shakti cyclone

Heavy Rain: ರಾಜ್ಯದ ಈ ಜಿಲ್ಲೆಗಳಲ್ಲಿ ಇಡೀ ವಾರ ಭಾರಿ ಮಳೆ ಮುನ್ಸೂಚನೆ.! ಎಲ್ಲೆಲ್ಲಿ.?

Categories:
WhatsApp Group Telegram Group

ಬೆಂಗಳೂರು: ಅರಬ್ಬಿ ಸಮುದ್ರದ ಉತ್ತರ ಭಾಗದಲ್ಲಿ ರೂಪಗೊಂಡಿರುವ ‘ಶಕ್ತಿ’ ಚಂಡಮಾರುತದ ಪರಿಣಾಮವಾಗಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ವಾರವಿಡೀ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಸ್ತುತ ಈ ಮಾರುತಗಳು ದ್ವಾರಕಾದಿಂದ ಪಶ್ಚಿಮಕ್ಕೆ ಸುಮಾರು 470 ಕಿಲೋಮೀಟರ್ ದೂರದಲ್ಲಿ ಹಾಗೂ ನಲಿಯಾದಿಂದ ಪಶ್ಚಿಮ-ನೈಋತ್ಯ ದಿಕ್ಕಿನ 470 ಕಿಲೋಮೀಟರ್ ದೂರದಲ್ಲಿ ಕೇಂದ್ರೀಕೃತವಾಗಿವೆ. ಭಾನುವಾರ (ಅಕ್ಟೋಬರ್ 5) ಇದು ವಾಯುವ್ಯ ಮತ್ತು ಪಶ್ಚಿಮದ ಅರೇಬಿಯನ್ ಸಮುದ್ರದ ಕಡೆಗೆ ಚಲಿಸಲಿದೆ. ನಂತರ, ಮತ್ತೆ ತಿರುಗಿ ಪೂರ್ವ-ಈಶಾನ್ಯ ದಿಕ್ಕಿಗೆ ಸಾಗುವ ಈ ಮಾರುತಗಳು ಸೋಮವಾರ ಬೆಳಗ್ಗೆ ಸಮುದ್ರದಲ್ಲಿಯೇ ದುರ್ಬಲಗೊಳ್ಳಲಿವೆ. ಈ ಮಾರುತಗಳು ಯಾವುದೇ ಪ್ರದೇಶಕ್ಕೆ ಅಪ್ಪಳಿಸುವುದಿಲ್ಲ. ಹೀಗಾಗಿ, ಈ ಚಂಡಮಾರುತದಿಂದ ರಾಜ್ಯಕ್ಕೆ ಗಣನೀಯ ಪ್ರಮಾಣದ ಪರಿಣಾಮ ಬೀರುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ (IMD) ಸ್ಪಷ್ಟಪಡಿಸಿದೆ.

ಮಳೆಯ ಮುನ್ಸೂಚನೆ

ಅಕ್ಟೋಬರ್ 5 ರಿಂದ ಅಕ್ಟೋಬರ್ 11 ರವರೆಗೆ ಈ ಕೆಳಗಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ:

ಕರಾವಳಿ ಮತ್ತು ಮಲೆನಾಡು: ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾಸನ, ಶಿವಮೊಗ್ಗ, ಕೊಡಗು ಮತ್ತು ಚಿಕ್ಕಮಗಳೂರು.

ದಕ್ಷಿಣ ಒಳನಾಡು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಚಿತ್ರದುರ್ಗ ಮತ್ತು ದಾವಣಗೆರೆ.

ಉತ್ತರ ಒಳನಾಡು: ಧಾರವಾಡ, ಬೆಳಗಾವಿ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳು.

ಈ ಅವಧಿಯಲ್ಲಿ ಕೆಲವು ಪ್ರದೇಶಗಳಲ್ಲಿ ಮಳೆಯ ಪ್ರಮಾಣಕ್ಕಿಂತಲೂ ಬಿರುಗಾಳಿಯ ಪ್ರಮಾಣ ಹೆಚ್ಚಿರಬಹುದು.

ಅರಬ್ಬಿ ಸಮುದ್ರದಲ್ಲಿನ ಸೈಕ್ಲೋನ್‌ನಿಂದ ರಾಜ್ಯಕ್ಕೆ ಹೆಚ್ಚಿನ ತೊಂದರೆಯಾಗದು. ಬೆಂಗಳೂರು ನಗರ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಮಳೆ ಮುಂದುವರಿಯಲಿದೆ. ನೈಋತ್ಯ ಮಾನ್ಸೂನ್ ಅಕ್ಟೋಬರ್ 15 ರಂದು ಕೊನೆಗೊಳ್ಳುವ ಸಾಧ್ಯತೆ ಇದೆ. ಇದರ ನಂತರ ಈಶಾನ್ಯ ಮಾನ್ಸೂನ್ ಪ್ರಾರಂಭವಾಗಲಿದೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories