Picsart 25 09 22 22 36 22 545 scaled

ಮೇಡ್ ಇನ್ ಇಂಡಿಯಾ, ಜಿಎಸ್‌ಟಿ ಪರಿಷ್ಕರಣೆ ಮೂಲಕ ಟ್ರಂಪ್ ಗೆ ಪರೋಕ್ಷ ಸೆಡ್ಡು, ಮಧ್ಯಮ ವರ್ಗಕ್ಕೆ ಲಾಭದ ಭರವಸೆ

Categories:
WhatsApp Group Telegram Group

ಭಾರತವು ಆರ್ಥಿಕ ಮಹಾಶಕ್ತಿಯಾಗಿ ರೂಪುಗೊಳ್ಳುವ ಹಾದಿಯಲ್ಲಿ ಸಾಗುತ್ತಿದೆ. “ವಿಕಸಿತ ಭಾರತ” ಎಂಬ ಗುರಿ ಸಾಧಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ(Prime Minister Narendra Modi) ನಿರಂತರವಾಗಿ ಸ್ವದೇಶಿ ಉತ್ಪಾದನೆ, ಉದ್ಯಮಶೀಲತೆ ಹಾಗೂ ಆತ್ಮನಿರ್ಭರ ಭಾರತದ ಪರಿಕಲ್ಪನೆಯನ್ನು ಬಲವಾಗಿ ಮುಂದಿಟ್ಟು ದೇಶವಾಸಿಗಳನ್ನು ಪ್ರೇರೇಪಿಸುತ್ತಿದ್ದಾರೆ. ಜಾಗತಿಕ ರಾಜಕೀಯದಲ್ಲಿ “ಮೇಕ್ ಇನ್ ಇಂಡಿಯಾ” ಅಭಿಯಾನವು ಈಗಾಗಲೇ ಪ್ರಮುಖ ಅಸ್ತ್ರವಾಗಿ ಪರಿಣಮಿಸಿದ್ದು, ಇದೀಗ ಮೋದಿ ಮತ್ತೊಮ್ಮೆ ಭಾರತೀಯರ ಮನದಾಳವನ್ನು ಸ್ಪರ್ಶಿಸುವಂತೆ “ಮೇಡ್ ಇನ್ ಇಂಡಿಯಾ ವಸ್ತುಗಳನ್ನು ಖರೀದಿಸಿ” ಎಂಬ ಬಲವಾದ ಸಂದೇಶ ನೀಡಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ನೀಡಿದ “Buy American” ಕರೆಗೂ ಪ್ರತಿಯಾಗಿ, ಮೋದಿ ಪರೋಕ್ಷವಾಗಿ ಸ್ವದೇಶಿ ವಸ್ತುಗಳ ಖರೀದಿಗೆ ಒತ್ತು ನೀಡಿದ್ದು ಗಮನಾರ್ಹ. ಇದರೊಂದಿಗೆ, ಭಾರತದಲ್ಲಿ ಇಂದಿನಿಂದಲೇ ಜಾರಿಯಾಗಿರುವ ಹೊಸ ಜಿಎಸ್‌ಟಿ (GST) ಪರಿಷ್ಕರಣೆ ವ್ಯವಸ್ಥೆ ದೇಶದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ನಿಜವಾದ “ಉಳಿತಾಯದ ಉತ್ಸವ” ಆಗಿ ಪರಿಣಮಿಸಲಿದೆ ಎಂದು ಅವರು ಘೋಷಿಸಿದ್ದಾರೆ.

ಮೋದಿ ಭಾಷಣದ ಅಂಶಗಳು ಹೀಗಿವೆ:

ವಿಕಸಿತ ಭಾರತ ನಿರ್ಮಾಣಕ್ಕೆ ಆತ್ಮನಿರ್ಭರತೆ ದೊಡ್ಡ ಅಸ್ತ್ರ, MSME ಕ್ಷೇತ್ರದ ಕೊಡುಗೆ ಅಪಾರ.
ಜಿಎಸ್‌ಟಿ ವ್ಯವಸ್ಥೆ ಸರಳೀಕೃತ, ಕೇವಲ 2 ಸ್ತರದ ಟ್ಯಾಕ್ಸ್ (5% ಮತ್ತು 18%).
ಟಿವಿ, ಫ್ರಿಡ್ಜ್, ಸ್ಕೂಟರ್ ಮುಂತಾದ ಉಪಕರಣಗಳ ಮೇಲಿನ ತೆರಿಗೆ ಕಡಿತ.
ಶೇ. 99 ವಸ್ತುಗಳು ಕೇವಲ ಶೇ. 5ರ ತೆರಿಗೆ ವ್ಯಾಪ್ತಿಗೆ.
ವಾರ್ಷಿಕ 12 ಲಕ್ಷ ರೂಪಾಯಿ ಆದಾಯವರೆಗೂ ತೆರಿಗೆ ವಿನಾಯಿತಿ.

ಮೋದಿ ಅವರ ಹೇಳಿಕೆಗಳು:

ಭಾರತೀಯರು ತೆರಿಗೆ ಸಂಕೋಲೆಯಲ್ಲಿ ಸಿಲುಕಿದ್ದರು. ನಾಳೆಯಿಂದ ಹೊಸ ಜಿಎಸ್‌ಟಿ ಜಾರಿಯಾಗುವುದರಿಂದ ಉಳಿತಾಯದ ಉತ್ಸವ ಆರಂಭವಾಗಲಿದೆ. ಬಡ, ಮಧ್ಯಮ ವರ್ಗಕ್ಕೆ ಇದು ದೊಡ್ಡ ಅನುಕೂಲವಗಳಿದ್ದು, ಪ್ರತೀ ಕುಟುಂಬಕ್ಕೂ ಖುಷಿ ತರುತ್ತದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಹಿಂದೆ ಭಾರತದಲ್ಲಿ ಪ್ರವೇಶ ತೆರಿಗೆ, ಮಾರಾಟ ತೆರಿಗೆ, ಅಬಕಾರಿ, ಸೇವಾ ತೆರಿಗೆ, ವ್ಯಾಟ್ ಮುಂತಾದ ಡಜನ್‌ಗಟ್ಟಲೆ ತೆರಿಗೆಗಳಿಂದ ವ್ಯಾಪಾರಿಗಳು ಸಂಕಷ್ಟ ಅನುಭವಿಸುತ್ತಿದ್ದರು. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸರಕು ಕಳುಹಿಸುವುದೂ ಕಷ್ಟವಾಗಿತ್ತು. ಕೆಲವೊಮ್ಮೆ ಭಾರತದಲ್ಲಿ ಒಂದು ನಗರದಿಂದ ಮತ್ತೊಂದು ನಗರಕ್ಕೆ ಸರಕು ಸಾಗಿಸಲು ಹೋಲಿಸಿದರೆ ಯುರೋಪ್‌ಗೆ ಕಳುಹಿಸುವುದು ಸುಲಭವಾಗಿತ್ತು ಎಂಬ ಉದಾಹರಣೆಯನ್ನೂ ಅವರು ನೆನಪಿಸಿದರು.

ನವರಾತ್ರಿಯ ಶುಭಾಶಯಗಳೊಂದಿಗೆ ಶಂಖನಾದ:

ನವರಾತ್ರಿಯ ಹಬ್ಬದ ಸನ್ನಿವೇಶದಲ್ಲಿ ಮೋದಿ ಅವರು ಈ ಘೋಷಣೆಯನ್ನು ದೇಶದ ಜನತೆಗೆ ಅರ್ಪಿಸಿದ್ದು, ಉಳಿತಾಯದ ಉತ್ಸವಕ್ಕೆ ಶಂಖನಾದ ಊದಿದ್ದಾರೆ. ಜನಸಾಮಾನ್ಯರ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗುವುದರಿಂದ ಆರ್ಥಿಕ ಸುಧಾರಣೆಗೂ ಜನರ ಜೀವನಮಟ್ಟಕ್ಕೂ ಬಲ ಸಿಗಲಿದೆ.

ಒಟ್ಟಾರೆಯಾಗಿ, ಪ್ರಧಾನಿ ಮೋದಿ ಅವರ ಭಾಷಣವು “ಮೇಡ್ ಇನ್ ಇಂಡಿಯಾ” ವಸ್ತುಗಳ ಪ್ರಚಾರ, MSMEಗಳ ಬೆಂಬಲ ಮತ್ತು ಜಿಎಸ್‌ಟಿ ಸರಳೀಕರಣದ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ನೇರವಾಗಿ ತಲುಪುವಂತಹ ಆರ್ಥಿಕ ಸುಧಾರಣೆಯ ಘೋಷಣೆಯಾಗಿದೆ.
ಇನ್ನು, ಇಂದಿನಿಂದ ಜಾರಿಯಾಗಲಿರುವ ಜಿಎಸ್‌ಟಿ ಪರಿಷ್ಕರಣೆ ಮತ್ತು “ಮೇಡ್ ಇನ್ ಇಂಡಿಯಾ”ಗೆ ಪ್ರಧಾನಮಂತ್ರಿ ನೀಡಿರುವ ಕರೆ ಎರಡೂ ಸೇರಿ ಬಡ ಮತ್ತು ಮಧ್ಯಮ ವರ್ಗದ ಭಾರತೀಯರಿಗೆ ದ್ವಿಗುಣ ಲಾಭ ತರುವ ನಿರೀಕ್ಷೆಯಿದೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories