Picsart 25 07 24 00 16 19 669 scaled

8ನೇ ವೇತನ ಆಯೋಗಕ್ಕೂ ಮೊದಲು ಭರ್ಜರಿ ಪರಿಹಾರ: DA ಶೇಕಡಾ 59ಕ್ಕೆ ಏರಿಕೆಯಾಗುವ ಸಾಧ್ಯತೆ

Categories:
WhatsApp Group Telegram Group

ಭಾರತದ ಕೇಂದ್ರ ಸರ್ಕಾರಿ ನೌಕರರಿಗೆ (Central government employees) ವೇತನ ಹೆಚ್ಚಳ ಹಾಗೂ ಭತ್ಯೆ ಪರಿಷ್ಕರಣೆ ಎನ್ನುವುದು ಯಾವತ್ತೂ ಬಹು ನಿರೀಕ್ಷಿತ ವಿಷಯ. ಇತ್ತೀಚೆಗೆ 8ನೇ ವೇತನ ಆಯೋಗದ ಬಗ್ಗೆ ಕುತೂಹಲ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ, ಇನ್ನೊಂದು ಮುಖ್ಯ ಘೋಷಣೆಯ ನಿರೀಕ್ಷೆಯಲ್ಲಿರುವ ನೌಕರರಿಗೆ ಸರ್ಕಾರದಿಂದ ಮತ್ತೊಂದು ಭರ್ಜರಿ ಭತ್ಯೆ ಸಂಬಂಧಿತ ವರದಿ ತಿಳಿದುಬಂದಿದೆ. ಜುಲೈ 2025ರಿಂದ ಕಾರ್ಯರೂಪಕ್ಕೆ ಬರುವಂತಿರುವ ಹೊಸ ತುಟ್ಟಿಭತ್ಯೆ (Dearness Allowance – DA) ಹೆಚ್ಚಳವು ಶೇಕಡಾ 4ರಷ್ಟಾಗಬಹುದು ಎಂಬ ನಿರೀಕ್ಷೆ ಜೋರಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

CPI-IW ಸೂಚ್ಯಂಕವೇ ಆಧಾರ:

ಸರ್ಕಾರದ ಈ ನಿರ್ಧಾರವನ್ನು ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕ (Consumer Price Index for Industrial Workers – CPI-IW) ದತ್ತಾಂಶಗಳ ಮೇಲೆ ಆಧಾರಿತವಾಗಿದೆ. ಈ ಸೂಚ್ಯಂಕವು ಹಣದುಬ್ಬರದ ಸ್ಥಿತಿಯನ್ನು ಪ್ರತಿಬಿಂಬಿಸುವ ಪ್ರಮುಖ ಅಂಶವಾಗಿದ್ದು, ಪ್ರತಿವರ್ಷದ ಜನವರಿ ಮತ್ತು ಜುಲೈ ತಿಂಗಳಲ್ಲಿ, ಹಣದುಬ್ಬರದ ಪರಿಣಾಮಗಳನ್ನು ಸಮನಾಗಿಸಲು DA ಹೆಚ್ಚಳ ಘೋಷಿಸಲಾಗುತ್ತದೆ.

2025ರ ಮೇ ವರೆಗಿನ CPI-IW ಡೇಟಾವನ್ನು ಆಧಾರವಾಗಿಟ್ಟುಕೊಂಡರೆ, ಜುಲೈನಲ್ಲಿ 3 ರಿಂದ 4% ರಷ್ಟು DA ಹೆಚ್ಚಳವಾಗುವ ಸಾಧ್ಯತೆ ಇದೆ. ಸರ್ಕಾರವು ಹಿಂದಿನ 12 ತಿಂಗಳ CPI-IW ಅಂಕಿಅಂಶಗಳನ್ನು ಸರಾಸರಿ ಮಾಡಲಾಗುತ್ತದೆ ಮತ್ತು 7ನೇ ವೇತನ ಆಯೋಗದ ಸೂತ್ರ ಅನ್ವಯಿಸಿ DA ಹೆಚ್ಚಳ ಲೆಕ್ಕಹಾಕಲಾಗುತ್ತದೆ.

ಪ್ರಸ್ತುತ ಡಿಎ ದರ (DA rate) ಮತ್ತು ನಿರೀಕ್ಷಿತ ಬದಲಾವಣೆ:

ಈ ವರ್ಷ ಮಾರ್ಚ್‌ನಲ್ಲಿ ನಡೆದ 2% DA ಹೆಚ್ಚಳದಿಂದ ಪ್ರಸ್ತುತ ಡಿಎ ದರ ಶೇಕಡಾ 55 ಆಗಿದೆ. ಈಗ ಜುಲೈ 2025ರದಿಂದ 4% ಹೆಚ್ಚಳವಾದರೆ, ಈ ದರ ಶೇಕಡಾ 59ಕ್ಕೆ ಏರಲಿದೆ. ಇದರಿಂದ ಸುಮಾರು ₹18,000 ಮಾಸಿಕ ಮೂಲ ವೇತನ ಹೊಂದಿರುವ ಪ್ರಾರಂಭಿಕ ಹಂತದ ನೌಕರರಿಗೆ ತಿಂಗಳಿಗೆ ₹540 ಹೆಚ್ಚಳವಾಗಲಿದೆ. 3% ಹೆಚ್ಚಳವಾದರೆ DA ಶೇ. 58 ಆಗಬಹುದು.

