WhatsApp Image 2025 10 01 at 1.10.08 PM

ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ : ಆರೋಗ್ಯ ಸಂಜೀವಿನಿ ಅಧಿಕೃತ ಜಾರಿ ಈ ದಾಖಲೆಗಳು ಕಡ್ಡಾಯ

WhatsApp Group Telegram Group

ರಾಜ್ಯದ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳಿಗೆ ಸಮಗ್ರ ಆರೋಗ್ಯ ರಕ್ಷಣಾ ಆವರಣ ಒದಗಿಸುವ ಉದ್ದೇಶದೊಂದಿಗೆ, ಕರ್ನಾಟಕ ಸರ್ಕಾರ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ಯನ್ನು ಅಕ್ಟೋಬರ್ 1ರಿಂದ ಜಾರಿಗೊಳಿಸಿದೆ. ಈ ನಗದುರಹಿತ ವೈದ್ಯಕೀಯ ಯೋಜನೆಯು ರಾಜ್ಯದ ಸರ್ಕಾರಿ ಉದ್ಯೋಗಿಗಳು ಮತ್ತು ಅವರ ಆಶ್ರಿತರಿಗೆ ವಿಸ್ತೃತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಯೋಜನೆಯ ವಿವರ ಮತ್ತು ಹೊಸ ಸೌಲಭ್ಯಗಳು:

ಈ ಯೋಜನೆಯ ಅಡಿಯಲ್ಲಿ, ಪತಿ-ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದರೆ, ಒಬ್ಬರು ಮಾತ್ರ ತಮ್ಮ ವೇತನದಿಂದ ಮಾಸಿಕ ವಂತಿಕೆ (ಕಾಂಟ್ರಿಬ್ಯೂಷನ್) ನೀಡಬೇಕಾಗುತ್ತದೆ. ಇದರಿಂದ ದ್ವಿವೇತನ ಪಡೆಯುವ ಕುಟುಂಬಗಳ ಹಣದ ಭಾರ ತಗ್ಗಲಿದೆ. ಅಲ್ಲದೆ, ಸರ್ಕಾರಿ ನೌಕರರ ತಂದೆ-ತಾಯಿಯರು ಪಿಂಚಣುದಾರರಾಗಿದ್ದರೆ, ಅವರ ಮಾಸಿಕ ಆದಾಯ ಮಿತಿಯನ್ನು ₹17,000 ರಿಂದ ಹೆಚ್ಚಿಸಿ ₹27,000 ಗೆ ಏರಿಸಲಾಗಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ಹಿರಿಯ ನಾಗರಿಕರು ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ. ಗಮನಾರ್ಹವಾಗಿ, ವಿವಾಹಿತ ಮಹಿಳಾ ನೌಕರರ ತಂದೆ-ತಾಯಿಯರನ್ನು ಸಹ ಈ ಯೋಜನೆಯಲ್ಲಿ ಸೇರಿಸಿಕೊಳ್ಳುವ ಮೂಲಕ ಸಮಾನತೆಯನ್ನು ಖಾತ್ರಿಪಡಿಸಲಾಗಿದೆ.

ವಂತಿಕೆ ಮತ್ತು ಸ್ವಚ್ಛಿಕ ಸದಸ್ಯತ್ವ:

ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ಈ ಯೋಜನೆಯ ಸೌಲಭ್ಯಗಳನ್ನು ಪಡೆಯಲು, ಅಕ್ಟೋಬರ್ 2025 ರಿಂದ ಸರ್ಕಾರ ನಿಗದಿ ಪಡಿಸಿದ ಮಾಸಿಕ ವಂತಿಕೆಯನ್ನು ನೀಡಲು ಆರಂಭಿಸಬೇಕಾಗಿದೆ. ಆದರೆ, ಯಾವುದೇ ನೌಕರರು ವೈಯಕ್ತಿಕ ಕಾರಣಗಳಿಂದ ಮಾಸಿಕ ವಂತಿಕೆ ನೀಡಲು ಇಚ್ಛಿಸದಿದ್ದರೆ, ಅವರು ಅಕ್ಟೋಬರ್ 18ರೊಳಗಾಗಿ ಲಿಖಿತವಾಗಿ ತಮ್ಮ ನಿರ್ಧಾರವನ್ನು ಸಂಬಂಧಿಸಿದ ಡೀಪಾರ್ಟ್ಮೆಂಟಲ್ ಡ್ರಾಯಿಂಗ್ ಆಫೀಸರ್ (ಡಿ.ಡಿ.ಓ.) ಗೆ ತಿಳಿಸಬೇಕಾಗಿದೆ.

