ಜಿಎಸ್‌ಟಿ ನೋಟಿಸ್‌ ಪಡೆದ ಟೀ-ಹೋಟೆಲ್‌ ಮಾಲೀಕರಿಗೆ ಎಚ್ಚರಿಕೆ: ತಕ್ಷಣ ಉತ್ತರಿಸಿ, ಇಲ್ಲದಿದ್ದರೆ ದಂಡ ಗ್ಯಾರೆಂಟಿ!

Picsart 25 07 13 23 47 48 293

WhatsApp Group Telegram Group

ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಸಣ್ಣ ವ್ಯಾಪಾರ ವಲಯದಲ್ಲಿ (In the small business sector) ಹೊಸ ಆತಂಕವೊಂದು ಮನೆ ಮಾಡುತ್ತಿದೆ. ರಸ್ತೆ ಬದಿಯ ಟೀ ಅಂಗಡಿಗಳಿಂದ ಹಿಡಿದು ಕಿರಿಯ ಬೇಕರಿ, ಹೋಟೆಲ್, ಸಲೂನ್‌ವರೆಗೆ ಜಿಎಸ್‌ಟಿ ನೋಟಿಸ್‌ಗಳು (GST Notice) ಬರುತ್ತಿವೆ. ಇದುವರೆಗೆ ಜಿಎಸ್‌ಟಿ ನೋಂದಣಿಯಿಂದ ದೂರವಿದ್ದ, ದಿನನಿತ್ಯದ ಚಿಕ್ಕಪುಟ್ಟ ವ್ಯಾಪಾರವನ್ನೇ ಬದುಕಿನ ಬಂಡವಾಳವಾಗಿಸಿಕೊಂಡಿದ್ದ ಇವರು ಈಗ ತೆರಿಗೆ ಇಲಾಖೆಯ ಆದೇಶಕ್ಕೆ ನಿದ್ದೆ ಕಳೆದುಕೊಳ್ಳುತ್ತಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಹಿನ್ನೆಲೆಯಲ್ಲಿ ಜಿಎಸ್‌ಟಿ ತಜ್ಞರು (GST Specialist) ಎಚ್ಚರಿಕೆ ನೀಡಿದ್ದು, ನೋಟಿಸ್‌ ಬಂದವರೆಲ್ಲರೂ ತಕ್ಷಣವೇ ಸ್ಪಂದಿಸಬೇಕಾಗಿದೆ. ತಪ್ಪಿದರೆ, ಹೆಚ್ಚು ಬಡ್ಡಿ, ದಂಡ ಮತ್ತು ಕಾನೂನು ಚಟುವಟಿಕೆಗೆ ಒಳಪಡುವ ಅಪಾಯ ತಲೆದೋರಲಿದೆ ಎಂದು ತಿಳಿಸಿದ್ದಾರೆ. ನೋಟಿಸ್‌ ಬಂದವರು ತಕ್ಷಣವೇ ಸ್ಪಂದಿಸದೇ ಹೋದಲ್ಲಿ ಯಾವ ತೊಂದರೆಗಳು ಹಾಗುತ್ತವೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು, ಹಲವಾರು ಬೇಕರಿ, ಹೋಟೆಲ್, ಟೀ ಅಂಗಡಿ, ಸಲೂನ್ ಮಾಲೀಕರುಗೂಡಾ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಬಂಧಿಸಿದ ನೋಟಿಸ್‌ಗಳನ್ನು (Notice) ಪಡೆದಿದ್ದಾರೆ. ಇದರಿಂದಾಗಿ ಸಣ್ಣ ಮಟ್ಟದ ವ್ಯಾಪಾರಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ನೋಟಿಸ್ ಗಳನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತವಾದ ಕ್ರಮ ತೆಗೆದುಕೊಳ್ಳುವುದು ಯಾಕೆ ಮುಖ್ಯ ಎಂಬುದರ ಬಗ್ಗೆ ತಜ್ಞರು ಈಗ ಮುಖ್ಯವಾದ ಸಲಹೆಗಳನ್ನು ನೀಡಿದ್ದಾರೆ.

