ಬೆಂಗಳೂರು(Benagaluru) ನಗರದಲ್ಲಿ ಮನೆ ಕಟ್ಟುವ ಕನಸು ಸಾಕಾರಗೊಳಿಸಲು ಇಚ್ಛಿಸುವ ಲಕ್ಷಾಂತರ ನಾಗರಿಕರಿಗೆ ಬಿಬಿಎಂಪಿ ಇದೀಗ ಹೊಸ ಆಶಾಕಿರಣ ನೀಡಿದೆ. ಹಲವು ವರ್ಷಗಳಿಂದ ಮನೆ ಕಟ್ಟಲು ಅಂಗೀಕಾರಕ್ಕಾಗಿ ಅಧಿಕಾರಿಗಳ ಕಚೇರಿಗಳಲ್ಲಿ ಅಲೆದಾಡಬೇಕಾದ ದುರಾವಸ್ಥೆಗೆ ಬೀಗು ಹಾಕುವ ಮಹತ್ವದ ಕ್ರಮವೊಂದನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕೈಗೊಂಡಿದೆ. ನಂಬಿಕೆ ನಕ್ಷೆ ಎಂಬ ಹೆಸರಿನ ಹೊಸ ಯೋಜನೆಯಡಿ, ಈಗ ಕೇವಲ 24 ಗಂಟೆಗಳಲ್ಲಿ ತಾತ್ಕಾಲಿಕ ನಕ್ಷೆ(Provisional map) ನೀಡಲಾಗುತ್ತಿದೆ. ಇದು ಮನೆ ಕಟ್ಟುವ ಮುನ್ನ ವಿನಂತಿ ಪ್ರಕ್ರಿಯೆ ಸುಗಮಗೊಳಿಸಲು ಮಾರ್ಗಸೂಚಿಯಂತಾಗಿದೆ. ಹಾಗಿದ್ದರೆ ಯೋಜನೆಯ ಮುಖ್ಯ ಲಕ್ಷಣಗಳು ಏನು? ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು ಯಾವುವು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಬೆಂಗಳೂರು ನಗರದಲ್ಲಿ ಮನೆ ನಿರ್ಮಿಸಲು ಪ್ರಯತ್ನಿಸುತ್ತಿರುವ ಜನಸಾಮಾನ್ಯರಿಗೆ ಈಗಿನಿಂದ ನೊಂದಣಿಗಳ lengthy process ಇಲ್ಲ, ಮಧ್ಯವರ್ತಿಗಳ ಹಾವಳಿ ಇಲ್ಲ, ತಿಂಗಳುಗಟ್ಟಲೆ ಕಾಯುವುದು ಕೂಡ ಇಲ್ಲ! ಏಕೆಂದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ಮಹತ್ವಾಕಾಂಕ್ಷಿ ‘ನಂಬಿಕೆ ನಕ್ಷೆ(Nambike nakshe)’ ಯೋಜನೆಯನ್ನು ಮರುಚಾಲನೆ ಮಾಡಿ, 24 ಗಂಟೆಗಳ ಒಳಗೆ ತಾತ್ಕಾಲಿಕ ನಕ್ಷೆ ನೀಡುವ ವ್ಯವಸ್ಥೆ ಆರಂಭಿಸಿದೆ.
ಇದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(Deputy Chief Minister D.K. Shivakumar) ಅವರ ಪ್ರಾಮುಖ್ಯತೆಯ ಯೋಜನೆಗಳಲ್ಲಿ ಒಂದಾಗಿದ್ದು, ಮಾರ್ಚ್(March) 2024ರಿಂದ ಈ ವ್ಯವಸ್ಥೆ ಕಾರ್ಯರೂಪಕ್ಕೆ ಬಂದಿದೆ. ಇದರಡಿಯಲ್ಲಿ 375 ಚದರ ಮೀಟರ್ (ಸುಮಾರು 4,000 ಚದರ ಅಡಿ) ವಿಸ್ತೀರ್ಣದವರೆಗಿನ ವಸತಿ ಕಟ್ಟಡಗಳಿಗಾಗಿ ತಾತ್ಕಾಲಿಕ ನಕ್ಷೆಯನ್ನು ಯಾವುದೇ ವಿಳಂಬವಿಲ್ಲದೆ ಪಡೆಯಬಹುದಾಗಿದೆ.
ಯೋಜನೆಯ ಮುಖ್ಯ ಲಕ್ಷಣಗಳು ಹೀಗಿವೆ:
24 ಗಂಟೆಗಳಲ್ಲಿ ತಾತ್ಕಾಲಿಕ ನಕ್ಷೆ: ಅರ್ಜಿ ಸಲ್ಲಿಸಿದ ನಂತರ ಒಂದು working day ಒಳಗೆ ತಾತ್ಕಾಲಿಕ ನಕ್ಷೆ ವಿತರಣೆ.
15 ದಿನಗಳಲ್ಲಿ ಅನುಮೋದಿತ ನಕ್ಷೆ: ತಾತ್ಕಾಲಿಕ ನಕ್ಷೆ ನೀಡಿದ ಬಳಿಕ ದಾಖಲೆಗಳ ಪರಿಶೀಲನೆ ನಡೆಯುತ್ತದೆ. ದಾಖಲೆಗಳೆಲ್ಲಾ ಸರಿಯಾದರೆ, ಅಧಿಕೃತವಾಗಿ ಅನುಮೋದಿತ ನಕ್ಷೆಯನ್ನು 15 ದಿನಗಳೊಳಗೆ(15 day’s) ನೀಡಲಾಗುತ್ತದೆ.
ಪಾರದರ್ಶಕ, ವೆಚ್ಚವಿಲ್ಲದ ವ್ಯವಸ್ಥೆ: ಈ ಯೋಜನೆಯು ದಲ್ಲಾಳಿಗಾಳ ಮಧ್ಯಸ್ಥಿಕೆ ಇಲ್ಲದಂತೆ, ಜನರಿಗೆ ನೇರವಾಗಿ ಪ್ರಯೋಜನವಾಗುವಂತೆ ರೂಪುಗೊಂಡಿದೆ.
ಆನ್ಸೆನ್ ಸೌಲಭ್ಯ: ಕಡಿಮೆ ವಿಸ್ತೀರ್ಣದ ಮನೆ ಕಟ್ಟಡಗಳಿಗೆ ತಕ್ಷಣದ ಸೇವೆ ಒದಗಿಸಲು ಬಿಬಿಎಂಪಿ ಈ ವ್ಯವಸ್ಥೆ ಆರಂಭಿಸಿದ್ದು, ಇದುವರೆಗೆ 9,000ಕ್ಕೂ ಹೆಚ್ಚು ನಕ್ಷೆಗಳನ್ನು ಈ ಮಾರ್ಗದಲ್ಲಿ ವಿತರಿಸಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು ಯಾವುವು?:
1. ಸ್ವತ್ತಿನ ಇ-ಖಾತಾ (ಇದು ಕಡ್ಡಾಯ).
2. ನಿವೇಶನದ ಭಾವಚಿತ್ರ.
3. ಸ್ವತ್ತಿನ ವಿಸ್ತೀರ್ಣದ ದಾಖಲೆಗಳು.
4. ಆಸ್ತಿ ತೆರಿಗೆ ಪಾವತಿ ರಶೀದಿ(Property tax payment receipt).
5. ಆಸ್ತಿದಾರರ ವಿಳಾಸ ದೃಢೀಕರಣ.
6. ಆಧಾರ್ ಕಾರ್ಡ್ ಮಾಹಿತಿಯ ಪ್ರತಿಗಳು.
ಈ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅರ್ಜಿ ಅನುಮೋದನೆಯಾಗುತ್ತದೆ. ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ನಡೆಯುತ್ತಿದ್ದು, ಸಾರ್ವಜನಿಕರು ತಮ್ಮ ಸೌಲಭ್ಯಕ್ಕನುಗುಣವಾಗಿ ತಾವು ಬೇಕಾದ ಸಮಯದಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ವೆಬ್‌ಸೈಟ್ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಅರ್ಜಿಯ ಪ್ರಕ್ರಿಯೆ TAV-1 ವೆಬ್‌ಪೋರ್ಟಲ್ ಮೂಲಕ ನೇರವಾಗಿ ಸಲ್ಲಿಸಬಹುದಾಗಿದೆ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.
ಒಟ್ಟಾರೆಯಾಗಿ, ಈ ಯೋಜನೆಯು ಮನೆ ಕಟ್ಟುವ ಬಡ ಮತ್ತು ಮಧ್ಯಮ ವರ್ಗದವರ ಕನಸಿಗೆ ಬಲ ನೀಡುತ್ತಿದೆ. ಇತ್ತೀಚೆಗೆ ಮನೆ ನಿರ್ಮಾಣಕ್ಕೆ ನಕ್ಷೆ ಪಡೆಯಲು ಸಾರ್ವಜನಿಕರು ಅನೇಕ ಅಡ್ಡಿಗಳನ್ನು ಭೇದಿಸಿ ತಿಂಗಳುಗಟ್ಟಲೆ ಕಾಯಬೇಕಾಗುತ್ತಿದ್ದ ಸಂದರ್ಭದಲ್ಲೇ ಬಿಬಿಎಂಪಿಯ ಈ ಹೊಸ ನಡೆ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.