WhatsApp Image 2025 06 15 at 1.20.04 AM scaled

ರಾಜ್ಯದ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದಿಂದ ಸಾಲ ಮತ್ತು ಸಹಾಯಧನಕ್ಕೆ ಅರ್ಜಿ ಆಹ್ವಾನ

Categories:
WhatsApp Group Telegram Group

ಕರ್ನಾಟಕ ಸರ್ಕಾರವು ವಿಶ್ವಕರ್ಮ ಸಮುದಾಯದ ಸದಸ್ಯರ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವಾರು ಹೊಸ ಮತ್ತು ನವೀಕೃತ ಯೋಜನೆಗಳನ್ನು ಘೋಷಿಸಿದೆ. 2025-26 ಆರ್ಥಿಕ ವರ್ಷಕ್ಕೆ ಈ ಯೋಜನೆಗಳ ಅಡಿಯಲ್ಲಿ ಹಣಕಾಸು ಸಹಾಯಧನ ಮತ್ತು ಸಾಲ ಸೌಲಭ್ಯಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2 ಜುಲೈ 2025.ಈ ಯೋಜನೆಗಳು ನಿಮ್ಮ ವೃತ್ತಿಪರ, ಶೈಕ್ಷಣಿಕ ಮತ್ತು ಉದ್ಯಮಾಭಿವೃದ್ಧಿಗೆ ನೇರವಾದ ಆರ್ಥಿಕ ಸಹಾಯವನ್ನು ನೀಡುತ್ತವೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮುಖ್ಯ ಯೋಜನೆಗಳು

  1. ಪಂಚವೃತ್ತಿ ಅಭಿವೃದ್ಧಿ ಯೋಜನೆ – ಸಾಂಪ್ರದಾಯಿಕ ಕುಶಲ ಕೆಲಸಗಾರರಿಗೆ ಆರ್ಥಿಕ ನೆರವು
  2. ಸ್ವಯಂ ಉದ್ಯೋಗ ನೇರಸಾಲ ಯೋಜನೆ – ಹೊಸ ಉದ್ಯಮಗಳಿಗೆ ಆರಂಭಿಕ ಹಣಕಾಸು
  3. ಅರಿವು ಶೈಕ್ಷಣಿಕ ಸಾಲ ಯೋಜನೆ – ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿ ಸಹಾಯ
  4. ಗಂಗಾ ಕಲ್ಯಾಣ ಯೋಜನೆ – ಕೃಷಿಕರಿಗೆ ನೀರಾವರಿ ಸೌಲಭ್ಯ
  5. ಸ್ವಾವಲಂಬಿ ಸಾರಥಿ ಯೋಜನೆ – ವಾಹನ ಖರೀದಿಗೆ ಸಹಾಯ

ಅರ್ಹತೆ

  • ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು
  • ವಿಶ್ವಕರ್ಮ ಸಮುದಾಯಕ್ಕೆ ಸೇರಿರಬೇಕು
  • ವಾರ್ಷಿಕ ಆದಾಯ: ಗ್ರಾಮೀಣ ₹98,000/-, ನಗರ ₹1.2 ಲಕ್ಷ ಮಿತಿಯೊಳಗೆ
  • ವಯೋಮಿತಿ: 18-55 ವರ್ಷ (ಯೋಜನೆಗೆ ಅನುಗುಣವಾಗಿ ಬದಲಾಗಬಹುದು)

ಮೀಸಲಾತಿ

  • ಮಹಿಳೆಯರಿಗೆ 33%
  • ವಿಶೇಶ ಅವಶ್ಯಕತೆಯುಳ್ಳವರಿಗೆ 5%
  • ತೃತೀಯ ಲಿಂಗಿಗರಿಗೆ 1%

ಅರ್ಜಿ ಸಲ್ಲಿಸುವ ವಿಧಾನ

ಆನ್ಲೈನ್: www.kaushalkar.com ಅಥವಾ ಸೇವಾಸಿಂಧು ಪೋರ್ಟಲ್

ಆಫ್ಲೈನ್: ಬೆಂಗಳೂರು-ಒನ್, ಕರ್ನಾಟಕ-ಒನ್ ಕೇಂದ್ರಗಳು

    ಸಂಪರ್ಕ:
    ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮ
    ದೂರವಾಣಿ: 08182-229634
    ವೆಬ್ಸೈಟ್: https://kvcdcl.karnataka.gov.in

    ಸಮುದಾಯದ ಉನ್ನತಿಗಾಗಿ ರೂಪುಗೊಂಡ ಈ ಯೋಜನೆಗಳನ್ನು ಉಪಯೋಗಿಸಿಕೊಂಡು ನಿಮ್ಮ ಭವಿಷ್ಯವನ್ನು ಹೆಚ್ಚು ಉಜ್ವಲಗೊಳಿಸಿ.

    ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

    ಈ ಮಾಹಿತಿಗಳನ್ನು ಓದಿ

    ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

     

    WhatsApp Group Join Now
    Telegram Group Join Now

    Popular Categories