Picsart 25 10 04 22 29 29 080 scaled

ಮಕ್ಕಳು ಸರಿಯಾಗಿ ಊಟ ಮಾಡ್ತಿಲ್ವಾ.? ಆರೋಗ್ಯಕರ ಆಹಾರ ಅಭ್ಯಾಸ ಬೆಳೆಸುವ ಪರಿಣಾಮಕಾರಿ ಟಿಪ್ಸ್

Categories:
WhatsApp Group Telegram Group

ಈಗಿನ ಕಾಲದಲ್ಲಿ ಪೋಷಕರಿಗೆ ದೊಡ್ಡ ಸವಾಲಾಗಿರುವ ವಿಷಯವೆಂದರೆ ಮಕ್ಕಳಿಗೆ ಸರಿಯಾಗಿ ಊಟ ಮಾಡಿಸುವುದು. “ನನ್ನ ಮಗು ಊಟ ಮಾಡುತ್ತಿಲ್ಲ ಆಟವಿದ್ದರೆ ಸಾಕು, ಊಟದ ನೆನಪೇ ಇರೋದಿಲ್ಲ” ಎನ್ನುವುದು ಬಹುತೇಕ ಪ್ರತೀ ಮನೆಯಲ್ಲೂ ಕೇಳಿಬರುವ ಸಾಮಾನ್ಯ ಅಳಲು. ಮಕ್ಕಳಿಗೆ ಆರೋಗ್ಯಕರ ಆಹಾರ ತಿನ್ನಿಸಲು ಪೋಷಕರು ಹರಸಾಹಸ ಪಡಬೇಕಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ 2ರಿಂದ 10 ವರ್ಷ ವಯಸ್ಸಿನ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚು ಗೋಚರಿಸುತ್ತದೆ. ಮೊಬೈಲ್, ಟಿವಿ, ಜಂಕ್‌ ಫುಡ್‌ಗಳ ಆಕರ್ಷಣೆ ಹಾಗೂ ಸರಿಯಾದ ಆಹಾರ ಪದ್ಧತಿಯ ಕೊರತೆಯ ಪರಿಣಾಮವಾಗಿ ಮಕ್ಕಳು ಊಟದತ್ತ ಆಸಕ್ತಿ ತೋರದೆ ಹಠಮಾರಿಯಾಗಿ ವರ್ತಿಸುತ್ತಾರೆ. ಈ ಹಠವನ್ನು ಮುರಿಯಲು ಬಹುತೇಕ ಪೋಷಕರು ಔಷಧಿಗಳ ಸಹಾಯವನ್ನು ಹುಡುಕುತ್ತಿದ್ದುದು ಚಿಂತಾಜನಕ ಸಂಗತಿ. ಆದರೆ ತಜ್ಞರ ಪ್ರಕಾರ, ಕೆಲವು ಸರಳವಾದ ಜೀವನಶೈಲಿ ಬದಲಾವಣೆಗಳು ಹಾಗೂ ಮನೆಯಲ್ಲಿ ಅಳವಡಿಸಬಹುದಾದ ಕ್ರಮಗಳು ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ತಡೆಹಿಡಿಯಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇಂದಿನ ಬಹುತೇಕ ಪೋಷಕರು ಮಕ್ಕಳಿಗೆ ಬೆಳಗಿನ ಉಪಾಹಾರವಾಗಿ ಎರಡು ಬ್ರೆಡ್ ತುಂಡುಗಳಿಗೆ ಜ್ಯಾಮ್ ಹಚ್ಚಿ ಕೊಡುತ್ತಾರೆ, ಶಾಲೆಯ ಡಬ್ಬಿಯಲ್ಲಿ ಮ್ಯಾಗಿ, ಚಾಕಲೇಟ್, ಸಮೋಸಾ ಇಟ್ಟು ಕಳುಹಿಸುತ್ತಾರೆ. ಸಂಜೆ ಮನೆಗೆ ಬಂದ ಮಕ್ಕಳಿಗೆ ಬಿಸ್ಕತ್, ಬಿಂಗೋ, ಕುರುಕುರೆ, ಪಾನಿಪೂರಿ ಮುಂತಾದ ತಿಂಡಿ ಕೊಡುತ್ತಾರೆ. ಇಷ್ಟೆಲ್ಲ ತಿಂಡಿ ತಿಂದ ನಂತರ ಮಕ್ಕಳು ರಾತ್ರಿ ಊಟ ಮಾಡುವುದೇ ವಿರಳ. ಇದರ ಜೊತೆಗೆ ಗ್ಯಾಜೆಟ್ ಬಳಕೆ ಹೆಚ್ಚಾಗಿರುವುದರಿಂದ ಅವರು ಆಹಾರದತ್ತ ಗಮನ ಕೊಡದೆ ತಿನ್ನುವುದು ಅಥವಾ ಊಟ ಮಾಡದೇ ಬಿಡುವುದು ಸಾಮಾನ್ಯವಾಗಿದೆ.

ಆದರೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಮನೆಯಲ್ಲಿಯೇ ಇದೆ. ಪೋಷಕರು ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದರೆ, ಮಕ್ಕಳಲ್ಲಿ ಆರೋಗ್ಯಕರ ಆಹಾರ ಪದ್ಧತಿ ಬೆಳೆಸಬಹುದು, ಹಸಿವು ಸಹಜವಾಗಿ ಮೂಡುತ್ತದೆ ಮತ್ತು ಪೋಷಕಾಂಶಗಳ ಕೊರತೆ ನಿವಾರಣೆಯಾಗುತ್ತದೆ. ಹಾಗಾದರೆ ಯಾವೆಲ್ಲ ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಆಹಾರ ಮತ್ತು ‘ಎರಡನೇ ಮೆದುಳು’ ನಡುವಿನ ಸಂಪರ್ಕ:

ನಮ್ಮ ದೇಹದಲ್ಲಿ ‘ಎಂಟರಿಕ್ ನರ್ವಸ್ ಸಿಸ್ಟಮ್ (ENS)’ ಎನ್ನುವ ಒಂದು ನರ ವ್ಯವಸ್ಥೆ ಇದೆ. ಇದನ್ನು ‘ಎರಡನೇ ಮೆದುಳು’ ಎಂದೂ ಕರೆಯುತ್ತಾರೆ. ಇದು ಕರುಳಿನಲ್ಲಿದ್ದು, ತಲೆಯ ಮೆದುಳಿನೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತದೆ. ಹಸಿವು, ಪೋಷಕಾಂಶ ಅಗತ್ಯ, ಜೀರ್ಣಕ್ರಿಯೆ ಇತ್ಯಾದಿ ಕ್ರಿಯೆಗಳು ಇದರ ಮೂಲಕ ನಿಯಂತ್ರಿತವಾಗುತ್ತವೆ. ಮಕ್ಕಳ ಕರುಳಿನ ಆರೋಗ್ಯ ಸರಿಯಾಗಿ ಇರದಿದ್ದರೆ, ಬೆಳವಣಿಗೆಯ ಮೇಲೆಯೂ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ ಪೋಷಕರು ಮಕ್ಕಳ ಆಹಾರ ಕ್ರಮದಲ್ಲಿ ಸಣ್ಣ ಬದಲಾವಣೆಗಳ ಮೂಲಕ ದೊಡ್ಡ ಪರಿಣಾಮ ತರಬಹುದು.

ಪೋಷಕರು ಅನುಸರಿಸಬಹುದಾದ ಕೆಲವು ಸರಳ ಪರಿಣಾಮಕಾರಿ ಸಲಹೆಗಳು ಹೀಗಿವೆ:

ಊಟಕ್ಕೆ ವಿಶಿಷ್ಟ ಸ್ಥಳ ಮತ್ತು ಸಮಯ ಮೀಸಲಿಡಿ:
ಮಕ್ಕಳು ಸದಾ ಓಡಾಡುತ್ತಾ ತಿನ್ನುವ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ. ಇದು ಜೀರ್ಣಕ್ರಿಯೆಗೆ ಹಾನಿಕಾರಕ. ಮನೆಯಲ್ಲಿ ಊಟಕ್ಕೆ ಮಾತ್ರ ಮೀಸಲಾದ ಸ್ಥಳವಿರಲಿ. ಎಲ್ಲರೂ ಕೂತು ಊಟ ಮಾಡುವಂತೆ ಕ್ರಮ ರೂಪಿಸಿ.  ಇದು ಅವರ ಜೀರ್ಣಾಂಗ ವ್ಯವಸ್ಥೆಯನ್ನು ಸರಿಯಾಗಿ ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ.

ತಿನ್ನುವ ಮೊದಲು ಆಳವಾದ ಉಸಿರಾಟ ಮತ್ತು ಕೃತಜ್ಞತೆ:
ಶಾಲೆಯಿಂದ ಮನೆಗೆ ಬರುವ ಮಕ್ಕಳಿಗೆ ದೇಹದಲ್ಲಿ ಒತ್ತಡವಿರುತ್ತದೆ. ತಿನ್ನುವ ಮೊದಲು 3–6 ಬಾರಿ ಆಳವಾಗಿ ಉಸಿರೆಳೆಯಲು ಹೇಳಿ. ಇದರಿಂದ ಲಾಲಾರಸ ಮತ್ತು ಹೊಟ್ಟೆಯ ಆಮ್ಲ ಹೆಚ್ಚಾಗಿ, ಆಹಾರದಲ್ಲಿನ ಪೋಷಕಾಂಶ ಶೋಷಣೆಗೆ ನೆರವಾಗುತ್ತದೆ. ಇನ್ನು ಆಹಾರಕ್ಕೆ ಕೃತಜ್ಞತೆ ಸಲ್ಲಿಸುವ ಅಭ್ಯಾಸವು ಅವರಲ್ಲಿ ಆಹಾರ ಸಂಸ್ಕೃತಿಯ ಮಹತ್ವವನ್ನು ಬೆಳೆಸುತ್ತದೆ.

ಚೆನ್ನಾಗಿ ಅಗಿದು ತಿನ್ನುವ ಅಭ್ಯಾಸ ಮಾಡಿಸಿ:
ಮಕ್ಕಳು ಆಹಾರವನ್ನು ಸರಿಯಾಗಿ ಅಗಿಯದೆ ನುಂಗುವುದು ಸಾಮಾನ್ಯ. ಇದು ಮಲಬದ್ಧತೆ, ಅಜೀರ್ಣಕ್ಕೆ ಕಾರಣವಾಗುತ್ತದೆ. ಅಗಿದು ತಿನ್ನುವುದರಿಂದ ಜೀರ್ಣಕಿಣ್ವಗಳು (ಲಿಪೇಸ್, ಅಮೈಲೇಸ್) ಸಕ್ರಿಯವಾಗಿ ಕೆಲಸಮಾಡುತ್ತವೆ ಹಾಗೂ ಅಜೀರ್ಣ ಸಮಸ್ಯೆ 80–90% ವರೆಗೆ ಕಡಿಮೆಯಾಗುತ್ತದೆ.

ಊಟದ ವೇಳೆ ಗ್ಯಾಜೆಟ್‌ಗಳಿಗೆ ಸಂಪೂರ್ಣ ನಿಷೇಧ:

ಟಿವಿ ಅಥವಾ ಮೊಬೈಲ್ ನೋಡುತ್ತಾ ಊಟ ಮಾಡುವ ಮಕ್ಕಳು ಊಟದ ರುಚಿ ಅರಿಯುವುದಿಲ್ಲ, ಊಟದ ಮೇಲೆ ಗಮನ ಕಡಿಮೆಯಾಗುತ್ತದೆ. ಸಂಶೋಧನೆಯ ಪ್ರಕಾರ, ಈ ಅಭ್ಯಾಸವು ಕಬ್ಬಿಣ ಮತ್ತು ಕ್ಯಾಲ್ಸಿಯಂ ಕೊರತೆಯ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ದುರ್ಬಲ ಮೂಳೆಗಳು, ಕಡಿಮೆ ರೋಗನಿರೋಧಕ ಶಕ್ತಿ ಮತ್ತು ಕರುಳಿನ ಅಸಮತೋಲನ ಉಂಟಾಗುತ್ತದೆ. ಊಟದ ಸಮಯದಲ್ಲಿ ಮಕ್ಕಳೊಂದಿಗೆ ಮಾತನಾಡಿ, ಅವರ ಗಮನವನ್ನು ಊಟದತ್ತ ಕೇಂದ್ರೀಕರಿಸಿ.

ಒಟ್ಟಾರೆಯಾಗಿ, ಮಕ್ಕಳಲ್ಲಿ ಆರೋಗ್ಯಕರ ಆಹಾರ ಅಭ್ಯಾಸ ಬೆಳೆಸುವುದು ಔಷಧಿ, ಪೂರಕ ಅಥವಾ ಬಲವಂತದಿಂದ ಸಾಧ್ಯವಿಲ್ಲ. ಕುಟುಂಬದ ಆಹಾರ ಸಂಸ್ಕೃತಿಯಲ್ಲಿನ ಸಣ್ಣ ಬದಲಾವಣೆಗಳು, ಪೋಷಕರ ಮಾದರಿ ನಡೆ ಮತ್ತು ನಿಯಮಿತ ಸಮಯಪಟ್ಟಿಯೇ ಈ ಸಮಸ್ಯೆಗೆ ಶಾಶ್ವತ ಪರಿಹಾರ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories