ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿ ಸಮುದಾಯದ ಯುವಕ-ಯುವತಿಯರು ಸ್ವಯಂ ಉದ್ಯೋಗಿ ಆಗಲು ಬಯಸಿದರೆ ಇದು ಒಂದು ಉತ್ತಮ ಅವಕಾಶವಾಗಿದೆ. ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ‘ಉದ್ಯಮಶೀಲತಾ ಅಭಿವೃದ್ಧಿ ಯೋಜನೆ’ (ISB Scheme) ಅಡಿಯಲ್ಲಿ ₹2 ಲಕ್ಷ ರೂಪಾಯಿಗಳವರೆಗೆ ಸಹಾಯಧನವನ್ನು ನೀಡಲಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯೋಜನೆಯ ಮುಖ್ಯ ಅಂಶಗಳು:
ಫಲಾನುಭವಿಗಳು : ಪರಿಶಿಷ್ಟ ಜಾತಿ ಸಮುದಾಯದ ನಿರುದ್ಯೋಗ ಯುವಕ-ಯುವತಿಯರು.
ಉದ್ದೇಶ: ವ್ಯಾಪಾರ ಮತ್ತು ಇತರೆ ಉದ್ಯಮಗಳನ್ನು ಪ್ರಾರಂಭಿಸಲು ಪ್ರೋತ್ಸಾಹಿಸುವುದು.
ಸಹಾಯಧನ: ಘಟಕದ ಒಟ್ಟು ವೆಚ್ಚದ 70% ಅಥವಾ ಗರಿಷ್ಠ ₹2 ಲಕ್ಷ ರೂಪಾಯಿಗಳು (ಎ ಇದರಲ್ಲಿ ಯಾವುದು ಕಡಿಮೆಯೋ ಅದು).
ಬ್ಯಾಂಕ್ ಸಹಭಾಗಿತ್ವ: ಉಳಿದ ಮೊತ್ತವನ್ನು ಬ್ಯಾಂಕ್ ಸಾಲದ ಮೂಲಕ ಪಡೆಯಲು ಸಹಾಯ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತರಾದ ಯುವಕ-ಯುವತಿಯರು ಸೆಪ್ಟೆಂಬರ್ 10, 2025 ರೊಳಗೆ ಕೆಳಗಿನ ವಿಧಾನಗಳಲ್ಲಿ ಒಂದರ ಮೂಲಕ ಅರ್ಜಿ ಸಲ್ಲಿಸಬಹುದು:
- ಆನ್‌ಲೈನ್: ಸೇವಾ ಸಿಂಧು ಪೋರ್ಟಲ್‌ನಲ್ಲಿ https://sevasindhu.karnataka.gov.in ಈ ಲಿಂಕ್‌ನಲ್ಲಿ ಅರ್ಜಿ ಪೂರೈಸಬಹುದು.
- ಆಫ್‌ಲೈನ್: ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಅಥವಾ ಬೆಂಗಳೂರು ಒನ್ ಕೇಂದ್ರಗಳನ್ನು ಸಂಪರ್ಕಿಸಬಹುದು.
ಈ ಯೋಜನೆಯು ಯುವಜನರನ್ನು ಉದ್ಯಮಿಗಳಾಗಿ ರೂಪಿಸುವ ಮತ್ತು ಅವರ ಆರ್ಥಿಕ ಸ್ವಾತಂತ್ರ್ಯಕ್ಕೆ ದಾರಿ ಮಾಡಿಕೊಡುವ ಒಂದು ಉತ್ತಮ ಪ್ರಯತ್ನವಾಗಿದೆ. ಅರ್ಹತೆ ಹೊಂದಿರುವ ಎಲ್ಲಾ ಯುವಕ ಯುವತಿಯರು ಈ ಅವಕಾಶವನ್ನು ಪೂರ್ಣವಾಗಿ ಬಳಸಿಕೊಳ್ಳಬೇಕೆಂದು ಸಮಾಜ ಕಲ್ಯಾಣ ಇಲಾಖೆಯು ಅಪೇಕ್ಷಿಸಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

“ರಕ್ಷಿತ್ ಅವರು NeedsOfPublic.in ನಲ್ಲಿ ಜ್ಯೋತಿಷ್ಯ, ಜೀವನಶೈಲಿ (Lifestyle) ಮತ್ತು ಆರೋಗ್ಯ ವಿಭಾಗದ ಹಿರಿಯ ಲೇಖಕರಾಗಿದ್ದಾರೆ. ಜೀವನಶೈಲಿ ಮತ್ತು ಆಧ್ಯಾತ್ಮಿಕ ವಿಷಯಗಳ ಲೇಖನ ಕ್ಷೇತ್ರದಲ್ಲಿ 4 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಇವರು, ದೈನಂದಿನ ರಾಶಿ ಭವಿಷ್ಯದ ಜೊತೆಗೆ ಚಾಣಕ್ಯ ನೀತಿಯ ಮೌಲ್ಯಗಳು, ಮನೆಮದ್ದುಗಳು (Health Tips), ಕಿಚನ್ ಟಿಪ್ಸ್ ಮತ್ತು ದೈನಂದಿನ ಜೀವನಕ್ಕೆ ಸಹಕಾರಿಯಾಗುವ ಉಪಯುಕ್ತ ಮಾಹಿತಿಗಳ ಬಗ್ಗೆ ಬರೆಯುತ್ತಾರೆ. ಪುರಾತನ ಜ್ಞಾನ ಮತ್ತು ಆಧುನಿಕ ಜೀವನಶೈಲಿಯನ್ನು ಸಮತೋಲನಗೊಳಿಸಿ ಓದುಗರಿಗೆ ಸರಳ ಹಾಗೂ ಪರಿಣಾಮಕಾರಿ ಸಲಹೆಗಳನ್ನು ನೀಡುವುದು ಇವರ ವೈಶಿಷ್ಟ್ಯವಾಗಿದೆ.”


WhatsApp Group