ಯುಪಿಐ ವಹಿವಾಟು ಮೇಲೆ ಕಣ್ಣಿಟ್ಟಿರುವ ತೆರಿಗೆ ಇಲಾಖೆ:

ದೇಶದ ನಗದುರಹಿತ ವಹಿವಾಟು ವ್ಯವಸ್ಥೆಯು ವೇಗವಾಗಿ ಬೆಳೆಯುತ್ತಿರುವಂತೆಯೇ, ಇತ್ತೀಚೆಗೆ ಹೆಚ್ಚು ವ್ಯಾಪಾರಸ್ಥರು ಯುಪಿಐ ಪಾವತಿ ವ್ಯವಸ್ಥೆಯನ್ನು (UPI Payment system) ಅಳವಡಿಸಿಕೊಂಡಿದ್ದಾರೆ. ಈ ಪೈಕಿ ಹೆಚ್ಚಿನವರು ಜಿಎಸ್‌ಟಿ ನೋಂದಣಿ ಮಾಡಿಸದೇ ಇದ್ದರೂ ಈ ಮಾರ್ಗದಲ್ಲಿ ಸಾಕಷ್ಟು ಹಣಕಾಸು ವಹಿವಾಟು ನಡೆಸುತ್ತಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆ ಈಗ ಈ ವ್ಯವಹಾರಗಳ ಡೇಟಾವನ್ನು ನಿಖರವಾಗಿ ಪರಿಶೀಲಿಸಲು ತೊಡಗಿದೆ. ವಾರ್ಷಿಕ ₹40 ಲಕ್ಷಕ್ಕೂ ಅಧಿಕ ಪಾವತಿ ಸಂಗ್ರಹಿಸಿದವರ ಪಟ್ಟಿ ತಯಾರಿಸಿ, ಅವರಿಗೆ ಜಿಎಸ್‌ಟಿ ನೋಂದಣಿಗೆ (GST Registration) ಸಂಬಂಧಿಸಿದ ನೋಟಿಸ್‌ಗಳನ್ನು ಕಳುಹಿಸಲು ಆರಂಭಿಸಲಾಗಿದೆ.

ನೋಟಿಸ್‌ಗೆ ಉತ್ತರಿಸಿ, ದಂಡ ತಪ್ಪಿಸಿಕೊಳ್ಳಿ:

ರೆಜಿನಾ ಜಿಎಸ್‌ಟಿ ಕನ್ಸಲೆಂಟ್ಸ್‌ನ ಎಂ. ಚಂದ್ರಶೇಖರ್ ಅವರ ಮಾಹಿತಿ ಪ್ರಕಾರ, “ನೋಟಿಸ್ ಬಂದ ಕೂಡಲೇ ಅದಕ್ಕೆ ಸಂಬಂಧಿಸಿದ ಉತ್ತರವನ್ನು ಲಿಖಿತ  ರೂಪದಲ್ಲಿ (writing formate) ಸಲ್ಲಿಸಿದರೆ, ದಂಡ ಮತ್ತು ಬಡ್ಡಿ ತಪ್ಪಿಸಿಕೊಳ್ಳಬಹುದು. ಎಲ್ಲ ವ್ಯವಹಾರಗಳು ಜಿಎಸ್‌ಟಿಗೆ ಒಳಪಟ್ಟವೇನಲ್ಲ. ಕೆಲವೊಂದು ಸೇವೆ ಅಥವಾ ಸರಕುಗಳಿಗೆ ಜಿಎಸ್‌ಟಿ ಅನ್ವಯವಾಗದಿರಬಹುದು. ಅಂಥ ವಿವರವನ್ನು ಸೂಕ್ತ ದಾಖಲೆಗಳೊಂದಿಗೆ (Related documents) ನೀಡಿದರೆ ತೆರಿಗೆ ಮೊತ್ತ ಕಡಿಮೆಯಾಗಬಹುದು.”
ಇನ್ನು, “ವಾರ್ಷಿಕ ₹40 ಲಕ್ಷದ ಮೀರಿದ ಸರಕು ಪೂರೈಕೆದಾರರು ಹಾಗೂ ₹20 ಲಕ್ಷ ಮೀರಿದ ಸೇವಾ ಪೂರೈಕೆದಾರರು ಜಿಎಸ್‌ಟಿ ನೋಂದಣಿಗೆ ಒಳಪಡಬೇಕಾಗಿದೆ.”

ರಾಜಿ ತೆರಿಗೆ(Composition Scheme) ಯೋಜನೆ, ಸಣ್ಣ ವ್ಯಾಪಾರಿಗಳಿಗೆ ರಕ್ಷಣಾ ಸಂಕೇತ:

ಯು. ರಾವ್ ಅಂಡ್ ಅಸೋಸಿಯೇಟ್ಸ್‌ನ ಮಧುಕುಮಾರ್ ಡಿ. ಅವರ ಪ್ರಕಾರ, ವಾರ್ಷಿಕ ₹1.50 ಕೋಟಿ ತನಕ ವಹಿವಾಟು ನಡೆಸುವವರು ‘ರಾಜಿ ತೆರಿಗೆ ಯೋಜನೆ (Composition Scheme)’ ಅನ್ನು ಆಯ್ಕೆ ಮಾಡಿಕೊಂಡರೆ, ಕಡಿಮೆ ಪ್ರಮಾಣದ ಜಿಎಸ್‌ಟಿ ಪಾವತಿಸಿ, ಕಾನೂನು ಸವಾಲುಗಳಿಂದ ದೂರ ಉಳಿಯಬಹುದು.
“ಈ ಯೋಜನೆಯಡಿಯಲ್ಲಿ ವ್ಯಾಪಾರಿಗಳು ತಮ್ಮ ವಾರ್ಷಿಕ ವಹಿವಾಟಿನ ಶೇ.1ರಷ್ಟು ಮಾತ್ರ ತೆರಿಗೆಯಾಗಿ ಪಾವತಿಸಬಹುದು. ಆದರೆ ಇದರಿಂದ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (Input tax credit) ಪಡೆಯಲಾಗದು. ಆದರೂ ಒಟ್ಟಾರೆ ತೆರಿಗೆ ಭಾರ ಕಡಿಮೆಯಾಗುತ್ತದೆ.”

ಹೂಡಿಕೆಯ ಆಧಾರದ ಮೇಲೆ ನೋಡುವುದಾದರೆ,
ಗಡವು ಮೀರಿದರೂ ನೋಂದಣಿ ಮಾಡದೇ ಇದ್ದರೆ, ನೋಟಿಸ್ ಗ್ಯಾರಂಟಿ (Notice guaranty).
ನೋಟಿಸ್‌ಗೆ ಉತ್ತರ ನೀಡದೆ ಹೋದರೆ, ದಂಡ ಮತ್ತು ಬಡ್ಡಿ ಅನಿವಾರ್ಯ.
ರಾಜಿ ತೆರಿಗೆ ಆಯ್ಕೆ ಮಾಡಿದರೆ, ಕಡಿಮೆ ದರದಲ್ಲಿ ಸುಲಭವಾಗಿ ತೆರಿಗೆ ಪಾವತಿ ಸಾಧ್ಯ.

ಒಟ್ಟಾರೆಯಾಗಿ, ನಾನು ಚಿಕ್ಕ ಟೀ ಅಂಗಡಿ ಇಟ್ಟುಕೊಂಡಿದ್ದೇನೆ , ನನಗೆ ಜಿಎಸ್‌ಟಿ (GST) ಅನ್ವಯವಾಗದು ಎಂಬ ಭ್ರಮೆಯಲ್ಲಿ ಸಣ್ಣ ವ್ಯಾಪಾರಿಗಳು ಇರಬಾರದು. ಯುಪಿಐ ಮೂಲಕ ಹಣ ಸ್ವೀಕರಿಸುತ್ತಿದ್ದೀರಾ? ವಾರ್ಷಿಕ ₹40 ಲಕ್ಷದ ಗಡಿ ಮೀರಿ ವ್ಯವಹಾರ ನಡೆದಿದೆ ಎಂದಾದರೆ, ಈಗಲೇ ಎಚ್ಚೆತ್ತುಕೊಳ್ಳಿ. ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್(bank statement), ಲೆಕ್ಕಪತ್ರಗಳನ್ನು ಪರಿಶೀಲಿಸಿ. ನೋಟಿಸ್ ಬಂದಿದೆ ಎಂದರೆ ತಕ್ಷಣ ಸ್ಪಂದಿಸಿ. ಅದನ್ನು ನಿರ್ಲಕ್ಷಿಸಿದರೆ, ಕಾನೂನು ಪ್ರಕ್ರಿಯೆಗಳಿಗೆ ಸಿಲುಕಿಕೊಳ್ಳುತ್ತೀರಾ

ಗಮನಿಸಿ(Notice) : ನೋಟಿಸ್‌ಗೆ ಉತ್ತರ ನೀಡುವ ಪ್ರಕ್ರಿಯೆ ಬಗ್ಗೆ ಅಥವಾ ರಾಜಿ ತೆರಿಗೆ ಯೋಜನೆಗೆ ಅರ್ಜಿ ಸಲ್ಲಿಸುವ ಬಗ್ಗೆ ನಿಮ್ಮ ಸ್ಥಳೀಯ ಜಿಎಸ್‌ಟಿ ಕಚೇರಿ (GST Office) ಅಥವಾ ಅನುಭವಿ ಜಿಎಸ್‌ಟಿ ತಜ್ಞರಿಂದ ಮಾರ್ಗದರ್ಶನ ಪಡೆಯುವುದು ಸೂಕ್ತ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!