ksrp recruitment

ಕರ್ನಾಟಕದಲ್ಲಿ 2000ಕ್ಕೂ ಹೆಚ್ಚು ಕೆಎಸ್‌ಆರ್‌ಪಿ ಹುದ್ದೆಗಳ ಭರ್ತಿ: ಸರ್ಕಾರದಿಂದ ನೇರ ನೇಮಕಾತಿ ಆದೇಶ

Categories:
WhatsApp Group Telegram Group

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್‌ನಲ್ಲಿ ಕೆಎಸ್‌ಆರ್‌ಪಿ ಸ್ಪೆಷಲ್ ರಿಸರ್ವ್ ಪೊಲೀಸ್ ಕಾನ್‌ಸ್ಟೇಬಲ್ (ಸ್ಥಳೀಯೇತರ) 1500 ಹುದ್ದೆಗಳು, ಸ್ಥಳೀಯ ವೃಂದದ 366 ಹುದ್ದೆಗಳು ಹಾಗೂ ಐಆರ್‌ಬಿ ಮುನಿರಾಬಾದ್ ಘಟಕದ 166 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ಮೊದಲು ಕಳುಹಿಸಲಾಗಿದ್ದ ಕೆಎಸ್‌ಆರ್‌ಪಿ ಸ್ಪೆಷಲ್ ಆರ್‌ಪಿಸಿ (ಪುರುಷ ಮತ್ತು ಮಹಿಳಾ) 1500 ಹುದ್ದೆಗಳು, ಸ್ಥಳೀಯ ವೃಂದದ 445 ಹುದ್ದೆಗಳು ಮತ್ತು ಐಆರ್‌ಬಿ ಮುನಿರಾಬಾದ್ ಘಟಕದ 220 ಹುದ್ದೆಗಳ ನೇರ ಮತ್ತು ಸಮತಲ ವರ್ಗೀಕರಣ ವಿವರಗಳನ್ನು ತಾತ್ಕಾಲಿಕವಾಗಿ ಬದಿಗಿಟ್ಟು, ಹೊಸ ವರ್ಗೀಕರಣಕ್ಕೆ ಸೂಚನೆ ನೀಡಲಾಗಿದೆ.

ಫ್ಯಾಕ್ಸ್ ಸಂದೇಶದಲ್ಲಿ ಉಲ್ಲೇಖಿಸಿರುವಂತೆ, ಘಟಕವಾರು ವಿವರಗಳೊಂದಿಗೆ ಕೆಎಸ್‌ಆರ್‌ಪಿ ಸ್ಪೆಷಲ್ ಆರ್‌ಪಿಸಿ (ಸ್ಥಳೀಯೇತರ) 1500 ಹುದ್ದೆಗಳು, ಸ್ಥಳೀಯ ವೃಂದದ 366 ಹುದ್ದೆಗಳು ಮತ್ತು ಐಆರ್‌ಬಿ ಮುನಿರಾಬಾದ್ ಘಟಕದ 166 ಹುದ್ದೆಗಳಿಗೆ ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 02 ಸೆಹಿಮ 2025 ದಿನಾಂಕ 03-09-2025ರ ಪ್ರಕಾರ ರೋಸ್ಟರ್ 01ರಿಂದ ಆರಂಭಿಸಿ, ಕ್ರೀಡಾಪಟುಗಳಿಗೆ ಶೇ.3 ಮೀಸಲಾತಿ ಹೊರತುಪಡಿಸಿ, ಸಾಮಾನ್ಯ ವಿಭಾಗದಡಿ ಗುರುತಿಸಲಾದ ಹುದ್ದೆಗಳ ನೇರ ಮತ್ತು ಸಮತಲ ವರ್ಗೀಕರಣ ವಿವರಗಳನ್ನು ಆದ್ಯತಾ ಕ್ರಮದಲ್ಲಿ ಕಛೇರಿಗೆ ಕಳುಹಿಸಬೇಕು. ಇದನ್ನು ಇ-ಮೇಲ್ ಮೂಲಕ [email protected] ವಿಳಾಸಕ್ಕೆ ತಕ್ಷಣವೇ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಈ ಮಾಹಿತಿ ಅತ್ಯಂತ ಜರೂರಿ ಎಂದು ಪರಿಗಣಿಸಲಾಗಿದೆ.

011
022
033
WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories