ನಗರ ಜೀವನದಲ್ಲಿ ವಾಹನ ಸಂಚಾರ ಅತ್ಯಂತ ಸಾಮಾನ್ಯವಾಗಿದೆ. ಪ್ರತಿದಿನವೂ ನಾವೆಲ್ಲಾ ರಸ್ತೆಗಳಲ್ಲಿ ಓಡಾಡುವಾಗ ಟ್ರಾಫಿಕ್ ಪೊಲೀಸ್‌ರನ್ನು ನೋಡುತ್ತೇವೆ. ಕೆಲವೊಮ್ಮೆ ಅವರು ನಮ್ಮ ಗಾಡಿಯನ್ನು ತಡೆದು ತಪಾಸಣೆ ನಡೆಸುತ್ತಾರೆ. ಈ ವೇಳೆ ಹೆಚ್ಚಿನವರು ಭಯ ಬೀಳುತ್ತಾರೆ. ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ಇದರಿಂದ ಅವರೂ ತೊಂದರೆ ಅನುಭವಿಸುತ್ತಾರೆ. ಬೇರೆಯವರಿಗೂ ತೊಂದರೆ ಕೊಡುತ್ತಾರೆ. ಹಾಗಿದ್ದರೆ ಟ್ರಾಫಿಕ್ ಪೊಲೀಸರು ನಮ್ಮ ಗಾಡಿಯನ್ನು ಹಿಡಿದಾಗ ನಾವು ಏನು ಮಾಡಬೇಕು? “ಅವರು ಯಾವಾಗ ನಮ್ಮ ವಾಹನ ತಡೆಯಬಹುದೆ?” ಅಥವಾ “ಅವರಿಗೆ ಫೈನ್ ಹಾಕೋ ಅಧಿಕಾರ ಇದೆಯೇ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಇಂದಿನ ವೇಗದ ಮತ್ತು ವಾಹನಗಳ ನಿತ್ಯ ಓಡಾಟದಲ್ಲಿ ರಸ್ತೆ ಸುರಕ್ಷತೆ ಹಾಗೂ ಸರಿಯಾದ ಸಂಚಾರ ವ್ಯವಸ್ಥೆ ಕಾಪಾಡುವುದು ಒಂದು ದೊಡ್ಡ ಹೊಣೆಗಾರಿಕೆ. ಈ ಹೊಣೆಗಾರಿಕೆಯನ್ನು ನಿಭಾಯಿಸುವ ಪ್ರಮುಖ ಶಕ್ತಿಯು ಟ್ರಾಫಿಕ್ ಪೊಲೀಸ್. ಅವರು ಕೇವಲ ಚಾಲಕರ ತಪ್ಪುಗಳಿಗಾಗಿ ದಂಡ ಹಾಕುವವರಲ್ಲ, ಬದಲಾಗಿ ಸಾರ್ವಜನಿಕರ ಸುರಕ್ಷತೆಗಾಗಿ ಕಾನೂನು ಪಾಲನೆಯ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಾರೆ. ಆದರೆ ಸಾಮಾನ್ಯವಾಗಿ ಸಾರ್ವಜನಿಕರಿಗೆ ಕೆಲವೊಂದು ಗೊಂದಲಗಳು, ಭಯ ಅಥವಾ ತಿಳಿವಳಿಕೆಯ ಕೊರತೆಯಿಂದಾಗಿ ಟ್ರಾಫಿಕ್ ಪೊಲೀಸ್ ಗಾಡಿಯನ್ನು ತಡೆದಾಗ ತಕ್ಷಣ ಗಾಬರಿಯಾಗುತ್ತಾರೆ ಅಥವಾ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ.
ಪೊಲೀಸರು ಯಾವಾಗ ನಿಮ್ಮ ವಾಹನ ತಡೆಯಬಹುದು?:
ಟ್ರಾಫಿಕ್ ಪೊಲೀಸ್ ನಿಮ್ಮನ್ನು ತಡೆದಾಗ ಗಾಬರಿಯಾಗಬಾರದು. ಅವರು ತಡೆಯುವುದು ನಿಮ್ಮ ತಪ್ಪಿನ ತಪಾಸಣೆಗಾಗಿ ಅಥವಾ ನಿಯಮ ಉಲ್ಲಂಘನೆ ಕಂಡು ಬಂದಿದ್ದರೆ ಮಾತ್ರ. ಉದಾಹರಣೆಗಾಗಿ,
ಹೆಲ್ಮೆಟ್ ಹಾಕದೇ ಬೈಕ್ ಓಡಿಸಿದರೆ.
ಸಿಗ್ನಲ್ ಜಂಪ್ ಮಾಡಿದರೆ.
ತಪಾಸಣಾ ದಾಖಲೆಗಳಿಲ್ಲದೇ ವಾಹನ ಚಲಾಯಿಸಿದರೆ.
ಷರತ್ತುಬದ್ಧ ವಿಮೆ, ಆರ್‌ಸಿ, ಡಿಎಲ್ ಇಲ್ಲದಿದ್ದರೆ.
ಮೊಬೈಲ್ ಉಪಯೋಗಿಸಿ ಚಾಲನೆ ಮಾಡುವುದು.
ಡ್ರಂಕ್ ಅಂಡ್ ಡ್ರೈವ್.
ಓವರ್ ಸ್ಪೀಡ್ ಅಥವಾ ಅಲೌಡ್ ಹಾರ್ನ್ ಬಳಸುವುದು.
ಈ ಸಂದರ್ಭದಲ್ಲಿ ಪೊಲೀಸರು ನಿಮ್ಮನ್ನು ತಡೆದು ವಿಚಾರಣೆ ನಡೆಸಬಹುದು. ನೀವು ತಪ್ಪು ಮಾಡಿದ್ದರೆ ಅವರನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಆದರೆ ನೀವು ಎಲ್ಲವೂ ಸರಿಯಾಗಿ ಪಾಲಿಸಿಕೊಂಡು ಬಂದಿದ್ದರೆ, ನೀವು ಕೇಳಬಹುದಾದ ಹಕ್ಕುಗಳಿವೆ. ಅವುಗಳು ಈ ಕೆಳಗಿಂನಂತಿವೆ.
ನಿಮ್ಮ ಹಕ್ಕುಗಳು ಏನು?
1. ಯಾರು ತಡೆಯುತ್ತಿದ್ದಾರೆ ಎಂಬುದನ್ನು ಕೇಳಿ:
ಯಾರ ಅಧಿಕಾರದಲ್ಲಿ ನಿಮ್ಮನ್ನು ತಡೆದಿದ್ದಾರೆ ಎಂಬುದನ್ನು ವಿನಮ್ರವಾಗಿ ಕೇಳಿ.
2. ಅಧಿಕಾರಿಗಳ ಗುರುತನ್ನು ನೋಡಿ:
ಪೊಲೀಸ್ ಸಿಬ್ಬಂದಿಯ ಹೆಸರು, ಬ್ಯಾಡ್ಜ್ ನಂಬರ್ ಹಾಗೂ ಹುದ್ದೆ ಕೇಳಿ ಅಥವಾ ಗುರುತಿಸಿ.
3. ಅವರು ಕಾನ್ಸ್ಟೇಬಲ್ ಆಗಿದ್ದರೆ:
ಕಾನ್ಸ್ಟೇಬಲ್‌ಗೆ ನೇರವಾಗಿ ದಂಡ ಹಾಕುವ ಅಧಿಕಾರ ಕೇವಲ ₹100 ರೂ.ನಷ್ಟು ಮಾತ್ರ. ಹೆಚ್ಚಿನ ದಂಡ ವಿಧಿಸಲು ಅವರಿಗೆ ಅಧಿಕಾರವಿಲ್ಲ.
4. ಎಎಸ್ಐ ಅಥವಾ ಸಬ್ ಇನ್ಸ್ಪೆಕ್ಟರ್ ಇದ್ದರೆ:
ಅವರು ದಂಡ ವಿಧಿಸಬಹುದು. ನೀವು ಇಲ್ಲಿಯವರೆಗೆ ಕಟ್ಟದ ಎಲ್ಲ ಫೈನ್‌ಗಳನ್ನು ಅವರು ಒಂದೇ ವೇಳೆ ಕೇಳಬಹುದು.
ಫೈನ್ ಇದ್ದರೆ ಏನು ಮಾಡಬೇಕು?:
ಫೈನ್ ಇದ್ದಾಗ ನೀವು ಅದನ್ನು ಸ್ಥಳದಲ್ಲೇ ಪಾವತಿಸಬಹುದು ಅಥವಾ ನಂತರ ಆನ್ಲೈನ್ ಮೂಲಕ ಪಾವತಿಸಬಹುದು.