ದಿನಾಂಕದ ಪ್ರಕಾರ ಕ್ರಮ:

ಜೂನ್ 2025: CPI-IW ಡೇಟಾ (Data) ಬಿಡುಗಡೆಯಾಗಲಿದೆ.
ಜುಲೈ 2025: ಹೊಸ DA ದರ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ.
ಸೆಪ್ಟೆಂಬರ್-ಅಕ್ಟೋಬರ್ 2025: ಕೇಂದ್ರ ಸಚಿವ ಸಂಪುಟದಲ್ಲಿ ಅಧಿಕೃತ ನಿರ್ಧಾರ ಕೈಗೊಳ್ಳಲಾಗುತ್ತದೆ.
ತದನಂತರ ಹೆಚ್ಚಿದ ತುಟ್ಟಿಭತ್ಯೆ ಬಾಕಿ ಸೇರಿ ಪಾವತಿಸಲಾಗುವುದು.

8ನೇ ವೇತನ ಆಯೋಗಕ್ಕೂ ಮೊದಲು ತಾತ್ಕಾಲಿಕ ಪರಿಹಾರ:

ಸದ್ಯದವರೆಗೆ 8ನೇ ವೇತನ ಆಯೋಗದ (8th pay commission) ಅಧಿಕೃತ ರಚನೆಯ ಬಗ್ಗೆ ಯಾವುದೇ ಘೋಷಣೆ ಬಂದಿಲ್ಲ. ಆದರೆ ದೀರ್ಘಕಾಲದಿಂದ ವೇತನ ಪರಿಷ್ಕರಣೆಗಾಗಿ ಕಾಯುತ್ತಿರುವ ನೌಕರರಿಗೆ, ಈ ತುಟ್ಟಿಭತ್ಯೆ ಹೆಚ್ಚಳವು ತಾತ್ಕಾಲಿಕ ಪರಿಹಾರದ ರೀತಿಯಾಗಿ ಕಾರ್ಯನಿರ್ವಹಿಸಲಿದೆ.

ಒಟ್ಟಾರೆಯಾಗಿ, ಹಣದುಬ್ಬರದ ಹೊರೆಯಿಂದ ಜನಸಾಮಾನ್ಯರು ತತ್ತರಿಸುತ್ತಿರುವ ಈ ಸಂದರ್ಭದಲ್ಲಿ, ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ (Dearness Allowance Increasement) ಒಂದು ನಿರೀಕ್ಷಿತ  ನಿರ್ಧಾರವಾಗಿದೆ. ಜುಲೈ 2025ರಿಂದ ಜಾರಿಗೆ ಬರುವ ಈ ಹೆಚ್ಚಳದಿಂದ ನೌಕರರ ಖರ್ಚಿನಲ್ಲಿ ಸ್ವಲ್ಪ ಮಟ್ಟಿನ ಶಮನ ಸಿಗುವ ಸಾಧ್ಯತೆ ಇದೆ. 8ನೇ ವೇತನ ಆಯೋಗದ ಘೋಷಣೆಗೂ ಮುನ್ನ, ಈ ರೀತಿಯ ಭತ್ಯೆ ಪರಿಷ್ಕರಣೆಗಳು ನೌಕರರಿಗೆ ನಿಜವಾದ ಆರ್ಥಿಕ ಸಹಾಯವನ್ನು ನೀಡುವ ಪ್ರಮುಖ ಹಂತವಾಗಿವೆ.

ಇದಲ್ಲದೆ, ಜುಲೈ ಅಂತ್ಯದವರೆಗೆ ಹೊರಬರುವ CPI-IW ಡೇಟಾ ಹಾಗೂ ಸಚಿವ ಸಂಪುಟದ ಅನುಮೋದನೆಯ ನಂತರ ಅಧಿಕೃತ ಘೋಷಣೆ (Official announcement) ನಿರೀಕ್ಷೆಯಲ್ಲಿದೆ. ಸರಕಾರದಿಂದ ಪ್ರಕಟವಾಗುವ ಮುಂದಿನ ಅಧಿಸೂಚನೆಗಳಿಗೆ ನೌಕರರು ಕಾದು ಕುಳಿತಿದ್ದಾರೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories