ಭಾರತದ ಲಕ್ಷಾಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರಿಗಿದು (State government employees) ಬಹು ನಿರೀಕ್ಷಿತ ಹಾಗೂ ಸಂತಸದ ಸುದ್ದಿ. ಮುಂಬರುವ 8ನೇ ವೇತನ ಆಯೋಗ (8th Central Pay Commission) ಜಾರಿಯಾಗಿ ಶಿಫಾರಸುಗಳು ಅನ್ವಯವಾದರೆ, ಸರ್ಕಾರಿ ಉದ್ಯೋಗಿಗಳ ಸಂಬಳದಲ್ಲಿ ಭರ್ಜರಿ ಏರಿಕೆಯ ಸಾಧ್ಯತೆ ಇದೆ. ಬೋಕರೇಜ್ ಸಂಸ್ಥೆಯಾದ ಆಯಂಬಿಟ್ ಕ್ಯಾಪಿಟಲ್‌ನ(Ambit Capital, a brokerage firm) ವರದಿಯ ಪ್ರಕಾರ, ಈ ಹೊಸ ವೇತನ ಆಯೋಗದ ಶಿಫಾರಸುಗಳು ಜಾರಿಯಾದರೆ ನೌಕರರ ವೇತನ ಶೇ. 30 ರಿಂದ 34 ರಷ್ಟು ವರೆಗೆ ಹೆಚ್ಚಾಗಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ನೌಕರರ ಆರ್ಥಿಕ ಸ್ಥಿತಿಯನ್ನು ಉತ್ತೇಜಿಸಲು ಹಾಗೂ ಖಾಸಗಿ ಕ್ಷೇತ್ರದ ವೇತನ ಸ್ಪರ್ಧೆಯಲ್ಲಿ ಹಿಂದೆ ಓಡುವಂತ ಸ್ಥಿತಿ ನಿರ್ಮಾಣವಾಗದಂತೆ ಮಾಡಲು 8ನೇ ವೇತನ ಆಯೋಗದ (8th Central Pay Commission) ಚರ್ಚೆಗಳು ಚುರುಕುಗೊಂಡಿವೆ.
2026ರಿಂದ ಜಾರಿಯಾಗುವ ಸಾಧ್ಯತೆ:
ಹೆಚ್ಚಳದ ನಿರೀಕ್ಷೆ 2026ರ ಜನವರಿಯಿಂದಲೇ ಆರಂಭವಾಗಬಹುದು. ವರದಿಗಳ ಪ್ರಕಾರ 2025ರ ಕೊನೆಗೆ 8ನೇ ವೇತನ ಆಯೋಗವನ್ನು ಅಧಿಕೃತವಾಗಿ ರಚಿಸಿ, ಅದರ ಶಿಫಾರಸುಗಳನ್ನು 2026 ಜನವರಿಯಿಂದ ಜಾರಿಗೆ ತರಲು ಕೇಂದ್ರ ಸರ್ಕಾರ (Central government) ಚಿಂತನೆ ನಡೆಸುತ್ತಿದೆ. 7ನೇ ವೇತನ ಆಯೋಗ 2016ರಲ್ಲಿ ಜಾರಿಗೆ ಬಂದು, 2025ರ ಡಿಸೆಂಬರ್‌ವರೆಗೆ ಚಲಾಯಿಸುತ್ತದೆ. ಮುಂದಿನ ಆಯೋಗದ ಶಿಫಾರಸುಗಳು 10 ವರ್ಷಗಳ ಅವಧಿಗೆ ಅನ್ವಯವಾಗುವ ಸಾಧ್ಯತೆಯಿದೆ.
ಫಿಟೆಂಟ್ ಫ್ಯಾಕ್ಟರ್ ಏರಿಕೆ- ಏನು ಇದರ ಅರ್ಥ?:
ವಾಸ್ತವವಾಗಿ, ವೇತನ ಶಿಫಾರಸುಗಳಲ್ಲಿ ಫಿಟೆಂಟ್ ಫ್ಯಾಕ್ಟರ್ (Fitment Factor) ಪ್ರಮುಖ ಅಂಶವಾಗಿದೆ. ಇದು ನೌಕರರ ಪರಿಷ್ಕೃತ ವೇತನ ನಿರ್ಧಾರಕ್ಕೆ ಅಳತೆಗೋಲೆ ಆಗುತ್ತದೆ. ಮೂಲ ವೇತನದ ಮೇಲೆ ಈ ಫ್ಯಾಕ್ಟರ್ ಅನ್ನು ಗುಣಿಸಿದರೆ, ನೌಕರರ ಹೊಸ ಸಂಬಳ ಹೊರಹೊಮ್ಮುತ್ತದೆ.
7ನೇ ವೇತನ ಆಯೋಗದಲ್ಲಿ ಫಿಟೆಂಟ್ ಫ್ಯಾಕ್ಟರ್ ಅನ್ನು 2.57 ಎಂದು ನಿಗದಿಪಡಿಸಿ, ಕನಿಷ್ಠ ಮೂಲ ವೇತನವನ್ನು ₹7,000ದಿಂದ ₹18,000ರ ಮಟ್ಟಿಗೆ ಹೆಚ್ಚಿಸಲಾಗಿತ್ತು. ಈಗ 8ನೇ ಆಯೋಗದಲ್ಲಿ (8th commission) ಈ ದರವನ್ನು 1.83ರಿಂದ 2.46 ಶ್ರೇಣಿಗೆ ಏರಿಸಬಹುದೆಂಬ ನಿರೀಕ್ಷೆ ಇದೆ.
ಪೂರ್ವದ ಮತ್ತು ಪ್ರಸ್ತುತ ನಿರೀಕ್ಷೆಗಳ ವ್ಯತ್ಯಾಸ:
ಆಯಂಬಿಟ್ ಕ್ಯಾಪಿಟಲ್ ನೀಡಿರುವ ಅಂದಾಜಿನ ಪ್ರಕಾರ, ಈ ಬಾರಿಗೆ ವೇತನ ಏರಿಕೆ ಶೇ. 30-34ರಷ್ಟು ಇರಬಹುದು. 2016ರಲ್ಲಿ ಜಾರಿಗೆ ಬಂದ 7ನೇ ವೇತನ ಆಯೋಗವು ನೌಕರರಿಗೆ ಶೇ. 14.3ರಷ್ಟು ಸಂಬಳ ಹೆಚ್ಚಳವನ್ನು ಮಾತ್ರ ನೀಡಿತ್ತು. ಹಾಗಾಗಿ, ಈ ಬಾರಿಗೆ ಅಧಿಕ ಪ್ರಮಾಣದ ಬದಲಾವಣೆ ಸಾಧ್ಯವೆಂದು ಆರ್ಥಿಕ ತಜ್ಞರು (Economic specialist) ನಿರೀಕ್ಷಿಸುತ್ತಿದ್ದಾರೆ.
ಡಿಎ ಮತ್ತು ಡಿಆರ್ ನ ಪರಿಣಾಮ:
ಹಲವಾರು ನೌಕರರ ಗಮನ ಡಿಎ (Dearness Allowance) ಮತ್ತು ಡಿಆರ್ (Dearness Relief) ಮೇಲೆ ಕೂಡ ಇದೆ. ಈ ಬದಲಾವಣೆಗಳು ಸಂಬಳವನ್ನು ನೇರವಾಗಿ ಪ್ರಭಾವಿತಗೊಳಿಸುತ್ತವೆ. ಹಿಂದೆ 7ನೇ ಆಯೋಗದ ಜಾರಿಗೆ ಈ ಭತ್ಯೆಗಳ ಪ್ರಮಾಣ ಶೂನ್ಯಕ್ಕೆ ಇಳಿಸಲಾಯಿತು. ಆದರೆ ಈ ಬಾರಿ ಹೊಸ ಆಯೋಗವು ಯಾವ ರೀತಿಯ ಶಿಫಾರಸು ಮಾಡುತ್ತದೆ ಎಂಬುದುನ್ನು ನಿರೀಕ್ಷಿಸಲಾಗಿದೆ.
ಒಟ್ಟಾರೆಯಾಗಿ, 8ನೇ ವೇತನ ಆಯೋಗದ ಅನುಷ್ಠಾನದಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಲ್ಲಿ (Central and State government employees) ಸಂಬಳ ಹೆಚ್ಚಳದ ನಿರೀಕ್ಷೆ ಹೊಸ ತಿರುವು ಪಡೆಯುತ್ತಿದೆ. 2026ರ ಆರಂಭದಿಂದಲೇ ಈ ಶಿಫಾರಸುಗಳು ಜಾರಿಯಾಗುವ ಸಾಧ್ಯತೆ ಇರುವುದರಿಂದ, ದೇಶದ ನೌಕರ ವರ್ಗದಲ್ಲಿ ಈಗಲೇ ನಿರೀಕ್ಷೆಯ ಚಿಗುರು ಮೂಡುತ್ತಿದೆ. ಸರ್ಕಾರದಿಂದ ಅಧಿಕೃತ ಘೋಷಣೆ (Official announcement from Govt) ಹೊರಬರುವವರೆಗೆ ಎಲ್ಲವೂ ಅಂದಾಜುಮಾತ್ರವಿದ್ದರೂ, ನೌಕರರ ಆಶಾಭಾವನೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.