ವೊಡಾಫೋನ್ ಐಡಿಯಾ 5G: ಡಿಜಿಟಲ್(Digital) ಯುಗದತ್ತ ಬೆಂಗಳೂರಿನಲ್ಲಿ ಮತ್ತೊಂದು ಹೆಜ್ಜೆ

Picsart 25 06 22 01 00 33 313

WhatsApp Group Telegram Group

ಭಾರತದ ದೂರಸಂಪರ್ಕ ವಲಯವು ಈಗ ಹೊಸ ತಂತ್ರಜ್ಞಾನ ಮತ್ತು ನಾವೀನ್ಯತೆಯ ಯುಗಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈಗಾಗಲೇ ಜಿಯೋ ಮತ್ತು ಏರ್‌ಟೆಲ್‌ನಂತಹ(Jio and Airtel) ಪ್ರತಿಷ್ಠಿತ ಸಂಸ್ಥೆಗಳು ತಮ್ಮ 5ಜಿ ಸೇವೆಗಳ ಮೂಲಕ ದೇಶದ ಅನೇಕ ನಗರಗಳಲ್ಲಿ ಡಿಜಿಟಲ್ ಕ್ರಾಂತಿಗೆ ನಾಂದಿ ಹಾಡಿರುವ ಸಂದರ್ಭದಲ್ಲಿ, ಇದೀಗ ದೇಶದ ಇನ್ನೊಂದು ಪ್ರಮುಖ ದೂರಸಂಪರ್ಕ ಸಂಸ್ಥೆಯಾದ ವೊಡಾಫೋನ್ ಐಡಿಯಾ (Vi) ಕೂಡ ಬೆಂಗಳೂರು ನಗರದಲ್ಲಿ ತನ್ನ 5ಜಿ ಸೇವೆಗಳನ್ನು ಅಧಿಕೃತವಾಗಿ ಆರಂಭಿಸಿದೆ. ಇದು ದೇಶದ ಟೆಕ್ ಹಬ್‌ ಎಂದು ಪರಿಗಣಿಸಲ್ಪಡುವ ಬೆಂಗಳೂರಿನಲ್ಲಿ ಡಿಜಿಟಲ್ ಸಂಪರ್ಕದ ನೂತನ ಯುಗವನ್ನು ಆರಂಭಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ವಿ (Vi) 5ಜಿ ಸೇವೆಯ ಉದ್ಘಾಟನೆ:

ವೋಡಾಫೋನ್ ಐಡಿಯಾ ತನ್ನ 5ಜಿ ಸೇವೆಯನ್ನು ಬೆಂಗಳೂರಿನಲ್ಲಿ ಜಾರಿಗೆ ತಂದಿರುವುದನ್ನು ಅಧಿಕೃತವಾಗಿ ಘೋಷಿಸಿದೆ. ಈ ಮೂಲಕ ಮುಂಬೈ, ದೆಹಲಿ-ಎನ್‌ಸಿಆರ್, ಪಾಟ್ನಾ ಹಾಗೂ ಚಂಡೀಗಢದ ನಂತರ Vi ತನ್ನ 5ಜಿ ಪ್ಲಾನ್‌ ಅನ್ನು ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಮುಂದುವರಿಸಿದೆ. ಬೆಂಗಳೂರಿನ ನಿವಾಸಿಗಳು ಮತ್ತು ಉದ್ಯಮ ವಲಯಗಳು ಈಗ ಅತ್ಯಂತ ವೇಗದ ಡೇಟಾ, ಕಡಿಮೆ ವಿಳಂಬದ ಸಂಪರ್ಕ ಹಾಗೂ ದೃಢವಾದ ಡಿಜಿಟಲ್ ಲಾಭ ಪಡೆಯಲಿದ್ದಾರೆ.

Vi ಸಂಸ್ಥೆಯು ಈಗಾಗಲೇ ದೇಶದ 17 ಪ್ರಾಥಮಿಕ ದೂರಸಂಪರ್ಕ ವಲಯಗಳಲ್ಲಿ 5ಜಿ ತರಂಗಾಂತರಗಳನ್ನು ಖರೀದಿಸಿದ್ದು, ಹಂತ ಹಂತವಾಗಿ ಇವುಗಳನ್ನು ಜಾರಿಗೆ ತರುತ್ತಿದೆ. ಈ ವರ್ಷ ಆಗಸ್ಟ್ ಒಳಗಾಗಿ, 5ಜಿ ಹೊಂದಿರುವ ಸ್ಮಾರ್ಟ್‌ಫೋನ್(Smart phone) ಬಳಕೆದಾರರು ಬೆಂಗಳೂರಿನಲ್ಲಿ ಈ ಹೊಸ ಸೇವೆಯ ಪ್ರಯೋಜನ ಪಡೆಯಬಹುದಾಗಿದೆ.

ಗ್ರಾಹಕರಿಗೆ ಆಕರ್ಷಕ ಆರಂಭಿಕ ಕೊಡುಗೆಗಳು:

ಬೆಂಗಳೂರಿನಲ್ಲಿ ಡಿಜಿಟಲ್ ಸೇವೆಗಳ ಪ್ರಿಯ ಬಳಕೆದಾರರಿಗೆ ಉಚಿತ ಹಾಗೂ ಅನಿಯಮಿತ ಡೇಟಾ(Free and unlimited data) ಅನುಭವವನ್ನು ಒದಗಿಸಲು Vi ಆರಂಭಿಕ ಯೋಜನೆಗಳ ಮೂಲಕ ವಿಶೇಷ ಕೊಡುಗೆ ನೀಡುತ್ತಿದೆ. 299 ರೂ.ಗಳಿಂದ ಆರಂಭವಾಗುವ ಹೊಸ ಪ್ಯಾಕೇಜುಗಳಲ್ಲಿ ಅನಿಯಮಿತ 5ಜಿ ಡೇಟಾ, ವೇಗದ ಸ್ಟ್ರೀಮಿಂಗ್, ಗೇಮಿಂಗ್, ವಿಡಿಯೋ ಕಾಲಿಂಗ್, ಡೌನ್‌ಲೋಡ್ ಸೇವೆ ಹಾಗೂ ನೈಜ ಸಮಯದ ಕ್ಲೌಡ್ ಆಧಾರಿತ ಸೇವೆಗಳನ್ನು ಆನಂದಿಸಬಹುದು.

ತಂತ್ರಜ್ಞಾನದಲ್ಲಿ ಮುಂಚೂಣಿ ಹಾದಿ ಸುಧಾರಿತ ವ್ಯವಸ್ಥೆ:

Vi ಸಂಸ್ಥೆಯ ಕರ್ನಾಟಕ ವಹಿವಾಟು ಮುಖ್ಯಸ್ಥ ಆನಂದದಾನಿಯವರ ಪ್ರಕಾರ, “ಬೆಂಗಳೂರಿನಲ್ಲಿ 5ಜಿ ಸೇವೆ ಪ್ರಾರಂಭಿಸುವುದು ನಮ್ಮ ಸಂಸ್ಥೆಗೆ ಮಹತ್ವದ ಹೆಜ್ಜೆಯಾಗಿದ್ದು, ತಂತ್ರಜ್ಞಾನ ಮತ್ತು ಡಿಜಿಟಲ್ ನವೀನತೆಗೆ ನಾಂದಿ ಹಾಡುವ ನಗರದಲ್ಲಿ ನಾವು ಈ ಸೇವೆ ಆರಂಭಿಸಿದ್ದು ಖುಷಿಯ ಸಂಗತಿ ಎಂದು ತಿಳಿಸಿದ್ದಾರೆ.

Vi ಸಂಸ್ಥೆಯು ಸ್ಯಾಮ್‌ಸಾಂಗ್(Samsung) ಜೊತೆಗೂಡಿ ಶ್ರೇಷ್ಠ ಗುಣಮಟ್ಟದ 5ಜಿ ಸಂಪರ್ಕ ಒದಗಿಸಲು ಹೆಚ್ಚಿನ ಪ್ರಸರಣ ಶಕ್ತಿ, ಬಹು ತಂತ್ರಜ್ಞಾನ ಬೆಂಬಲಿತ ಇಂಧನದ ದಕ್ಷ ಮೂಲಸೌಲಭ್ಯಗಳನ್ನು ಅಳವಡಿಸಿದೆ. ಇದರೊಂದಿಗೆ, ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ವಯಂ-ಸಂಘಟಿತ ಜಾಲವ್ಯವಸ್ಥೆಯ ಮೂಲಕ ಸೇವೆಗಳ ಗುಣಮಟ್ಟವನ್ನು ನಿರಂತರವಾಗಿ ಉನ್ನತಗೊಳಿಸಲಾಗುತ್ತಿದೆ.

4ಜಿ ಜಾಲವಿಸ್ತರಣೆಯಲ್ಲೂ ಭಾರಿ ಬದಲಾವಣೆ:

Vi ಸಂಸ್ಥೆಯು ತನ್ನ 5ಜಿ ಜಾಲ ವಿಸ್ತರಣೆ ಜೊತೆಗೆ, ರಾಜ್ಯದಲ್ಲಿ ತನ್ನ 4ಜಿ ಜಾಲವ್ಯವಸ್ಥೆಯ ಸಾಮರ್ಥ್ಯವನ್ನು ಶೇಕಡಾ 46ರಷ್ಟು ಹೆಚ್ಚಿಸಿದ್ದು, ಕಳೆದ 10 ತಿಂಗಳಲ್ಲಿ ನಿರಂತರ ನವೀಕರಣದ ಮೂಲಕ ನಗರ ಹಾಗೂ ಗ್ರಾಮೀಣ ಭಾಗಗಳಲ್ಲೂ ಸ್ಥಿರ, ವೇಗದ ಮತ್ತು ವಿಶ್ವಾಸಾರ್ಹ ಸಂಪರ್ಕ ಸೌಲಭ್ಯ ಒದಗಿಸುತ್ತಿದೆ.

ಹೆಚ್ಚಿನ ಮಾಹಿತಿಗಾಗಿ:

ಬೆಂಗಳೂರಿನಲ್ಲಿ Vi 5ಜಿ ಸೇವೆಗಳ ಲಭ್ಯತೆ, ಬೆಲೆ ನಿಗದಿ ಹಾಗೂ ಯಾವ ಮೊಬೈಲ್‌ಗಳು 5ಜಿ ಸೇವೆಗಳಿಗೆ ಬೆಂಬಲ ನೀಡುತ್ತವೆ ಎಂಬ ಕುರಿತು ಹೆಚ್ಚಿನ ವಿವರಗಳಿಗಾಗಿ ಗ್ರಾಹಕರು vi.in/5gnetwork ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಒಟ್ಟಾರೆಯಾಗಿ, ವೊಡಾಫೋನ್ ಐಡಿಯಾ ಸಂಸ್ಥೆಯ 5ಜಿ ಸೇವೆಗಳ ಪ್ರವೇಶವು ಬೆಂಗಳೂರಿನ ಡಿಜಿಟಲ್ ಅಭಿವೃದ್ಧಿಗೆ ಹೊಸ ಚೈತನ್ಯ ನೀಡಿದ್ದು, ಗ್ರಾಹಕರಿಗೆ ಹೈ-ಟೆಕ್ ಅನುಭವವನ್ನು ಸುಲಭವಾಗಿ ಲಭಿಸಲು ಅವಕಾಶ ಮಾಡಿಕೊಟ್ಟಿದೆ. ಈ ಸೇವೆಯು ನಗರದಲ್ಲಿನ ಡಿಜಿಟಲ್ ಪರಿವರ್ತನೆಯ ಇನ್ನೊಂದು ಭಾಗವಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!