ಮನೆ, ಅಪಾರ್ಟ್ಮೆಂಟ್ಗಳಿಗೆ ನೇರ ಆನ್ಲೈನ್ ವಿದ್ಯುತ್ ಸಂಪರ್ಕ: ಬೆಸ್ಕಾಂನ ಹೊಸ ವ್ಯವಸ್ಥೆಗೆ ಸ್ಪಷ್ಟನೆ ಅಗತ್ಯವಿದೆ
ನಗರೀಕರಣದ ವೇಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮನೆ, ಅಪಾರ್ಟ್ಮೆಂಟ್ ಅಥವಾ ವಾಣಿಜ್ಯ ಕಟ್ಟಡಗಳಿಗೆ (Apartment or Commercial buildings) ವಿದ್ಯುತ್ ಸಂಪರ್ಕ ಪಡೆಯುವುದು ಜನಜೀವನದಲ್ಲಿ ಅತ್ಯಂತ ಅವಶ್ಯಕ. ಇದುವರೆಗೆ ಹೊಸ ಸಂಪರ್ಕ ಪಡೆಯುವ ಪ್ರಕ್ರಿಯೆ ಗುತ್ತಿಗೆದಾರರ ಮೂಲಕವೇ ಸಾಗಬೇಕಾಗಿದ್ದರಿಂದ ಸಾಮಾನ್ಯ ನಾಗರಿಕರು ಅನೇಕ ಒದ್ದಾಟಗಳನ್ನು ಅನುಭವಿಸುತ್ತಿದ್ದರು. ವಿಶೇಷವಾಗಿ ಆಕ್ಯುಪೆನ್ಸಿ ಸರ್ಟಿಫಿಕೇಟ್ (Occupancy Certificate) ಹಾಗೂ ಕಂಪ್ಲೀಷನ್ ಸರ್ಟಿಫಿಕೇಟ್ (Complication Certificate) ಇಲ್ಲದೆ ಸಂಪರ್ಕ ಪಡೆಯಲು ಸಾಧ್ಯವಿಲ್ಲವೆಂಬ ನಿಯಮದ ಕಾರಣದಿಂದ ಅನೇಕ ಮನೆ ಮಾಲೀಕರು ಕಂಗಾಲಾಗಿದ್ದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಆದರೆ ಇತ್ತೀಚೆಗೆ ಗ್ರಾಹಕರು ಕೊಟ್ಟಿರುವ ಮಾಹಿತಿಯ ಪ್ರಕಾರ, ಈಗ ಬೆಸ್ಕಾಂ (BESCOM) ನಿಂದ ನೇರವಾಗಿ, ಆನ್ಲೈನ್ ಮೂಲಕವೇ ಹೊಸ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ತಾತ್ಕಾಲಿಕ ಸಂಪರ್ಕ ಪಡೆದಿದ್ದರೂ ಅದನ್ನು ಶಾಶ್ವತವಾಗಿ ಪರಿವರ್ತಿಸಲು ಹಾಗೂ ಹೊಸ ಸಂಪರ್ಕ ಪಡೆಯಲು ಈ ಆನ್ಲೈನ್ ವ್ಯವಸ್ಥೆ (Online system) ಉಪಯೋಗವಾಗುತ್ತಿದೆ ಎಂದು ಅವರು ದಾಖಲೆಗಳನ್ನು ಸಹ ಹಂಚಿಕೊಂಡಿದ್ದಾರೆ.
ಸರ್ಕಾರ ಅಥವಾ ಬೆಸ್ಕಾಂ ಅಧಿಕೃತ ಸ್ಪಷ್ಟನೆ ನೀಡಿಲ್ಲ:
ಈ ಹೊಸ ಬೆಳವಣಿಗೆಯ ಬಗ್ಗೆ ರಾಜ್ಯ ಸರ್ಕಾರದಿಂದಾಗಲಿ, ಬೆಸ್ಕಾಂನಿಂದಾಗಲಿ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ. ಇದರ ಫಲವಾಗಿ ಸಾಮಾನ್ಯ ಜನರಲ್ಲಿ ಗೊಂದಲ ಉಂಟಾಗಿದೆ. “ಒಸಿ/ಸಿಸಿ ಇಲ್ಲದೆ ಹೇಗೆ ಸಂಪರ್ಕ ಸಿಗುತ್ತಿದೆ?” ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ (Social media) ಮುಂದುವರಿದಿದ್ದು, ಸರ್ಕಾರ ಅಥವಾ ಸಂಬಂಧಪಟ್ಟ ಅಧಿಕಾರಿಗಳ ಸ್ಪಷ್ಟನೆ ಅಗತ್ಯವಾಗಿದೆ.
ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ (How to apply application in online)?
ಹೊಸ ಸಂಪರ್ಕಕ್ಕಾಗಿ ಬೆಸ್ಕಾಂ ವೆಬ್ಸೈಟ್ನಲ್ಲಿ ನೇರವಾಗಿ ಅರ್ಜಿ ಹಾಕಬಹುದು, https://www.bescom.co.in/bescom/main/new-connection-forms
ಈ ಪುಟದಲ್ಲಿ Single (ಏಕ) ಮತ್ತು Multiple (ಬಹು) ಎಂಬ ಎರಡು ಆಯ್ಕೆಗಳಿರುತ್ತವೆ.
ಅರ್ಜಿಯಲ್ಲಿ ನೀಡಬೇಕಾದ ಪ್ರಮುಖ ವಿವರಗಳು ಹೀಗಿವೆ,
- ಈಗಾಗಲೇ ತಾತ್ಕಾಲಿಕ ಸಂಪರ್ಕ ಪಡೆದಿದ್ದರೆ, ಅದರ ಖಾತೆ ಸಂಖ್ಯೆ ನಮೂದಿಸಬೇಕು.
- ಅರ್ಜಿದಾರರ ಹೆಸರು, ಇಮೇಲ್ ಐಡಿ, ಫೋನ್ ನಂಬರ್.
- ಪಾನ್, ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್, ಟ್ಯಾನ್, ಆಧಾರ್ ಇವುಗಳಲ್ಲಿ ಯಾವುದಾದರೂ ಒಂದರ ಸಂಖ್ಯೆ.
- ಮನೆ/ಕಟ್ಟಡದ ವಿಳಾಸ, ಅಕ್ಷಾಂಶ-ರೇಖಾಂಶ (GPS co-ordinates) ಹಾಗೂ ನಿರ್ಮಾಣದ ಗಾತ್ರ (sq.mtr).
- ಸಂಪರ್ಕ ಬೇಕಾದ ಉದ್ದೇಶ (ಮನೆ, ವಾಣಿಜ್ಯ, EV ಚಾರ್ಜಿಂಗ್ ಸ್ಟೇಷನ್).
- ಉಪವಿಭಾಗ ಹಾಗೂ ಸೆಕ್ಷನ್ ಕಚೇರಿ ವಿವರ.
- ಲೋಡ್ ಅವಶ್ಯಕತೆ, ಫೇಸ್, ವೋಲ್ಟೇಜ್ ವಿವರಗಳು.
ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು:
- ಐಡೆಂಟಿಟಿ ಪ್ರೂಫ್: ಪಾನ್, ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್, ಆಧಾರ್ ಅಥವಾ ವೋಟರ್ ಐಡಿ.
- Proof of Occupancy: ಸೇಲ್ ಡೀಡ್, ಖಾತಾ ಪ್ರಮಾಣ ಪತ್ರ ಅಥವಾ ತೆರಿಗೆ ಪಾವತಿಸಿದ ರಸೀದಿ.
- Completion Certificate (CC), ಪುಟದಲ್ಲಿ ಈ ಆಯ್ಕೆ ಇದೆ, ಆದರೆ ಕಡ್ಡಾಯವಲ್ಲ.
- ಎಲ್ಲಾ ಮಾಹಿತಿಗಳನ್ನು ತುಂಬಿದ ನಂತರ ಆನ್ಲೈನ್ನಲ್ಲಿಯೇ ಶುಲ್ಕ ಪಾವತಿಸಬಹುದಾಗಿದೆ.
ಯಾವ ರೀತಿಯ ಬದಲಾವಣೆಗಳು (Changes) ಆಗಿದ್ದಾವೆ?:
ಈ ಹಿಂದೆ ಮನೆಮಾಲೀಕರು ನೇರವಾಗಿ ಅರ್ಜಿ ಹಾಕುವಂತಿರಲಿಲ್ಲ. ಗುತ್ತಿಗೆದಾರರ ಮೂಲಕವೇ ಎಲ್ಲಾ ಪ್ರಕ್ರಿಯೆಗಳು ನಡೆಯಬೇಕಾಗಿತ್ತು. ಆದರೆ ಈಗ ನಾಗರಿಕರೇ ಸ್ವತಃ ಆನ್ಲೈನ್ನಲ್ಲಿ ಅರ್ಜಿ (Online application) ಸಲ್ಲಿಸಿ, ದಾಖಲೆಗಳನ್ನು ಅಪ್ಲೋಡ್ ಮಾಡಿ, ಪಾವತಿಯನ್ನು ನೆರವೇರಿಸಬಹುದು.
ಈ ವಿಚಾರಕ್ಕೆ ಸ್ಪಷ್ಟನೆ ಅಗತ್ಯವಿದೆ:
ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಹಂಚಿಕೊಂಡ ಗ್ರಾಹಕ ಶ್ರೀನಿವಾಸ್ ಅವರು, “ಒಸಿ, ಸಿಸಿ ಇಲ್ಲದೆ ಬೆಸ್ಕಾಂ ಹೇಗೆ ಸಂಪರ್ಕ ನೀಡುತ್ತಿದೆ?” ಎಂದು ಪ್ರಶ್ನಿಸಿದ್ದಾರೆ. ಇದರಿಂದ ಜನರಲ್ಲಿ ನಿರ್ಧಾರಾತ್ಮಕ ಗೊಂದಲ ಮೂಡಿದೆ. ಸರ್ಕಾರ, ಬೆಸ್ಕಾಂ ಅಥವಾ ಬಿಬಿಎಂಪಿ ಅಧಿಕಾರಿಗಳು (Government, Bescom or BBMP Officer’s) ಶೀಘ್ರದಲ್ಲೇ ಅಧಿಕೃತ ಸ್ಪಷ್ಟನೆ ನೀಡುವ ಮೂಲಕ ಈ ಗೊಂದಲಕ್ಕೆ ತೆರೆ ಎಳೆಯಬೇಕಿದೆ ಎಂಬ ಅಭಿಪ್ರಾಯ ಮೂಡುತ್ತಿದೆ.
ಹೀಗಾಗಿ, ಬೆಸ್ಕಾಂ ಆನ್ಲೈನ್ ವ್ಯವಸ್ಥೆ ನಾಗರಿಕರಿಗೆ ಅನುಕೂಲ ತಂದರೂ, ಅಧಿಕೃತ ಮಾಹಿತಿ ಹಾಗೂ ನಿಯಮದ ಸ್ಪಷ್ಟನೆ ಹೊರಬರುವ ತನಕ ಜನರು ಜಾಗರೂಕರಾಗಿರಬೇಕು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- `ಗೃಹಲಕ್ಷ್ಮೀ’ : ರಾಜ್ಯದ ಮಹಿಳೆಯರಿಗೆ ಬಂಪರ್ ಗುಡ್ ನ್ಯೂಸ್ : ಒಟ್ಟಿಗೆ 2 ಕಂತಿನ 4,000 ರೂ. ಖಾತೆಗೆ ಜಮೆ.!
- ಖಾತೆಗೆ ಬರದ ಹಣ: ಗೃಹಲಕ್ಷ್ಮಿ ಯೋಜನೆ ವಿರುದ್ಧ ಮಹಿಳೆಯರ ಆಕ್ರೋಶ; 21ನೇ ಕಂತು ಬಿಗ್ ಅಪ್ಡೇಟ್ ಕೊಟ್ಟ ಅಧಿಕಾರಿಗಳು
- ಸರ್ಕಾರದಿಂದ `ನಿರುದ್ಯೋಗಿಗಳಿಗೆ ಬಂಪರ್ ಗಿಫ್ಟ್’ : ಎಲೆಕ್ಟ್ರಿಕ್ ವಾಹನ ಖರೀದಿಗೆ 3 ಲಕ್ಷ ರೂ. ಸಹಾಯಧನ ಸೇರಿ 17 ಬಿಲ್ ಗೆ ಸಂಪುಟ ಒಪ್ಪಿಗೆ.!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.