ರಾಜ್ಯ ಸರ್ಕಾರವು ‘ಬಿ’ ಖಾತಾ ನಿವೇಶನಗಳನ್ನು ‘ಎ’ ಖಾತಾಗೆ ಪರಿವರ್ತಿಸುವ ಹೊಸ ನೀತಿಯನ್ನು ಜಾರಿಗೆ ತಂದಿದೆ. ಇದರ ಮೂಲಕ ಅನಧಿಕೃತ ಕಟ್ಟಡಗಳ ನಿರ್ಮಾಣವನ್ನು ತಡೆಗಟ್ಟುವುದು ಮತ್ತು ನಗರಾಭಿವೃದ್ಧಿಯನ್ನು ಯೋಜನಾಬದ್ಧವಾಗಿಸುವುದು ಪ್ರಮುಖ ಉದ್ದೇಶವಾಗಿದೆ. ಈ ನಿರ್ಣಯವು ದೀರ್ಘಕಾಲದಿಂದ ಬೆಂಗಳೂರು ಸೇರಿದಂತೆ ಹಲವೆಡೆಗಳಲ್ಲಿದ್ದ ‘ಬಿ’ ಖಾತಾ ಸಮಸ್ಯೆಗೆ ಪರಿಹಾರವಾಗಲಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೊಸ ನಿಯಮಗಳ ಪ್ರಮುಖ ಅಂಶಗಳು:
ಸಾರ್ವಜನಿಕ ರಸ್ತೆ ಸಂಪರ್ಕದ ಅನಿವಾರ್ಯತೆ:
- ‘ಬಿ’ ಖಾತಾ ನಿವೇಶನಗಳಿಗೆ ‘ಎ’ ಖಾತಾ ನೀಡಲು ಸಾರ್ವಜನಿಕ ರಸ್ತೆ ಸಂಪರ್ಕವಿರುವುದು ಕಡ್ಡಾಯ.
- ಖಾಸಗಿ ರಸ್ತೆ ಸಂಪರ್ಕವಿದ್ದಲ್ಲಿ, ಅದನ್ನು ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ (ಜಿಬಿಜಿಎ) ಕಾಯಿದೆ 2024ರ ಪ್ರಕಾರ ಸಾರ್ವಜನಿಕ ರಸ್ತೆಯೆಂದು ಘೋಷಿಸಬೇಕು.
ಭೂಪರಿವರ್ತನೆ ಮತ್ತು ಅನುಮೋದನೆ:
- ಕಂದಾಯ ಭೂಮಿಯಲ್ಲಿರುವ ಸ್ವತ್ತುಗಳು ಪರಿಷ್ಕೃತ ಮಹಾಯೋಜನೆಗೆ ಒಳಪಟ್ಟಿದ್ದರೆ, ಭೂಪರಿವರ್ತನೆ ಅಗತ್ಯವಿಲ್ಲ.
- ಕರ್ನಾಟಕ ಭೂಕಂದಾಯ ಕಾಯಿದೆಯಡಿ ನಿಗದಿತ ಶುಲ್ಕ ಪಾವತಿಸಿ ಕೆಟಿಸಿಪಿ (KTCPA) ಅನುಮೋದನೆ ಪಡೆಯಬೇಕು.
ಕಟ್ಟಡ ನಕ್ಷೆ ಮತ್ತು ಪರವಾನಗಿ:
- ‘ಬಿ’ ಖಾತಾ ನಿವೇಶನದ ಮಾಲೀಕರು ಕೆಟಿಸಿಪಿ ಕಾಯಿದೆ 1961ರ ಕಲಂ 15 ಮತ್ತು ಜಿಬಿಜಿಎ ನಿಯಮಗಳನ್ನು ಪಾಲಿಸಿ ಕಟ್ಟಡ ನಕ್ಷೆ ಮತ್ತು ಪರವಾನಗಿ ಪಡೆಯಬೇಕು.
- ನಿಯಮಗಳನ್ನು ಉಲ್ಲಂಘಿಸಿದರೆ, ವಿದ್ಯುತ್ ಮತ್ತು ನೀರಿನ ಸಂಪರ್ಕ ನಿರಾಕರಿಸಲಾಗುತ್ತದೆ.
ಅನಧಿಕೃತ ಕಟ್ಟಡಗಳಿಗೆ ಕಟ್ಟುನಿಟ್ಟು:
- 2024ರ ಸೆಪ್ಟೆಂಬರ್ 30ರ ನಂತರ ನಿರ್ಮಾಣವಾದ ಬಹು-ಘಟಕ ಕಟ್ಟಡಗಳಿಗೆ ‘ಬಿ’ ಖಾತಾ ನೀಡುವುದಿಲ್ಲ.
