ನಮ್ಮ ನಿತ್ಯದ ಆಹಾರದಲ್ಲಿ ಪ್ರೋಟೀನ್(Protein) ಕೊರತೆಯು ದೇಹದ ಸಾಮರ್ಥ್ಯ, ಆರೋಗ್ಯ ಮತ್ತು ಆರೋಗ್ಯದ ಬೆಳವಣಿಗೆಗೆ ತಡೆಯಾಗಿ ಪರಿಣಮಿಸಬಹುದು. ಪ್ರೋಟೀನ್ ಎಂದರೆ ಕೇವಲ ಬಲವರ್ಧಕ ಅಂಶವಷ್ಟೇ ಅಲ್ಲ, ಅದು ದೇಹದ ಪ್ರತಿಯೊಂದು ಜೀವಕೋಶದ ನಿರ್ಮಾಣದ ಆಧಾರವಾಗಿದೆ. ಸ್ನಾಯುಗಳ ಸಮೃದ್ಧಿ(Muscle growth), ಹಾರ್ಮೋನ್ ಉತ್ಪತ್ತಿ(Hormone production), ಉರಿಯೂತ ಪ್ರತಿಕ್ರಿಯೆ(Inflammatory response), ಮತ್ತು ದೇಹದ ದುರಸ್ತಿಗೆ ಸಹ ಇದೇ ಕಾರಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಆದರೆ ಎಲ್ಲರೂ ಮಾಂಸಾಹಾರ ಸೇವನೆ ಮಾಡಲಾರೆ. ಸಸ್ಯಾಹಾರಿಗಳಿಗೂ ಪೂರಕ ಶಕ್ತಿಯುಳ್ಳ ಪ್ರೋಟೀನ್ ದೊರೆಯುತ್ತದೆಯೆಂಬುದನ್ನು ತೋರಿಸುವುದು ಈ ಲೇಖನೆಯ ಉದ್ದೇಶ.
ಹೀಗಾದರೆ, ಮಕ್ಕಳು, ವೃದ್ಧರು ಮತ್ತು ಪ್ರತಿದಿನ ದೈಹಿಕ ಶ್ರಮಪಡುವವರು ತಿನ್ನಬಹುದಾದ 5 ಪ್ರೋಟೀನ್ ಪವರ್ ಹೌಸ್ ಫುಡ್ಸ್ ಯಾವುವು ಅಂತ ನೋಡೋಣ!
ಕಡಲೆ(Chickpeas) – ದೈನಂದಿನ ಶಕ್ತಿದಾಯಕ ಬಾಂಕ್
ಕಡಲೆ ಎಂದರೆ ಶಕ್ತಿ, ಪೋಷಕಾಂಶ, ಮತ್ತು ತೃಪ್ತಿ – ಈ ಮೂರು ಗುಣಗಳ ಸಮಾಗಮ. 100 ಗ್ರಾಂ ಒಣಗಿದ ಕಡಲೆಯಲ್ಲಿ ಸುಮಾರು 20.47 ಗ್ರಾಂ ಪ್ರೋಟೀನ್ ಇರುತ್ತದೆ. ಇದರ ಜೊತೆಗೆ ಮೆಗ್ನೀಸಿಯಮ್, ಕಬ್ಬಿಣ ಮತ್ತು ಫೈಬರ್ ಕೂಡ ದೇಹಕ್ಕೆ ಲಾಭಕಾರಿ. ಕಡಲೆಯನ್ನು ರಾತ್ರಿಯಿಡೀ ನೆನೆಸಿ ಬೆಂದ ಬಳಿಕ ಉಪಹಾರ ಅಥವಾ ಊಟದಲ್ಲಿ ಸೇರಿಸಬಹುದು.
ಟೋಫು(Tofu) – ಸಸ್ಯಾಹಾರಿಗಳ ಪನೀರ್ ಪರ್ಯಾಯ
ಸೋಯಾ ದಿಂದ ತಯಾರಾಗುವ ಟೋಫು, ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, 100 ಗ್ರಾಂ ಟೋಫುನಲ್ಲಿ 19 ಗ್ರಾಂ ಪ್ರೋಟೀನ್ ಅಡಕವಾಗಿದೆ. ಇದು ಪನೀರ್‌ನಂತೆ ನರಮವಾಗಿದ್ದು, ಬೇಯಿಸಿದರೂ ಅಥವಾ ಕಚ್ಚಾ ಆಗಿಯೇ ಸಲಾಡ್ ರೂಪದಲ್ಲಿ ಸೇವಿಸಿದರೂ ಅದ್ಭುತ ರುಚಿ ನೀಡುತ್ತದೆ. ಮಕ್ಕಳಿಗೆ ಮತ್ತು ವೃದ್ಧರಿಗೆ ಟೋಫು ಸೂಪರ್ ಆಯ್ಕೆ!
ಕಡಲೆಕಾಯಿ(Peanuts) – ತಿನ್ನುವುದು ಸುಲಭ, ಲಾಭ ಅಪಾರ
ಸಣ್ಣದಾಗಿ ತೋರುವ ಕಡಲೆಕಾಯಿಯು ದೇಹಕ್ಕೆ ನೀಡುವ ಶಕ್ತಿ ಹಿಗ್ಗಿದ ಹಾಗೆ! 100 ಗ್ರಾಂ ಕಡಲೆಕಾಯಿಯಲ್ಲಿ 25 ಗ್ರಾಂ ಪ್ರೋಟೀನ್ ಇದೆ. ಇದರೊಂದಿಗೆ ವಿಟಮಿನ್‌ಗಳು, ನ್ಯಾಸಿನ್, ಫೋಲೇಟ್‌ಗಳು ಕೂಡ ದೇಹದ ಬೆಳವಣಿಗೆಗೆ ನೆರವಾಗುತ್ತವೆ. ಕಡಲೆಕಾಯಿಯನ್ನು ನೆನೆಸಿಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಉತ್ತಮ.
ಕುಂಬಳಕಾಯಿ ಬೀಜ(Pumpkin Seed) – ಸೂಪರ್ ಸೀಡ್ ಪವರ್
ಅಂದಾಜು ಮಾಡಲಾಗದಷ್ಟು ಆರೋಗ್ಯ ಸಾಂದ್ರತೆ ಹೊಂದಿರುವ ಕುಂಬಳಕಾಯಿ ಬೀಜಗಳಲ್ಲಿ ಪ್ರೋಟೀನ್ ಮಾತ್ರವಲ್ಲ, ಹಾರ್ಟ್ ಹೆಲ್ತ್(Heart helath)ಗೆ ಸಹಾಯಮಾಡುವ ಒಮೆಗಾ-3 ಮತ್ತು ಫೈಟೋ ನ್ಯೂಟ್ರಿಯಂಟ್ಸ್‌ಗಳೂ ಇರುತ್ತವೆ. ಬೀಜಗಳನ್ನು ಸ್ವಲ್ಪ ಹುರಿದು, ಸಲಾಡ್‌ಗೆ ಅಥವಾ ಉಪಹಾರಕ್ಕೆ ಸೇರಿಸಿ ತಿನ್ನಬಹುದು.
ತರಕಾರಿ ಪ್ರೋಟೀನ್ ಸ್ಟಾರ್‌ಗಳು – ಪಾಲಕ್, ಬ್ರೊಕೊಲಿ ಮತ್ತು ಅಣಬೆ
ಹಸಿರು ತರಕಾರಿಗಳಲ್ಲಿ ಪಾಲಕ್(Spinach), ಬ್ರೊಕೊಲಿ(broccoli) ಮತ್ತು ಅಣಬೆಗಳು(mushrooms) ಪ್ರೋಟೀನ್ ಜೊತೆಗೆ ಹಾರ್ಮೋನಲ್ ಬ್ಯಾಲೆನ್ಸ್, ಆ್ಯಂಟಿ-ಆಕ್ಸಿಡೆಂಟ್‌ಗಳು ಮತ್ತು ಮೈನರಲ್‌ಗಳ ಶಕ್ತಿನಿವೇಶಿತ ಮೂಲಗಳಾಗಿವೆ. ವಾರದಲ್ಲಿ ಕನಿಷ್ಠ 3-4 ಬಾರಿ ಈ ತರಕಾರಿಗಳನ್ನು ಆಹಾರದಲ್ಲಿ ಸೇರಿಸಿ, ಶಕ್ತಿ ಮತ್ತು ಆರೋಗ್ಯ ಎರಡನ್ನು ಸಾಧಿಸಬಹುದು.
ಪ್ರತಿದಿನ ಹೊಟ್ಟೆ ತುಂಬಿಸಿಕೊಳ್ಳುವುದು ಮುಖ್ಯವಲ್ಲ – ಶಕ್ತಿಯುತ ಆಹಾರ ಆಯ್ಕೆ ಮಾಡುವುದು ಮುಖ್ಯ. ನಮ್ಮ ದೇಹದ ಯಂತ್ರವನ್ನು ಸರಿಯಾಗಿ ಕೆಲಸ ಮಾಡಿಸಲು ಪ್ರೋಟೀನ್ ಅತ್ಯಾವಶ್ಯಕ. ಪ್ರತಿದಿನವೂ ಅಲ್ಪ ಪ್ರಮಾಣದಲ್ಲಾದರೂ ಈ ಪ್ರೋಟೀನ್ ಪವರ್ ಫುಡ್ಸ್‌ಗಳನ್ನು ಸೇವಿಸುವ ಮೂಲಕ ನೀವು ಮತ್ತು ನಿಮ್ಮ ಕುಟುಂಬ ಆರೋಗ್ಯಪೂರ್ಣ ಜೀವನದ ದಾರಿ ಹಿಡಿಯಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.