ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ರೈತರಿಗೆ ಉಪಯೋಗವಾಗುವಂತ ಮಾಹಿತಿಯನ್ನು ನೀಡಲಾಗಿದೆ. ಅದೇನೆಂದರೆ, Tarpaulin(ತಾಡಪತ್ರಿ) ಬಗ್ಗೆ ಮುಖ್ಯವಾದ ಮಾಹಿತಿ. ಈ ತಾಡಪತ್ರಿಯನ್ನು ಖರೀದಿಸಿಲು ಕರ್ನಾಟಕ ಸರ್ಕಾರದಿಂದ ಸಬ್ಸಿಡಿ ಸಹಾಯಧನ ಸಿಗುತ್ತದೆ. ಏನೀದು ಸಬ್ಸಿಡಿ ಧನ?, ಎಷ್ಟು ಸಬ್ಸಿಡಿ ದೊರೆಯುತ್ತದೆ?, ಎಂಬುವುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಟ್ರಾಪಾಲಿನ್(Tarpaulin) ಖರೀದಿಗೆ ಸಬ್ಸಿಡಿ:
ರೈತರು ತಾವು ಬೆಳೆದ ಬೆಳೆಗಳನ್ನು ಸಂರಕ್ಷಿಸಲು ತಾಡಪತ್ರಿ ಅವಶ್ಯಕವಾಗಿ ಬೇಕಾಗಿರುವುದು, ಏಕೆಂದರೆ ರೈತರು ತಾವು ಬೆಳೆದ ಬೆಳೆಗಳನ್ನು ಮಳೆ, ಚಳಿಯಿಂದ ರಕ್ಷಿಸಲು ಈ Tarpaulin ಅತ್ಯಂತ ಅವಶ್ಯಕವಾಗಿರುತ್ತದೆ. ಕೃಷಿ ಇಲಾಖೆಯು ರೈತರ ಉತ್ಪನ್ನಗಳನ್ನು ಆಕಾಲಿಕ ಮಳೆ ಹಾಗೂ ಚಳಿಯಿಂದ ರಕ್ಷಿಸಲು ಪ್ರತಿ ವರ್ಷ ಈ ತಾಡಪತ್ರೆಯನ್ನು ಖರೀದಿಸಲು Tarpaulin Subsidy ಸಹಾಯಧನವನ್ನು ನೀಡುತ್ತಿದೆ. ಹೀಗಿರುವಾಗ, ಇವತ್ತಿನ ಲೇಖನದಲ್ಲಿ Tarpaulin Subsidy ಹೇಗೆ ಪಡೆಯಬೇಕು, ಸಬ್ಸಿಡಿ ಪಡೆಯಲು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು, ಮತ್ತು ಇದಕ್ಕೆ ಬೇಕಾದ ದಾಖಲೆಗಳು ಯಾವವು ಎನ್ನುವುದನ್ನು ತಿಳಿಸಿಕೊಡುತ್ತೇವೆ.
ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು? :
ಕೃಷಿ ಇಲಾಖೆಯಿಂದ ನೀಡಲಾಗುವ ಈ ಸಹಾಯಧನವನ್ನು ಪಡೆಯಲು ರೈತರು ನಿಮ್ಮ ಹತ್ತಿರವಿರುವ ತಾಲೂಕು/ ಜಿಲ್ಲೆ ಅಥವಾ ಹೋಬಳಿಯ ಕೃಷಿ ಕೇಂದ್ರದಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಕೃಷಿ ಕೇಂದ್ರದಲ್ಲಿ ಸಿಗುವ ಸಬ್ಸಿಡಿ ಅಪ್ಲಿಕೇಶನ್ ಫಾರ್ಮ್ ತೆಗೆದುಕೊಂಡು ಅದನ್ನು ಭರ್ತಿ ಮಾಡಿ ಅದ್ಕಕೆ ಬೇಕಾಗಿರುವ ದಾಖಲೆಗಳನ್ನು ಜೋಡಿಸಿ ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ರೈತ ಉತ್ಪಾದಕ ಕಂಪನಿಯ ಕಚೇರಿಗೆ ಭೇಟಿ ನೀಡಿ ಕಡಿಮೆ ಬೆಲೆಯಲ್ಲಿ ತಾಡಪತ್ರೆಯನ್ನು ಖರೀದಿಸಬಹುದು.
ಸಧ್ಯ ರಾಜ್ಯದಲ್ಲಿ ರೈತ ಸಂಪರ್ಕ ಕೇಂದ್ರ ಮತ್ತು ರೈತ ಉತ್ಪಾದಕ ಕಂಪನಿಗಳ ಮೂಲಕ ಅನುದಾನ ಲಭ್ಯತೆ ಆಧಾರದ ಮೇಲೆ ತಾಡಪತ್ರೆಯನ್ನು ವಿತರಣೆ ಮಾಡಲಾಗುತ್ತಿದೆ. ಹೀಗಿರುವಾಗ ರೈತರು ಒಮ್ಮೆ ಈ ಕಚೇರಿಗಳಿಗೆ ಭೇಟಿಯನ್ನು ನೀಡಿ ಲಭ್ಯತೆಯನ್ನು ಖಚಿತಪಡೆಸಿಕೊಳ್ಳಬೇಕು,ಇದು ಗಮನಿಸಬೇಕಾದ ವಿಷಯವಾಗಿದೆ.
