಸಿದರೆ, 10 ಗ್ರಾಂ 22 ಕ್ಯಾರೆಟ್‌ ಚಿನ್ನದ ಬೆಲೆಯು ಶೀಘ್ರದಲ್ಲೇ ₹2,00,000 ಗಡಿಯನ್ನು ತಲುಪಿದರೂ ಆಶ್ಚರ್ಯವಿಲ್ಲ.

WhatsApp Image 2025 09 05 at 10.22.29 AM 3

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories