ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯ ವಿಚಾರ ಕಳೆದ ಹಲವಾರು ವರ್ಷಗಳಿಂದ ಚರ್ಚೆಯಲ್ಲಿತ್ತು. ಶಾಲೆಗಳು ಇದ್ದರೂ ಅಧ್ಯಾಪಕರ ಕೊರತೆಯಿಂದಾಗಿ ಸಾವಿರಾರು ಮಕ್ಕಳ ಶಿಕ್ಷಣ ಹಿನ್ನಡೆಯಾಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ, ಸಿದ್ದರಾಮಯ್ಯ(CM Siddaramaiah) ನೇತೃತ್ವದ ರಾಜ್ಯ ಸರ್ಕಾರವು(State government) ಶಿಕ್ಷಕರ ನೇಮಕಾತಿಯ ಪ್ರಕ್ರಿಯೆಗೆ ವೇಗ ನೀಡುತ್ತಿದೆ. ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕೊನೆಯ ದಿನಾಂಕ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಅರ್ಹತೆಗಳ ಬಗ್ಗೆ ಅಧಿಕೃತ ಮಾಹಿತಿ ಬಿಡುಗಡೆ ಆಗಿದ್ದು, ನೂರಾರು ಉದ್ಯೋಗಾಕಾಂಕ್ಷಿಗಳಿಗೆ ಇದು ಶುಭವಾರ್ತೆಯಾಗಿದೆ. ಹಾಗಿದ್ದರೆ ಶಿಕ್ಷಕರ ನೇಮಕಾತಿ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ವೇಗ ಪಡೆಯುತ್ತಿದೆ. ಶಿಕ್ಷಣ ಕ್ಷೇತ್ರವೂ ಇದರಿಂದ ಹೊರತು ಆಗಿಲ್ಲ. ಇದೀಗ 2025-26 ನೇ ಸಾಲಿಗೆ ಸರಕಾರಿ ವೀಕ್ಷಣಾಲಯದಿಂದ ಹೊರಡಿಸಿರುವ ಅಧಿಕೃತ ಅಧಿಸೂಚನೆಯಂತೆ, ನಿರ್ದಿಷ್ಟ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರಿಂದ ಅಭ್ಯರ್ಥಿಗಳಿಗೆ ಸರ್ಕಾರಿ ಶಾಲೆಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸುವ ಅವಕಾಶ ದೊರೆಯಲಿದೆ.
ಈ ಸಲಿನ ನೇಮಕಾತಿ ವಿಶೇಷತೆ ಎಂದರೆ ಇದು ನಿಯಮಿತ ಶಾಲೆಗಳಿಗಲ್ಲ, ಬದಲಿಗೆ ಕಾನೂನು ಸಂಗ್ರಹಕ್ಕೆ ಒಳಪಟ್ಟ ಬಾಲಕರ ಪುನರ್ವಸತಿ ಕೇಂದ್ರಗಳಿಗೆ ‘ಅರೆಕಾಲಿಕ ಶಿಕ್ಷಕರ ನೇಮಕಾತಿ’ಗಾಗಿ ಪ್ರಕಟಣೆ ಹೊರಡಿಸಲಾಗಿದೆ.
ಯಾವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ?:
ಸರ್ಕಾರಿ ವೀಕ್ಷಣಾಲಯ, ಬೆಂಗಳೂರು ನಗರ ಸಂಸ್ಥೆಯಿಂದ 2025–26 ನೇ ಸಾಲಿಗೆ ಈ ಕೆಳಗಿನ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ:
1. ದೈಹಿಕ ಶಿಕ್ಷಣ ಶಿಕ್ಷಕರು (Yoga / Physical Instructor):
ಅರ್ಹತೆ: Diploma in Physical Education ಅಥವಾ CP.Ed.
2. ಎಜುಕೇಟರ್ (Educator):
ಅರ್ಹತೆ: D.Ed (Diploma in Education) ಪೂರೈಸಿರಬೇಕು.
