Arecanut Price: ರಾಜ್ಯದಲ್ಲಿ ಅಡಿಕೆಯ ಬೆಲೆ ಹಾವು ಏಣಿ ಆಟದಂತೆ ಏರುಪೇರಾಗುತ್ತಿದೆ. ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕು ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಅಡಿಕೆಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ಈ ಪ್ರದೇಶಗಳ ಬೆಳೆಗಾರರು ಸಾಮಾನ್ಯವಾಗಿ ತಮ್ಮ ಉತ್ಪನ್ನವನ್ನು ಶಿವಮೊಗ್ಗ ಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತಾರೆ. ಇಂದು (ಸೆಪ್ಟೆಂಬರ್ 13) ರಂದಿನ ಬೆಲೆ ಎಷ್ಟಿದೆ ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಯ ಬೆಲೆ, ಇಂದು (ಸೆಪ್ಟೆಂಬರ್ 13) ಪ್ರತಿ ಕ್ವಿಂಟಾಲ್ಗೆ ಗರಿಷ್ಠ ರೂ. 60,199 ಆಗಿದೆ. ಏರಿಕೆಯ ನಂತರ ದರವು ಮತ್ತೆ ಸ್ವಲ್ಪಮಟ್ಟಿಗೆ ಇಳಿದಿರುವುದರಿಂದ, ಬೆಳೆಗಾರರ ಮುಖದ ಮಂದಹಾಸವೂ ಕಡಿಮೆಯಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಬೆಲೆ ಮತ್ತೆ ಏರುವುದೆಂಬ ಭರವಸೆಯಿಂದ ರೈತರು ನೋಡುತ್ತಿದ್ದಾರೆ.
ಪ್ರಸ್ತುತ, ಚನ್ನಗಿರಿ ರಾಶಿ ಅಡಿಕೆಯ (ಪ್ರತಿ ಕ್ವಿಂಟಾಲ್ಗೆ) ಗರಿಷ್ಠ ದರ ರೂ. 60,199, ಕನಿಷ್ಠ ದರ ರೂ. 50,100 ಮತ್ತು ಸರಾಸರಿ ಬೆಲೆ ರೂ. 58,899 ಆಗಿದೆ. ಕೆಲವು ದಿನಗಳ ಹಿಂದೆ ಬೆಲೆ ರೂ. 55,000 ಕ್ಕಿಂತ ಕೆಳಗೆ ಇಳಿದಿತ್ತು. ನಂತರ ಅದು ಏರಿಕೆಯಾದರೂ, ಈಗ ಮತ್ತೆ ಇಳಿಮುಖವನ್ನು ಪ್ರಾರಂಭಿಸಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಪ್ರದೇಶದಲ್ಲಿ, ಈ ವರ್ಷ 2025ರ ಜನವರಿ ಕೊನೆಯಲ್ಲಿ ಕ್ವಿಂಟಾಲ್ಗೆ ರೂ. 52,000 ರೊಳಗೆ ಇದ್ದ ಅಡಿಕೆ ಬೆಲೆ ಫೆಬ್ರವರಿಯಲ್ಲಿ ರೂ. 53,000 ಮೀರಿತ್ತು. ಆ ಸಮಯದಿಂದಲೂ ಬೆಲೆ ನಿರಂತರವಾಗಿ ಏರುತ್ತಲೇ ಬಂತು. ಏಪ್ರಿಲ್ ಕೊನೆಯಲ್ಲಿ ಅದು ರೂ. 60,000 ಗಡಿಯನ್ನು ದಾಟಿತ್ತು.
ಮೇ ಪ್ರಾರಂಭದಿಂದ ಜೂನ್ ವರೆಗೆ ಕೆಲವು ವಾರಗಳ ಕಾಲ ಬೆಲೆ ಇಳಿದ ನಂತರ ಮತ್ತೆ ಏರಿತು. ತದನಂತರ, ಜೂನ್ ಮಧ್ಯಭಾಗದಿಂದ ಜುಲೈ ಮೊದಲ ವಾರದವರೆಗೆ ಬೆಲೆ ಇಳಿಮುಖವಾಗುತ್ತಲೇ ಇತ್ತು. 2023ರ ಜುಲೈ ತಿಂಗಳಲ್ಲಿ ಗರಿಷ್ಠ ದರ ರೂ. 57,000 ಅನ್ನು ಮುಟ್ಟಿತ್ತು. ಕಳೆದ ವರ್ಷ 2024ರ ಮೇ ತಿಂಗಳಲ್ಲಿ ಗರಿಷ್ಠ ಬೆಲೆ ರೂ. 55,000 ಆಗಿತ್ತು.
2025ರ ಜುಲೈ ಮೊದಲ ವಾರದವರೆಗೂ ಬೆಲೆ ಇಳಿಯುತ್ತಲೇ ಇತ್ತು. ಜುಲೈಗೆ ಹೋಲಿಸಿದರೆ, ಆಗಸ್ಟ್ ತಿಂಗಳಲ್ಲಿ ಬೆಲೆಯಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿತ್ತು. ಆದರೆ, ತಿಂಗಳ ಕೊನೆಯಲ್ಲಿ ಮತ್ತೆ ಸ್ವಲ್ಪ ಇಳಿದು, ಸೆಪ್ಟೆಂಬರ್ ಮೊದಲ ವಾರದಲ್ಲಿ ಸ್ವಲ್ಪ ಏರಿಕೆಯಾದ ನಂತರ ಮತ್ತೆ ಇಳಿಮುಖ ಪ್ರಾರಂಭವಾಯಿತು. ಎರಡನೇ ವಾರದಲ್ಲಿ ಮತ್ತೆ ಏರಿಕೆಯಾದರೂ, ಮೂರನೇ ವಾರದಲ್ಲಿ (ಈ ವಾರ) ಮತ್ತೆ ಇಳಿಕೆ ಕಂಡಿದೆ. ಇದರಿಂದಾಗಿ ರೈತರಿಗೆ ಚಿಂತೆಯಾಗಿದೆ.
ಈ ಬಾರಿ, ವಾಡಿಕೆಯಂತೆ ಜೂನ್ ಆರಂಭದಲ್ಲೇ ಮುಂಗಾರು ಮಳೆ ಪ್ರಾರಂಭವಾಗಿ ಉತ್ತಮವಾಗಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ, ಉತ್ತಮ ಫಸಲು ಮತ್ತು ಬೆಲೆ ಏರಿಕೆಯ ನಿರೀಕ್ಷೆಯಲ್ಲಿ ಅಡಿಕೆ ಬೆಳೆಗಾರರಿದ್ದಾರೆ. ಮತ್ತೊಂದು ಕಡೆ, ಬೆಳೆದ ಅಡಿಕೆಯನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂಬ ಆತಂಕವೂ ಅವರಲ್ಲಿದೆ. ಈಗ, ಅಡಿಕೆಯನ್ನು ಒಣಗಿಸಿ ಸಂರಕ್ಷಿಸುವುದು ಅವರಿಗೆ ಒಂದು ದೊಡ್ಡ ಸವಾಲಾಗಿದೆ. ಯಾಕೆಂದರೆ, ಅಡಿಕೆ ಒಣಗಿಸುವ ಪ್ರಕ್ರಿಯೆ ಸುಲಭವಲ್ಲ. ಯಾವುದೇ ಸಮಯದಲ್ಲಿ ಮಳೆ ಬಂದು ಅಡಿಕೆ ಹಾಳಾಗುವ ಅಪಾಯವಿದೆ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.