ಇಲ್ಲಿಯೂ ಸಹಿತ ದೊರೆಯುತ್ತದೆ:
*ಹಾವೇರಿಸಿರಿ ರೈತ ಉತ್ಪಾದಕರ ಕಂಪನಿ ಹಾವೇರಿ.*
ಈ ಮೂಲಕ ನಮ್ಮೆಲ್ಲ ಹಾವೇರಿ ತಾಲೂಕು ರೈತ ಬಾಂಧವರಿಗೆ ತಿಳಿಸುವುದೇನೆಂದರೆ ಹಾವೇರಿಸಿರಿ ಕಂಪನಿಯಲ್ಲಿ ಇಲಾಖೆಯ ಸಹಾಯಧನ ದರದಲ್ಲಿ *18*24 ಸೈಜ್ 250GSM ನ 10kg ತೂಕ ರೂ-1300/-ಗೆ* (ಎಲ್ಲಾ ವರ್ಗದವರಿಗೆ) 500 ತಾಡಪತ್ರೆಗಳನ್ನು ವಿತರಿಸಲಾಗುವುದು..
ತಾಡಪತ್ರೆಗಳನ್ನು ಅರ್ಜಿ ಸ್ವೀಕರಿಸಿದ ಕೊನೆಯ ದಿನಾಂಕದಿಂದ 15 ರಿಂದ 20 ದಿನಗಳಲ್ಲಿ ವಿತರಿಸಲಾಗುವುದು
ಆಸಕ್ತ ರೈತರು ದಿನಾಂಕ -15/09/2023 ರವಳಗಾಗಿ ತಮ್ಮ ಹೆಸರು ನೋಂದಾಯಿಸಿ ಕೊಳ್ಳಲು ತಿಳಿಸಲಾಗಿದೆ..
ಬೇಕಾಗುವ ದಾಖಲಾತಿಗಳು
*ಆಧಾರ್ ಪ್ರತಿ ಜೆರಾಕ್ಸ್
* ಉತಾರ ಹಾಗೂ
* ಮುಂಗಡ ಶುಲ್ಕ 100/-ರೂ (1300-100=1200) ಉಳಿದ ರೂ.1200 ಗಳನ್ನು ತಡಾಪಾಲ್ ವಿತರಣಾ ಸಮಯದಲ್ಲಿ ನೀಡುವುದು. ಮೊದಲು ನೋಂದಣಿ ಮಾಡಿಕೊಂಡವರಿಗೆ ಆದ್ಯತೆ.*
*ಸ್ಥಳ* – ಬಸ್ಸೇಗಣ್ಣಿ ಆರ್ಕೇಡ್ ಕೃಷಿ ಇಲಾಖೆ ಎದುರಿಗೆ ಪಿ ಬಿ ರೋಡ್ ಹಾವೇರಿ 581110 –
*ಮೊಬೈಲ್*8095859485
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:
RTC / ಉತಾರ್
ಆಧಾರ್ ಕಾರ್ಡ್(Aadhar card) ಪ್ರತಿ ಹಾಗೂ
ಅರ್ಜಿಸಲ್ಲಿಸುವರ ಮೊಬೈಲ್ ಸಂಖ್ಯೆ.
ಎಷ್ಟು ಸಬ್ಸಿಡಿ ದೊರೆಯುತ್ತದೆ?:
ರೈತರು ಸುಮಾರು 50% ರಿಂದ 90% ವರೆಗೂ ಸಬ್ಸಿಡಿ ಸಹಾಯಧನವನ್ನು ಪಡೆಯಬಹುದಾಗಿದೆ.
ಜನರಲ್ ಕೆಟಗರಿ ( 2A, 2B, C-1 & others) ರೈತರಿಗೆ 50% ರಷ್ಟು ಸಬ್ಸಿಡಿ. ಅಂದರೆ, ನೀವು 1000 ರೂಪಾಯಿಯ ತಾಡಪತ್ರೆಯನ್ನು ಖರೀದಿಸಲು ಮುಂದಾಗಿದ್ದಿರಿ ಅಂದುಕೊಳ್ಳಿ ಸರ್ಕಾರವು ಅದರ ಅರ್ಧದಷ್ಟು ಅಂದರೆ 500 ರೂಪಾಯಿ ವರೆಗೂ ಸಹಾಯಧನವನ್ನು ನೀಡುತ್ತದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
SC ಮತ್ತು ST ಅವರಿಗೆ 90% ರಷ್ಟು ಸಬ್ಸಿಡಿ ಅಂದರೆ, ನೀವು 1000 ರೂಪಾಯಿಯ ತಾಡಪತ್ರೆಯನ್ನು ಖರೀದಿಸುತ್ತಿರಲು ಸರ್ಕಾರ ನಿಮಗೆ 900 ರೂ. ವರೆಗೂ ಸಹಾಯಧನವನ್ನು ನೀಡುತ್ತದೆ.
ಇನ್ನು ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ನಿಮ್ಮ ಹತ್ತಿರವಿರುವ ಕೃಷಿ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ. ನೀವು ಕೂಡ ಒಬ್ಬ ರೈತ ಆಗಿದ್ದರೆ ಈ ಅವಕಾಶವನ್ನು ಸದುಪಯೋಗಪಡೆಸಿಕೊಳ್ಳಿ ಮತ್ತು ನಿಮ್ಮ ಹತ್ತಿರವಿರುವ ರೈತ ಉತ್ಪನ್ನ ಕಂಪನಿ ಅಥವಾ ಕೃಷಿ ಕೇಂದ್ರಗಳಲ್ಲಿ ಹೋಗಿ ಖಚಿತಪಡಿಸಿ, ಅರ್ಜಿಯನ್ನು ಸಲ್ಲಿಸಿ.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group








