Gruha Lakshmi: ರಾಜ್ಯದ ಗೃಹಲಕ್ಷ್ಮಿಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶುಭ ಸುದ್ದಿ ನೀಡಿದ್ದಾರೆ. ಬಾಕಿ ಮೂರು ತಿಂಗಳ ಹಣ ಖಾತೆಗೆ ಸೇರದೆ ಇರುವ ಗೃಹಲಕ್ಷ್ಮಿ ಹಣ ಯಾವಾಗ ಬಿಡುಗಡೆಯಾಗಲಿದೆ ಎನ್ನುವ ಸುಳಿವು ಕೊಟ್ಟಿದ್ದಾರೆ.ರಾಜ್ಯದ ಗೃಹಲಕ್ಷ್ಮಿಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶುಭ ಸುದ್ದಿ ನೀಡಿದ್ದಾರೆ. ಮೂರು ತಿಂಗಳಿನಿಂದ ಖಾತೆ ಸೇರದೆ ಇರುವ ಗೃಹಲಕ್ಷ್ಮಿ ಹಣ ಯಾವಾಗ ಬಿಡುಗಡೆಯಾಗಲಿದೆ ಎನ್ನುವ ಸುಳಿವು ಬಿಚ್ಚಿಟ್ಟಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಯಾವುದು ಗೃಹ ಲಕ್ಷ್ಮಿ ಯೋಜನೆ?
ಚುನಾವಣ ಸಮಯದಲ್ಲಿ ರಾಜ್ಯಸರ್ಕಾರ ಐದು ಮಹತ್ವವಾದ ಗ್ಯಾರಂಟಿಗಳನ್ನು ರಾಜ್ಯದ ಜನರಿಗೆ ನೀಡಿತ್ತು, ಅದರಲ್ಲಿ ಈ ಯೋಜನೆ ಕೂಡ ಒಂದು, ಗೃಹಲಕ್ಷ್ಮಿ ಹಣದಿಂದ ಹಲವರಿಗೆ ಸಹಾಯ ಆಗುತ್ತಿದೆ ಆದರೂ, ಹಣ ಸರಿಯಾದ ಸಮಯಕ್ಕೆ ಖಾತೆ ಸೇರುತ್ತಿಲ್ಲ. ಈ ಕಾರಣದಿಂದ ರಾಜ್ಯದ ಜನ ಬೇಸರಗೊಂಡಿದ್ದು, ಹಣ ತಮ್ಮ ಖಾತೆಗೆ ಸೇರುವುದು ಯಾವಾಗ ಎಂದು ಎದುರು ನೋಡುತ್ತಿದ್ದಾರೆ.
ಹಣದ ವಿಳಂಬಕ್ಕೆ ಕಾರಣಗಳು
ಯೋಜನೆ ಜಾರಿಯಾದ ನಂತರ, ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಹಣವು ಸರಿಯಾದ ಸಮಯದಲ್ಲಿ ಖಾತೆಗೆ ಸೇರದೆ ವಿಳಂಬವಾಗುತ್ತಿದೆ. ಈ ಗ್ಯಾರಂಟಿ ಜಾರಿಯಾದಾಗಿನಿಂದ ಹಣ ವಿಳಂಬಬಾಗಿರುವುದು ಇದೇ ಮೊದಲೇನಲ್ಲ. ಈ ಮುಂಚೆ ಕೂಡ ಹೀಗೆಯೇ ಆಗಿತ್ತು. ಫೆಬ್ರುವರಿ ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ ಹಣ ಈ ಜೂನ್ ತಿಂಗಳಲ್ಲಿ ಜಮಾ ಮಾಡಿದ್ದಾರೆ .
ಪ್ರತಿ ತಿಂಗಳಿಗೊಮ್ಮೆ ಖಾತೆ ಸೇರಬೇಕಿದ್ದ ಗೃಹಲಕ್ಷ್ಮಿ ಹಣ ಇದೀಗ ಮೂರು ಮೂರು ತಿಂಗಳು ವಿಳಂಬವಾಗುತ್ತಿದೆ, ಜನ ಅಂತೂ ದುಡ್ಡು ಈ ತಿಂಗಳು ಬರುತ್ತೆ, ಇನ್ನೇನು ಮುಂದಿನ ತಿಂಗಳು ಬರಬಹುದು ಎಂದು ಕಾದು ಕಾದು ಸುಸ್ತಾಗಿದ್ದಾರೆ.
