ಉದ್ಯೋಗಿ ಮತ್ತು ನಿಯೋಜಕರಿಂದ ಸಮಾನ ಕೊಡುಗೆಯಿಂದ ನಿರ್ಮಾಣವಾಗುವ ಉದ್ಯೋಗಿಗಳ ಭವಿಷ್ಯ ನಿಧಿ (EPF), ಪ್ರತಿ ಸಂಬಳ ಪಡೆಯುವ ಭಾರತೀಯರ ಭವಿಷ್ಯದ ಆರ್ಥಿಕ ಭದ್ರತೆಯ ಅಡಿಗಲ್ಲು. ನಿವೃತ್ತಿಯ ನಂತರದ ಜೀವನವನ್ನು ಸುರಕ್ಷಿತ ಮತ್ತು ನಿರಾಳವಾಗಿಸಲು ಈ ಯೋಜನೆಯು ಅತ್ಯಂತ ಮಹತ್ವದ್ದಾಗಿದೆ. ನಿಮ್ಮ EPF ಖಾತೆಯಲ್ಲಿರುವ ಹಣ ಮತ್ತು ನಿವೃತ್ತಿ ಬಳಿಕ ನೀವು ಪಡೆಯಬಹುದಾದ ಮಾಸಿಕ ಪಿಂಚಣಿಯನ್ನು EPFO ಯ ಅಧಿಕೃತ ಕ್ಯಾಲ್ಕುಲೇಟರ್ ಸಹಾಯದಿಂದ ಸುಲಭವಾಗಿ ಲೆಕ್ಕ ಹಾಕಿ, ನಿಮ್ಮ ಭವಿಷ್ಯವನ್ನು ಈಗಿಂದಲೇ ಯೋಜಿಸಬಹುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ನಿವೃತ್ತಿ ನಂತರ ಎಷ್ಟು ಪಿಂಚಣಿ?
ಸಂಬಳ ಪಡೆಯುವ ಉದ್ಯೋಗಿಗಳು EPF ಖಾತೆ ಹೊಂದಿರುತ್ತಾರೆ. ಈ ಖಾತೆಯಲ್ಲಿರುವ ಹಣಕ್ಕೆ ಎಷ್ಟು ಬಡ್ಡಿ ಸಿಕ್ಕಿದೆ ಮತ್ತು ನಿವೃತ್ತಿ ನಂತರ ಎಷ್ಟು ಪಿಂಚಣಿ ಪಡೆಯಬಹುದು ಎಂಬುದನ್ನು EPF ಕ್ಯಾಲ್ಕುಲೇಟರ್ ಬಳಸಿ ಸುಲಭವಾಗಿ ಲೆಕ್ಕ ಹಾಕಬಹುದು.
ಉದ್ಯೋಗಿಗಳ ಭವಿಷ್ಯ ನಿಧಿ (EPF)
ಭವಿಷ್ಯ ಮತ್ತು ನಿವೃತ್ತಿ ಜೀವನಕ್ಕಾಗಿ ಉಳಿತಾಯ ಮಾಡುವುದು ಅಗತ್ಯ. ತಿಂಗಳ ಸಂಬಳ ಪಡೆಯುವ ಎಲ್ಲರೂ ಉದ್ಯೋಗಿಗಳ ಭವಿಷ್ಯ ನಿಧಿ (EPF) ಖಾತೆ ಹೊಂದಿರುತ್ತಾರೆ. ನೀವು ಹೂಡಿಕೆ ಮಾಡಿದ ಹಣ ಎಷ್ಟು ಗಳಿಸಬಲ್ಲದು ಎಂಬುದನ್ನು ಲೆಕ್ಕ ಹಾಕುವುದು ಮುಖ್ಯ.
EPF ಕ್ಯಾಲ್ಕುಲೇಟರ್
EPF ಕ್ಯಾಲ್ಕುಲೇಟರ್ ಮೂಲಕ ಈ ಲೆಕ್ಕಾಚಾರವನ್ನು ಸುಲಭವಾಗಿ ಮಾಡಬಹುದು. ಪ್ರತಿ ತಿಂಗಳು ಉದ್ಯೋಗಿಯ ಸಂಬಳದ ಒಂದು ಭಾಗವನ್ನು EPF ಖಾತೆಗೆ ಜಮೆ ಮಾಡಲಾಗುತ್ತದೆ. ಅದೇ ರೀತಿ, ಉದ್ಯೋಗದಾತರು (ಕಂಪನಿ) ಕೂಡ ನಿರ್ದಿಷ್ಟ ಮೊತ್ತವನ್ನು ಈ ಖಾತೆಗೆ ಜಮೆ ಮಾಡುತ್ತಾರೆ. ನಿಮ್ಮ EPF ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದನ್ನು ಈ ಕ್ಯಾಲ್ಕುಲೇಟರ್ ಬಳಸಿ ಲೆಕ್ಕ ಹಾಕಬಹುದು.
EPF ಖಾತೆಗೆ ನಿಮ್ಮ ಕೊಡುಗೆ ಎಷ್ಟು?
ಒಬ್ಬ ಉದ್ಯೋಗಿ ತನ್ನ ಮಾಸಿಕ ಸಂಬಳದ 12% ರಷ್ಟನ್ನು EPF ಗೆ ಕೊಡುಗೆಯಾಗಿ ನೀಡಬೇಕಾಗುತ್ತದೆ. ಉದ್ಯೋಗದಾತ ಕಂಪನಿಯು ಕೂಡ ಇಷ್ಟೇ ಪ್ರಮಾಣದಲ್ಲಿ (12%) ಕೊಡುಗೆ ನೀಡುತ್ತದೆ. ಈ 12% ರಲ್ಲಿ 8.33% ಉದ್ಯೋಗಿಗಳ ಪಿಂಚಣಿ ಯೋಜನೆಗೆ (EPS) ಮತ್ತು 3.67% ಉದ್ಯೋಗಿಗಳ ಭವಿಷ್ಯ ನಿಧಿಗೆ (EPF) ಹೋಗುತ್ತದೆ.
EPF ಕ್ಯಾಲ್ಕುಲೇಟರ್ ಎಂದರೇನು?
ನೀವು ನಿವೃತ್ತಿಯಾದ ನಂತರ ನಿಮ್ಮ EPF ಖಾತೆಯಲ್ಲಿ ಒಟ್ಟು ಎಷ್ಟು ಹಣವಿದೆ ಎಂಬುದನ್ನು ಈ ಕ್ಯಾಲ್ಕುಲೇಟರ್ ತೋರಿಸುತ್ತದೆ. ಇದರ ಮೂಲಕ ನಿಮ್ಮ ಮತ್ತು ಉದ್ಯೋಗದಾತರ ಕೊಡುಗೆ ಮತ್ತು ಅದಕ್ಕೆ ಸಿಕ್ಕ ಬಡ್ಡಿಯನ್ನು ಒಟ್ಟಿಗೆ ಲೆಕ್ಕ ಹಾಕಲು ಸಾಧ್ಯವಾಗುತ್ತದೆ.
EPF ಲೆಕ್ಕಾಚಾರದ ಸೂತ್ರ
ನಿಮ್ಮ ವಯಸ್ಸು, ಮೂಲ ಮಾಸಿಕ ಸಂಬಳ, PF ಕೊಡುಗೆಯ ಶೇಕಡಾವಾರು, ಕಂಪನಿಯ ಕೊಡುಗೆಯ ಶೇಕಡಾವಾರು, ಅಂದಾಜು ಸರಾಸರಿ ವಾರ್ಷಿಕ ಸಂಬಳ ಏರಿಕೆಯ ಶೇಕಡಾವಾರು, ನಿವೃತ್ತಿ ವಯಸ್ಸು ಮತ್ತು ಬಡ್ಡಿದರ – ಈ ಮಾಹಿತಿಗಳನ್ನು ನೀಡಿದ ನಂತರ ನಿವೃತ್ತಿಯ ಸಮಯದಲ್ಲಿ ನಿಮ್ಮ ಉಳಿತಾಯವನ್ನು ಪರಿಶೀಲಿಸಬಹುದು.
ಮೂಲ ಸಂಬಳ ಮತ್ತು DA
ಉದ್ಯೋಗಿ ತನ್ನ EPF ಖಾತೆಗೆ ಮೂಲ ಸಂಬಳ ಮತ್ತು ದಿನಬಳಕೆ ಭತ್ಯೆ (DA) ಯ ಗರಿಷ್ಠ 12% ರಷ್ಟನ್ನು ಕೊಡುಗೆಯಾಗಿ ನೀಡಬಹುದು. ಉದ್ಯೋಗದಾತ ಕಂಪನಿಯು ಕೂಡ ಇಷ್ಟೇ ಪ್ರಮಾಣದಲ್ಲಿ (12%) ಕೊಡುಗೆ ನೀಡುತ್ತದೆ. ಇದರಲ್ಲಿ 8.33% EPS ಗೆ ಮತ್ತು 3.67% ಉದ್ಯೋಗಿಯ EPF ಖಾತೆಗೆ ಹೋಗುತ್ತದೆ.
EPS ಪಿಂಚಣಿ ಸೂತ್ರ
EPS ಪಿಂಚಣಿ ಸೂತ್ರ: ಪಿಂಚಣಿ ಸಂಬಳ X ಪಿಂಚಣಿ ಸೇವೆಯ ವರ್ಷಗಳು / 70.
ನಿಮ್ಮ ನಿವೃತ್ತಿ ದಿನಾಂಕದ ಆಧಾರದ ಮೇಲೆ, ಕೊನೆಯ 60 ತಿಂಗಳ ಸರಾಸರಿ ಪಿಂಚಣಿ ಸಂಬಳವನ್ನು ಬಳಸಿಕೊಂಡು EPS ಪಿಂಚಣಿಯನ್ನು ಲೆಕ್ಕಹಾಕಲಾಗುತ್ತದೆ. ಉದಾಹರಣೆಗೆ, ನೀವು 25ನೇ ವಯಸ್ಸಿನಲ್ಲಿ EPS ಅನ್ನು ಪ್ರಾರಂಭಿಸಿದರೆ ಮತ್ತು 58ನೇ ವಯಸ್ಸಿನಲ್ಲಿ ನಿವೃತ್ತರಾದರೆ, ನಿಮಗೆ ಮಾಸಿಕ 7071 ರೂಪಾಯಿ ಪಿಂಚಣಿ ಬರಬಹುದು [(15000 * 33) / 70].
EPF ಖಾತೆ
ಕನಿಷ್ಠ 20 ಉದ್ಯೋಗಿಗಳನ್ನು ಹೊಂದಿರುವ ಪ್ರತಿಯೊಂದು ಸಂಸ್ಥೆಯು ತನ್ನ ಉದ್ಯೋಗಿಗಳಿಗೆ EPF ಖಾತೆಗಳನ್ನು ತೆರೆಯಬೇಕು. ಕೆಲವು ಸಂಸ್ಥೆಗಳು 20ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿದ್ದರೂ ಸ್ವಯಂಪ್ರೇರಣೆಯಿಂದ EPF ಖಾತೆ ತೆರೆಯಲು ಉದ್ಯೋಗಿಗಳಿಗೆ ಅವಕಾಶ ನೀಡಬಹುದು.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.