ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಖಾಲಿ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟ.

Picsart 25 07 20 19 37 44 299

WhatsApp Group Telegram Group

ಈ ವರದಿಯಲ್ಲಿ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ನೇಮಕಾತಿ 2025 (BHEL Recruitment 2025) ನೇಮಕಾತಿ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಭಾರತದ ಪ್ರಮುಖ ಇಂಜಿನಿಯರಿಂಗ್ ಮತ್ತು ತಯಾರಿಕಾ ಸಂಸ್ಥೆಯಾದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ತನ್ನ 2025 ನೇ ಸಾಲಿನ ನೇಮಕಾತಿಗಾಗಿ ಹೊಸ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ದೇಶದ ವಿವಿಧ ಘಟಕಗಳಲ್ಲಿ ಒಟ್ಟು 515 ಆರ್ಟಿಸನ್ ಗ್ರೇಡ್-IV ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದು ಐಟಿಐ ವಿದ್ಯಾರ್ಹತೆ ಪಡೆದ ಯುವಜನರಿಗೆ ಸರಿಯಾದ ಸಮಯದಲ್ಲಿ ಬಂದಿರುವ ಅಮೂಲ್ಯ ಅವಕಾಶ.

ಉದ್ಯೋಗ ವಿವರಗಳು:

ಇಲಾಖೆ ಹೆಸರು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್
ಹುದ್ದೆಗಳ ಹೆಸರು ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು 515
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ (Online)
ಉದ್ಯೋಗ ಸ್ಥಳ –ಕರ್ನಾಟಕ (ಹಾಗೂ ಭಾರತದದ ವಿವಿದೆಡೆ)

ಹುದ್ದೆಗಳ ವಿವರ:

ಫಿಟರ್ – 176 ಹುದ್ದೆಗಳು
ವೆಲ್ಡರ್ – 97 ಹುದ್ದೆಗಳು
ಟರ್ನರ್ – 51 ಹುದ್ದೆಗಳು
ಮೆಶಿನಿಸ್ಟ್ – 104 ಹುದ್ದೆಗಳು
ಎಲೆಕ್ಟ್ರಿಷಿಯನ್ – 65 ಹುದ್ದೆಗಳು
ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ – 18 ಹುದ್ದೆಗಳು
ಫೌಂಡ್ರಿಮ್ಯಾನ್ – 4 ಹುದ್ದೆಗಳು

ಅರ್ಹತಾ ಮಾನದಂಡ:

ಕನಿಷ್ಠ ಶೈಕ್ಷಣಿಕ ಅರ್ಹತೆ: 10ನೇ ತರಗತಿ ಪಾಸ್.

ಐಟಿಐ (Industrial Training Institute) ಅಥವಾ ರಾಷ್ಟ್ರೀಯ ಟ್ರೇಡ್ ಸರ್ಟಿಫಿಕೇಟ್ (NTC), ಹಾಗೂ ನ್ಯಾಷನಲ್ ಅಪ್ರೆಂಟಿಸ್‌ಶಿಪ್ ಸರ್ಟಿಫಿಕೇಟ್ (NAC) ಹೊಂದಿರಬೇಕು.

ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಕನಿಷ್ಠ 60% ಅಂಕಗಳು ಅನಿವಾರ್ಯ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ವಿನಾಯಿತಿ.

ವಯೋಮಿತಿ ಮತ್ತು ವಿನಾಯಿತಿಗಳು :

ಕನಿಷ್ಠ ವಯಸ್ಸು: 18 ವರ್ಷ

ಗರಿಷ್ಠ: 27 ವರ್ಷ (12 ಆಗಸ್ಟ್ 2025ರ ಆಧಾರಿತ)
ವಿವಿಧ ವರ್ಗಗಳಿಗೆ ಸರಕಾರದ ನಿಯಮಾನುಸಾರ ವಯೋ ವಿನಾಯಿತಿಗಳು ಲಭ್ಯವಿವೆ.

ವಯೋ ವಿನಾಯಿತಿಗಳು:

ಎಸ್ಸಿ/ಎಸ್ಟಿ ಅಭ್ಯರ್ಥಿಗಳು: 5 ವರ್ಷಗಳ ರಿಯಾಯಿತಿ
ಒಬಿಸಿ (OBC – ನಾನ್ ಕ್ರೀಮಿ ಲೆಯರ್) ಅಭ್ಯರ್ಥಿಗಳು: 3 ವರ್ಷಗಳ ರಿಯಾಯಿತಿ

ಅಂಗವಿಕಲ  ಅಭ್ಯರ್ಥಿಗಳು:

ಸಾಮಾನ್ಯ ವರ್ಗ: 10 ವರ್ಷ
ಒಬಿಸಿ ವರ್ಗ: 13 ವರ್ಷ
ಎಸ್ಸಿ/ಎಸ್ಟಿ ವರ್ಗ: 15 ವರ್ಷ
ಮಾಜಿ ಸೈನಿಕ: ಸರ್ಕಾರದ ನಿಯಮಾನುಸಾರ ಸಂಬಂಧಿತ ರಿಯಾಯಿತಿಯನ್ನು ಪಡೆಯುತ್ತಾರೆ.

ಅರ್ಜಿ ಶುಲ್ಕ:

ಸಾಮಾನ್ಯ/OBC/EWS: ₹1072/-

SC/ST/ಅಂಗವಿಕಲ/ಮಾಜಿ ಸೈನಿಕ: ₹472/-

ಪಾವತಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ನೆಟ್‌ಬ್ಯಾಂಕಿಂಗ್ ಮೂಲಕ ಆನ್‌ಲೈನ್ ನಲ್ಲಿ ಮಾಡಬಹುದಾಗಿದೆ.

ಆಯ್ಕೆ ಪ್ರಕ್ರಿಯೆ :

CBT (ಕಂಪ್ಯೂಟರ್ ಆಧಾರಿತ ಪರೀಕ್ಷೆ) – ಸೆಪ್ಟೆಂಬರ್ 2025ರ ಮಧ್ಯದಲ್ಲಿ ನಿರೀಕ್ಷೆ.

ಕೌಶಲ್ಯ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ – CBT ಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ.

ಮೆರಿಟ್ ಪಟ್ಟಿ – ಕೇವಲ CBT ಅಂಕಗಳ ಆಧಾರದಿಂದ.

ಸಂದರ್ಶನ ಅಥವಾ ಟ್ರೇಡ್ ಟೆಸ್ಟ್ ಇಲ್ಲ.

ವೇತನ ವಿವರ:

ಪ್ರಾರಂಭಿಕವಾಗಿ ಒಂದು ವರ್ಷ ತಾತ್ಕಾಲಿಕ ಉದ್ಯೋಗಿಯಾಗಿ ನೇಮಕ.

ತಾತ್ಕಾಲಿಕ ಅವಧಿಯಲ್ಲಿ ಕನಿಷ್ಠ ವೇತನ.

ಖಾಯಂ ನೇಮಕಾದ ನಂತರ: ₹29,500 ರಿಂದ ₹65,000 + ಸರ್ಕಾರದ ಎಲ್ಲಾ ಸೌಲಭ್ಯಗಳು.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 16-ಜುಲೈ-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12-ಆಗಸ್ಟ್-2025

ಪ್ರಮುಖ ಲಿಂಕುಗಳು

ನೋಟಿಫಿಕೇಶನ್ (ಅಧಿಸೂಚನೆ): ಇಲ್ಲಿ ಕ್ಲಿಕ್ ಮಾಡಿ

ಆನ್‌ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ

BHEL ನಂತಹ ರಾಷ್ಟ್ರಮಟ್ಟದ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಸ್ಪರ್ಧಾತ್ಮಕ ವಿಶ್ವದಲ್ಲಿ ಬಹುಪಾಲು ಅಭ್ಯರ್ಥಿಗಳಿಗೆ ಮಾತೃಭೂಮಿಯಲ್ಲಿ ಸೇವೆ ಸಲ್ಲಿಸುವ ಮತ್ತು ತಮ್ಮ ತಾಂತ್ರಿಕ ಸಾಮರ್ಥ್ಯವನ್ನು ಅನಾವರಣಗೊಳಿಸುವ ಅಪೂರ್ವ ಅವಕಾಶವಾಗಿದೆ.

ಅರ್ಜಿಯನ್ನು ವಿಳಂಬ ಮಾಡದೆ ಇಂದೇ ಸಲ್ಲಿಸಿ ಮತ್ತು ನಿಮ್ಮ ಕೈಗಾರಿಕಾ ಭವಿಷ್ಯವನ್ನು ಖಚಿತಪಡಿಸಿಕೊಳ್ಳಿ.
ಹೆಚ್ಚಿನ ಮಾಹಿತಿಗೆ ಅಥವಾ ಸಹಾಯಕ್ಕೆ, ನೀವು ನೇರವಾಗಿ careers.bhel.in ಗೆ ಭೇಟಿ ನೀಡಬಹುದು.
ಮತ್ತು ಇಂತಹ ಉತ್ತಮವಾದ  ಮಾಹಿತಿಯನ್ನು ನೀವು ತಿಳಿದಮೇಲೆ  ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!