ಭಾರತೀಯ ಸಮಾಜದಲ್ಲಿ ಚಿನ್ನಕ್ಕಿರುವ ಮಹತ್ವ ಅವಿಸ್ಮರಣೀಯ. ಮದುವೆ, ಹಬ್ಬ, ಉತ್ಸವ ಅಥವಾ ಹೂಡಿಕೆ (Investment) ಈ ರೀತಿಯ ಎಲ್ಲಾ ಸಮಯದಲ್ಲೂ ಭಾವನಾತ್ಮಕ ಹಾಗೂ ಆರ್ಥಿಕ ಮೌಲ್ಯವನ್ನು ಹೊಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಸಂಭವಿಸಿರುವ ಅಪರೂಪದ ಏರಿಕೆ ಮತ್ತು ಮುಂದಿನ ದಿನಗಳಲ್ಲಿ ನಿರೀಕ್ಷಿಸಲಾದ ಭಾರೀ ಇಳಿಕೆಯಿಂದ ಚಿನ್ನ ಹೂಡಿಕೆದಾರರು, ಗ್ರಾಹಕರು, ಮತ್ತು ಚಿನ್ನ ವ್ಯಾಪಾರಿಗಳು ತೀವ್ರ ಗಮನ ಹರಿಸುತ್ತಿದ್ದಾರೆ. ತಜ್ಞರ ಪ್ರಕಾರ, ಮುಂದಿನ ಒಂದು ವರ್ಷದೊಳಗೆ ಚಿನ್ನದ ಬೆಲೆ ಶೇ.30ರಷ್ಟು ಕುಸಿಯಬಹುದು ಎಂಬ ಭವಿಷ್ಯವಾಣಿ ಬಹುಮಟ್ಟಿಗೆ ಚರ್ಚೆಗೆ ಕಾರಣವಾಗಿದೆ. ಇನ್ನು, ಚಿನ್ನದ ಈ ಬೆಲೆ ಕುಸಿತಕ್ಕೆ ಕಾರಣಗಳೇನು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನದ ಬೆಲೆಯಲ್ಲಿ ಭವಿಷ್ಯವಾಣಿ – Citi Bank ವರದಿ ಏನು ಹೇಳುತ್ತದೆ?:
ಅಂತರಾಷ್ಟ್ರೀಯ ಆರ್ಥಿಕ ಮತ್ತು ಹಣಕಾಸು ಸಂಸ್ಥೆಗಳಾದ Citi Bank ಮತ್ತು ಇತರ ಮಾರ್ಗದರ್ಶಕ ಸಂಸ್ಥೆಗಳ ಪ್ರಕಾರ, ಚಿನ್ನದ ಬೆಲೆಯಲ್ಲಿ ಶೀಘ್ರದಲ್ಲೇ ಶೇ.20ರಷ್ಟು ಇಳಿಕೆ ಸಂಭವಿಸಬಹುದು. ಮುಂದಿನ 6-12 ತಿಂಗಳ ಅವಧಿಯಲ್ಲಿ ಈ ಇಳಿಕೆ ಶೇ.30ರಷ್ಟಾಗಬಹುದು ಎಂಬ ಭವಿಷ್ಯವಾಣಿ ಕೇಳಿ ಬರುತ್ತಿದೆ. ವರದಿ ಪ್ರಕಾರ, ಪ್ರಸ್ತುತ ಒಂದು ಔನ್ಸ್ ಚಿನ್ನದ ಬೆಲೆ (ounce gold rate) 3,500 ಡಾಲರ್ ಇರುವುದರಿಂದ, ಅದು ಮುಂದಿನ ಕೆಲವು ತಿಂಗಳಲ್ಲಿ 3,300 ಡಾಲರ್ಗೂ, ಆ ನಂತರ 2,800 ಡಾಲರ್ ಅಥವಾ ಅತಿ ಕಡಿಮೆ 2,400 ಡಾಲರ್ಗೂ ಇಳಿಯುವ ಸಾಧ್ಯತೆ ಇದೆ.
