WhatsApp Image 2025 08 09 at 11.19.34 AM

BIGNEWS : ಸರ್ಕಾರದಿಂದ ಜೂನ್ ತಿಂಗಳ `ಗೃಹಲಕ್ಷ್ಮಿ’ ಹಣ ಬಿಡುಗಡೆ – ಹೇಗೆ ಚೆಕ್ ಮಾಡಬೇಕು? | `ವರಮಹಾಲಕ್ಷ್ಮೀ’ ಗಿಫ್ಟ್

ರಾಜ್ಯದ ಮಹಿಳೆಯರಿಗೆ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಒಂದು ಸಿಹಿ ಸುದ್ದಿ ಬಂದಿದೆ. ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಯೋಜನೆ 2025-26 ಸಾಲಿನ ಬಾಕಿ 3ನೇ ಕಂತಿನ ಹಣವನ್ನು ಈ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಿದೆ. ಈ ಹಣವನ್ನು DBT (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್) ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕೊಪ್ಪಳ ಜಿಲ್ಲೆಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ನಿವಾಸ್ ಅವರು ಪ್ರಕಟಿಸಿದ ಪ್ರಕಟಣೆಯಲ್ಲಿ, “ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಿಡುಗಡೆ ಮಾಡಲಾಗಿದೆ. ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಯಲ್ಲಿ ಹಣವನ್ನು ಪರಿಶೀಲಿಸಬಹುದು” ಎಂದು ತಿಳಿಸಿದ್ದಾರೆ.

ರಾಜ್ಯದ ಸುಮಾರು 1.24 ಕೋಟಿ ಮಹಿಳೆಯರಿಗೆ 21 ನೇ ಕಂತಿನ ಹಣವು ನಿನ್ನೆಯ ದಿನ ಬಿಡುಗಡೆಯಾಗಿದ್ದು ಮಹಿಳೆಯರ ಖಾತೆಗೆ ಜಮೆಯಾಗಲಿದೆ. ಸರ್ಕಾರದ ಆದೇಶದ ಪ್ರಕಾರ, ಆಯಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ (TPEO) ಖಾತೆಗೆ ನಿನ್ನೆ(08-08-2025) ಹಣವನ್ನು ವರ್ಗಾಯಿಸಲಾಗಿದೆ. ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ (DBT) ವ್ಯವಸ್ಥೆಯ ಮೂಲಕ ತಾಲೂಕು ಶಿಶು ಅಭಿವೃದ್ಧಿ ಯೋಜನೆ (ICDS) ಅಧಿಕಾರಿಗಳು ಈ ಹಣವನ್ನು ಆಯಾ ತಾಲೂಕಿನ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಿದ್ದಾರೆ.

ಹಾಗೆಯೇ ಇನ್ನುಳಿದ 22ನೇ ಕಂತಿನ ಬಾಕಿ ₹2000ಹಣ ಇದೇ ತಿಂಗಳ ಕೊನೆಯ ವಾರದಲ್ಲಿ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕೆಳಗಂಡಂತೆ ವಿವರಣೆ ಹೀಗಿದೆ

ಕಂತುಸಂಬಂಧಿಸಿದ ತಿಂಗಳುಸ್ಥಿತಿಬಿಡುಗಡೆ ದಿನಾಂಕ
24ನೇ ಕಂತುಜುಲೈ 2025ಬಾಕಿ ಉಳಿದಿದೆನವೀಕರಿಸಲಾಗುವುದು
23ನೇ ಕಂತುಜೂನ್ 2025ಬಾಕಿ ಉಳಿದಿದೆನವೀಕರಿಸಲಾಗುವುದು
22ನೇ ಕಂತುಮೇ 2025ಬಾಕಿ ಉಳಿದಿದೆನವೀಕರಿಸಲಾಗುವುದು
21ನೇ ಕಂತುಏಪ್ರಿಲ್ 2025ಬಿಡುಗಡೆಯಾಗಿದೆ08-08-2025
20ನೇ ಕಂತುಮಾರ್ಚ್ 2025ಪೂರ್ಣಗೊಂಡಿದೆ05-06-2025
19ನೇ ಕಂತುಫೆಬ್ರವರಿ 2025ಪೂರ್ಣಗೊಂಡಿದೆ17-05-2025
18ನೇ ಕಂತುಜನವರಿ 2025ಪೂರ್ಣಗೊಂಡಿದೆ30-03-2025
17ನೇ ಕಂತುಡಿಸೆಂಬರ್ 2024ಪೂರ್ಣಗೊಂಡಿದೆ11-03-2025
16ನೇ ಕಂತುನವೆಂಬರ್ 2024ಪೂರ್ಣಗೊಂಡಿದೆ26-02-2025

ಗಮನಿಸಿ ; ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದರೂ ಖಾತೆಗೆ ಬರಲು 2-3 ದಿನ ತಡವಾಗಬಹುದು

ಗೃಹಲಕ್ಷ್ಮಿ ಯೋಜನೆ: ಪ್ರಮುಖ ವಿವರಗಳು

  • ಯೋಜನೆಯ ಉದ್ದೇಶ: ರಾಜ್ಯದ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಗಳಿಗೆ ನಿತ್ಯಾವಸರದ ಸಹಾಯಧನವನ್ನು ನೀಡುವುದು.
  • ಫಲಾನುಭವಿಗಳು: ಸುಮಾರು 1.23 ಕೋಟಿ ಮಹಿಳೆಯರು ಈ ಯೋಜನೆಯ ಅಡಿಯಲ್ಲಿ ಅರ್ಹರಾಗಿದ್ದಾರೆ.
  • ಹಣದ ವರ್ಗಾವಣೆ: ತಾಲೂಕು ಪಂಚಾಯಿತಿ ಮೂಲಕ ನೇರ ಬ್ಯಾಂಕ್ ಖಾತೆಗೆ (DBT) ಹಣವನ್ನು ಸಂದಾಯ ಮಾಡಲಾಗುತ್ತಿದೆ.
  • ಪಾವತಿ ಸ್ಥಿತಿ: ಈಗಾಗಲೇ 40 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿದೆ.

ಗೃಹಲಕ್ಷ್ಮಿ ಯೋಜನೆಯ ಹಣವನ್ನು ಹೇಗೆ ಚೆಕ್ ಮಾಡಬೇಕು?

ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂದು ಪರಿಶೀಲಿಸಲು DBT Karnataka ಅಪ್ಲಿಕೇಶನ್ ಅನ್ನು ಬಳಸಬಹುದು. ಹಂತ ಹಂತವಾದ ಮಾರ್ಗದರ್ಶನ:

ಹಂತ 1: DBT Karnataka ಅಪ್ಲಿಕೇಶನ್ ಡೌನ್ಲೋಡ್ ಮಾಡಿ
  • ನಿಮ್ಮ ಸ್ಮಾರ್ಟ್ಫೋನ್ನಲ್ಲಿ Google Play Store ತೆರೆಯಿರಿ.
  • “DBT Karnataka” ಎಂದು ಸರ್ಚ್ ಮಾಡಿ.
  • ಅಧಿಕೃತ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ.
ಹಂತ 2: OTP ಮೂಲಕ ಲಾಗಿನ್ ಮಾಡಿ
  • ಅಪ್ಲಿಕೇಶನ್ ತೆರೆದ ನಂತರ, ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಿ.
  • “Get OTP” ಬಟನ್ ಕ್ಲಿಕ್ ಮಾಡಿ.
  • ನಿಮ್ಮ ಮೊಬೈಲ್ಗೆ ಬಂದ OTP ನಮೂದಿಸಿ ಮತ್ತು “Verify OTP” ಕ್ಲಿಕ್ ಮಾಡಿ.
ಹಂತ 3: mPIN ಸೆಟಪ್ ಮಾಡಿ
  • ನಿಮ್ಮ ಸುರಕ್ಷತೆಗಾಗಿ 4-ಅಂಕಿಯ mPIN ರಚಿಸಿ.
  • ಅದೇ PIN ಅನ್ನು “Confirm mPIN” ನಲ್ಲಿ ಮತ್ತೆ ನಮೂದಿಸಿ.
  • “Submit” ಕ್ಲಿಕ್ ಮಾಡಿ.
ಹಂತ 4: ಪಾವತಿ ಸ್ಥಿತಿ ಪರಿಶೀಲಿಸಿ
  • ಮುಖಪುಟದಲ್ಲಿ “Payment Status” ಆಯ್ಕೆಯನ್ನು ಕ್ಲಿಕ್ ಮಾಡಿ.
  • ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ನಿಮ್ಮ ಹಣದ ವರ್ಗಾವಣೆ ವಿವರಗಳು ತೋರಿಸಲ್ಪಡುತ್ತದೆ.
  • “Seeding Status of Aadhaar in Bank Account” ಕ್ಲಿಕ್ ಮಾಡಿ, ನಿಮ್ಮ ಆಧಾರ್ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆ ಎಂಬುದನ್ನು ಪರಿಶೀಲಿಸಿ.

ಮುಖ್ಯ ಸೂಚನೆಗಳು

✅ ಹಣವು ಹಂತಹಂತವಾಗಿ ಎಲ್ಲಾ ಫಲಾನುಭವಿಗಳ ಖಾತೆಗೆ ಬರುತ್ತದೆ.
✅ ಯಾವುದೇ ತಾಂತ್ರಿಕ ಸಮಸ್ಯೆ ಇದ್ದರೆ, ನಿಮ್ಮ ತಾಲೂಕು ಕಚೇರಿಗೆ ಸಂಪರ್ಕಿಸಿ.
✅ ಫ್ರಾಡ್ ಎಚ್ಚರಿಕೆ: ಸರ್ಕಾರವು SMS/ಕರೆ ಮೂಲಕ ಪಾಸ್ವರ್ಡ್ ಕೇಳುವುದಿಲ್ಲ.

ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯಾಗಿರುವುದು ರಾಜ್ಯದ ಮಹಿಳೆಯರಿಗೆ ಒಂದು ದೊಡ್ಡ ಸಹಾಯ. ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂದು ಮೇಲಿನ ವಿಧಾನದಿಂದ ಪರಿಶೀಲಿಸಿ ಮತ್ತು ಇತರರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ!

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 


Popular Categories

error: Content is protected !!