ಗೃಹಲಕ್ಷ್ಮಿ ಪಾವತಿಗಳ ಕಂತು
ಕಂತು | ತಿಂಗಳು | ಸ್ಥಿತಿ | ಬಿಡುಗಡೆ ದಿನಾಂಕ |
---|---|---|---|
23ನೇ | ಜೂನ್ 2025 | ಬಾಕಿ | ನವೀಕರಿಸಲಾಗುವುದು |
22ನೇ | ಮೇ 2025 | ಬಾಕಿ | ನವೀಕರಿಸಲಾಗುವುದು |
21ನೇ | ಏಪ್ರಿಲ್ 2025 | ಬಾಕಿ | ನವೀಕರಿಸಲಾಗುವುದು |
20ನೇ | ಮಾರ್ಚ್ 2025 | ಬಿಡುಗಾಡೆಯಾಗಿದೆ | 05-06-2025 |
19ನೇ | ಫೆಬ್ರವರಿ 2025 | ಪೂರ್ಣಗೊಂಡಿದೆ | 17-05-2025 |
18ನೇ | ಜನವರಿ 2025 | ಪೂರ್ಣಗೊಂಡಿದೆ | 30-03-2025 |
ಗಮನಿಸಿ: ಬಿಡುಗಡೆ ದಿನಾಂಕ ನಿಗದಿತವಾಗಿದ್ದರೂ, DBT ಪ್ರಕ್ರಿಯೆಯ ಕಾರಣದಿಂದ ಬ್ಯಾಂಕ್ ಖಾತೆಗೆ ಸೇರುವುದು ಕೆಲವು ಹೆಚ್ಚುವರಿ ದಿನಗಳನ್ನು ತೆಗೆದುಕೊಳ್ಳಬಹುದು.
ಗೃಹ ಲಕ್ಷ್ಮಿಯರಿಗೆ ಶುಭಸುದ್ದಿ!
ರಾಜ್ಯದ ಗೃಹಿಣಿಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಒಂದು ಶುಭ ಸುದ್ದಿ ನೀಡಿದ್ದಾರೆ. ಎಪ್ರಿಲ್, ಮೇ ಮತ್ತು ಜೂನ್ ತಿಂಗಳ ಬಾಕಿ ಗೃಹ ಲಕ್ಷ್ಮಿ ಹಣವು ಜುಲೈ 20ರೊಳಗೆ ಲಾಭಾರ್ಥಿಗಳ ಖಾತೆಗೆ ಜಮೆಯಾಗಿಸಲು ಪ್ರಯತ್ನ ಪಡುತ್ತಿದ್ದೇವೆ ಸ್ಡಲ್ಪ ದಿನ ವಿಳಂಭವಾಗಬಹುದು ತಾಳ್ಮೆಯಿಂದಿರಬೇಕು ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ, ಪ್ರತಿ ಮಹಿಳೆಗೆ ಒಟ್ಟು 6000 ರೂಪಾಯಿ (ತಿಂಗಳಿಗೆ 2,೦೦೦ ರೂ. ಹಾಗೆ ಮೂರು ತಿಂಗಳದ್ದು) ಬಿಡುಗಡೆಯಾಗಲಿದೆ.
ಯೋಜನೆಯಿಂದ ಎಷ್ಟು ಮಹಿಳೆಯರಿಗೆ ಪ್ರಯೋಜನ?
ಗೃಹ ಲಕ್ಷ್ಮಿ ಯೋಜನೆಯು ಜಾರಿಯಾದಂದಿನಿಂದ 25,000 ಕೋಟಿ ರೂಪಾಯಿಗಳನ್ನು ರಾಜ್ಯದ ಮಹಿಳೆಯರಿಗೆ ವಿತರಿಸಲಾಗಿದೆ. ಸುಮಾರು 1.1 ಕೋಟಿ ಗೃಹಿಣಿಯರು ಈ ಯೋಜನೆಯ ಅಡಿಯಲ್ಲಿ ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ, ಕೆಲವೊಮ್ಮೆ ನಿಗದಿತ ಸಮಯದಲ್ಲಿ ಹಣ ಬರದಿರುವುದರಿಂದ ಜನರಲ್ಲಿ ಅಸಮಾಧಾನವಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.