- ಅನಧಿಕೃತವಾಗಿ ನಿರ್ಮಿಸಿದ ಕಟ್ಟಡಗಳಿಗೆ ‘ಎ’ ಖಾತಾ ನೀಡುವ ಮೊದಲು, ಕಾನೂನುಬದ್ಧ ಅನುಮೋದನೆ ಪಡೆಯಬೇಕು.
ಫ್ಲ್ಯಾಟ್ ಗಳಿಗೆ ಪ್ರತ್ಯೇಕ ‘ಎ’ ಖಾತೆ:
- ಅನುಮೋದಿತ ಬಹುಮಹಡಿ ಕಟ್ಟಡಗಳಲ್ಲಿ ಪ್ರತಿ ಫ್ಲ್ಯಾಟ್ ಗೆ ಸ್ವಾಧೀನಾನುಭವ ಪ್ರಮಾಣಪತ್ರ ನೀಡಿ ‘ಎ’ ಖಾತಾ ನೀಡಲಾಗುತ್ತದೆ.
- 2024ರ ಸೆಪ್ಟೆಂಬರ್ 30ರ ಮೊದಲು ನೋಂದಾಯಿತ ಫ್ಲ್ಯಾಟ್ ಗಳಿಗೆ ಮಾತ್ರ ತಾತ್ಕಾಲಿಕ ‘ಬಿ’ ಖಾತಾ ಸಾಧ್ಯ.
ಯಾವ ಸಂದರ್ಭಗಳಲ್ಲಿ ‘ಎ’ ಖಾತಾ ಸಿಗುತ್ತದೆ?
- ಖಾಲಿ ನಿವೇಶನವು ಸಾರ್ವಜನಿಕ ರಸ್ತೆ ಸಂಪರ್ಕ ಹೊಂದಿದ್ದರೆ.
- ಕಟ್ಟಡವು ಕೆಟಿಸಿಪಿ/ಜಿಬಿಜಿಎ ನಿಯಮಗಳನ್ನು ಪಾಲಿಸಿದ್ದರೆ.
- 2024ರ ಸೆಪ್ಟೆಂಬರ್ 30ರ ಮೊದಲು ನೋಂದಾಯಿತವಾದ ಕಟ್ಟಡಗಳು.
ಯಾವುದಕ್ಕೆ ‘ಎ’ ಖಾತಾ ಸಿಗುವುದಿಲ್ಲ?
- ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳು.
- ಮಹಾಯೋಜನೆ ವಲಯದ ನಿಯಮಗಳಿಗೆ ವಿರುದ್ಧವಾದ ನಿರ್ಮಾಣಗಳು.
- 2024ರ ಸೆಪ್ಟೆಂಬರ್ 30ರ ನಂತರ ಅನಧಿಕೃತವಾಗಿ ನಿರ್ಮಿಸಿದ ಬಹು-ಘಟಕ ಕಟ್ಟಡಗಳು.
ಸರ್ಕಾರದ ಉದ್ದೇಶ ಮತ್ತು ಪರಿಣಾಮ
ಈ ಹೊಸ ನೀತಿಯ ಮೂಲಕ ಸರ್ಕಾರವು ಅನಧಿಕೃತ ನಿರ್ಮಾಣಗಳನ್ನು ನಿಯಂತ್ರಿಸಲು ಮತ್ತು ಸುಸ್ಥಿರ ನಗರಾಭಿವೃದ್ಧಿಗೆ ದಾರಿ ಮಾಡಿಕೊಡುತ್ತಿದೆ. ನಗರದಲ್ಲಿ ಹೆಚ್ಚುತ್ತಿರುವ ಅನಿಯಮಿತ ಕಟ್ಟಡಗಳಿಂದ ಉಂಟಾಗುವ ಅಡಚಣೆಗಳು ಮತ್ತು ಸುರಕ್ಷತಾ ಅಪಾಯಗಳನ್ನು ತಗ್ಗಿಸುವುದು ಇದರ ಗುರಿ.
ಈ ಕ್ರಮವು ಭೂಮಾಲೀಕರು, ನಿರ್ಮಾಣ ಸಂಸ್ಥೆಗಳು ಮತ್ತು ನಾಗರಿಕರಿಗೆ ಸ್ಪಷ್ಟ ಮಾರ್ಗದರ್ಶನ ನೀಡುತ್ತದೆ. ಸರ್ಕಾರಿ ನಿಯಮಗಳನ್ನು ಪಾಲಿಸಿದವರಿಗೆ ಆಸ್ತಿ ದಾಖಲೆಗಳನ್ನು ಸುಗಮವಾಗಿ ಪಡೆಯಲು ಅನುವು ಮಾಡಿಕೊಡಲಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.