ಪ್ರಕೃತಿ ಅನೇಕ ರೀತಿಯ ಹಣ್ಣು-ತರಕಾರಿಗಳನ್ನು ನಮಗೆ ಕೊಟ್ಟಿದೆ. ಕೆಲವು ತರಕಾರಿಗಳು ನೋಡಲು ವಿಚಿತ್ರವಾಗಿದ್ದರೂ, ಅವುಗಳಲ್ಲಿ ಅಸಾಮಾನ್ಯ ಆರೋಗ್ಯ ಲಾಭಗಳಿವೆ. ಅಂತಹ ಅಪರೂಪದ ತರಕಾರಿ ಕ್ರಾಸ್ನ ಅಥವಾ ಚೈನೀಸ್ ಆರ್ಟಿಚೋಕ್(Chinese Artichoke). ಇದು ಬಿಳಿ ಬಣ್ಣದ, ಸಣ್ಣ ಗೆಣಸಿನಂತೆ ಅಥವಾ ಜೀವಂತ ಲಾರ್ವಾ ಅಥವಾ ಹುಳುವಿನಂತೆಯೇ ಆಕರ್ಷಕ ಆಕಾರ ಹೊಂದಿರುವ ತರಕಾರಿ. ಇವು ಭೂಮಿಯೊಳಗೆ ಬೆಳೆದು ಸಣ್ಣ ಸುರುಳಿಯಾಕಾರದ ಗೆಡ್ಡೆಗಳಾಗಿ ದೊರೆಯುತ್ತವೆ. ಹಾಗಿದ್ದರೆ ಈ ಕ್ರಾಸ್ನನ ಆರೋಗ್ಯ ಲಾಭಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚೀನಾ ಮತ್ತು ಜಪಾನ್‌ನಲ್ಲಿ(China and Japan) ಕ್ರಾಸ್ನ ತರಕಾರಿ ಬಹಳ ಜನಪ್ರಿಯ. ಅಲ್ಲಿಯ ಜನರು ಇದನ್ನು ಸಲಾಡ್, ಉಪ್ಪಿನಕಾಯಿ, ಹುರಿದುಕೊಂಡು ತಿನ್ನುತ್ತಾರೆ ಅಥವಾ ಒಣಗಿಸಿದ ರೂಪದಲ್ಲೂ ಸೇವಿಸುತ್ತಾರೆ. ಜಪಾನ್‌ನಲ್ಲಿ, ಹೊಸ ವರ್ಷದ ಸಂದರ್ಭಗಳಲ್ಲಿ ಈ ಬಿಳಿ ಗೆಡ್ಡೆಗಳನ್ನು ಕೆಂಪು ಬಣ್ಣ ಹಚ್ಚಿ ಹಬ್ಬದ ಸಲಾಡ್‌ಗಳಲ್ಲಿ(salads) ಬಳಸುವುದು ಒಂದು ಸಾಂಪ್ರದಾಯಿಕ ಪದ್ಧತಿ. ಕ್ರಾಸ್ನಗೆ ಅಡಿಕೆಯಂತಹ ಸುವಾಸನೆ ಇರುವುದರಿಂದ ಆಹಾರಕ್ಕೆ ವಿಭಿನ್ನ ರುಚಿ ನೀಡುತ್ತದೆ.
ಕ್ರಾಸ್ನನ ಆರೋಗ್ಯ ಲಾಭಗಳು ಹೀಗಿವೆ:
ಕ್ರಾಸ್ನ ಕೇವಲ ರುಚಿ ಮಾತ್ರವಲ್ಲ, ಅದು ಹಲವಾರು ಗಂಭೀರ ರೋಗಗಳನ್ನು ತಡೆಗಟ್ಟುವ ಶಕ್ತಿ ಹೊಂದಿದೆ.
ಕ್ಯಾನ್ಸರ್ ತಡೆ(Cancer Prevention):
ಈ ತರಕಾರಿಯಲ್ಲಿ ಆಂಟಿ-ಆಕ್ಸಿಡೆಂಟ್ಸ್‌ಗಳು ಮತ್ತು ಫೈಟೋಕೆಮಿಕಲ್ಸ್‌ಗಳು ಅಧಿಕವಾಗಿದ್ದು, ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಮುಕ್ತ ರ್ಯಾಡಿಕಲ್ಸ್‌ಗಳನ್ನು ನಿಷ್ಕ್ರಿಯಗೊಳಿಸುತ್ತದೆ.
ಮಧುಮೇಹ ನಿಯಂತ್ರಣ(Diabetes control):
ಕ್ರಾಸ್ನ ದೇಹದ ರಕ್ತದಲ್ಲಿ ಶುಗರ್ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯಕವಾಗುತ್ತದೆ.
ಹೃದಯ ಆರೋಗ್ಯ(heart health):
ಇದು ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣ ಹೊಂದಿದ್ದು, ಹೃದಯಾಘಾತ ಮತ್ತು ಬಿಪಿ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಜೀರ್ಣಶಕ್ತಿ ವೃದ್ಧಿ(Improves digestion):
ಫೈಬರ್ ಸಮೃದ್ಧವಾಗಿರುವ ಕಾರಣ ಅಜೀರ್ಣ, ಹೊಟ್ಟೆ ಸಂಬಂಧಿ ತೊಂದರೆಗಳನ್ನು ಕಡಿಮೆ ಮಾಡುತ್ತದೆ.
ಬಳಕೆ ವಿಧಾನಗಳು
1. ಸಲಾಡ್‌ಗಳಲ್ಲಿ ತಾಜಾ ರೂಪದಲ್ಲಿ ತಿನ್ನಬಹುದು.
2. ಉಪ್ಪಿನಕಾಯಿ ಮಾಡಿಕೊಳ್ಳಬಹುದು.
3. ಹುರಿದು ಅಥವಾ ಒಣಗಿಸಿ ತರಕಾರಿಗಳಲ್ಲಿ ಸೇರಿಸಬಹುದು.
4. ಏಷ್ಯಾದಷ್ಟೇ ಅಲ್ಲ, ಈಗ ಯುರೋಪಿನ ಟ್ರೆಂಡಿ ರೆಸ್ಟೋರೆಂಟ್‌ಗಳಲ್ಲೂ ಕ್ರಾಸ್ನ ಒಂದು ವಿಶೇಷ ತಿನಿಸಾಗಿದೆ.
ಒಟ್ಟಾರೆಯಾಗಿ, ಪ್ರಕೃತಿ ಕೊಟ್ಟ ಈ ಅಪರೂಪದ ಬಿಳಿ ಗೆಣಸಿನಂತಿರುವ ತರಕಾರಿಯನ್ನು ವರ್ಷಕ್ಕೊಮ್ಮೆ ಆದರೂ ತಿನ್ನುವುದರಿಂದ ದೇಹಕ್ಕೆ ಅಮೂಲ್ಯವಾದ ರಕ್ಷಣೆ ಸಿಗುತ್ತದೆ. ಕ್ಯಾನ್ಸರ್ ತಡೆ, ಶುಗರ್ ನಿಯಂತ್ರಣ, ಹೃದಯ ಮತ್ತು ಬಿಪಿ ಸಮಸ್ಯೆಗಳಿಗೆ ಇದು ಒಂದು ನೈಸರ್ಗಿಕ ಆಯುಧವಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.