3. ಸಂಗೀತ / ಆರ್ಟ್ ಕ್ರಾಫ್ಟ್ ಶಿಕ್ಷಕರು:
ಅರ್ಹತೆ: ಸಂಗೀತ ಅಥವಾ ಕಲಾ ಕ್ಷೇತ್ರದಲ್ಲಿ ಪದವಿ (Bachelor’s Degree) ಹೊಂದಿರಬೇಕು.
ಇವು ಎಲ್ಲಾ ಅರೆಕಾಲಿಕ ಹುದ್ದೆಗಳು ಆಗಿದ್ದು, ರಾಜ್ಯದ ಆಧೀನದಲ್ಲಿರುವ ಪುನರ್ವಸತಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ನಿರ್ಧರಿಸಲಾಗಿದೆ.
ಅರ್ಜಿ ಸಲ್ಲಿಕೆ ವಿಧಾನ ಹೇಗೆ?:
ಅಭ್ಯರ್ಥಿಗಳು ತಮ್ಮ ಸ್ವವಿವರಗಳನ್ನು ಒಳಗೊಂಡ ಅರ್ಜಿಯನ್ನು ಅಗತ್ಯ ದಾಖಲೆಗಳ ತ್ರಿಪ್ರತಿಯನ್ನು ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು:
ಅರ್ಜಿ ಸಲ್ಲಿಸುವಾಗ ಈ ದಾಖಲೆಗಳನ್ನು ಜೋಡಿಸಿ:
ವಿದ್ಯಾರ್ಹತೆ ಪ್ರಮಾಣಪತ್ರದ ನಕಲು (Marks Card/Degree/Diploma).
ಜನನ ಪ್ರಮಾಣಪತ್ರ/ಆಧಾರ್ ಕಾರ್ಡ್(Birth Certificate/Aadhaar Card.).
ಅನುಭವ ಪ್ರಮಾಣಪತ್ರ (ಇದ್ದಲ್ಲಿ).
ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಚಿತ್ರ.
ವಿಳಾಸ:
ಸರ್ಕಾರಿ ವೀಕ್ಷಣಾಲಯ,
ಬೆಂಗಳೂರು ನಗರ ಜಿಲ್ಲೆ,
ಸಂತೆಬೀದಿ, ಸಿದ್ದಾರ್ಥ ಬಡಾವಣೆ,
ಮಡಿವಾಳ, ಬೆಂಗಳೂರು – 560068
ಅಂತಿಮ ದಿನಾಂಕ:
ಜುಲೈ 19, ಶನಿವಾರ ಸಂಜೆ 4 ಗಂಟೆಗೆ ಮುಂಚೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ದೂರವಾಣಿ ಸಂಖ್ಯೆ – 080-25521342
ಒಟ್ಟಾರೆಯಾಗಿ, ಈ ಅರ್ಜಿ ಪ್ರಕ್ರಿಯೆಯು ಸರ್ಕಾರಿ ಹುದ್ದೆಯ ಕನಸು ಕಂಡು ತಪಸ್ಸು ಮಾಡುತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ಹೊಸ ಅವಕಾಶವನ್ನು ತೆರೆದಿದೆ. ಶಿಕ್ಷಕರಾಗಿ ಮಕ್ಕಳ ಭವಿಷ್ಯ ಕಟ್ಟುವ ಈ ಅವಕಾಸವನ್ನು ತಪ್ಪಿಸಿಕೊಳ್ಳಬೇಡಿ. ಅರ್ಜಿ ಸಲ್ಲಿಕೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವುದರಿಂದ ತಕ್ಷಣವೇ ನಿಮ್ಮ ಅರ್ಜಿಯನ್ನು ಸಿದ್ಧಪಡಿಸಿ, ವೀಕ್ಷಣಾಲಯದ ವಿಳಾಸಕ್ಕೆ ಸಲ್ಲಿಸಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.