Picsart 25 09 22 22 48 06 970 scaled

ಮೈಸೂರು ದಸರಾ 2025: ಪ್ರಯಾಣಿಕರಿಗಾಗಿ KSRTC 2,300ಕ್ಕೂ ಹೆಚ್ಚು ವಿಶೇಷ ಬಸ್‌ಗಳ ವ್ಯವಸ್ಥೆ

Categories:
WhatsApp Group Telegram Group

ಮೈಸೂರು ದಸರಾ ಕರ್ನಾಟಕದ ಜನತೆಗೆ ಕೇವಲ ಹಬ್ಬವಲ್ಲ, ನಾಡಿನ ಸಂಸ್ಕೃತಿ, ಪರಂಪರೆ, ಐತಿಹಾಸಿಕ ವೈಭವವನ್ನು ಹೊತ್ತ ಮಹೋತ್ಸವ. ಪ್ರತಿ ವರ್ಷ ಮೈಸೂರಿನ ಅಂಬಾರಿ ಉತ್ಸವ, ಜಂಬೂಸವಾರಿ, ಬೆಳಕಿನ ಅರಮನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತವೆ. ಈ ಬಾರಿ ದಸರಾ ರಜೆಯೊಂದಿಗೆ ಪ್ರವಾಸಿ ಚಟುವಟಿಕೆ ಹೆಚ್ಚುವ ನಿರೀಕ್ಷೆಯಿದ್ದು, ರಾಜ್ಯದ ವಿವಿಧ ಭಾಗಗಳಿಂದ ಮೈಸೂರಿಗೆ ಹಾಗೂ ಮೈಸೂರಿನಿಂದ ರಾಜ್ಯದ ಇತರ ಭಾಗಗಳಿಗೆ ಭಾರೀ ಪ್ರಯಾಣಿಕರ ಸಂಚಾರವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ವಿಶೇಷ ಯೋಜನೆ ರೂಪಿಸಿದೆ. ಹಾಗಿದ್ದರೆ ಆ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

2,300ಕ್ಕೂ ಹೆಚ್ಚು ವಿಶೇಷ ಬಸ್ ಸೇವೆ:

KSRTC ಈ ವರ್ಷ ದಸರಾ ಹಬ್ಬ ಮತ್ತು ರಜಾ ಅವಧಿಗಾಗಿ ಒಟ್ಟು 2,300ಕ್ಕೂ ಹೆಚ್ಚು ವಿಶೇಷ ಬಸ್‌ಗಳನ್ನು ಬಿಡುಗಡೆ ಮಾಡಿದೆ. ವೇಗದೂತ, ರಾಜಹಂಸ, ಸ್ವೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸಲ್), ಅಂಬಾರಿ ಕ್ಲಬ್ ಕ್ಲಾಸ್, ಪಲ್ಲಕ್ಕಿ ಸ್ವೀಪರ್ ಹಾಗೂ ಅಶ್ವಮೇಧ ಸೇರಿದಂತೆ ವಿವಿಧ ಶ್ರೇಣಿಯ ಬಸ್‌ಗಳು ಪ್ರಯಾಣಿಕರಿಗೆ ಲಭ್ಯವಿರುತ್ತವೆ.

ಮುಖ್ಯ ದಿನಾಂಕಗಳು:

ಸೆಪ್ಟೆಂಬರ್ 26, 27 ಮತ್ತು 30ರಂದು ಬೆಂಗಳೂರು (ಕೆಂಪೇಗೌಡ, ಮೈಸೂರು ರಸ್ತೆ, ಶಾಂತಿನಗರ ಬಸ್ ನಿಲ್ದಾಣಗಳಿಂದ) ವಿವಿಧ ನಗರಗಳಿಗೆ ಬಸ್‌ಗಳು ಹೊರಡಲಿವೆ. ಇನ್ನು, ಅಕ್ಟೋಬರ್ 2 ಮತ್ತು 5ರಂದು ರಾಜ್ಯದ ಹಲವು ಭಾಗಗಳಿಂದ ಬೆಂಗಳೂರಿಗೆ  ಬಸ್‌ಗಳು ಮರಳಲಿವೆ.

ಪ್ರಮುಖ ಮಾರ್ಗಗಳು:

ಈ ಬಸ್‌ಗಳು ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಪ್ರಮುಖ ತಾಣಗಳಿಗೆ ಸೇವೆ ನೀಡಲಿವೆ.
ಅಷ್ಟೇ ಅಲ್ಲದೆ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿರಾಪಳ್ಳಿ, ಪುದುಕೋಟೆ, ಪಣಜಿ, ಶಿರಡಿ, ಪೂಣೆ, ಏರ್ನಾಕುಲಂ, ಪಾಲಕ್ಕಾಡ್ ಸೇರಿದಂತೆ ಅನೇಕ ಅಂತರರಾಜ್ಯ ತಾಣಗಳಿಗೂ ಸಂಚಾರ ನಡೆಯಲಿದೆ..

610 ಹೆಚ್ಚುವರಿ ಬಸ್‌ಗಳು:

ದಸರಾ ಹಬ್ಬದ ಕೇಂದ್ರವಾಗಿರುವ ಮೈಸೂರಿಗೆ ವಿಶೇಷ ಒತ್ತು ನೀಡಲಾಗಿದೆ.
ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ 260 ಹೆಚ್ಚುವರಿ ಬಸ್‌ಗಳು ಮೈಸೂರಿಗೆ ಸಂಚಾರ ಮಾಡಲಿವೆ.
ಮೈಸೂರಿನ ಸುತ್ತಮುತ್ತಲಿನ ಪ್ರವಾಸಿ, ಧಾರ್ಮಿಕ ಹಾಗೂ ಪ್ರೇಕ್ಷಣೀಯ ತಾಣಗಳಿಗೆ 350 ಹೆಚ್ಚುವರಿ ಬಸ್‌ಗಳು ಸಂಚರಿಸಲಿವೆ.
ಒಟ್ಟಾರೆ ಮೈಸೂರಿಗೆ ಮಾತ್ರ 610 ವಿಶೇಷ ಬಸ್‌ಗಳು ಲಭ್ಯವಾಗುತ್ತವೆ.

ವಿಶೇಷ ಟೂರ್ ಪ್ಯಾಕೇಜ್‌ಗಳು:

ಮೈಸೂರಿನಿಂದ ಪ್ರವಾಸಿಗರ ಅನುಕೂಲಕ್ಕಾಗಿ KSRTC ಒಂದು ದಿನದ ಪ್ಯಾಕೇಜ್ ಟೂರ್‌ಗಳನ್ನು ಕೂಡ ವ್ಯವಸ್ಥೆ ಮಾಡಿದೆ,
“ಗಿರಿದರ್ಶಿನಿ” – ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗ ಬೆಟ್ಟ, ನಂಜನಗೂಡು, ಚಾಮುಂಡಿ ಬೆಟ್ಟ (ವಯಸ್ಕ ₹450 / ಮಕ್ಕಳು ₹300).

“ಜಲದರ್ಶಿನಿ” – ಬೈಲಕುಪ್ಪೆ ಗೋಲ್ಡನ್ ಟೆಂಪಲ್‌, ದುಬಾರೆ, ರಾಜಾಸೀಟ್, ಹಾರಂಗಿ, ಕೆ.ಆರ್.ಎಸ್. (ವಯಸ್ಕ ₹500 / ಮಕ್ಕಳು ₹350).

“ದೇವದರ್ಶಿನಿ” – ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣ (ವಯಸ್ಕ ₹330 / ಮಕ್ಕಳು ₹225).
ಈ ಪ್ಯಾಕೇಜ್‌ಗಳು ಸೆಪ್ಟೆಂಬರ್ 27ರಿಂದ ಅಕ್ಟೋಬರ್ 7ರವರೆಗೆ ಲಭ್ಯ.

ಇತರೆ ಸೌಲಭ್ಯಗಳ ಮಾಹಿತಿ:

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಫ್ಲೈಬಸ್ (FlyBus) ವ್ಯವಸ್ಥೆ.
ಮೈಸೂರು ನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣಗಳಲ್ಲಿ ಮಾಹಿತಿ ಕೇಂದ್ರಗಳು ಕಾರ್ಯ ನಿರ್ವಹಣೆ.
ಮುಂಗಡ ಟಿಕೆಟ್‌ಗಳಿಗೆ 5% ರಿಯಾಯಿತಿ ಹಾಗೂ ಎರಡು ಬದಿ ಟಿಕೆಟ್ ಕಾಯ್ದಿರಿಸಿದವರಿಗೆ 10% ರಿಯಾಯಿತಿ.
ಆನ್‌ಲೈನ್ ಬುಕ್ಕಿಂಗ್: www.ksrtc.karnataka.gov.in ಅಥವಾ KSRTC ಮೊಬೈಲ್ ಆಪ್ https://www.ksrtc.karnataka.gov.in)  ಮೂಲಕ.
ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಪುದುಚೇರಿ ರಾಜ್ಯಗಳ ವಿವಿಧ ಕೌಂಟರ್‌ಗಳಲ್ಲಿ ಗಣಕೀಕೃತ ಮುಂಗಡ ಟಿಕೆಟ್‌ ಸೇವೆ.

ಒಟ್ಟಾರೆಯಾಗಿ, ಈ ಬಾರಿ ಮೈಸೂರು ದಸರಾ ಹಬ್ಬಕ್ಕೆ KSRTC ನೀಡುತ್ತಿರುವ ಹೆಚ್ಚುವರಿ ಬಸ್‌ ಸೇವೆ, ಪ್ರವಾಸಿ ಪ್ಯಾಕೇಜ್‌ಗಳು ಹಾಗೂ ಸೌಲಭ್ಯಗಳು ಪ್ರಯಾಣಿಕರ ಅನುಭವವನ್ನು ಸುಗಮ ಹಾಗೂ ಸ್ಮರಣೀಯಗೊಳಿಸಲಿವೆ.

WhatsApp Image 2025 09 05 at 11.51.16 AM 1

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories