Picsart 25 09 15 23 25 08 338 scaled

ರಾಯಲ್ ಎನ್‌ಫೀಲ್ಡ್ ಬೈಕ್‌ಗಳ GST ಪರಿಷ್ಕರಣೆ ನಂತರ ಭಾರೀ ಬೆಲೆ ಇಳಿಕೆ; ಯಾವ ಬೈಕ್ ಗೆ ಎಷ್ಟು ಬೆಲೆ

Categories:
WhatsApp Group Telegram Group

ರಾಯಲ್ ಎನ್‌ಫೀಲ್ಡ್ ಬೈಕ್‌ಗಳ GST ಪರಿಷ್ಕರಣೆ ನಂತರ ಭಾರೀ ಬೆಲೆ ಇಳಿಕೆ; ಹಂಟರ್, ಕ್ಲಾಸಿಕ್ 350 ಮಾದರಿಗಳ ಹೊಸ ಬೆಲೆ ವಿವರ

ಭಾರತೀಯ ಮೋಟಾರ್‌ಸೈಕಲ್‌ ತಯಾರಿಕಾ ದಿಗ್ಗಜ ರಾಯಲ್ ಎನ್‌ಫೀಲ್ಡ್ (Royal Enfield), ದೇಶಾದ್ಯಂತ ಮೋಟಾರ್‌ಸೈಕಲ್ ಪ್ರಿಯರಲ್ಲಿ ಅಪಾರ ಜನಪ್ರಿಯತೆ ಹೊಂದಿರುವ ಕಂಪನಿ. ವಿಶೇಷವಾಗಿ ಭಾರತೀಯ ರಸ್ತೆಗಳಿಗೆ ಹೊಂದಿಕೊಳ್ಳುವ ಶಕ್ತಿ, ದೃಢತೆ ಮತ್ತು ಕ್ಲಾಸಿಕ್ ವಿನ್ಯಾಸಕ್ಕಾಗಿ ಪ್ರಸಿದ್ಧವಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಜಿಎಸ್‌ಟಿ (Goods and Services Tax) ದರಗಳಲ್ಲಿ ಮಹತ್ತರ ಪರಿಷ್ಕರಣೆ ಘೋಷಿಸಿದ್ದು, ಇದರಿಂದಾಗಿ ವಾಹನಗಳ ಮೇಲಿನ ತೆರಿಗೆ ಹೊರೆ ಕಡಿಮೆಯಾಗವ ನಿರೀಕ್ಷೆ ಇದೆ. ಸೆಪ್ಟೆಂಬರ್ 22, 2025ರಿಂದ ಜಾರಿಗೆ ಬರುವ ಈ ಹೊಸ GST ದರ ಸುಧಾರಣೆ ಭಾರತದಲ್ಲಿ ಆಟೋ ಇಂಡಸ್ಟ್ರಿಯಲ್ಲಿ ಅರೋಗ್ಯಕರ ಮಾರುಕಟ್ಟೆ ಬದಲಾವಣೆ ತರಲಿದೆ. ಇಂತಹ ಸಂದರ್ಭದಲ್ಲೇ, ರಾಯಲ್ ಎನ್‌ಫೀಲ್ಡ್ ತನ್ನ 350CC ಶ್ರೇಣಿಯ ಬೈಕ್‌ಗಳ ಬೆಲೆಯಲ್ಲಿ ಭಾರೀ ಇಳಿಕೆಯನ್ನು ಘೋಷಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೊಸ GST ದರ ಪದ್ದತಿಯ ಪರಿಣಾಮ:

GST ಪರಿಷ್ಕರಣೆಯ ಹಿನ್ನಲೆಯಲ್ಲಿ, ಈಗಾಗಲೇ 2 ಮಾತ್ರ GST ಶ್ರೇಣಿಗಳನ್ನು ಉಳಿಸಿಕೊಂಡು, ಅನೇಕ ವಸ್ತುಗಳ ದರಗಳು ಕಡಿಮೆಯಾಗಲು ನಿರ್ಧರಿಸಲಾಗಿದೆ. ಈ ನವೀನ ಕ್ರಮವು ಆಟೋ, ಕಾರು ಮತ್ತು ಎಸ್‌ಯುವಿ ತಯಾರಕರಿಗೆ ತನ್ನ ಉತ್ಪನ್ನ ದರವನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಿಕೊಳ್ಳಲು ಸಹಾಯಕವಾಗಲಿದೆ. ರಾಯಲ್ ಎನ್‌ಫೀಲ್ಡ್ ತನ್ನ ಗ್ರಾಹಕರಿಗೆ ಸಂಪೂರ್ಣ ಪ್ರಯೋಜನವನ್ನು ಹಸ್ತಾಂತರಿಸುವುದಾಗಿ ತಿಳಿಸಿದೆ.

350cc ಶ್ರೇಣಿಯ ಬೈಕ್‌ಗಳ ಹೊಸ ಬೆಲೆ ವಿವರಗಳು ಹೀಗಿದೆ:

ರಾಯಲ್ ಎನ್‌ಫೀಲ್ಡ್ ತನ್ನ ಜನಪ್ರಿಯ 350CC ಬೈಕ್‌ ಶ್ರೇಣಿಯ ಬೆಲೆಯನ್ನು 22,000 ರೂ.ಗಳವರೆಗೆ ಇಳಿಸುವುದಾಗಿ ಘೋಷಿಸಲಾಗಿದೆ. ಇದರಿಂದಾಗಿ, ಈ ಶ್ರೇಣಿಯಲ್ಲಿನ ಬೈಕ್‌ಗಳನ್ನು ಹೆಚ್ಚು ಜನರು ಖರೀದಿಸಲು ಸಾಧ್ಯವಾಗುವುದು.

ಇನ್ನು ಯಾವೆಲ್ಲಾ ಬೈಕ್‌ಗಳಿಗೆ ಎಷ್ಟು ಬೆಲೆ ಕಡಿಮೆ ಆಗಲಿದೆ ಎಂಬ ಮಾಹಿತಿ ಹೀಗಿದೆ:

ಬೈಕ್ ಮಾದರಿ: ಹಂಟರ್ 350, ಎಂಜಿನ್ ಸಾಮರ್ಥ್ಯ – 349cc, ಈಗಿನ ಬೆಲೆ – RS 1.49,900, ನಿರೀಕ್ಷಿತ ಹೊಸ ಬೆಲೆ- RS 1,34,910, ಎಷ್ಟು ಕಡಿಮೆ ಆಗಲಿದೆ- RS14,990.

ಬೈಕ್ ಮಾದರಿ: ಕ್ಲಾಸಿಕ್ 350, ಎಂಜಿನ್ ಸಾಮರ್ಥ್ಯ – 349cc, ಈಗಿನ ಬೆಲೆ -RS 1,93,000, ನಿರೀಕ್ಷಿತ ಹೊಸ ಬೆಲೆ- RS 1,73,000, ಎಷ್ಟು ಕಡಿಮೆ ಆಗಲಿದೆ-RS20,000.

ಬೈಕ್ ಮಾದರಿ: Metror 350, ಎಂಜಿನ್ ಸಾಮರ್ಥ್ಯ – 349cc, ಈಗಿನ ಬೆಲೆ -RS 2,05,191, ನಿರೀಕ್ಷಿತ ಹೊಸ ಬೆಲೆ- RS 1,85,191, ಎಷ್ಟು ಕಡಿಮೆ ಆಗಲಿದೆ- RS 20,000.

ಬೈಕ್ ಮಾದರಿ: ಬುಲೆಟ್ 350, ಎಂಜಿನ್ ಸಾಮರ್ಥ್ಯ – 349cc, ಈಗಿನ ಬೆಲೆ -RS 1,73,000, ನಿರೀಕ್ಷಿತ ಹೊಸ ಬೆಲೆ- RS 1,57,000, ಎಷ್ಟು ಕಡಿಮೆ ಆಗಲಿದೆ- RS17,000.

ಬೈಕ್ ಮಾದರಿ: ಗೋನಾ ಕ್ಲಾಸಿಕ್ 350, ಎಂಜಿನ್ ಸಾಮರ್ಥ್ಯ – 349cc, ಈಗಿನ ಬೆಲೆ -RS 2,35,000, ನಿರೀಕ್ಷಿತ ಹೊಸ ಬೆಲೆ- RS 2,11,500, ಎಷ್ಟು ಕಡಿಮೆ ಆಗಲಿದೆ- RS 23,500.

ಇನ್ನು, ಈ GST ಕಡಿತ ಕ್ರಮದಿಂದಾಗಿ, ರಾಯಲ್ ಎನ್‌ಫೀಲ್ಡ್‌ನ 350CC ಸರಣಿಯು ಹೆಚ್ಚಿನ ಗ್ರಾಹಕರಿಗೆ ತಲುಪಲು ಸಾಧ್ಯವಾಗಲಿದೆ. ಇದರಿಂದ ದೇಶಾದ್ಯಂತ ಮೋಟಾರ್‌ಸೈಕಲ್ ಪ್ರಿಯರಿಗೆ ಕಡಿಮೆ ಬೆಲೆಯಲ್ಲಿ  ಪ್ರಯಾಣಿಸಲು ಅವಕಾಶ ಸಿಗುತ್ತದೆ. ಕಂಪನಿ ತಿಳಿಸಿರುವಂತೆ, 350CC ಕ್ಕಿಂತ ಹೆಚ್ಚಿನ ಶ್ರೇಣಿಯ ಬೈಕ್‌ಗಳ ಬೆಲೆಗಳನ್ನು ಕೂಡ ಇತ್ತೀಚಿನ ಜಿಎಸ್‌ಟಿ ದರಗಳಿಗೆ ಅನುಗುಣವಾಗಿ ಶೀಘ್ರದಲ್ಲೇ ಪರಿಷ್ಕರಿಸಲಾಗುವುದು. ಸೆಪ್ಟೆಂಬರ್ 22, 2025ರಿಂದ ಈ ಹೊಸ ಬೆಲೆಗಳಲ್ಲಿ ಎಕ್ಸ್-ಶೋ ರೂಂ ಮೋಟಾರ್‌ಸೈಕಲ್‌ಗಳು ಗ್ರಾಹಕರಿಗೆ ಲಭ್ಯವಾಗಲಿವೆ.

ಒಟ್ಟಾರೆಯಾಗಿ, ಆಟೋ ಮತ್ತು ಮೋಟಾರ್‌ಸೈಕಲ್ ಪ್ರಿಯರಿಗೆ ಇದು ದೊಡ್ಡ ಆರ್ಥಿಕ ಅವಕಾಶ. ವಿಶೇಷವಾಗಿ ಮದ್ಯಮ ವರ್ಗದ ಗ್ರಾಹಕರಿಗೆ ಕೀಳ್ಮಟ್ಟದ ಬೆಲೆಯಲ್ಲಿ ರಾಯಲ್ ಎನ್‌ಫೀಲ್ಡ್ 350CC ಮಾದರಿಗಳನ್ನು ಖರೀದಿಸುವ ಅವಕಾಶ ಸಿಗಲಿದೆ. GST ದರ ಪರಿಷ್ಕರಣೆ ದೇಶದ ಮೋಟಾರ್ ಇಂಡಸ್ಟ್ರಿಗೆ ಶಕ್ತಿ ತುಂಬುವ ಮಹತ್ವದ ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಉತ್ಪಾದಕರು ಈ ಪ್ರಯೋಜನವನ್ನು ಗ್ರಾಹಕರಿಗೆ ಹಸ್ತಾಂತರಿಸಲು ಮುಂಚೆ ಬರುವ ನಿರೀಕ್ಷೆ ಇದೆ.

WhatsApp Image 2025 09 05 at 11.51.16 AM 12

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories