ಬೆಂಗಳೂರು, August 28: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಗೃಹಕಚೇರಿ ಕೃಷ್ಣಾದಲ್ಲಿ ಸಹಕಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ರಾಜೀನಾಮೆ ನೀಡಿದ ನಂತರ ನಡೆಯುವ ಮೊದಲ ಪ್ರಗತಿ ಪರಿಶೀಲನಾ ಸಭೆ ಇದಾಗಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ರೈತರಿಗೆ ಪ್ರಮುಖ ಘೋಷಣೆಗಳು:
ಸಭೆಯಲ್ಲಿ ರೈತರಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಪ್ರಸ್ತುತ ಸಾಲಿನ ವರ್ಷದಲ್ಲಿ ರಾಜ್ಯದ 37 ಲಕ್ಷ ರೈತರಿಗೆ ₹28,000 ಕೋಟಿ ರೂಪಾಯಿಗಳ ಕೃಷಿ ಸಾಲ ವಿತರಿಸುವ ಗುರಿ ಹೊಂದಿಸಲಾಗಿದೆ. ಇದರ ಭಾಗವಾಗಿ, ಜುಲೈ ಮಾಸದ ಅಂತ್ಯದ ವೇಳೆಗೆ ಈಗಾಗಲೇ 8,69,284 ರೈತರಿಗೆ ₹8,362.68 ಕೋಟಿ ರೂಪಾಯಿಗಳ ಸಾಲ ವಿತರಣೆ ಮಾಡಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಪ್ರತಿ ಜಿಲ್ಲೆಯಲ್ಲೂ ರೈತರಿಗೆ ಸಕಾಲದಲ್ಲಿ ಸಾಲ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಹಣಕಾಸು ಮತ್ತು ನಿರ್ವಹಣೆ:
- NABARD ರಿಯಾಯಿತಿ ಬಡ್ಡಿ ದರದ ಸಾಲದ ಮಿತಿಯನ್ನು ಹಿಂದಿನ ₹5,600 ಕೋಟಿಯಿಂದ ₹3,236.11 ಕೋಟಿಗೆ ಕಡಿಮೆ ಮಾಡಲಾಗಿದೆ (ಸುಮಾರು 42.21% ಕಡಿತ).
- ಇದ್ದಕ್ಕಿದ್ದಂತೆ ಈ ಕಡಿತಕ್ಕೊಳಪಟ್ಟರೂ, ಸಾಲ ವಿತರಣೆಯಲ್ಲಿ 96.07% ಪ್ರಗತಿ ಸಾಧಿಸಲಾಗಿದೆ.
- 2024-25 ಸಾಲಿನ ವರ್ಷದಲ್ಲಿ 29,75,598 ರೈತರಿಗೆ ಒಟ್ಟು ₹25,939.09 ಕೋಟಿ ರೂಪಾಯಿಗಳ ಸಾಲ ನೀಡಲಾಗಿದೆ.
ಸಹಕಾರಿ ಸಂಘಗಳ ಸ್ಥಿತಿ:
- ರಾಜ್ಯದಲ್ಲಿ 28,516 ಸಹಕಾರಿ ಸಂಘಗಳು ಲಾಭದಲ್ಲಿವೆ, ಆದರೆ 14,670 ಸಂಘಗಳು ನಷ್ಟದಲ್ಲಿವೆ.
- ಸಾಲ ವಸೂಲಿ ಸರಿಯಾಗಿ ಆಗದ ಕಾರಣ ಅನೇಕ ಸಂಘಗಳು ನಷ್ಟ ಅನುಭವಿಸುತ್ತಿವೆ. ಅಂತಹ ಸಂಘಗಳು ಸಾಲ ವಸೂಲಿಗೆ ಕೈಗೊಂಡ ಕ್ರಮಗಳ ಕುರಿತು ಪರಿಶೀಲನೆ ನಡೆಸಬೇಕು.
- ನಷ್ಟದಲ್ಲಿರುವ 2,200 ಹಾಲು ಉತ್ಪಾದಕ ಸಹಕಾರಿ ಸಂಘಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಹಾಲು ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ವೆಚ್ಚ ನಿರ್ವಹಣೆಯ ಮೇಲೆ ಕಟ್ಟುನಿಟ್ಟು ನಿಗಾ ಇಡುವಂತೆ ಸಂಘಗಳ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ.
ಇತರೆ ನಿರ್ಧಾರಗಳು:
- ಸಹಕಾರ ಸಂಘಗಳ ಹಿರಿಯ ನಿರೀಕ್ಷಕರ 126 ಹುದ್ದೆಗಳು ಮತ್ತು ನಿರೀಕ್ಷಕರ 403 ಹುದ್ದೆಗಳು ಖಾಲಿ ಇರುವುದರಿಂದ, ಅವುಗಳ ಭರ್ತಿಗೆ ತ್ವರಿತ ಕ್ರಮ ಕೈಗೊಳ್ಳಬೇಕು.
- ಸಹಕಾರ ಸಂಘಗಳ ನಿಬಂಧಕರ ಕಚೇರಿಯ ಸೇವೆಗಳನ್ನು ಪೂರ್ಣಗೊಳಿಸಲು ತ್ವರಿತ ಗಣಕೀಕರಣದ ಕಾರ್ಯಕ್ಕೆ ಆದ್ಯತೆ ನೀಡಬೇಕು.
- ರಾಜ್ಯದಲ್ಲಿ 7,074 ಗಿರವಿದಾರ ಸಂಸ್ಥೆಗಳು ಮತ್ತು 1,468 ಚೀಟಿ ಸಂಸ್ಥೆಗಳು ನೋಂದಾಯಿತವಾಗಿವೆ. ಅನಧಿಕೃತವಾಗಿ ಕಾರ್ಯನಿರ್ವಹಿಸುವ ಅಂತಹ ಸಂಸ್ಥೆಗಳ ಮೇಲೆ ಕಟ್ಟುನಿಟ್ಟು ನಿಗಾ ಇಡುವಂತೆ ಸೂಚಿಸಲಾಗಿದೆ.
ರಾಜ್ಯದ ಸಹಕಾರಿ ವ್ಯವಸ್ಥೆಯನ್ನು ಬಲಪಡಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಸಹಕಾರ ಇಲಾಖೆಯ ಅಧಿಕಾರಿಗಳು ಕಾನೂನು ಪ್ರಕಾರ ಕಟ್ಟುನಿಟ್ಟಿನ ನಡವಳಿಕೆ ಅನುಸರಿಸುವಂತೆ ಸೂಚನೆ ನೀಡಲಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.