ಬೆಂಗಳೂರು: ರಾಜ್ಯದ ಸರ್ಕಾರಿ ನೌಕರರು ಪ್ರಮುಖವಾಗಿ ಗಮನಿಸಬೇಕಾದ ವಿಷಯ ಇಲ್ಲಿದೆ. ನಿಮ್ಮ ಬ್ಯಾಂಕ್ ಖಾತೆಯನ್ನು ವೇತನ ಖಾತೆ (Salary Account) ಯೋಜನೆಯಡಿ ಪರಿವರ್ತಿಸಲು ಸರ್ಕಾರವು ಸೂಚನೆ ನೀಡಿದೆ. ಈ ಸೌಲಭ್ಯವು ಎಲ್ಲಾ ಪ್ರಮುಖ ಬ್ಯಾಂಕ್‌ಗಳಲ್ಲಿ ಲಭ್ಯವಿದೆ.
ಸರ್ಕಾರದ ಸೂಚನೆಯ ಪ್ರಕಾರ, ಪ್ರತಿಯೊಬ್ಬ ಸರ್ಕಾರಿ ನೌಕರರು ತಮ್ಮ ESS ಲಾಗಿನ್‌ನಲ್ಲಿ (Employee Self-Service Login) PMJJBY (ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ) ಮತ್ತು PMSBY (ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ) ಕುರಿತ ಮಾಹಿತಿಯನ್ನು ಕಡ್ಡಾಯವಾಗಿ ಭರ್ತಿ ಮಾಡಿ ಸಲ್ಲಿಸಬೇಕು. ಈ ಕುರಿತು ಸಂಪೂರ್ಣವಾದ ಮಾಹಿತಿ ತಿಳಿದುಕೊಳ್ಳಲಾಗಿದೆ.
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಮತ್ತು ಸುರಕ್ಷಾ ಬಿಮಾ ಯೋಜನೆಗಳು
ಆರ್ಥಿಕ ಇಲಾಖೆಯ ಪತ್ರ ಸಂಖ್ಯೆ: FD-CAM/160/2023, ದಿನಾಂಕ: 06/09/2023 ರ ಅನ್ವಯ, ಪ್ರತಿ ಉದ್ಯೋಗಿಗಳು ಎರಡು ಪ್ರಮುಖ ವಿಮಾ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಗಳನ್ನು ಪಡೆಯಲು ಕೋರಲಾಗಿದೆ. ಈ ಯೋಜನೆಗಳ ಸೌಲಭ್ಯವನ್ನು ತಮ್ಮ ವೇತನ ಖಾತೆ ಇರುವ ಬ್ಯಾಂಕ್ ಮೂಲಕ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನೀವು https://www.jansuraksha.gov.in/ ಲಿಂಕ್ ಅನ್ನು ನೋಡಬಹುದು.
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY)
ಇದು ಜೀವ ವಿಮಾ ಯೋಜನೆಯಾಗಿದ್ದು, ವಾರ್ಷಿಕ ಕೇವಲ ರೂ. 436/- ಪ್ರೀಮಿಯಂ ಪಾವತಿಸಬೇಕಾಗುತ್ತದೆ. (ಪ್ರೀಮಿಯಂ ಮೊತ್ತವು ವಿಮಾದಾರರ ಬ್ಯಾಂಕ್ ಖಾತೆಯಿಂದ ಸ್ವಯಂಚಾಲಿತವಾಗಿ ಕಡಿತಗೊಳ್ಳುತ್ತದೆ).
- ಯಾವುದೇ ಕಾರಣದಿಂದ ಮರಣ ಸಂಭವಿಸಿದರೆ, ಅವಲಂಬಿತ ಕುಟುಂಬ ಸದಸ್ಯರಿಗೆ ರೂ. 2.00 ಲಕ್ಷಗಳ ವಿಮಾ ಮೊತ್ತದ ನೆರವು ದೊರೆಯುತ್ತದೆ.
- ಈ ಯೋಜನೆ 18 ರಿಂದ 50 ವರ್ಷದೊಳಗಿನ ಜನರಿಗೆ ಮಾತ್ರ ಲಭ್ಯವಿರುತ್ತದೆ.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY)
ಇದು ಅಪಘಾತ ವಿಮಾ ಯೋಜನೆಯಾಗಿದ್ದು, ವಾರ್ಷಿಕ ಕೇವಲ ರೂ. 20/- ಪ್ರೀಮಿಯಂ ಪಾವತಿಸಬೇಕಾಗುತ್ತದೆ. (ಪ್ರೀಮಿಯಂ ಮೊತ್ತವು ವಿಮಾದಾರರ ಬ್ಯಾಂಕ್ ಖಾತೆಯಿಂದ ಸ್ವಯಂಚಾಲಿತವಾಗಿ ಕಡಿತಗೊಳ್ಳುತ್ತದೆ).
- ಒಂದು ವೇಳೆ ಅಪಘಾತದಿಂದ ಮರಣ ಸಂಭವಿಸಿದರೆ ಅಥವಾ ಶಾಶ್ವತ ಸಂಪೂರ್ಣ ಅಂಗವೈಕಲ್ಯ ಉಂಟಾದರೆ ರೂ. 2.00 ಲಕ್ಷಗಳ ವಿಮಾ ನೆರವು ಲಭ್ಯ.
- ಶಾಶ್ವತ ಭಾಗಶಃ ಅಂಗವೈಕಲ್ಯಕ್ಕೆ ರೂ. 1.00 ಲಕ್ಷದ ವಿಮಾ ನೆರವು ಲಭ್ಯ.
- ಈ ಯೋಜನೆಯು 18 ರಿಂದ 70 ವರ್ಷದೊಳಗಿನ ಜನರಿಗೆ ಮಾತ್ರ ಲಭ್ಯ.
ಈ ಎರಡೂ ವಿಮಾ ಯೋಜನೆಗಳು ನೌಕರರ ಕುಟುಂಬಗಳಿಗೆ ಬಹಳ ಉಪಯುಕ್ತವಾಗಿವೆ.
ESS ಪೋರ್ಟಲ್‌ನಲ್ಲಿ ಮಾಹಿತಿ ನವೀಕರಿಸುವುದು ಕಡ್ಡಾಯ
ಆರ್ಥಿಕ ಇಲಾಖೆಯ ಮತ್ತೊಂದು ಪತ್ರ ಸಂಖ್ಯೆ: FD-CAM/160/2023, ದಿನಾಂಕ: 02/11/2023 ರ ಅನ್ವಯ, PMJJBY ಮತ್ತು PMSBY ವಿಮಾ ಯೋಜನೆಗಳ ವಿವರಗಳನ್ನು HRMS ESS ಲಾಗಿನ್ ಪೋರ್ಟಲ್ (https://hrmsess.karnataka.gov.in) ನಲ್ಲಿ ದಾಖಲಿಸಲು ಸೂಚಿಸಲಾಗಿದೆ.
ಇದರಂತೆ, ಪ್ರತಿ ಸಿಬ್ಬಂದಿಗಳು ಮತ್ತು ಡಿಡಿಓಗಳು (DDOs) ಈ ವಿಮಾ ಯೋಜನೆಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳುವುದು ಮತ್ತು ಈ ವಿವರಗಳನ್ನು ESS ಪೋರ್ಟಲ್‌ನಲ್ಲಿ ನವೀಕರಿಸುವುದು ಅವರ ಜವಾಬ್ದಾರಿಯಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ರಾಜ್ಯ ಸರ್ಕಾರಿ ನೌಕರರ ಸಂಘದಿಂದ ವರ್ಗಾವಣೆ ಸಂಬಂಧಿತ ‘ಪತ್ರ ವ್ಯವಹಾರ’ದ ಬಗ್ಗೆ ಮಹತ್ವದ ಆದೇಶ.!
- 2024-25ನೇ ಸಾಲಿನ `ಶಿಕ್ಷಕರ ವರ್ಗಾವಣೆ’ಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ.!
- ರಾಜ್ಯದ ರೈತರ ಪೌತಿ ಖಾತೆ ಕುರಿತು ಬಂಪರ್ ಗುಡ್ ನ್ಯೂಸ್, ಜಮೀನು ವರ್ಗಾವಣೆಗೆ ಹೊಸ ರೂಲ್ಸ್
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

“ಶಿವರಾಜ್ ಅವರು NeedsOfPublic.in ನಲ್ಲಿ ಸಾರ್ವಜನಿಕ, ಶೈಕ್ಷಣಿಕ ಮತ್ತು ಸ್ಥಳೀಯ ಸುದ್ದಿಗಳ ವಿಭಾಗದ ಹಿರಿಯ ಸಂಪಾದಕರಾಗಿದ್ದಾರೆ. ಪತ್ರಿಕೋದ್ಯಮದಲ್ಲಿ 6 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಇವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಕೀರ್ಣ ಯೋಜನೆಗಳನ್ನು ಹಾಗೂ ವಿದ್ಯಾರ್ಥಿವೇತನಗಳನ್ನು (Scholarships) ವಿಶ್ಲೇಷಿಸಿ, ಜನಸಾಮಾನ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಅದರ ಪ್ರಯೋಜನಗಳನ್ನು ಸುಲಭವಾಗಿ ಅರ್ಥೈಸುವಲ್ಲಿ ಎಕ್ಸ್ಪರ್ಟ್ ಆಗಿದ್ದಾರೆ. ಇದರ ಜೊತೆಗೆ ಪ್ರಮುಖ ಶೈಕ್ಷಣಿಕ ಅಪ್ಡೇಟ್ಗಳು, ಪರೀಕ್ಷಾ ಫಲಿತಾಂಶಗಳು ಮತ್ತು ವಿಶ್ವಾಸಾರ್ಹ ದೈನಂದಿನ ಹವಾಮಾನ ವರದಿಯನ್ನು ಒದಗಿಸುತ್ತಾರೆ. ವಿದ್ಯಾರ್ಥಿಗಳ ಭವಿಷ್ಯ ಮತ್ತು ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಇವರ ಮುಖ್ಯ ಗುರಿಯಾಗಿದೆ.”


WhatsApp Group