ಚಿನ್ನದ ಬೆಲೆ ಇಳಿಕೆಗೆ ಪ್ರಮುಖ ಕಾರಣಗಳು (Causes) ಯಾವುವು?:
1. ಆಂತರರಾಷ್ಟ್ರೀಯ (international) ರಾಜಕೀಯ ಅಸ್ಥಿರತೆ:
ಇಸ್ರೇಲ್ ಮತ್ತು ಇರಾನ್ ನಡುವೆ ನಡೆದ ಯುದ್ಧ, ಉಕ್ರೇನ್-ರಷ್ಯಾ ಸಂಘರ್ಷಗಳು ಮೊದಲಿಗೆ ಚಿನ್ನದ ಬೆಲೆಯನ್ನು ಏರಿಸಿದರೂ, ಚಿನಿವಾರಪೇಟೆಯ ತಾತ್ಕಾಲಿಕ ಪ್ರತಿಕ್ರಿಯೆಯ ನಂತರ ಶಾಂತ ಸ್ಥಿತಿಗೆ ತಲುಪಿದೆ.
2. ಮುಂದುವರೆದ ಏರಿಕೆ (increased gold rate) :
2024ರ ಆರಂಭದಲ್ಲಿ ಚಿನ್ನದ ಬೆಲೆ ಶೇ.30ರಷ್ಟು ಏರಿಕೆಯಾದ ಬಳಿಕ, ಮಾರುಕಟ್ಟೆಯಲ್ಲಿ ‘Correction Phase’ ಗೆ ಚಿನ್ನ ಪ್ರವೇಶಿಸಿದೆ. ಈಗ ಚಿನ್ನ ಗರಿಷ್ಠ ಮಟ್ಟ ತಲುಪಿದೆ.
3. ಅಮೆರಿಕದ ಬಡ್ಡಿದರ ನೀತಿ (American interest value) :
ಅಮೆರಿಕದ Federal Reserve ಇತ್ತೀಚೆಗೆ ಬಡ್ಡಿದರ ಹೆಚ್ಚಿಸುವ ಅಥವಾ ಸ್ಥಿರವಾಗಿಟ್ಟಿರುವ ತೀರ್ಮಾನಗಳು ಡಾಲರ್ ಅನ್ನು ಬಲಪಡಿಸುತ್ತಿದ್ದು, ಇದು ಚಿನ್ನದ ಮೇಲೆ ಬೇರೊಂದು ಮೌಲ್ಯಮಾಪನದ ಒತ್ತಡವನ್ನು ಉಂಟುಮಾಡುತ್ತಿದೆ.
4. ಚೀನಾದ (China) ಮೌಲ್ಯಮಾಪನ ನೀತಿ ಪರಿಣಾಮ:
ಚೀನಾದ ಮಾರುಕಟ್ಟೆಯಲ್ಲಿ ಚಿನ್ನದ ಖರೀದಿ ಮೊದಲು ವೇಗವಾಗಿ ನಡೆಯುತ್ತಿದ್ದರೆ, ಇತ್ತೀಚೆಗೆ ಆ ರಫ್ತು ಮತ್ತು ಖರೀದಿ ಪ್ರಮಾಣದಲ್ಲಿನ ಕುಸಿತ ಚಿನ್ನದ ಮೌಲ್ಯವನ್ನು ತಗ್ಗಿಸಲಿದೆ.
ಭಾರತೀಯ ಗ್ರಾಹಕರ ಪ್ರತಿಕ್ರಿಯೆ ಯಾವ ರೀತಿಯಿದೆ?:
ಚಿನ್ನದ ಬೆಲೆ ಗಗನಕ್ಕೇರಿರುವುದರಿಂದ ಹೊಸ ಚಿನ್ನ ಖರೀದಿಸಲು ಅಶಕ್ಯವಾಗುತ್ತಿರುವ ಮಧ್ಯಮ ವರ್ಗದ ಜನರು ತಮ್ಮ ಹಳೆಯ ಆಭರಣಗಳನ್ನು ಮಾರಾಟ ಮಾಡುತ್ತಿರುವುದು ಗಮನಾರ್ಹ. ಹಲವು ಮಂದಿ ಹಳೆಯ ಚಿನ್ನ ನೀಡಿ ಹೊಸ ಮಾದರಿಯ ಆಭರಣ ಮಾಡಿಸಿಕೊಳ್ಳುತ್ತಿದ್ದಾರೆ. ಇದು ಚಿನ್ನದ ಮಾರುಕಟ್ಟೆಯಲ್ಲಿ ‘exchange and resale’ ಪ್ರಕ್ರಿಯೆಗೆ ಗತಿಯನ್ನು ತರುತ್ತಿದೆ ಎಂದು ಕಾಶಿ ಜ್ಯುವೆಲರ್ಸ್ನ (Kashi Jewellers) ಶ್ರೇಯಾಂಶ್ ಕಪೂರ್ ಅಭಿಪ್ರಾಯಪಟ್ಟಿದ್ದಾರೆ.
ತಜ್ಞರ (Specialist) ಎಚ್ಚರಿಕೆ ಏನು?:
ಮಾರ್ಕೆಟ್ ವಿಶ್ಲೇಷಕ ಅಜಯ್ ಕೆದಿಯಾ ಹೇಳುವಂತೆ, ಮುಂದಿನ 2 ತಿಂಗಳಲ್ಲಿ ಚಿನ್ನದ ಬೆಲೆಯಲ್ಲಿ ಶೇ.8-10ರಷ್ಟು ಇಳಿಕೆ ಸಾಧ್ಯತೆ ಇದೆ. ಹೀಗಾಗಿ ಚಿನ್ನದಲ್ಲಿ ಹೂಡಿಕೆಗೆ ತಾಳ್ಮೆಯು ಅತ್ಯಗತ್ಯ, ಅಲ್ಲದೇ ಹಂಗಾಮಿ ಯುದ್ಧಗಳು(Wars) ಅಥವಾ ರಾಜಕೀಯ ಬೆಳವಣಿಗೆಗಳಿಂದ ತಕ್ಷಣದ ಖರೀದಿ ಅಥವಾ ಮಾರಾಟ ತೀರ್ಮಾನ ಮಾಡಬಾರದು ಎಂಬುದು ತಜ್ಞರ ಸಲಹೆ ನೀಡಿದ್ದಾರೆ.
ಒಟ್ಟಾರೆಯಾಗಿ, ಚಿನ್ನದ ಬೆಲೆ ಇಳಿಕೆ ಅನಿವಾರ್ಯವಾಗಬಹುದು, ಆದರೆ ಅದು ತಾತ್ಕಾಲಿಕ ಅಥವಾ ಸ್ಥಿರ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಇನ್ನೂ ಲಭ್ಯವಿಲ್ಲ. ಹೀಗಾಗಿ ಚಿನ್ನದಲ್ಲಿ ಹೂಡಿಕೆಗೆ (Gold investment) ಮೊದಲು ಸಮಗ್ರ ವಿಶ್ಲೇಷಣೆ, ಮಾರುಕಟ್ಟೆ ಸ್ಥಿತಿಗತಿ ಹಾಗೂ ವೈಯಕ್ತಿಕ ಆರ್ಥಿಕ ಸ್ಥಿತಿ ಪರಿಗಣನೆ ಅತ್ಯಂತ ಮುಖ್ಯವಾಗಿದೆ. ಭಾರತೀಯರಿಗೆ ಚಿನ್ನ ಮೌಲ್ಯಮಯವೆಂಬ ನಂಬಿಕೆಯಿರುವುದರಿಂದ, ಈ ಬದಲಾವಣೆಯು ಖರೀದಿ ನಿಟ್ಟಿನಲ್ಲಿ ಹೊಸ ತಂತ್ರಗಳನ್ನು ತರಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.