₹3,000 ಅಥವಾ ₹4,000 ಆಗಿದ್ದರೆ, ಅದನ್ನು ತಕ್ಷಣ ಪಾವತಿಸಲು ಆಗದಿದ್ದರೆ, ನಿಮ್ಮ ವಾಹನದ ದಾಖಲೆಗಳನ್ನು (RC, DL) ಪೋಲಿಸರಿಗೆ ತಾತ್ಕಾಲಿಕವಾಗಿ ನೀಡಬಹುದು. ತದನಂತರ ನೀವು ಮನೆಗೆ ಹೋಗಬಹುದು. ನಂತರ 15 ದಿನಗಳೊಳಗೆ ಪಾವತಿ ಮಾಡಿ, ದಾಖಲೆಗಳನ್ನು ಹಿಂತೆಗೆದುಕೊಳ್ಳಬೇಕು.
ಮುಂಬೈ, ಬೆಂಗಳೂರು ಮೊದಲಾದ ನಗರಗಳಲ್ಲಿ ಹೊಸ ಕ್ರಮಗಳು:
ಇತ್ತೀಚೆಗೆ ಬೆಂಗಳೂರು ಪೊಲೀಸ್ ಕಮಿಷನರ್ ವಿಡಿಯೋ ಮೂಲಕವೇ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ, ಅವರ ಗಾಡಿಯಲ್ಲಿ ಎಷ್ಟು ಫೈನ್ ಇದೆ, ಯಾವ ಯಾವ ಪ್ರಕರಣಗಳಿವೆ ಎಂಬುದನ್ನು ಮೊಬೈಲ್ ಆಪ್ ಮೂಲಕಲೇ ಪರಿಶೀಲಿಸಬಹುದಾಗಿದೆ.
ವಾಹನದ ನಂಬರ್ ಹಾಕಿ ಆಪ್ ಅಥವಾ ಸರ್ಕಾರದ ಪೋರ್ಟಲ್‌ನಲ್ಲಿ ಫೈನ್ ಡಿಟೇಲ್ಸ್ ನೋಡಿ ಪಾವತಿ ಮಾಡಬಹುದು.
ನಿಮ್ಮ ಫೈನ್ಸ್ ಅನ್ನು ಹೇಗೆ ಪರಿಶೀಲಿಸಬಹುದು?:
ನಿಮ್ಮ ವಾಹನದ ಫೈನ್‌ಗಳ ಮಾಹಿತಿಗಾಗಿ ಈ ಪೋರ್ಟಲ್ ಅಥವಾ ಆಪ್ ಉಪಯೋಗಿಸಬಹುದು:
https://echallan.parivahan.gov.in
ಅಥವಾ ಪ್ಲೇ ಸ್ಟೋರ್‌ನಲ್ಲಿ “Karnataka One”, “Traffic Police App”, ಅಥವಾ “Parivahan Sewa” ಬಳಸಬಹುದು.
ವಿಶೇಷ ಸೂಚನೆ:
ಸರ್ಕಾರಿ 50% ರಿಯಾಯಿತಿ ಯೋಜನೆ,
ಕೆಲವೊಮ್ಮೆ ಸರ್ಕಾರ 50% ರಿಯಾಯಿತಿಯನ್ನು ಘೋಷಿಸುತ್ತದೆ. ಈ ಸಂದರ್ಭದಲ್ಲಿ ಪೆಂಡಿಂಗ್ ಫೈನ್‌ಗಳನ್ನು ಅರ್ಧದಷ್ಟು ಪಾವತಿಸಿ ಪ್ರಕರಣಗಳನ್ನು ಮುಕ್ತಾಯ ಮಾಡಿಕೊಳ್ಳುವ ಅವಕಾಶ ಸಿಗುತ್ತದೆ. ಈ ತಾತ್ಕಾಲಿಕ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವುದು ಉತ್ತಮ.
ಒಟ್ಟಾರೆಯಾಗಿ, ಟ್ರಾಫಿಕ್ ನಿಬಂಧನೆಗಳನ್ನು ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿ. ನಿಯಮ ಉಲ್ಲಂಘನೆ ಮಾಡಿದಾಗ ಮಾತ್ರ ಪೊಲೀಸರು ವಾಹನ ತಡೆಯುತ್ತಾರೆ. ಆದರೆ ನೀವು ನಿಯಮಗಳನ್ನು ಪಾಲಿಸುತ್ತಿದ್ದರೆ, ಧೈರ್ಯವಾಗಿ ಮಾತನಾಡಿ, ನಿಮ್ಮ ಹಕ್ಕುಗಳನ್ನು ಸದ್ಬಳಕೆ ಮಾಡಿಕೊಳ್ಳಬಹುದು.
ಈ ವಿಧಾನಗಳನ್ನು ನೀವು ಪ್ರಯತ್ನಿಸಿದ್ದೀರಾ? ಯಾವುದು ನಿಮಗೆ ಹೆಚ್ಚು ಸಹಾಯ ಮಾಡಿತು?
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.