ಯೋಜನೆಯ ವ್ಯಾಪ್ತಿ ಮತ್ತು ಪ್ರಯೋಜನ:

ಈ ಮಹತ್ವಕಾಯಿ ಯೋಜನೆಯಿಂದ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 5.25 ಲಕ್ಷ ಸರ್ಕಾರಿ ನೌಕರರು ಮತ್ತು ಅವರ 25 ಲಕ್ಷಕ್ಕೂ ಅಧಿಕ ಕುಟುಂಬ ಸದಸ್ಯರು ಲಾಭಪಡೆಯಲಿದ್ದಾರೆ. ಇದು ಸರ್ಕಾರಿ ಉದ್ಯೋಗಿಗಳ ಆರೋಗ್ಯ ಖರ್ಚುವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವ ಸಾಧ್ಯತೆ ಇದೆ. ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ಈ ಯೋಜನೆಗೆ ನೋಂದಣಿ ಮಾಡಿಕೊಳ್ಳುವಂತೆ ಸರ್ಕಾರ ಸೂಚಿಸಿದೆ.

ಅಭಿನಂದನೆಗಳು:

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರು ಈ ಯೋಜನೆಯನ್ನು ಜಾರಿಗೊಳಿಸಿದ್ದಕ್ಕಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅವರು ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳು ಈ ಯೋಜನೆಯ ಪೂರ್ಣ ಲಾಭ ಪಡೆದುಕೊಳ್ಳಬೇಕೆಂದು ಆಶಿಸಿದ್ದಾರೆ.

ನೋಂದಣಿಗೆ ಅಗತ್ಯವಾದ ದಾಖಲೆಗಳು:

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಅರ್ಹರಾದ ಸರ್ಕಾರಿ ನೌಕರರು ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ:

ಭಾವಚಿತ್ರಗಳು: ಸರ್ಕಾರಿ ನೌಕರರು ಮತ್ತು ಯೋಜನೆಯಲ್ಲಿ ಸೇರಿಸಲು ಬಯಸುವ ಪ್ರತಿಯೊಬ್ಬ ಕುಟುಂಬ ಸದಸ್ಯರ ಪ್ರತ್ಯೇಕ ಪಾಸ್ಪೋರ್ಟ್ ಗಾತಿರದ ಛಾಯಾಚಿತ್ರಗಳು. ಪ್ರತಿ ಐದು ವರ್ಷಗಳಿಗೊಮ್ಮೆ ಹೊಸ ಛಾಯಾಚಿತ್ರಗಳನ್ನು ನೀಡಬೇಕಾಗುತ್ತದೆ.

ಜನ್ಮ ದಿನಾಂಕದ ದಾಖಲೆ: ಎಲ್ಲಾ ಕುಟುಂಬ ಸದಸ್ಯರ ಜನ್ಮದಿನಾಂಕದ ಪುರಾವೆ (ಜನ್ಮ ಪ್ರಮಾಣಪತ್ರ, ಶಾಲಾ ಲೀವ್ ಸರ್ಟಿಫಿಕೇಟ್, ಇತ್ಯಾದಿ).

ಆಧಾರ್ ಕಾರ್ಡ್: ನೌಕರರು ಮತ್ತು ಎಲ್ಲಾ ಕುಟುಂಬ ಸದಸ್ಯರ ಆಧಾರ್ ಕಾರ್ಡ್ನ ನಕಲು.

ವೇತನ ಚೀಟಿ: ಸರ್ಕಾರಿ ನೌಕರರ ತಾಜಾ ವೇತನ ಚೀಟಿಯ ನಕಲು.

ಕಾನೂನು ದಾಖಲೆಗಳು: ಅಗತ್ಯವಿರುವ ಸಂದರ್ಭಗಳಲ್ಲಿ (ಉದಾಹರಣೆಗೆ ದತ್ತು ಪಡೆದ ಬಾಲಕ/ಬಾಲಕಿಯರಿಗೆ ಸಂಬಂಧಿಸಿದ ದಾಖಲೆಗಳು, ವಿವಾಹ ಪ್ರಮಾಣಪತ್ರ, ಇತ್ಯಾದಿ).

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories