CASTE CENSUS

ಸಮೀಕ್ಷೆದಾರರಿಗೆ ಕಾಯುವ ಅಗತ್ಯವಿಲ್ಲ! ನಿಮ್ಮ ಮೊಬೈಲ್‌ನಲ್ಲೇ ಸಾಮಾಜಿಕ ಸಮೀಕ್ಷೆ ಮಾಹಿತಿ ಭರ್ತಿ ಮಾಡಿ

Categories:
WhatsApp Group Telegram Group

ರಾಜ್ಯದಲ್ಲಿ ಪ್ರಸ್ತುತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಸಾರ್ವಜನಿಕರು ಸಮೀಕ್ಷೆ ನಡೆಸುವವರ (Surveyors) ಆಗಮನಕ್ಕಾಗಿ ಕಾಯುವ ಅಗತ್ಯವಿಲ್ಲ. ನೀವು ಸುಲಭವಾಗಿ ಆನ್‌ಲೈನ್‌ನಲ್ಲಿ ನಿಮ್ಮ ಸ್ವಂತ ಮೊಬೈಲ್ ಬಳಸಿ ಈ ಸಮೀಕ್ಷೆಯ ಅರ್ಜಿಯನ್ನು ಭರ್ತಿ ಮಾಡಬಹುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮೊಬೈಲ್‌ನಲ್ಲಿ ಅರ್ಜಿ ಭರ್ತಿ ಮಾಡುವ ವಿಧಾನ:

  1. ವೆಬ್‌ಸೈಟ್‌ಗೆ ಭೇಟಿ: ಸಾರ್ವಜನಿಕರು ಮೊದಲು https://kscbcselfdeclaration.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
  2. ನಾಗರಿಕ ಆಯ್ಕೆ: ಅಲ್ಲಿ ‘ನಾಗರಿಕ’ (Citizen) ಆಯ್ಕೆಯನ್ನು ಆಯ್ದುಕೊಳ್ಳಬೇಕು.
  3. ಒಟಿಪಿ ಪರಿಶೀಲನೆ: ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಬರುವ ಓಟಿಪಿ (OTP) ಅನ್ನು ಹಾಕಿ ಪರಿಶೀಲಿಸಬೇಕು.
  4. ಹೊಸ ಸಮೀಕ್ಷೆ ಆರಂಭ: ತದನಂತರ ‘ಹೊಸ ಸಮೀಕ್ಷೆ ಆರಂಭಿಸಿ’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ, ನಿಮಗೆ ನೀಡಿರುವ ಯುಹೆಚ್‌ಐಡಿ (UHID – Unique Household ID) ಸಂಖ್ಯೆಯನ್ನು ನಮೂದಿಸಿ ಪರಿಶೀಲಿಸಬೇಕು.
  5. ಯುಹೆಚ್‌ಐಡಿ ಇಲ್ಲದಿದ್ದರೆ: ಒಂದು ವೇಳೆ ನಿಮ್ಮ ಬಳಿ ಯುಹೆಚ್‌ಐಡಿ ಇಲ್ಲದಿದ್ದರೆ, ‘ಐ ಡೋಂಟ್ ಹ್ಯಾವ್ ಯುಹೆಚ್‌ಐಡಿ’ (I Don’t Have UHID) ಆಯ್ಕೆಯನ್ನು ಕ್ಲಿಕ್ ಮಾಡಿ.
  6. ಹೆಸ್ಕಾಂ ಮತ್ತು ಭಾವಚಿತ್ರ: ನಂತರ ನಿಮ್ಮ ಹೆಸ್ಕಾಂ (HESCOM) ಐಡಿ ಸಂಖ್ಯೆಯನ್ನು ನಮೂದಿಸಿ. ಸಮೀಕ್ಷೆಯಲ್ಲಿ ಭಾಗವಹಿಸುತ್ತಿರುವ ವ್ಯಕ್ತಿಯ ಭಾವಚಿತ್ರವನ್ನು ಅಪ್‌ಲೋಡ್ ಮಾಡಬೇಕು.

ಇ-ಕೆವೈಸಿ ಮತ್ತು ಕುಟುಂಬ ಸದಸ್ಯರ ಸೇರ್ಪಡೆ:

  1. ಗುರುತು ಪರಿಶೀಲನೆ: ಮುಂದೆ ಪಡಿತರ ಚೀಟಿ (Ration Card) ಅಥವಾ ಆಧಾರ್ ಕಾರ್ಡ್ ಆಯ್ಕೆ ಮಾಡಬೇಕು.
  2. ನೀವು ಆಧಾರ್ ಕಾರ್ಡ್ ಆಯ್ಕೆ ಮಾಡಿದರೆ, ಓಟಿಪಿ ಬರುತ್ತದೆ, ಅಥವಾ ಕ್ಯೂಆರ್ ಕೋಡ್ ಮೂಲಕ ಫೇಸ್ ಕ್ಯಾಪ್ಚರ್ (Face Capture) ಬಳಸಬಹುದು.
  3. ಡೇಟಾ ಪಡೆಯಿರಿ: ನಂತರ ‘ಗೆಟ್ ಡಾಟಾ’ (Get Data) ಅನ್ನು ಕ್ಲಿಕ್ ಮಾಡಿ ಮುಂದುವರೆಯಬೇಕು.
  4. ಕುಟುಂಬ ಸದಸ್ಯರ ಸೇರ್ಪಡೆ: ಮನೆಯ ಮುಖ್ಯಸ್ಥರು ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಕುಟುಂಬದ ಇತರ ಸದಸ್ಯರನ್ನು ಸೇರಿಸಬೇಕು.
  5. ಸದಸ್ಯರನ್ನು ಸೇರಿಸಿ, ಅವರ ಇ-ಕೆವೈಸಿ ಪೂರ್ಣಗೊಳಿಸಿ. ರೇಷನ್ ಕಾರ್ಡ್‌ನಲ್ಲಿರುವ ಯಾರಾದರೂ ಮೃತಪಟ್ಟಿದ್ದರೆ, ‘ಮೃತ’ (Deceased) ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
  6. ಮುಖ್ಯಸ್ಥರ ಆಯ್ಕೆ: ಉಳಿದ ಕುಟುಂಬ ಸದಸ್ಯರನ್ನು ಸೇರಿಸಿದ ಬಳಿಕ, ಸಮೀಕ್ಷೆಗೆ ಮುಖ್ಯಸ್ಥರನ್ನು ಆಯ್ಕೆ ಮಾಡಿ ಗುರುತಿಸಿ, ನಿಮ್ಮ ಸಮೀಕ್ಷೆಯನ್ನು ಪ್ರಾರಂಭಿಸಬೇಕು.

ಅಂತಿಮ ಸಲ್ಲಿಕೆ:

  1. ಪ್ರತಿಯೊಬ್ಬ ಸದಸ್ಯರ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಕುಟುಂಬದ ದಾಖಲಾತಿ ಮಾಡಬೇಕು.
  2. ಕೆಲವು ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರಗಳನ್ನು ಸಲ್ಲಿಸಿ ‘ಸಲ್ಲಿಸಿ’ (Submit) ಮೇಲೆ ಕ್ಲಿಕ್ ಮಾಡಿ.
  3. ಸಲ್ಲಿಸಿದ ಮಾಹಿತಿಯನ್ನು ಮತ್ತೊಮ್ಮೆ ಪೂರ್ಣವಾಗಿ ಪರಿಶೀಲಿಸಲು ಅವಕಾಶವಿರುತ್ತದೆ.
  4. ಸ್ವಯಂ ದೃಢೀಕರಣ ಪತ್ರ: ಕೊನೆಯದಾಗಿ, ಒಂದು ಹಾಳೆಯಲ್ಲಿ “ನಾನು ಸ್ವಯಂ ಪ್ರೇರಣೆಯಿಂದ ಸಮೀಕ್ಷೆಯಲ್ಲಿ ಭಾಗವಹಿಸಿ ಎಲ್ಲಾ ನಿಖರವಾದ ಮಾಹಿತಿಯನ್ನು ನೀಡಿದ್ದೇನೆ” ಎಂದು ಬರೆದು, ಅದರ ಫೋಟೋ ತೆಗೆದು ಅಪ್‌ಲೋಡ್ ಮಾಡಬೇಕು.
  5. ಅಂತಿಮವಾಗಿ ಸಬ್‌ಮಿಟ್ ಮಾಡಿದ ನಂತರ ನಿಮಗೆ ಅರ್ಜಿ ಸಂಖ್ಯೆ (Application Number) ದೊರೆಯುತ್ತದೆ.

ಈ ಮಾಹಿತಿಯನ್ನು ಧಾರವಾಡ ಜಿಲ್ಲಾಡಳಿತದ ಪ್ರಕಟಣೆಯು ತಿಳಿಸಿದೆ.

WhatsApp Image 2025 09 05 at 11.51.16 AM 1

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Popular Categories