ಹೊಸ ಬಿಪಿಎಲ್/ಎಪಿಎಲ್ ಪಡಿತರ ಚೀಟಿಗೆ ಅರ್ಜಿ ಪ್ರಕ್ರಿಯೆ ಶೀಘ್ರ ಆರಂಭ: ಅರ್ಹತೆಯುಳ್ಳವರು ಈಗಿನಿಂದಲೇ ಸಿದ್ಧರಾಗಿ!
ಇದೀಗ ರಾಜ್ಯದ ಲಕ್ಷಾಂತರ ಬಡ ಮತ್ತು ಮಧ್ಯಮವರ್ಗದ ಕುಟುಂಬಗಳಿಗೆ ಬಹುಮುಖ್ಯ ಮಾಹಿತಿಯೊಂದು ತಿಳಿದು ಬಂನಂದಿದೆ. ಆಹಾರ ಭದ್ರತೆ, ಸಬ್ಸಿಡಿ ವ್ಯಾಪ್ತಿಯ ಅಗತ್ಯ ವಸ್ತುಗಳ ಸೌಲಭ್ಯ ಪಡೆಯಲು ಮತ್ತು ವಿವಿಧ ಸರ್ಕಾರಿ ಯೋಜನೆಗಳ ಲಾಭ ಅನುಭವಿಸಲು ಪಡಿತರ ಚೀಟಿ (Ration Card) ನೈಜವಾಗಿ ಮುಖ್ಯ ದಾಖಲೆಗಳಲ್ಲಿ ಒಂದಾಗಿದ್ದು, ಇದು ಬಡವರ ಹಕ್ಕಿನ ದಾಖಲೆ ಎನ್ನಬಹುದು. ಈ ಚೀಟಿ ಇಲ್ಲದೆ ಹಲವಾರು ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ. ಪಡಿತರ ಚೀಟಿಯು ಕೇವಲ ಅಕ್ಕಿ, ಗೋಧಿ ಪಡೆಯುವ ಕಾರ್ಡ್ ಮಾತ್ರವಲ್ಲ, ಇದು ನಿಮ್ಮ ಆದಾಯ ಮಟ್ಟದ ಅಧಿಕೃತ ಗುರುತಿನ ಚೀಟಿ ಕೂಡ ಆಗಿದೆ.
ಹೌದು, ಇತ್ತೀಚೆಗೆ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಕೆಲವು ಸಮಯಗಳ ಹಿಂದೆ ತಾತ್ಕಾಲಿಕವಾಗಿ ನಿಲ್ಲಿಸಿದ್ದ ಹೊಸ ಪಡಿತರ ಚೀಟಿ ಅರ್ಜಿ ಸ್ವೀಕೃತಿ ಪ್ರಕ್ರಿಯೆಯನ್ನು ಮತ್ತೆ ಆರಂಭಿಸುವ ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಬಿಪಿಎಲ್ (BPL – Below Poverty Line) ಮತ್ತು ಎಪಿಎಲ್ (APL – Above Poverty Line) ಕಾರ್ಡ್ ಪಡೆಯಲು ಬಯಸುವವರಿಗೆ ನಿರ್ದಿಷ್ಟ ಮಾಹಿತಿ ನೀಡಲಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲುಇಲ್ಲಿ ಕ್ಲಿಕ್ ಮಾಡಿ
ಪಡಿತರ ಚೀಟಿಗಳ ಮಹತ್ವವೇನು?:
ಕರ್ನಾಟಕದಲ್ಲಿ ಪಡಿತರ ಚೀಟಿಗಳನ್ನು ನಾಲ್ಕು ಪ್ರಕಾರಗಳಲ್ಲಿ ವಿಂಗಡಿಸಲಾಗಿದೆ,
1. ಅಂತ್ಯೋದಯ (Antyodaya Anna Yojana – AAY): ಅತಿಯಾದ ಬಡ ಕುಟುಂಬಗಳಿಗೆ.
2. ಬಿಪಿಎಲ್ (BPL): ಬಡರೇಖೆಗಿಂತ ಕೆಳಗಿನ ಆದಾಯ ಹೊಂದಿರುವ ಕುಟುಂಬಗಳಿಗೆ.
3. ಎಪಿಎಲ್ (APL): ಬಡರೇಖೆಗಿಂತ ಮೇಲಿನ ಆದಾಯ ಹೊಂದಿರುವವರು.
4. ಅದರ್ಶ ಕಾರ್ಡ್: ಇತರ ವಿಶೇಷ ಸೌಲಭ್ಯಕ್ಕಾಗಿ.
ಈ ಚೀಟಿಗಳ ಆಧಾರದಲ್ಲಿ ಸರ್ಕಾರ ಅಕ್ಕಿ, ಗೋಧಿ, ಸಕ್ಕರೆ ಮುಂತಾದ ದಿನಸಿ ಸಾಮಗ್ರಿಗಳನ್ನು ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ನೀಡುತ್ತದೆ. ಜೊತೆಗೆ ವಿದ್ಯಾರ್ಥಿ ವಿದ್ಯಾರ್ಥಿವೇತನ, ಉಚಿತ ವೈದ್ಯಕೀಯ ಸೌಲಭ್ಯ, ಗೃಹ ಯೋಜನೆ ಮೊದಲಾದ ಬೇರೆ ಯೋಜನೆಗಳಿಗೂ ಇದು ಅವಶ್ಯಕ ದಾಖಲೆ.
ಹೊಸ ಪಡಿತರ ಚೀಟಿಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು:
ಅರ್ಜಿ ಸಲ್ಲಿಸುವವರು ಕನಿಷ್ಟ 18 ವರ್ಷ ವಯಸ್ಸಿನವರಾಗಿರಬೇಕು.
ಅಭ್ಯರ್ಥಿ ಕರ್ನಾಟಕದ ನಿವಾಸಿ ಆಗಿರಬೇಕು.
ಕುಟುಂಬದ ಯಾವುದೇ ಸದಸ್ಯರಿಗೂ ಹಳೆಯ ಪಡಿತರ ಚೀಟಿ ಇರಬಾರದು.
ಬಿಪಿಎಲ್ ಕಾರ್ಡ್‌ಗಾಗಿ ಆದಾಯ ಮಿತಿಗಳು ಹೀಗಿವೆ:
ಗ್ರಾಮೀಣ ಪ್ರದೇಶ: ₹32,000 ವರ್ಷಿಕ ಆದಾಯ.
ನಗರ ಪ್ರದೇಶ: ₹48,000 ವರ್ಷಿಕ ಆದಾಯ
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು ಯಾವುವು?:
1. ಆಧಾರ್ ಕಾರ್ಡ್(Adhar card).
2. ಮತದಾರರ ಗುರುತಿನ ಚೀಟಿ.
3. ವಿದ್ಯುತ್ ಬಿಲ್.
4. ಆದಾಯ ಪ್ರಮಾಣ ಪತ್ರ.
5. ಪಾಸ್ಪೋರ್ಟ್ ಗಾತ್ರದ ಫೋಟೋಗಳು.
6. ಬ್ಯಾಂಕ್ ಖಾತೆಯ ವಿವರಗಳು (Account number, IFSC code).
ಅರ್ಜಿ ಸಲ್ಲಿಕೆ ವಿಧಾನಗಳು ಹೀಗಿವೆ:
ಆನ್‌ಲೈನ್ ವಿಧಾನ:
1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ahara.kar.nic.in
2. ಹೊಸ ಬಳಕೆದಾರರಾಗಿ ನೋಂದಣಿ ಮಾಡಿ.
3. ಲಾಗಿನ್ ಆಗಿ ಅರ್ಜಿ ನಮೂನೆ ಭರ್ತಿ ಮಾಡಿ.
4. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
5. ಅರ್ಜಿ ಸಲ್ಲಿಸಿ ಮತ್ತು ಸಲ್ಲಿಸಿದ ನಂತರ ಅರ್ಜಿ ಸಂಖ್ಯೆಯ ಮೂಲಕ ಸ್ಥಿತಿಯನ್ನು ಪರಿಶೀಲಿಸಬಹುದು
ಆಫ್‌ಲೈನ್ ವಿಧಾನ:
ಹತ್ತಿರದ ಪಡಿತರ ಅಂಗಡಿಯಿಂದ ಅರ್ಜಿ ನಮೂನೆ ಪಡೆದು
ಅದನ್ನು ಸರಿಯಾಗಿ ಭರ್ತಿ ಮಾಡಿ.
ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಚೇರಿಗೆ ಸಲ್ಲಿಸಬಹುದು.
ಒಟ್ಟಾರೆಯಾಗಿ, ಇದೀಗ ಹೊಸ ಪಡಿತರ ಚೀಟಿ ಅರ್ಜಿ ಸ್ವೀಕೃತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದರೆ ಸರ್ಕಾರ ಹಳೆಯ ಅರ್ಜಿಗಳ ಪರಿಶೀಲನೆ ನಡೆಸುತ್ತಿರುವ ಹಂತದಲ್ಲಿದೆ. ಇವು ಪೂರ್ಣಗೊಂಡ ಬಳಿಕ ಹೊಸ ಅರ್ಜಿ ಪ್ರಕ್ರಿಯೆ ಪುನರಾರಂಭ ಆಗಲಿದೆ. ಆದ್ದರಿಂದ ಅರ್ಜಿದಾರರು ಈ ನಡುವೆ ಎಲ್ಲ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಸ್ಥಳಗಳನ್ನ ಸಂಪರ್ಕಿಸಿ:
ಹತ್ತಿರದ ಆಹಾರ ಇಲಾಖೆ ಕಚೇರಿ.
ಪಡಿತರ ಅಂಗಡಿ.
ವೆಬ್‌ಸೈಟ್‌ನ ಮೂಲಕ ಸಂಪರ್ಕ ಮಾಹಿತಿ ಪರಿಶೀಲನೆ.
ಜಿಲ್ಲಾಧಿಕಾರಿಗಳ ಕಚೇರಿ ಅಥವಾ ಸ್ಥಳೀಯ ಗ್ರಾಮ ಪಂಚಾಯತ್/ನಗರ ಪಾಲಿಕೆ ಕಚೇರಿ.
ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಬಯಸುವವರಿಗೆ ಈ ಮಾಹಿತಿಯು ಬಹುಮುಖ್ಯವಾಗಿದೆ. ಸರಿಯಾದ ಸಮಯದಲ್ಲಿ, ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ ಚೀಟಿ ಪಡೆಯುವುದು ಸುಲಭವಾಗಲಿದೆ. ಆಧುನಿಕ ಆನ್‌ಲೈನ್ ವ್ಯವಸ್ಥೆಯ ಮೂಲಕ ಕಾರ್ಯಕ್ಷಮವಾಗಿ ಅರ್ಜಿ ಸಲ್ಲಿಸಬಹುದು. ಸರ್ಕಾರದ ಕ್ರಮದೊಂದಿಗೆ ಸಹಕಾರ ನೀಡಿ, ಅಗತ್ಯ ಪಡಿತರ ಸೌಲಭ್ಯಗಳನ್ನು ನಿಮ್ಮ ಹಕ್ಕಾಗಿ ಪಡೆದುಕೊಳ್ಳಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




